Latest Updates
-
ಬಿಸಿಲ ಬೇಗೆಯಲ್ಲಿ ಮದುವೆ ಸಂಭ್ರಮ ಹಾಳಾಗದಿರಲಿ: ಅತಿಥಿಗಳ ಆರೋಗ್ಯ ಕಾಪಾಡಲು ಇಲ್ಲಿವೆ ಸೀಕ್ರೆಟ್ ಟಿಪ್ಸ್! -
ಬಿಸಿಗಾಳಿಯ ಆರ್ಭಟ: ಮನೆಯನ್ನು ತಂಪಾಗಿಡಲು ಮತ್ತು ಆರೋಗ್ಯ ಕಾಪಾಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ರೆಡ್ ಅಲರ್ಟ್: ಆಯುಷ್ ಸಚಿವಾಲಯದ ಈ ಸಿಂಪಲ್ ಟಿಪ್ಸ್ ಪಾಲಿಸಿದರೆ ಸಾಕು, ದೇಹ ತಂಪಾಗಿರುತ್ತೆ! -
ಬಿಸಿಲಿನ ಬೇಗೆಯಿಂದ ತತ್ತರಿಸಿದ ಕರ್ನಾಟಕ: ಮನೆಯಲ್ಲೇ ತಂಪಾಗಿರಲು ನೀವು ಮಾಡಬೇಕಾದ ಆ 5 ಬದಲಾವಣೆಗಳೇನು? -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಆರೋಗ್ಯಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ! -
45 ಡಿಗ್ರಿ ಬಿಸಿಲಲ್ಲಿ ಮದುವೆ ಪ್ಲಾನ್ ಮಾಡ್ತಿದ್ದೀರಾ? ಅತಿಥಿಗಳ ಆರೋಗ್ಯಕ್ಕಾಗಿ ಈ ಎಚ್ಚರಿಕೆ ಮರೆಯದಿರಿ! -
ಶಾಖದ ಅಲೆ ಎಚ್ಚರಿಕೆ: ಎಸಿ ಇಲ್ಲದೆ ಮನೆಯನ್ನು ತಂಪಾಗಿಡಲು ಮತ್ತು ನಿಮ್ಮ ಗಿಡಗಳನ್ನು ಬಿಸಿಲಿನಿಂದ ರಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಬಿಸಿಲ ಬೇಗೆಗೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ಪಾನೀಯ ಮತ್ತು ಆಹಾರವೇ ಸಂಜೀವಿನಿ! -
ಸೀರೆ ಉಡೋದ್ರಲ್ಲಿ ಹೊಸ ಕ್ರಾಂತಿ: ಇನ್ಸ್ಟಾಗ್ರಾಮ್ನಲ್ಲಿ ವೈರಲ್ ಆಗ್ತಿರೋ 'ದೇಸಿ-ಕೋರ್' ಸೀರೆ ಸ್ಟೈಲ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲೂ ಫಿಟ್ ಆಗಿರಬೇಕೆ? ಮುಂಜಾನೆಯ ಈ ಸಣ್ಣ ಬದಲಾವಣೆ ನಿಮ್ಮ ಆರೋಗ್ಯಕ್ಕೆ ವರದಾನ!
ಫ್ಯಾಟಿ ಲಿವರ್: ನಡೆಯುವಾಗ ಈ ಸಮಸ್ಯೆ ಕಂಡು ಬಂದರೆ ಫ್ಯಾಟಿ ಲಿವರ್ ಇರಬಹುದು?
ಲಿವರ್ ನಮ್ಮ ದೇಹದ ಅತಿ ಮುಖ್ಯವಾದ ಅಂಗ. ದೇಹದ ಇತರ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಲಿವರ್‌ನ ಆರೋಗ್ಯ ತುಂಬಾನೇ ಮುಖ್ಯ. ದೇಹದ ರಕ್ತದಲ್ಲಿ ಕಶ್ಮಲವನ್ನು ಹೊರ ಹಾಕುವಲ್ಲಿ ಲಿವರ್‌ನ ಪಾತ್ರ ತುಂಬಾನೇ ದೊಡ್ಡದು, ಲಿವರ್ ರಕ್ತವನ್ನು ಶುದ್ಧೀಕರಿಸುವ ಕಾರ್ಯವನ್ನು ಮಾಡುತ್ತದೆ. ಲಿವರ್ ಹೊಟ್ಟೆ ಹಾಗೂ ಕರಳುನ ಭಾಗದಲ್ಲಿರುವ ರಕ್ತವನ್ನು ಶುದ್ಧೀಕರಿಸುತ್ತದೆ. ಈ ಕಾರಣಕ್ಕೆ ಲಿವರ್‌ಗೆ ಹಾನಿಯಾದರೆ ದೇಹದ ಇತರ ಭಾಗಗಳಿಗೂ ಹಾನಿಯುಂಟಾಗುತ್ತದೆ.
ಲಿವರ್ ಸಮಸ್ಯೆ ಎಂದರೇನು?
ಲಿವರ್‌ಗೆ ಹಾನಿಯಾದರೆ ಲಿವರ್ ಸಮಸ್ಯೆ ಉಂಟಾಗುವುದು. ದೇಹದ ಚಯಪಚಯ ಕ್ರಿಯೆಯಲ್ಲಿ ಲಿವರ್‌ನ ಪಾತ್ರ ತುಂಬಾನೇ ಮುಖ್ಯ. ಯಾವಾಗ ಲಿವರ್‌ಗೆ ಹಾನಿಯಾಗುತ್ತದೋ ಕೂಡಲೇ ಚಿಕಿತ್ಸೆ ಪಡೆಯದಿದ್ದರೆ ಪ್ರಾಣಕ್ಕೆ ಅಪಾಯ ಉಂಟಾಗಬಹುದು. ಲಿವರ್‌ನ ಗಾತ್ರ ಅಧಿಕವಾದರೆ ಅದನ್ನು ಫ್ಯಾಟಿ ಲಿವರ್ ಎಂದು ಕರೆಯಲಾಗುವುದು. ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಇದು ಪ್ರಾಣಕ್ಕೆ ಕಂಟಕವಾಗುವುದು.

ಫ್ಯಾಟಿ ಲಿವರ್‌ನ ಲಕ್ಷಣಗಳೇನು?
* ನಡೆದಾಡಲು ಕಷ್ಟವಾಗುವುದು, ಮಂಡಿ ನೋವು ಉಂಟಾಗುವುದು.
* ಫ್ಯಾಟಿ ಲಿವರ್‌ನಿಂದ ಲಿವರ್ ಹಾನಿಯಾದರೆ ಪಿತ್ತರಸ ಉತ್ಪತ್ತಿಗೆ ಸಮಸ್ಯೆ ಉಂಟಾಗುವುದು. ಇದರಿಂದಾಗಿ ದೇಹಕ್ಕೆ ಹಲವು ರೀತಿಯ ಸಮಸ್ಯೆ ಉಂಟಾಗುವುದು.
ಫ್ಯಾಟಿ ಲಿವರ್ ಉಂಟಾದರೆ ಈ ಬಗೆಯ ಸಮಸ್ಯೆ ಕಂಡು ಬರುವುದು
* ಹೊಟ್ಟೆ ಉಬ್ಬುವುದು
* ವಾಂತಿ, ಹಸಿವು ಇಲ್ಲದಿರುವುದು, ತೂಕ ಇಳಿಕೆ ಕಡಿಮೆಯಾಗುವುದು
* ತ್ವಚೆ ಬಿಳಿ ಬಣ್ಣಕ್ಕೆ ತಿರುಗುವುದು
* ಕಣ್ಣು ಬಿಳುಚಿಕೊಳ್ಳುವುದು
* ದೈಹಿಕವಾಗಿ ತುಂಬಾ ಸುಸ್ತು
ನಿಮ್ಮ ನಡಿಗೆಯಲ್ಲಿ ವ್ಯತ್ಯಾಸ ಉಂಟಾಗುವುದು?
* ಫ್ಯಾಟಿ ಲಿವರ್ ಸಮಸ್ಯೆ ಉಂಟಾದಾಗ ತುಂಬಾ ಸುಸ್ತು ಉಂಟಾಗುವುದು
* ಕಾಲುಗಳು ತುಂಬಾ ಬಿಗಿಯಾದಂತೆ ಅನಿಸುವುದು
* ನಡೆಯುವಾಗ ದೇಹದಲ್ಲಿ ಸ್ವಾಧೀನವಿರಲ್ಲ
* ಫ್ಯಾಟಿ ಲಿವರ್ ಸಮಸ್ಯೆ ಇದ್ದವರಿಗೆ ವೇಗವಾಗಿ ನಡೆಯಲು ಸಾಧ್ಯವಾಗುವುದಿಲ್ಲ.
* ಕಾಲುಗಳನ್ನು ಎತ್ತಿಡಲು ಕಷ್ಟವಾಗುವುದು
* ಕಾಲುಗಳನ್ನು ಎಳೆದುಕೊಂಡು ನಡೆಯಬೇಕಾಗುತ್ತದೆ.
* ಕೆಲವರಿಗೆ ನಡೆಯುವಾಗ ದೇಹ ಸ್ವಾಧೀನ ತಪ್ಪಿ ಬೀಳಬಹುದು.
ಫ್ಯಾಟಿ ಲಿವರ್ ಸಮಸ್ಯೆ ನಿರ್ಲಕ್ಷ್ಯ ಮಾಡಿದರೆ ಲಿವರ್ ಫೈಲ್ಯೂರ್ ಉಂಟಾಗುವುದು
* ಫ್ಯಾಟಿ ಲಿವರ್ ಸಮಸ್ಯೆ ನಿರ್ಲಕ್ಷ್ಯ ಮಾಡುವಂಥದ್ದು ಅಲ್ವೇ ಅಲ್ಲ.
* ಕೆಲವರಿಗೆ ಫ್ಯಾಟಿ ಲಿವರ್‌ನಿಂದ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ
* ಆದರೆ ಇನ್ನು ಕೆಲವರಿಗೆ ಲಿವರ್ ಫೈಲ್ಯೂರ್ ಉಂಟಾಗುವುದು. ಆದ್ದರಿಂದ ಫ್ಯಾಟಿ ಲಿವರ್ ಎಂದು ಗೊತ್ತಾದ ತಕ್ಷಣ ಚಿಕಿತ್ಸೆ ಪಡೆಯಬೇಕು.
ಫ್ಯಾಟಿ ಲಿವರ್‌ಗೆ ಕಾರಣವೇನು?
* ಅತ್ಯಧಿಕ ಮದ್ಯಪಾನಿಗಳಲ್ಲಿ ಈ ಫ್ಯಾಟಿ ಲಿವರ್ ಸಮಸ್ಯೆ ಕಂಡು ಬರುವುದು
* ಒಬೆಸಿಟಿ ಸಮಸ್ಯೆ ಇರುವವರಿಗೆ ಈ ಫ್ಯಾಟಿ ಲಿವರ್ ಸಮಸ್ಯೆ ಕಂಡು ಬರುವುದು
* ಅನಾರೋಗ್ಯಕರ ಆಹಾರಶೈಲಿಯಿಂದ ಕೂಡ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗುವುದು
* ದೈಹಿಕ ಚಟುವಟಕೆ ಇಲ್ಲದೇ ಇದ್ದರು ಕೂಡ ಫ್ಯಾಟಿ ಲಿವರ್ ಸಮಸ್ಯೆ ಉಂಟಾಗುವುದು.
ಫ್ಯಾಟಿ ಲಿವರ್ ತಡೆಗಟ್ಟುವ ಆಹಾರಗಳು
* ಮಾಂಸಾಹಾರ
* ಚೀಸ್
* ಯೋಗರ್ಟ್'
* ಕೆಂಪು ಮಾಂಸ
* ಬೇಕರಿ ಆಹಾರ, ಕರಿದ ಆಹಾರ, ತೆಂಗಿನೆಣ್ಣೆ
* ಸಿಹಿ ಪದಾರ್ಥಗಳು, ಕೃತಕ ಸಿಹಿ ಪದಾರ್ಥಗಳು
ಯಾವ ಬಗೆಯ ಆಹಾರಗಳು
* ಕಾಫಿ
* ಗ್ರೀನ್ ಟೀ
* ಬೆಳ್ಳುಳ್ಳಿ
* ಹಣ್ಣುಗಳು
* ತರಕಾರಿ
* ವಿಟಮಿನ್ ಇ
ಸೂರ್ಯಕಾಂತಿ ಬೀಜ
ಬಾದಾಮಿ
ಆಲೀವ್ ಎಣ್ಣೆ ಬಳಸಿ
* ನಿಯಮಿತ ವ್ಯಾಯಾಮ ಮಾಡಿ ಮೈ ತೂಕ ಕಡಿಮೆ ಮಾಡಿ. ಸಮತೂಕವನ್ನು ಹೊಂದುವುದರಿಂದ ಈ ಫ್ಯಾಟಿ ಲಿವರ್ ಸಮಸ್ಯೆ ತಡೆಗಟ್ಟಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications