Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಭಾರತದಲ್ಲಿ ಹೆಚ್ಚಾಗುತ್ತಿದೆ ಐ ಫ್ಲೂ: ಕಣ್ಣುಗಳು ಕೆಂಪಾದರೆ ಮತ್ತೊಬ್ಬರಿಗೆ ಹರಡುತ್ತೆ ಜಾಗ್ರತೆ
ಭಾರತದಲ್ಲಿ ಐ ಫ್ಲೂ ಅಂದರೆ ಕಣ್ಣಿನ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಶಾಲಾ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ, ಆದ್ದರಿಂದ ಈ ಸಮಯದಲ್ಲಿ ಪೋಷಕರು ಹೆಚ್ಚಿನ ಜಾಗ್ರತೆವಹಿಸಬೇಕಾಗಿದೆ. ದೆಹಲಿಯಲ್ಲಿ ದಿನದಲ್ಲಿ 100ಕ್ಕೂ ಅಧಿಕ ರೋಗಿಗಳು ಈ ಐ ಫ್ಲೂನಿಂದಾಗಿ ಆಸ್ಪತ್ರೆಗೆ ಬರುತ್ತಿದ್ದಾರೆ ಎಂದು ಹೆದಲಿಯ ವೈದ್ಯರು ಹೇಳುತ್ತಿದ್ದಾರೆ.
ಐ ಫ್ಲೂ ಸಮಸ್ಯೆ ತುಂಬಾನೇ ಹೆಚ್ಚಾಗುತ್ತಿದ್ದು ತುಂಬಾ ರೋಗಿಗಳಲ್ಲಿ ಕಣ್ಣಿನಲ್ಲಿ ಊತ, ನೀವು ಕಂಡು ಬರುತ್ತಿದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ conjunctiva ಎಂದು ಕರೆಯಲಾಗುವುದು. ಐ ಫ್ಲೂ ಉಂಟಾದಾಗ ಕಣ್ಣುಗಳು ಕೆಂಪಾಗಿ, ಕಣ್ಣುಗಳಲ್ಲಿ ಊತ ನೋವು ಕಂಡು ಬರುವುದು.
ಐ ಫ್ಲೂ ಲಕ್ಷಣಗಳೇನು? ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದೇ? ಮುಂತಾದ ಮಾಹಿತಿ ತಿಳಿಯೋಣ ಬನ್ನಿ:

ಐ ಫ್ಲೂಗೆ ಕಾರಣವೇನು?
* ವೈರಸ್
* ಬ್ಯಾಕ್ಟಿರಿಯಾ
* ಅಲರ್ಜಿ
* ರಾಸಾಯನಿಕಗಳು
* ಕಾಂಟ್ಯಾಕ್ಟ್ ಲೆನ್ಸ್
* ವಾಯು ಮಾಲಿನ್ಯ
*ಫಂಗಿ
ಐ ಫ್ಲೂ ಲಕ್ಷಣಗಳೇನು?
* ಕಣ್ಣು ಕೆಂಪು ಅಥವಾ ಪಿಂಕ್ ಬಣ್ಣಕ್ಕೆ ತಿರುಗುವುದು
* ಕಣ್ಣುಗಳಲ್ಲಿ ಊತ
* ಕಣ್ಣಿನಲ್ಲಿ ನೀರು ಬರುವುದು
* ಕಣ್ಣು ಉಜ್ಜಬೇಕೆನಿಸುವುದು
* ತುರಿಕೆ, ಉರಿ ಒಂಥರಾ ಕಿರಿಕಿರಿ ಅನಿಸುವುದು
* ಕಣ್ಣಿನಿಂದ ಬಿಳಿ ಪೊರೆ ಬರುವುದು
* ಕಾಂಟ್ಯಾಕ್ಟ್ ಲೆನ್ಸ್ ಹಾಕಿದಾಗ ತೊಂದರೆಯಾಗುವುದು
ಐ ಫ್ಲೂ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದೇ?
* ಐ ಪ್ಲೂ ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುವುದರಿಂದ ತುಂಬಾನೇ ಎಚ್ಚರಿಕೆವಹಿಸಬೇಕು.
* ಶಾಲೆಗೆ ಹೋಗುವ ಮಕ್ಕಳಾದರೆ ಅವರು ಗುಂಪಿನಲ್ಲಿ ಆಡುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಬೇಗನೆ ಹರಡುತ್ತದೆ.
* ಅಲ್ಲದೆ ಮಕ್ಕಳಲ್ಲಿ ಇದರ ಬಗ್ಗೆ ಜಾಗ್ರತೆ ಮೂಡಿಸುವುದು ಕಷ್ಟ, ಜೊತೆಗೆ ಆಡಬೇಡಿ ಎಂದರೂ ಅವರು ಕೇಳುವುದಿಲ್ಲ, ಈ ಕಾರಣಕ್ಕೆ ಬೇಗನೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
* ಅಲ್ಲದೆ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ತುಂಬಾನೇ ಕಡಿಮೆ ಇರುತ್ತದೆ, ಈ ಕಾರಣದಿಂದಾಗಿ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು.
ಐ ಫ್ಲೂಗೆ ಚಿಕಿತ್ಸೆ ಹೇಗೆ?
ವೈದ್ಯರು ನಿಮಗೆ ಐ ಡ್ರಾಪ್ ಅಥವಾ ಆಂಟಿಬಯೋಟಿಕ್ , ಲ್ಯೂಬ್ರಿಕಾಂಟ್ ನೀಡಬಹುದು. ಐ ಫ್ಲೂ ಇರುವವರು ಕಣ್ಣುಗಳನ್ನು ಪದೇ ಪದೇ ಮುಟ್ಟಲು ಹೋಗಬಾರದು, ಅಲ್ಲದೆ ಕೈಗಳನ್ನು ಆಗಾಗ ತೊಳೆಯಬೇಕು. ಅಲ್ಲದೆ ಐ ಫ್ಲೂ ಇರುವವರು ಮನೆಯಲ್ಲಿಯೇ ಇದ್ದು ಗುಣವಾದ ಮೇಲೆ ಹೊರಗಡೆ ಓಡಾಡಿ, ಇಲ್ಲದಿದ್ದರೆ ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚು.
ಐ ಫ್ಲೂ ಉಂಟಾದಾಗ 7-14 ದಿನಗಳಲ್ಲಿ ಕಡಿಮೆಯಾಗುವುದು, ಕೆಲವರಿಗೆ 3 ವಾರಗಳು ಬೇಕಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications