Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಅತಿಯಾದ ತೇಗು ಹೊಟ್ಟೆ ಕ್ಯಾನ್ಸರ್ ಲಕ್ಷಣವಿರಬಹುದೇ?
ಇತ್ತೀಚಿನ ದಿನಗಳಲ್ಲಿ ತುಂಬಾನೇ ತೇಗು ಬರುತ್ತಿದೆ, ಸಾಮಾನ್ಯವಾಗಿ ತಿನ್ನುತ್ತಿದ್ದಂತೆ ತಿನ್ನಲು ಸಾಧ್ಯವಾಗುತ್ತಿಲ್ಲ, ಅದಕ್ಕಿಂತ ಮೊದಲೇ ತೇಗು ಬರುತ್ತಿದೆ, ಹೊಟ್ಟೆ ತುಂಬಿದಂತೆ ಅನಿಸುತ್ತಿದೆ ಎಂದಾದರೆ ಇದೆಲ್ಲಾ ಸಹಜವೇ ಅಥವಾ ಏನಾದರೂ ಗಂಭೀರ ಕಾಯಿಲೆಯ ಲಕ್ಷಣವಿರಬಹುದೇ? ಎಂದು ನೋಡುವುದಾದರೆ ಅತಿಯಾದ ತೇಗು ನಿರ್ಲಕ್ಷ್ಯ ಮಾಡುವಂಥ ವಿಷಯವಲ್ಲ, ಇದು ಗಂಭೀರ ಕಾಯಿಲೆಯ ಲಕ್ಷಣವೂ ಇರಬಹುದು. ಇದರ ಕುರಿತ ಹೆಚ್ಚಿನ ಮಾಹಿತಿ ಈ ಲೇಖನದ ಮೂಲಕ ತಿಳಿಯೋಣ:

ತೇಗು ಎಂದರೇನು
ಹೊಟ್ಟೆಯಲ್ಲಿರುವ ಅಧಿಕ ಗಾಳಿ ಬಾಯಿಯ ಮೂಲಕ ಹೊರ ಬರುವ ವಿಧಾನವಾಗಿದೆ.
ಯಾವಾಗ ಸಾಮಾನ್ಯವಾಗಿ ತೇಗು ಉಂಟಾಗುವುದು?
* ತುಂಬಾ ಜೋರಾಗಿ ತಿಂದಾಗ
* ತುಂಬಾ ವೇಗವಾಗಿ ಪಾನೀಯ ಕುಡಿದಾಗ
* ತುಂಬಾ ಕಾರ್ಬೋನೇಟಡ್ ಪಾನೀಯ ಕುಡಿದಾಗ
* ಧೂಮಪಾನ
* ಚ್ಯುಯಿಂಗ್ ಗಮ್ ಅಗೆದಾಗ ತೇಗು ಬರುವುದು.
ಅತಿಯಾದ ತೇಗು ಜೊತೆ ದೇಹದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದು ಸಾಮಾನ್ಯವಾದ ತೇಗು ಅಲ್ವೇ ಅಲ್ಲ
* ಇದ್ದಕ್ಕಿದ್ದಂತೆ ತೂಕ ಇಳಿಕೆ
* ಹೊಟ್ಟೆ ಹಸಿವು ಇಲ್ಲದಿರುವುದು
* ಕಡಿಮೆ ತಿಂದಾಗ ಹೊಟ್ಟೆ ತುಂಬಿದಂತೆ ಅನಿಸುವುದು
* ನುಂಗಲು ಕಷ್ಟವಾಗುವುದು
* ಎದೆಯುರಿ
* ತುಂಬಾ ಸುಸ್ತು
ಈ ಬಗೆಯ ಲಕ್ಷಣಗಳು ಈ ಕಾಯಿಲೆ ಸೂಚನೆ ಇರಬಹುದು
* ಹೊಟ್ಟೆಯ ಕ್ಯಾನ್ಸರ್
* ಅನ್ನನಾಳದ ಕ್ಯಾನ್ಸರ್
* ಮೇಧೋಜೀರಕ ಗ್ರಂಥಿಯ ಕ್ಯಾನ್ಸರ್ ಈ ಬಗೆಯ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿ.
ಪ್ರಾರಂಭದಲ್ಲಿ ಪತ್ತೆಯಾದರೆ ಗುಣಪಡಿಸಲು ಸುಲಭವಾಗುವುದು
ಕ್ಯಾನ್ಸರ್ 2ನೇ ಅಥವಾ 3ನೇ ಹಂತ ತಲುಪುವ ಮುನ್ನ ಮೊದಲನೇ ಹಂತದಲ್ಲಿ ಪತ್ತೆಯಾದರೆ ಗುಣಪಡಿಸುವುದು ಸುಲಭ. ಆದರೆ ತುಂಬಾ ಜನರು ಆರಂಭದ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ. ಅತಿಯಾದ ತೇಗು ಬರುತ್ತಿದ್ದರೆ ಅದು ನಿರ್ಲಕ್ಷ್ಯ ಮಾಡುವಂಥ ವಿಷಯ ಅಲ್ವೇ ಅಲ್ಲ, ತಡ ಮಾಡದೆ ಈ ಪರೀಕ್ಷೆ ಮಾಡಿಸಿ:
* CT ಸ್ಕ್ಯಾನ್
* ಎಂಡೋಸ್ಕೋಪಿ
* ಬೇರಿಯಮ್ ಸ್ವಾಲೋ ಸ್ಟಡಿ
ಅತಿಯಾದ ತೇಗು ತಡೆಗಟ್ಟುವುದು ಹೇಗೆ?
ಅತಿಯಾದ ತೇಗು ತಡೆಗಟ್ಟಲು
* ಆಹಾರವನ್ನು ನಿಧಾನಕ್ಕೆ ಅಗೆದು ತಿನ್ನಬೇಕು
* ಚುಯ್ಯಿಂಗ್ ಗಮ್, ಕಾರ್ಬನೇಟಡ್ ಪಾನೀಯ ಬಳಸಬಾರದು
* ನೀರನ್ನು ನಿಧಾನಕ್ಕೆ ಕುಡಿಯಿರಿ
ಕ್ಯಾನ್ಸರ್ ಪತ್ತೆಯಾದರೆ ಈ ಚಿಕಿತ್ಸೆ ಬೇಜಾಗುವುದು
* ಸರ್ಜರಿ
* ಕೀಮೋಥೆರಪಿ
* ರೇಡಿಯೇಷನ್
ಕೊನೆಯದಾಗಿ: ಅತಿಯಾದ ತೇಗು ಕಂಡು ಬರುತ್ತಿದ್ದರೆ ಅದರ ಜೊತೆಗೆ ದೇಹದಲ್ಲಿ, ನಿಮ್ಮ ಆಹಾರ ತಿನ್ನುವ ಅಭ್ಯಾಸದಲ್ಲಿ ಬದಲಾವಣೆಯಾದರೆ ನೀವು ತಡನಾಡದೆ ವೈದ್ಯರಿಗೆ ತೋರಿಸಿ ಆರೋಗ್ಯ ಸಮಸ್ಯೆ ಇದೆಯೇ, ಇಲ್ವೇ ಎಂದು ಖಚಿತ ಪಡಿಸುವುದು ಒಳ್ಳೆಯದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

