Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಕ್ಕಳಲ್ಲಿ ಹಲ್ಲು ಹುಳುಕಿಗೆ ಪರಿಹಾರವೇನು? ಡೆಂಟೆಸ್ಟ್ ಹೇಳೋದೇನು ನೋಡಿ..!
ಮನೆಯಲ್ಲಿ ಮಕ್ಕಳಿದ್ದರೆ ಅವರ ಆರೋಗ್ಯದ ಮೇಲೆ ನಾವು ತುಸು ಹೆಚ್ಚಿನ ಕಾಳಜಿ ವಹಿಸಲೇ ಬೇಕಾಗುತ್ತದೆ. ಮಕ್ಕಳು ಆಗಾಗ ಅನಾರೋಗ್ಯಕ್ಕೆ ಒಳಗಾಗುವುದು ಉಂಟಾಗುತ್ತಲೇ ಇರುತ್ತದೆ. ವೈರಸ್‌ನಿಂದ ಉಂಟಾಗುವ ಅನಾರೋಗ್ಯ, ಜ್ವರ, ಶೀತ ಕೆಮ್ಮು, ಹವಾಮಾನ ಬದಲಾದಂತೆ ಮಕ್ಕಳ ಆರೋಗ್ಯ ಕೂಡ ಹಾಳಾಗುತ್ತಿರುತ್ತದೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕೂಡ ಕಡಿಮೆ ಇರುವ ಕಾರಣ ಬಹುಬೇಗ ಕಾಯಿಲೆಗಳಿಗೆ ಒಳಗಾಗುತ್ತಾರೆ.
ಇನ್ನು ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಎಂದರೆ ಅದು ಹಲ್ಲುಗಳು ಬಹುಬೇಗ ಕೆಡುವುದು. ಅವರ ಆಹಾರ ಶೈಲಿಯ ಕಾರಣದಿಂದಾಗಿ ಅವರ ಹಲ್ಲುಗಳ ಆರೋಗ್ಯ ಬಹುಬೇಗ ಕೆಡುತ್ತದೆ. ಅದರಲ್ಲೂ 10 ವರ್ಷದ ಒಳಗಿನ ಮಕ್ಕಳಲ್ಲಿ ಕೆಟ್ಟ ಹಲ್ಲು, ಹುಳುಕು ಹಲ್ಲುಗಳನ್ನು ನಾವು ನೋಡಬಹುದು. ಹಾಗಾದ್ರೆ ಮಕ್ಕಳಲ್ಲಿ ಈ ಸಮಸ್ಯೆ ಬರುವುದು ಏಕೆ? ಇದನ್ನು ತಡೆಯಬಹುದೇ?
ಹೌದು ಪೋಷಕರಿಗೆ ಮಕ್ಕಳಲ್ಲಿ ಉಂಟಾಗುವ ಹಲ್ಲಿನ ಸಮಸ್ಯೆ ದೊಡ್ಡ ತಲೆನೋವಾಗಿರುತ್ತದೆ. ಮಕ್ಕಳ ಹಲ್ಲು ಹುಳುಕಾಗುವುದು, ಬಹುಬೇಗ ಉದುರಿ ಹೋಗುವುದು, ಹೊಸ ಹಲ್ಲು ಬಾರದೆ ಇರುವುದು ಹೀಗೆ ಹತ್ತಾರು ಸಮಸ್ಯೆ ಅನುಭವಿಸುತ್ತಾರೆ. ಹಾಗಾದ್ರೆ ಈ ಸಮಸ್ಯೆಗೆಲ್ಲಾ ನಾವಿಂದು ಡೆಂಟಿಸ್ಟ್ ಡಾ.ಕಿರಣ್ ಕುಮಾರ್ ಅವರಿಂದ ಮಾಹಿತಿ ತಿಳಿದುಕೊಳ್ಳೋಣ.

ಮಕ್ಕಳಲ್ಲಿ ಹಲ್ಲು ಹುಳುಕು ಸಾಮಾನ್ಯ, ಇದು ಮಕ್ಕಳಲ್ಲಿ ಹಲ್ಲು ಬಂದ ದಿನದಿಂದಲೇ ಆರಂಭವಾಗುತ್ತದೆ. ಮಕ್ಕಳಲ್ಲಿ ಈ ಹುಳುಕು ಹಲ್ಲು ಆಗದಂತೆ ತಡೆಯುವುದು ಹೇಗೆ ಅನ್ನೋದನ್ನು ಪೋಷಕರು ತಿಳಿದುಕೊಂಡಿರಬೇಕು. ಆದರೆ ಮಕ್ಕಳಲ್ಲಿ ಹಲ್ಲು ಹುಳುಕು ಕಂಡುಬಂದರೆ ಆತಂಕ ಪಡುವಂತಹ ಅಗತ್ಯವಿರುವುದಿಲ್ಲ. ಹಲ್ಲಿನ ಹುಳುಕು ಕಂಡುಬರಲು ಒಂದು ಬ್ಯಾಕ್ಟೀರಿಯಾ ಕಾರಣವಾಗಿರುತ್ತದೆ. ಇದು ಹಲ್ಲಿನ ಮೇಲೆ ಬೆಳೆಯುತ್ತದೆ.
ಹಲ್ಲು ಬಂದಾಗಿನಿಂದ ಸ್ವಚ್ಛ ಮಾಡಬೇಕು
ಹಲ್ಲು ಹುಳುಕಾಗುವುದನ್ನು ತಡೆಯುವ ಒಂದು ದಾರಿ ಅಂದರೆ ಹಲ್ಲು ಬಂದಾಗಿನಿಂದ ಯಾವಾಗಲು ಸ್ವಚ್ಚ ಮಾಡುವುದು. ನೀವು ನೋಡಿರಬಹುದು. ಕೆಲವು ಪೋಷಕರು ಮಕ್ಕಳು ದೊಡ್ಡವರಾಗುವವರೆಗೂ ಅವರ ಹಲ್ಲುಗಳನ್ನು ಉಜ್ಜಿಸುವ ಅಭ್ಯಾಸ ಬೆಳೆಸಿರುವುದಿಲ್ಲ. ಮಕ್ಕಳಿಗೆ ಹಲ್ಲು ಬಂದಾಗಿನಿಂದಲೇ ಮಕ್ಕಳಿ ಬಳಸುವ ಪೇಸ್ಟ್ ಬಳಸದೆ ಸ್ವಚ್ಛ ಮಾಡುವ ಅಭ್ಯಾಸ ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಹಲ್ಲು ಸ್ವಚ್ಛವಾಗುತ್ತೆ. ಬ್ಯಾಕ್ಟೀರಿಯಾ ಬೆಳೆಯದಂತೆ ನೋಡಿಕೊಳ್ಳುತ್ತೆ.
ಬಾಟಲಿ ಹಾಲು
ಹಲ್ಲು ಹುಳುಕಾಗಲು ಬಾಟಲಿ ಹಾಲು ಕಾರಣವಾಗುತ್ತದೆ. ಮಕ್ಕಳಿಗೆ ಬಾಟಲಿ ಹಾಲು ಫೀಡ್ ಮಾಡಿದಾಗ ಅದರಲ್ಲೂ ರಾತ್ರಿ ಮಗು ಎದ್ದು ಅಳುವಾಗ ಬಾಟಲಿ ಹಾಲು ನೀಡಿರುತ್ತೀರಿ. ಆದ್ರೆ ಮಗು ನಿದ್ರೆ ಮಾಡುತ್ತದೆ ಈ ವೇಳೆ ಹಾಲಿನ ಅಂಶ ಬಾಯಿಯಲ್ಲಿ ಉಳಿಯುತ್ತದೆ. ಇದು ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ.
ಹುಳುಕನ್ನು ತಡೆಗಟ್ಟುವುದು ಹೇಗೆ?
ಹುಳುಕನ್ನು ಚಿಕಿತ್ಸೆಯ ಮೂಲಕ ತಡೆಯಬಹುದು. ಹಲ್ಲಿನ ಮೇಲಿನ ಬ್ಯಾಕ್ಟೀರಿಯಾಗಳ ತೆರವಿಗೆ ಡೆಂಟಿಸ್ಟ್‌ಗಳ ಭೇಟಿಯಾಗುವುದು ಉತ್ತಮ. ನಾವು ಹಲ್ಲಿನ ಮೇಲೆ ಫ್ಲೂಯಿಡ್ ವಾರ್ನಿಶ್, ಸೀಲೆಂಟ್ ಎಂಬ ವಿಧಾನದ ಮೂಲಕ ಹಲ್ಲಿನ ಹುಳುಕು ತಡೆಯಬಹುದು. ಹಲ್ಲಿನ ಮೇಲೆ ಉಂಟಾಗುವ ಫ್ಲೂರಾ ಅಪಟೈಟ್ ಆಗಿ ಕೆಮಿಕಲ್ ಆಗಿ ಬದಲಾಗುತ್ತದೆ. ಹೀಗೆ ಆದಾಗ ಹಲ್ಲಿಗೆ ಬಣ್ಣ ಹಾಕಲಾಗುತ್ತದೆ. ನಿಮ್ಮ ಹಲ್ಲಿನ ಮೇಲೆ ಬಿಳಿ ಬಿಳಿಯ ಮಚ್ಚೆಗಳು ಕಂಡುಬಂದಾಗ ಅದು ಹಲ್ಲಿನ ಹುಳುಕಾಗುವ ಲಕ್ಷಣವಾಗಿರುತ್ತದೆ. ಈ ಮಚ್ಚೆಯ ಮೇಲೆ ಫ್ಲೂರೈಡ್ ವಾರ್ನಿಶ್ ಹಚ್ಚಿದಾಗ ಈ ಬಿಳಿ ಮಚ್ಚೆಗಳು ನಿರ್ಮೂಲನೆಯಾಗುತ್ತೆ. ಇದನ್ನು ಮಾಡಿಸಲು ಮಕ್ಕಳನ್ನು ಪ್ರತಿ 6 ತಿಂಗಳಿಗೆ ಒಮ್ಮೆ ಕ್ಲೀನಿಕ್‌ಗೆ ಕರೆದುಕೊಂಡು ಬರಬೇಕಾಗುತ್ತದೆ.
ದವಡೆ ಹಲ್ಲಿನಿಂದ ನಿಮ್ಮ ಮಗುವಿನ ಹಲ್ಲುಗಳು ಹುಳುಕಾಗಲು ಆರಂಭಿಸಿದಾಗ ಚಿಕಿತ್ಸೆ ಅಗತ್ಯವಾಗುತ್ತದೆ. ಅವರಿಗೆ ಫಿಲ್ಲಿಂಗ್ ಅಥವಾ ರೆಸ್ಟೋರೇಷನ್ ಎಂಬ ವಿಧಾನದ ಮೂಲಕ ಚಿಕಿತ್ಸೆ ನೀಡುತ್ತೇವೆ. ಇದು ನೋವುಂಟು ಮಾಡುವುದಿಲ್ಲ, ಚಿಕ್ಕ ಮಕ್ಕಳು ಕೂಡ ಮಾಡಿಸಿಕೊಳ್ಳಬಹುದು. ಹಲ್ಲಿನ ನೋವು ಇದ್ದರೆ ಅದಕ್ಕೆ ರೂಟ್ ಕೆನಾಲ್ ಮಾಡಬೇಕಾಗುತ್ತದೆ. ಹಲ್ಲು ಎಷ್ಟು ಪ್ರಮಾಣದಲ್ಲಿ ಹುಳುಕಾಗಿದೆ ಎಂಬುದರ ಆಧಾರದ ಮೇಲೆ ಅದರ ಚಿಕಿತ್ಸೆ ನಿರ್ಧಾರವಾಗುತ್ತದೆ. ವಯಸ್ಸಿಗೂ ಹಲ್ಲು ಹುಳುಕಾಗುವುದಕ್ಕೂ ಯಾವುದೇ ಸಂಬಂಧವಿಲ್ಲ. ಆದ್ರೆ ಕೆಲವೊಂದು ಪ್ರಕರಣದಲ್ಲಿ ಮಾತ್ರವೇ ನಾವು ಹುಳುಕು ಹಲನ್ನು ತೆಗೆಯಬೇಕಾಗುತ್ತದೆ. ಇದರಿಂದ ಅಕ್ಕ ಪಕ್ಕದ ಹಲ್ಲಿಗೆ ಬ್ಯಾಕ್ಟೀರಿಯಾ ಹರಡುವುದನ್ನು ನಾವು ತಡೆಯಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
