Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
2025ರಲ್ಲಿ ಇಡೀ ವಿಶ್ವಕ್ಕೆ ಈ ಸಾಂಕ್ರಾಮಿಕ ಹರಡುವ ಭೀತಿ: ಏಕೆ..?
2019ರಲ್ಲಿ ಕೋವಿಡ್ ವೈರಸ್ ಕಾರಣದಿಂದಾಗಿ ಇಡೀ ವಿಶ್ವವೇ ಆಘಾತಕ್ಕೆ ಒಳಗಾಗಿತ್ತು, ವಿನಾಶಕಾರಿ ವೈರಸ್‌ನಿಂದಾಗಿ ಕೋಟಿ ಕೋಟಿ ಮಂದಿ ಸಮಸ್ಯೆಗೆ ಒಳಗಾಗಿದ್ದರು. ಇಂದಿಗೂ ಈ ವೈರಸ್ ನಮ್ಮ ನಡುವೆಯೇ ಬದುಕುಳಿದಿದೆ. ಸಣ್ಣ ಪ್ರಮಾಣದ ಜ್ವರವಾಗಿ ಈಗ ಮಾರ್ಪಾಟಾಗಿದೆ. ಹಾಗೆ ಭೀತಿಯಂತು ಹಾಗೆಯೇ ಉಳಿಸಿಬಿಟ್ಟಿದೆ. ಹಾಗೆ ಈ ವೈರಸ್ ಬಳಿಕ ಹೊಸ ಹೊಸ ವೈರಲ್‌ಗಳು ಕಾಣಿಸಿಕೊಂಡು ಮತ್ತಷ್ಟು ಆತಂಕ ಹುಟ್ಟಿಸಿದ್ದು ಕೂಡ ಇದೆ.
ಹಾಗೆ ವರ್ಷಗಳಿಂದ ಇಡೀ ಜಗತ್ತನ್ನು ಕಾಡುತ್ತಿರುವ ಮತ್ತೊಂದು ವೈರಸ್ ಅಂದರೆ H1N1 ಅಥವಾ ಹಕ್ಕಿ ಜ್ವರ. ಇತ್ತೀಚಿನ ವರ್ಷದಲ್ಲಿ ಹಕ್ಕಿ ಜ್ವರ ಲಕ್ಷಾಂತರ ಮಂದಿಗೆ ಅಪಾಯ ತಂದೊಡ್ಡುತ್ತಿದೆ. ಇನ್ಫ್ಲುಯೆನ್ಸಾ ಎಂಬ ವೈರಸ್‌ನಿಂದ ಹರಡುವ ಈ ಕಾಯಿಲೆಯೂ ಕೋಳಿಯಿಂದ ಹಿಡಿದು ಕುದುರೆ, ಬೆಕ್ಕಿನಲ್ಲೂ ಕಂಡುಬಂದು ಅಪಾಯ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.

ಮನುಷ್ಯರಿಂದ ಮನುಷ್ಯರಿಂದ ಈ ವೈರಸ್ ಹರಡುವುದಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಹೊಸ ರೂಪಾಂತರಗಳು ಮಾನವರಿಂದ ಮಾನವರಿಗೆ ಹರಡುವ ಸಾಧ್ಯತೆಗಳಿವೆ ಎಂಬುದನ್ನು ಕೂಡ ಕಂಡುಕೊಂಡಿದ್ದಾರೆ. ಅಚ್ಚರಿ ಎಂದರೆ ಮಲೇರಿಯಾ, ಎಚ್‌ಐವಿ ಮತ್ತು ಕ್ಷಯರೋಗವು ಒಟ್ಟಾರೆಯಾಗಿ ವಾರ್ಷಿಕವಾಗಿ ಸುಮಾರು 2 ಮಿಲಿಯನ್ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ.
ಆದರೆ ಇನ್ಫ್ಲುಯೆನ್ಸ ವೈರಸ್‌ಗಳು ವೇಗವಾಗಿ ರೂಪಾಂತರಗೊಳ್ಳುವ ಸಾಮರ್ಥ್ಯದಿಂದಾಗಿ ಅಪಾಯದ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಅದರಲ್ಲೂ ಕೆಲವೊಂದು ಪ್ರವರ್ಗವು ಅತೀ ವೇಗವಾಗಿ ಹರಡಿ ಬಹುಬೇಗ ಅಪಾಯ ಹೆಚ್ಚಿಸುವ ಗುಣ ಹೊಂದಿವೆ ಎಂದು ಕೂಡ ತಿಳಿದುಬಂದಿದೆ.
ಕೋಳಿ ಸೇರಿದಂತೆ ಕಾಡು ಮತ್ತು ಸಾಕು ಪ್ರಾಣಿಗಳು, ಪಕ್ಷಿಗಳಲ್ಲಿ H5N1 ವ್ಯಾಪಕವಾಗಿ ಹರಡಿದೆ. ಇತ್ತೀಚೆಗೆ ಅಮೆರಿಕದ ಬಹುತೇಕ ರಾಜ್ಯಗಳ ಡೈರಿ ಜಾನುವಾರುಗಳಲ್ಲಿ ಹಾಗೂ ಮಂಗೋಲಿಯಾದ ಕುದುರೆಗಳಲ್ಲಿಯೂ ಕಂಡುಬಂದಿದೆ. ಹೀಗಾಗಿ ಇದರ ವ್ಯಾಪ್ತಿ ಹೆಚ್ಚುತ್ತಲೇ ಇದೆ. ಈ ಸೋಂಕುಗಳು ವೈರಸ್ ಸಾಂದರ್ಭಿಕವಾಗಿ ಮನುಷ್ಯರಿಗೆ ಸೋಂಕು ತಗುಲುತ್ತದೆ, ಆಗಾಗ್ಗೆ ಸೋಂಕಿತ ಪ್ರಾಣಿಗಳ ನೇರ ಸಂಪರ್ಕದ ಮೂಲಕ ಅಥವಾ ಹಸಿ ಹಾಲಿನ ಸೇವನೆಯಿಂದ ಹರಡುತ್ತಿದೆ ಎಂಬುದು ಕೂಡ ದೃಢವಾಗಿದೆ.
ಅಮೆರಿಕದಲ್ಲಿ ಬರೋಬ್ಬರಿ 61 ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿವೆ. ಈ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಲೇ ಇದೆ. ಹಿಂದಿನ ವರ್ಷ ಅಮೆರಿಕದಾದ್ಯಂತ 2 ಪ್ರಕರಣಗಳು ಮಾತ್ರ ದಾಖಲಾಗಿದ್ದವು, ಆದ್ರೆ ಈ ವರ್ಷ ಈ ಸಂಖ್ಯೆ 61ಕ್ಕೆ ತಲುಪಿದೆ. ಹಾಗೆ ಸೋಂಕಿಗೆ ತುತ್ತಾದವರ ಪೈಕಿ ಶೇ.30ರಷ್ಟು ಸಾವಿನ ಪ್ರಮಾಣ ಇರುವುದು ಕೂಡ ಆತಂಕ ಹೆಚ್ಚಾಗಲು ಕಾರಣವಾಗುತ್ತಿದೆ. ಅದರಲ್ಲೂ ಜಾನುವಾರುಗಳ ಜೊತೆ ಇರುವವರು, ಹೈನುಗಾರಿಕೆಯಂತಹ ಕೆಲಸದಲ್ಲಿ ತೊಡಗಿರುವವರಲ್ಲೇ ಈ ಪ್ರಮಾಣ ಹೆಚ್ಚಿರುವುದು ಈ ವೈರಸ್ ಹರಡುವಿಕೆಯ ಲಕ್ಷಣಗಳ ದೃಢಪಡಿಸಿವೆ.
ಇನ್ಫ್ಲುಯೆನ್ಸ ವೈರಸ್‌ಗಳು ಸಿಯಾಲಿಕ್ ಗ್ರಾಹಕಗಳು ಎಂದು ಕರೆಯಲ್ಪಡುವ ಆಣ್ವಿಕ ರಚನೆಗಳಿಗೆ ಲಗತ್ತಿಸುವ ಮೂಲಕ ಜೀವಕೋಶಗಳಿಗೆ ಸೋಂಕು ಹರಡುತ್ತವೆ. ಇತ್ತೀಚಿನ ಅಧ್ಯಯನವು H5N1ನ ಜೀನೋಮ್‌ನಲ್ಲಿನ ಒಂದು ರೂಪಾಂತರವು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಮರ್ಥ್ಯ ಹೆಚ್ಚಿಸಿದೆ ಎಂದು ಬಹಿರಂಗಪಡಿಸಲಾಗಿದೆ. ಹೀಗಾಗಿ ಮುಂದೊಂದು ದಿನ ಹಕ್ಕಿ ಜ್ವರದ ವೈರಸ್ ಸಾಂಕ್ರಮಿಕವಾಗಿ ಇಡೀ ಜಗತ್ತಿಗೆ ಹರಡಬಹುದಾದ ಅಪಾಯವನ್ನು ಕೂಡ ಊಹಿಸಲಾಗಿದೆ.
ಈಗ ಹಕ್ಕಿಜ್ವರಕ್ಕೆ ಲಸಿಕೆ ಕೂಡ ಹಾಕಲಾಗಿದೆ. 2025 ರಲ್ಲಿ ಹಕ್ಕಿ ಜ್ವರ ಹರಡುವಿಕೆಯ ಅಪಾಯವನ್ನು ತಗ್ಗಿಸಲು UK H5 ಲಸಿಕೆಯ 5 ಮಿಲಿಯನ್ ಡೋಸ್‌ಗಳನ್ನು ಸಂಗ್ರಹಿಸಿಡಲಾಗಿದೆ. ಅಮೆರಿಕದಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಕೂಡ ನಡೆದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications