Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮುಖದಲ್ಲಿ, ತ್ವಚೆಯಲ್ಲಿ ಈ ರೀತಿ ಕಂಡು ಬಂದರೆ ಅದು ಫ್ಯಾಟಿ ಲಿವರ್ ಲಕ್ಷಣವಿರಬಹುದು!
ಫ್ಯಾಟಿ ಲಿವರ್ ಸಮಸ್ಯೆ ಬಹುತೇಕರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ. ಪ್ರಾರಂಭದಲ್ಲಿ ಇದರ ಲಕ್ಷಣಗಳು ಕಂಡು ಬರುವುದಿಲ್ಲ, ಆದ್ದರಿಂದ ಪ್ರಾಣಕ್ಕೆ ಅಪಾಯಕಾರಿಯಾದ ಈ ಕಾಯಿಲೆಯನ್ನು ಪ್ರಾರಂಭದಲ್ಲಿ ಪತ್ತೆ ಹಚ್ಚಲು ಕಷ್ಟವಾಗುವುದು. ಆದರೆ ಫ್ಯಾಟಿ ಲಿವರ್ ಸಮಸ್ಯೆ ಉಂಟಾದ ಕೆಲವು ಸಮಯದಲ್ಲಿ ಮುಖದಲ್ಲಿ ತ್ವಚೆಯಲ್ಲಿ ಕಂಡು ಬರುವುದು.
ಫ್ಯಾಟಿ ಲಿವರ್ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ಆರೋಗ್ಯ ಸ್ಥಿತಿ ತುಂಬಾನೇ ಗಂಭೀರವಾಗುವುದು. ಆದ್ದರಿಂದ ಫ್ಯಾಟಿ ಲಿವರ್ ಸಮಸ್ಯೆ ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ, ಅದರಲ್ಲೂ ಮುಖದಲ್ಲಿ ಈ ಬದಲಾವಣೆಯಾಗುವುದು, ತ್ವಚೆ ಬಣ್ಣ ಬದಲಾಗುವುದು, ತ್ವಚೆಯಲ್ಲಿ ಈ ರೀತಿ ಕಂಡು ಬಂದರೆ ನಿರ್ಲಕ್ಷ್ಯ ಮಾಡಲೇಬೇಡಿ:

ಮುಖದಲ್ಲಿ ಕಂಡು ಬರುವ ಲಕ್ಷಣಗಳು
ಅತ್ಯಧಿಕ ಕೊಬ್ಬಿನಂಶವಿರುವ ಆಹಾರ ಸೇವಿಸುವುದರಿಂದ, ಅತ್ಯಧಿಕ ಮದ್ಯ ಸೇವನೆ ಮಾಡುವುದರಿಂದ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗುವುದು. ಕೆಲವರಿಗೆ ಯಾವುದೇ ಲಕ್ಷಣಗಳು ಕಂಡು ಬರದಿದ್ದರೆ ಇನ್ನು ಕೆಲವರಿಗೆ ಕಿಬ್ಬೊಟ್ಟೆ ನೋವು ಉಂಟಾಗುವುದು. ಅಲ್ಲದೆ ಮುಖದಲ್ಲಿ ಈ ಬದಲಾವಣೆಯಾಗುವುದು.
ಮುಖ ಊದಿಕೊಳ್ಳುವುದು
ಮುಖದಲ್ಲಿ ಊತ ಕಂಡು ಬರುವುದು, ಕಣ್ಣುಗಳ ಸುತ್ತ ಕಪ್ಪು ಕಲೆ ಉಂಟಾಗುವುದು ಅಲ್ಲದೆ ಕಣ್ಣು ಬಳಿ, ಬಾಯಿ ಬಳಿ ನೆರಿಗೆ ಉಂಟಾಗುವುದು. ಕಣ್ಣುಗಳು ಹಳದಿ ಬಣ್ಣಕ್ಕೆ ತಿರುಗುವುದು. ಫ್ಯಾಟಿ ಲಿವರ್ ಉಂಟಾದಾಗ ಪ್ರಾರಂಭದಲ್ಲಿಯೇ ಈ ಲಕ್ಷಣಗಳು ಕಂಡು ಬರುವುದು. ಫ್ಯಾಟಿ ಲಿವರ್ ಉಂಟಾದಾಗ ಲಿವರ್ ಪ್ರೊಟೀನ್ ಉತ್ಪತ್ತಿ ಮಾಡುವುದಿಲ್ಲ, ಇದರಿಂದ ರಕ್ತಸಂಚಾರಕ್ಕೆ ತೊಂದರೆಯಾಗುವುದು, ಅಲ್ಲದೆ ದೇಹದಿಂದ ಬೇಡದ ಕಶ್ಮಲಗಳು ಮೂತ್ರದ ಮೂಲಕ ಹೊರ ಹೋಗಲು ತೊಂದರೆಯಾಗುವುದು.
ಮೊಡವೆ
ಹದಿಹರೆಯದ ಪ್ರಾಯದಲ್ಲಿ ಹಾರ್ಮೋನ್‌ಗಳ ಬದಲಾವಣೆಯಿಂದಾಗಿ ಮೊಡವೆ ಸಮಸ್ಯೆ ಉಂಟಾಗುವುದು ಸಹಜ. ಆದರೆ ಮುಖದ ತುಂಬಾ ಮೊಡವೆ ಜೊತೆಗೆ ಇತರ ತ್ವಚೆ ಸಮಸ್ಯೆಯಿದ್ದರೆ ಲಿವರ್‌ಗೆ ಹಾನಿಯಾಗಿದೆ ಎಂದರ್ಥ. ಅನಾರೋಗ್ಯಕರ ಜೀವನಶೈಲಿ ಹಾಗೂ ಆಹಾರಶೈಲಿಯಿಂದಾಗಿ ಈ ರೀತಿ ಉಂಟಾಗುತ್ತದೆ.
ತ್ವಚೆ ಕೆಂಪಾಗುವುದು
ಮುಖ, ತ್ವಚೆಯಲ್ಲಿ ಕೆಂಪು-ಕೆಂಪುಗಳು ಗುಳ್ಳೆಗಳು ಅಥವಾ ದದ್ದು ಹೇಳುವುದು ಕಂಡು ಬಂದರೆ ನಿಮ್ಮ ಲಿವರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬುವುದರ ಸೂಚನೆಯಾಗಿದೆ.
ಬಾಯಿಯಲ್ಲಿ ಹಾಗೂ ಬಾಯಿ ಸುತ್ತ ಗುಳ್ಳೆಗಳು ಏಳುವುದು
ಫ್ಯಾಟಿ ಲಿವರ್ ಇದ್ದಾಗ ದೇಹ ಖನಿಜಾಂಶಗಳನ್ನು ಹೀರಿಕೊಳ್ಳುವುದಿಲ್ಲ, ಇದರಿಂದಾಗಿ ಸತುವಿನ ಕೊರತೆಯಿಂದಾಗಿ ಬಾಯಲ್ಲಿ ಹಾಗೂ ಬಾಯಿ ಸುತ್ತ ಗುಳ್ಳೆಗಳು ಏಳುವುದು ಇವೆಲ್ಲಾ ಫ್ಯಾಟಿ ಲಿವರ್ ಸಮಸ್ಯೆಯಾಗಿದೆ.
ತುರಿಕೆ
ತುರಿಕೆ ಅದರಲ್ಲೂ ಮುಖದಲ್ಲಿ ತುರಿಕೆ ಫ್ಯಾಟಿ ಲಿವರ್‌ನ ಪ್ರಮುಖ ಲಕ್ಷಣವಾಗಿದೆ. ತುರಿಕೆಯಿಂದಾಗಿ ನಿದ್ದೆಗೂ ತೊಂದರೆಯಾಗುತ್ತಿದ್ದರೆ ನಿರ್ಲಕ್ಷ್ಯ ಮಾಡಲೇಬೇಡಿ. ಪಿತ್ತರಸ ಅಧಿಕವಾದಾಗ ಈ ರೀತಿ ತುರಿಕೆ ಕಂಡು ಬರುವುದು. ಈ ರೀತಿ ತುರಿಕೆಗೆ ಆಂಟಿಇಸ್ತಾಮೈನ್ ಕೂಡ ಪರಿಣಾಮಕಾರಿಯಲ್ಲ.
ಅರಿಶಿಣ ಕಾಮಲೆ
ಕಾಮಲೆ ಬಂದಾಗ ಮುಖ, ಕಣ್ಣು ನೋಡಿ ಪತ್ತೆ ಹಚ್ಚಬಹುದು. ಮುಖ ಹಳದಿ ಬಣ್ಣಕ್ಕೆ ತಿರುಗುತ್ತದೆ. ಕಣ್ಣುಗಳು, ಉಗುರುಗಳು ಹಳದಿ ಬಣ್ಣಕ್ಕೆ ತಿರುಗುವುದು. ಈ ಬಗೆಯ ಲಕ್ಷಣ ಕಂಡು ಬಂದರೆ ಕೂಡಲೇ ಚಿಕಿತ್ಸೆ ಪಡೆಯಬೇಕು. ಇಲ್ಲದಿದ್ದರೆ ಪ್ರಾಣಕ್ಕೆ ಅಪಾಯ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
