Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ರಕ್ತಸ್ರಾವಕ್ಕೆ ಕಾರಣವಾಗುವ ಎಬೋಲಾದಂತ ವೈರಸ್ ಪತ್ತೆ..! 8 ಮಂದಿ ಮೃತ!
2025ರ ಆರಂಭ ಹೊಸ ವೈರಸ್‌ಗಳ ಹಾವಳಿಯಿಂದ ಆರಂಭಗೊಂಡಿದೆ. ಚೀನಾದಲ್ಲಿ ಕಾಣಿಸಿಕೊಂಡ HMPV ವೈರಸ್ ಬಳಿಕ ಹಲವು ದೇಶದಲ್ಲಿ ಕಂಡುಬಂದಿದೆ. ಭಾರತದಲ್ಲೂ ಕೂಡ ಈ ವೈರಸ್ ಕಾಣಿಸಿಕೊಂಡಿತ್ತು. ಹಾಗೆ ಹಲವು ದೇಶಗಳಲ್ಲಿ ಈ ವೈರಸ್ ಪ್ರಕರಣ ವರದಿಯಾಗಿರುವುದು ನೋಡಬಹುದು. ಹಾಗೆ ವಿಶ್ವದ ಹಲವು ದೇಶಗಳಲ್ಲಿ ಹಲವು ರೀತಿಯ ವೈರಸ್ ವರದಿಯಾಗುತ್ತಿದೆ.
ಈ ಹಿಂದೆ ನೀವು ಅಪಾಯಕಾರಿ ಎಬೋಲಾ ವೈರಸ್ ಹರಡುವಿಕೆ ಕುರಿತು ಕೇಳಿರುತ್ತೀರಿ. ಆಫ್ರಿಕನ್ ದೇಶಗಳಲ್ಲಿ ಈ ಎಬೋಲಾ ವೈರಸ್ ಆತಂಕ ಹುಟ್ಟಿಸಿತ್ತು. ಹಲವರ ಪ್ರಾಣ ಹಾನಿಗೂ ಇದು ಕಾರಣವಾಗಿತ್ತು. ಸದ್ಯ ಈಗ ಈ ಎಬೋಲಾವನ್ನೇ ಹೋಲುವಂತಹ ಹೊಸ ವೈರಸ್ ಪತ್ತೆಯಾಗಿದ್ದುಯ, 8 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಆಫ್ರಿಕನ್ ದೇಶವಾಗಿರುವ ಟಾಂಜಾನಿಯಾದಲ್ಲಿ ಈ ರೀತಿ ವಿಚಿತ್ರ ವೈರಸ್ ಪತ್ತೆಯಾಗಿದ್ದು 8 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ವೈರಸ್‌ಗೆ ಮಾರ್ಬರ್ಗ್ ಎಂದು ಕರೆಯಲಾಗಿದೆ. ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆಯು ಈ ವೈರಸ್ ಅನ್ನು ಸಾಂಕ್ರಾಮಿಕ ರೋಗ ಉಂಟು ಮಾಡುವ ಆದ್ಯತೆಯ ರೋಗಕಾರಕ ಎಂದು ಗುರುತಿಸಿತ್ತು. ಈಗ 9 ಜನರಲ್ಲಿ ಈ ವೈರಸ್ ಕಂಡುಬಂದಿದೆ, ಹಾಗೆ ಅದರಲ್ಲಿ 8 ಮಂದಿ ಮೃತಪಟ್ಟಿದ್ದಾರೆ ಎಂದು WHO ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಬೋಲಾದಂತೆಯೇ ಮಾರ್ಬರ್ಗ್ ವೈರಸ್ ಬಾವಲಿಗಳಿಂದ ಹರಡುತ್ತಿದೆ ಎಂದು ತಿಳಿದುಬಂದಿದೆ. ಸೋಂಕಿತರಿಂದ ಒಬ್ಬರಿಂದ ಮತ್ತೊಬ್ಬರಿಗೆ ಇದು ಹರಡುತ್ತದೆ. ಈ ವೈರಸ್‌ಗೆ ಯಾವುದೇ ಲಸಿಕೆ ಕಂಡುಹಿಡಿದಿಲ್ಲ. ಬದಲಿಗೆ ಕೆಲವೊಂದು ಔಷಧಿಗಳು ಮಾತ್ರ ಬಳಕೆಯಲ್ಲಿದೆ. ಟಾಂಜಾನಿಯಾದಲ್ಲಿ ಈ ಪ್ರಕರಣ ಏಕಾಏಕಿ ಕಾಣಿಸಿಕೊಂಡಿದೆ.
ರುವಾಂಡಾದಲ್ಲಿ ಕಳೆದ ಸೆಪ್ಟೆಂಬರ್ 27 ರಂದು ಮೊದಲ ಪ್ರಕರಣ ವರದಿಯಾಗಿತ್ತು. ಆದ್ರೆ ಡಿಸೆಂಬರ್‌ನಲ್ಲಿ ಎಲ್ಲಾ ಪ್ರಕರಣಗಳು ಗುಣಮುಖರಾಗಿರುವುದಾಗಿ ಹಾಗೆ ವೈರಸ್ ಕೊನೆಗೊಂಡಿದೆ ಎಂದು ಘೋಷಿಸಲಾಗಿತ್ತು. ಅಲ್ಲಿ ಸುಮಾರು 65 ಪ್ರಕರಣ ವರದಿಯಾಗಿ ಇದರಲ್ಲಿ 15 ಮಂದಿ ಮೃತಪಟ್ಟಿದ್ದರು. ಆದ್ರೆ ರುವಾಂಡಾದ ಗಡಿ ಪ್ರದೇಶದಲ್ಲಿ ಮತ್ತೆ ಈ ವೈರಸ್ ಕಾಣಿಸಿಕೊಂಡಿದೆ.
ಮಾರ್ಬರ್ಗ್ ವೈರಸ್ ಎಂದರೇನು?
ಮಾರ್ಬರ್ಗ್ ಒಂದು ವೈರಲ್ ಹೆಮರಾಜಿಕ್ ಜ್ವರವಾಗಿದ್ದು ಅದು ಮುಖ್ಯವಾಗಿ ರಕ್ತನಾಳಗಳ ಹಾನಿಗೆ ಕಾರಣವಾಗುತ್ತದೆ. ಜ್ವರದಿಂದ ಆರಂಭವಾಗುವ ಲಕ್ಷಣಗಳು, ತೀವ್ರ ವಾಂತಿ, ಕಣ್ಣಿನಿಂದ ರಕ್ತಸ್ರಾವವಾಗುವಂತಹ ವಿಚಿತ್ರ ಲಕ್ಷಣಗಳ ಹೊಂದಿದೆ.
ಮಾರ್ಬರ್ಗ್ ವೈರಸ್ ಲಕ್ಷಣಗಳು
- ತೀವ್ರ ಜ್ವರ
- ಶೀತ
- ತೀವ್ರ ತಲೆನೋವು
- ಕೆಮ್ಮು
- ಸ್ನಾಯು ಮತ್ತು ಕೀಲು ನೋವು
- ಗಂಟಲು ನೋವು
- ದದ್ದುಗಳು
- ಕಣ್ಣು ಕೆಂಪಾಗುವುದು ಅಥವಾ ರಕ್ತಸ್ರಾವ
- ವಾಂತಿ
- ಅತಿಸಾರ
- ತಲೆತಿರುಗುವಿಕೆ
- ತೂಕ ಇಳಿಕೆ
- ರಕ್ತಸಿಕ್ತ ಮಲ
- ಕೆಮ್ಮಿದಾಗ ರಕ್ತಬರುವುದು
ಈ ವೈರಸ್‌ನಿಂದ ರಕ್ಷಣೆ ಹೇಗೆ?
ಇದು ಬಾವಲಿಗಳಿಂದ ಹರಡಲಿದೆ ಎಂಬುದು ತಿಳಿದುಬಂದಿದೆ. ಅದರಲ್ಲೂ ಬಾವಲಿಗಳು ತಿಂದಿರುವ ಹಣ್ಣಗಳ ಸವಿಯುವುದು ಬಾವಲಿಗಳ ಮಲದಿಂದ ಇದು ಹರಡುತ್ತಿದೆ. ಅದರಲ್ಲೂ ಬೆಟ್ಟ ಪ್ರದೇಶದಲ್ಲಿ ಬೆಳೆಯುವ ಹಣ್ಣುಗಳನ್ನು ಈ ಬಾವಲಿಗಳು ಹೆಚ್ಚಾಗಿ ಸವಿಯುತ್ತವೆ. ಹೀಗಾಗಿ ಹಣ್ಣಗಳ ಸೇವನೆಯ ಮೇಲೆ ಜಾಗೃತೆ ವಹಿಸುವುದು ಮುಖ್ಯವಾಗಿದೆ. ವೈರಸ್ ದೃಢಪಟ್ಟಿರುವ ಸೋಂಕಿತರ ಸಂಪರ್ಕಕ್ಕೆ ಬಾರದೆ ಇರುವುದರಿಂದ ಹರಡುವಿಕೆ ತಡೆಯಬಹುದು. ಬಾವಲಿಗಳು ಸವಿದ ಹಣ್ಣನ್ನು ಕಾಡುಪ್ರಾಣಿಗಳು ಸೇವಿಸುತ್ತವೆ, ಈ ಪ್ರಾಣಿಗಳ ಸಂಪರ್ಕದಿಂದಲೂ ನಿಮಗೆ ಈ ವೈರಸ್ ಹರಡಬಹುದು. ಹೆಚ್ಚಾಗಿ ಡೈರಿ ಪ್ರಾಣಿಗಳಿಂದ ಈ ರೋಗ ಹರಡುವ ಸಾಧ್ಯತೆ ಇರಲಿದೆ. ಸದ್ಯ ಈಗ ಆಫ್ರಿಕನ್ ದೇಶದಲ್ಲಿ ಈ ವೈರಸ್ ವರದಿಯಾಗಿದ್ದು, ಮುಂದೆ ಸಾಂಕ್ರಾಮಿಕವಾಗಿ ಹರಡುವ ಸಾಧ್ಯತೆ ಎದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications