Fasting: ವಾರದಲ್ಲಿ ಒಂದು ದಿನ ಉಪವಾಸ ಮಾಡಿ.. ಆರೋಗ್ಯದಲ್ಲಿ ಈ 5 ಮ್ಯಾಜಿಕ್ ನೋಡಿ

ನೀವು ಆರೋಗ್ಯವಾಗಿರಬೇಕೆ? ಹಾಗಿದ್ರೆ, ಆಹಾರ ಸೇವನೆ ಎಷ್ಟು ಮುಖ್ಯವೋ? ಉಪವಾಸ ಕೂಡ ಅಷ್ಟೇ ಮುಖ್ಯ. ವಾರದಲ್ಲಿ ಒಂದು ದಿನ ಉಪವಾಸ (Fasting) ಮಾಡಿದ್ರೆ, ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಹೌದು, ನೀವು ಹಬ್ಬಗಳ ಸಮಯದಲ್ಲಿ ಉಪವಾಸ ಮಾಡಬಹುದು. ವೈದ್ಯರ ಸಲಹೆ ಮೇರೆಗೆ ಉಪವಾಸ ಮಾಡುತ್ತಿರಬಹುದು. ಆದರೆ, ಉಪವಾಸದಿಂದ ಆರೋಗ್ಯದಲ್ಲಿ ಏನೇನು ಪ್ರಯೋಜನಕಾರಿ ಎಂಬುದು ನಿಮಗೆ ತಿಳಿದಿದೆಯೇ? ನೀವು ವಾರದಲ್ಲಿ ಒಂದು ದಿನ ಉಪವಾಸ (One Day Fasting) ಮಾಡುವುದರಿಂದ ಈ 5 ಉತ್ತಮ ಪ್ರಯೋಜನಗಳನ್ನು ಪಡೆಯಬಹದು. ವಿಜ್ಞಾನವೂ ಸಹ ಇದನ್ನೇ ಹೇಳುತ್ತದೆ.

ಮಧ್ಯಂತರ ಉಪವಾಸ ಅಥವಾ ಸಾಪ್ತಾಹಿಕ ಉಪವಾಸವು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ ಎಂದು ಆಧುನಿಕ ಸಂಶೋಧನೆ ಮತ್ತು ವಿಜ್ಞಾನ ಹೇಳುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ (ಜೀರ್ಣಕ್ರಿಯೆಗೆ ವಿಶ್ರಾಂತಿ) ನೀಡುತ್ತದೆ. ಅಲ್ಲದೆ, ದೇಹವನ್ನು ಶುದ್ಧಗೊಳಿಸುತ್ತದೆ. ಇನ್ನು ಉರಿಯೂತ ಸಮಸ್ಯೆ ನಿವಾರಣೆಯಾಗುತ್ತದೆ. ಇದಕ್ಕೆ ಇರುವ ಅತ್ಯುತ್ತಮ ಮಾರ್ಗ ಎಂದರೆ ಉಪವಾಸ. ವಾರದಲ್ಲಿ ಒಂದು ದಿನ ಉಪವಾಸ ಮಾಡಿದರೆ ಒಳ್ಳೆಯದು. ಬನ್ನಿ, ಉಪವಾಸ ಮಾಡುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ (Fasting Benefits) ಎನ್ನುವುದನ್ನು ತಿಳಿಯೋಣ.

Fasting Benefits

1. ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ

ನೀವು ನಿರಂತರವಾಗಿ ಊಟ ಮಾಡುತ್ತಲೇ ಇದ್ದಾಗ, ಜೀರ್ಣಾಂಗ ವ್ಯವಸ್ಥೆಯು ಭಾರವಾಗಿರುತ್ತದೆ. ನೀವು ವಾರದಲ್ಲಿ ಒಂದು ದಿನ ಉಪವಾಸ ಮಾಡುವುದರಿಂದ ಹೊಟ್ಟೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ವಿಶ್ರಾಂತಿ ಸಿಗುತ್ತದೆ. ಉಪವಾಸದ ಸಮಯದಲ್ಲಿ, ಈ ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಗುತ್ತದೆ. ಇದು ಅನಿಲ, ಆಮ್ಲೀಯತೆ ಮತ್ತು ಅಜೀರ್ಣದ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ.

2. ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತೆ

ದೇಹವು ಸಂಗ್ರಹವಾಗಿರುವ ಕೊಬ್ಬನ್ನು ಶಕ್ತಿಯಾಗಿ ಬಳಸುತ್ತದೆ. ವಾರದಲ್ಲಿ ಒಂದು ದಿನ ಉಪವಾಸ ಮಾಡುವುದರಿಂದ ಕ್ಯಾಲೊರಿ ಸೇವನೆ ಕಡಿಮೆ ಆಗುತ್ತದೆ. ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ನೀವು ಉಪವಾಸ ಮಾಡುವುದರಿಂದ ಚಯಾಪಚಯ ಕ್ರಿಯೆ ಸುಧಾರಿಸುತ್ತದೆ. ಹಾಗೆಯೇ ಕೊಬ್ಬನ್ನು ವೇಗವಾಗಿ ಸುಡುತ್ತದೆ ಎಂದು ಸಂಶೋಧನೆಗಳು ಬಹಿರಂಗಪಡಿಸಿವೆ.

3. ದೇಹದ ಚರ್ಮ ಸ್ವಚ್ಛ ಮತ್ತು ಹೊಳೆಯುವಂತೆ ಮಾಡುತ್ತೆ

ನೀವು ಉಪವಾಸ ಮಾಡಿದಾಗ, ದೇಹವು ತನ್ನನ್ನು ತಾನು ಶುದ್ಧೀಕರಿಸಿಕೊಳ್ಳುವ ಪ್ರಕ್ರಿಯೆ ವೇಗಗೊಳಿಸುತ್ತದೆ. ಇದು ಜೀವಕೋಶಗಳಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಯಕೃತ್ತು ಮತ್ತು ಮೂತ್ರಪಿಂಡಗಳು ಉತ್ತಮವಾಗಿ ಕೆಲಸ ನಿರ್ವಹಿಸುತ್ತವೆ. ಇದು ಚರ್ಮವನ್ನು ಸ್ವಚ್ಛ ಮತ್ತು ಫಳಫಳ ಹೊಳೆಯುವಂತೆ ಮಾಡುತ್ತದೆ.

Take a Poll

4. ರಕ್ತದಲ್ಲಿನ ಶುಗರ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣ

ವಾರಕ್ಕೊಮ್ಮೆ ಮಾಡುವ ಉಪವಾಸವು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿ ಇಡುತ್ತದೆ. ಹಾಗೆಯೇ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಈ ಅಭ್ಯಾಸವು ಮಧುಮೇಹ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯ ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.

5. ಮೆದುಳಿಗೆ ವಿಶ್ರಾಂತಿ, ಮಾನಸಿಕ ಶಾಂತಿ

ಸಂಶೋಧನೆಯ ಪ್ರಕಾರ, ಉಪವಾಸದ ಸಮಯದಲ್ಲಿ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ. ಸೀಮಿತ ಪ್ರಮಾಣದಲ್ಲಿ ಆಹಾರ ಸೇವಿಸುವುದರಿಂದ ಮೆದುಳಿನ ಕೆಲಸ ಸುಧಾರಿಸುತ್ತದೆ. ಹಾಗೆಯೇ ಕೆಲಸದ ಮೇಲಿನ ಗಮನ ಹೆಚ್ಚಾಗುತ್ತದೆ.

ಇನ್ನು ಉಪವಾಸದಿಂದ ಆಗುವ ಪ್ರಯೋಜನಗಳೆದರೆ, ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಉಪವಾಸವು ಮೆದುಳಿನ ನರರೋಗವನ್ನು ಗುಣಪಡಿಸುತ್ತದೆ. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಉಪವಾಸವು ಮುಖ ಮತ್ತು ದೇಹದ ಮೊಡವೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ನೀವು ಉಪವಾಸ ಮಾಡುವುದರಿಂದ ಕ್ಯಾನ್ಸರ್ ಅಪಾಯವು ( ಕ್ಯಾನ್ಸರ್ ಕೋಶ ರಚನೆ ಕಡಿಮೆ) ಕಡಿಮೆಯಾಗುತ್ತದೆ.

ಉಪವಾಸದಿಂದ ಏನೆಲ್ಲಾ ಅನಾನುಕೂಲ?

ಉಪವಾಸದಿಂದ ಆಗುವ ಪ್ರಯೋಜನ ನೋಡಿದ ಮೇಲೆ, ಇದರಿಂದಾಗುವ ಅನಾನುಕೂಲಗಳನ್ನು ನೋಡಬೇಕಿದೆ. ಉಪವಾಸದಿಂದ ಜೈವಿಕ ಮಟ್ಟದಲ್ಲಿ ನಕಾರಾತ್ಮಕ ಪರಿಣಾಮವಿದೆ. ಉಪವಾಸವು ಮಹಿಳೆಯರಲ್ಲಿ ಕಡಿಮೆ ವ್ಯತ್ಯಾಸವನ್ನು ಉಂಟುಮಾಡುತ್ತದೆ. ಹಾಗೆಯೇ ಪುರುಷರಲ್ಲಿ ಇದು ಹೆಚ್ಚು ಪರಿಣಾಮ ಬೀರುತ್ತದೆ ಎಂದು ಸಂಶೋಧನೆ ಹೇಳುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Monday, June 9, 2025, 16:50 [IST]
X
Desktop Bottom Promotion