Latest Updates
-
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ!
Tea: ಬೆಳಗ್ಗೆ ಎದ್ದು ಟೀ ಕುಡಿತೀರಾ? ಈ ಸತ್ಯ ಗೊತ್ತಾದ್ರೆ ಇಂದೇ ನಿಲ್ಲಿಸ್ತೀರಾ!
ಟೀ ಪ್ರಿಯರೇ ಎಚ್ಚರ! ಬೆಳಗಿನ ಟೀ ನಿಮ್ಮನ್ನ ಹೇಗೆ ಹಾಳು ಮಾಡುತ್ತೆ ಗೊತ್ತಾ? ಈ ವಿಷಯ ತಿಳಿದರೆ ಮುಟ್ಟಲು ಸಾಧ್ಯವಿಲ್ಲ. ಹೌದು, ಒಂದು ಹಂತದವರೆಗೆ, ನೀವು ಸರಿಯಾದ ಸಮಯದಲ್ಲಿ ಸೀಮಿತ ಪ್ರಮಾಣದಲ್ಲಿ ಟೀ ಕುಡಿದರೆ ದೇಹಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ. ಆದರೆ, ನೀವು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ (Empty Stomach Tea) ಕುಡಿದರೆ ಜಾಗರೂಕರಾಗಿರಿ. ವಿಶೇಷವಾಗಿ ಹಾಲಿನಿಂದ ತಯಾರಿಸಿದ ಚಾಯ್ ಬಗ್ಗೆ ಎಚ್ಚರ. ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಇದು ಹೊಟ್ಟೆಯಲ್ಲಿ ಆಮ್ಲವನ್ನು ಹೆಚ್ಚಿಸುತ್ತದೆ. ಹಸಿವನ್ನು ಕಡಿಮೆ ಮಾಡುತ್ತದೆ.
ನಮ್ಮನ್ನು ರಿಫ್ರೆಶ್ ಮಾಡುವ ಟೀ ಬಗ್ಗೆ ನಾವು ಎಷ್ಟು ಮಾತನಾಡಿದರೂ ಕಡಿಮೆಯೇ. ಭಾರತದಲ್ಲಿ ಟೀ (Tea) ಇಲ್ಲದೆ ದಿನದ ಪ್ರಾರಂಭ ಅಪೂರ್ಣ ಎಂದೇ ಹೇಳಬಹುದು. ಅನೇಕ ಜನರು ಬೆಳಗ್ಗೆ ಎದ್ದ ತಕ್ಷಣ ಒಂದು ಕಪ್ ಟೀ ಕುಡಿಯಲು ಇಷ್ಟಪಡುತ್ತಾರೆ. ಆದರೆ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ (Morning Tea) ಕುಡಿಯುವುದರಿಂದ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಒಂದು ವೇಳೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಏನು ಆಗುತ್ತದೆ? ಇದು ಹೊಟ್ಟೆಯಲ್ಲಿ ಆಮ್ಲವನ್ನು ಹೆಚ್ಚಿಸುತ್ತದೆಯೇ? ಎಂದರೆ, ಹೌದು ಎಂದು ಆರೋಗ್ಯ ತಜ್ಞರು ಹೇಳುತ್ತಿದ್ದಾರೆ.

ನಾವು ಆಯಾಸ ಆದಾಗ, ತಲೆನೋವು ಇದ್ದಾಗ, ನಾಲ್ವರು ಸ್ನೇಹಿತರು ಒಟ್ಟಿಗೆ ಮಾತನಾಡುವಾಗ, ಆಫೀಸಿನಲ್ಲಿ ಇದ್ದಾಗ, ಬಜಾರ್‌ಗೆ ಹೋದಾಗ ಅಥವಾ ಸಂಬಂಧಿಕರ ಮನೆಗೆ ನಾವು ಹೋದಾಗ ಅಥವಾ ಸಂಬಂಧಿಗಳೇ ನಮ್ಮ ಮನೆಗೆ ಬಂದರೂ, ಟೀ ಖಂಡಿತಾ ಇರಲೇಬೇಕು. ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯುವ ಈ ಅಭ್ಯಾಸವು ಜೀರ್ಣಕ್ರಿಯೆ ಮತ್ತು ಕರುಳಿನ ಆರೋಗ್ಯಕ್ಕೆ ಹಾನಿ ಉಂಟುಮಾಡುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಅಸಿಡಿಟಿ ಬರುತ್ತಾ?
ಖಾಲಿ ಹೊಟ್ಟೆಯಲ್ಲಿ ಟೀ ಕುಡಿದರೆ ಏನಾಗುತ್ತದೆ ಎಂಬ ಬಗ್ಗೆ ದೆಹಲಿಯ ಏಮ್ಸ್‌ನ ಗ್ಯಾಸ್ಟ್ರೋಲಜಿ ವಿಭಾಗದ ಡಾಕ್ಟರ್ ಅನನ್ಯ ಗುಪ್ತಾ ವಿವರಿಸಿದ್ದಾರೆ. ನೀವು ಬೆಳಗ್ಗೆ ಎದ್ದಾಗ ನಿಮ್ಮ ಹೊಟ್ಟೆ ಖಾಲಿ ಇರುತ್ತದೆ. ಇದು ನೀವು ಉಪವಾಸವಿದ್ದಂತೆ. ಈ ಸಮಯದಲ್ಲಿ ಹೊಟ್ಟೆಯಲ್ಲಿರುವ ಗ್ಯಾಸ್ಟ್ರಿಕ್ ರಸ ಅಂದರೆ, ಆಮ್ಲವು ಈಗಾಗಲೇ ಸಕ್ರಿಯವಾಗಿರುತ್ತದೆ. ನೀವು ಈ ಸಮಯದಲ್ಲಿ ವಿಶೇಷವಾಗಿ ಹಾಲಿನ ಟೀ ಕುಡಿದರೆ, ಅದು ಹೊಟ್ಟೆಯ ಆಮ್ಲ ಸ್ವಭಾವವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದು ಆಮ್ಲೀಯತೆ, ಎದೆಯುರಿ, ಗ್ಯಾಸ್, ಉಬ್ಬುವುದು ಇತ್ಯಾದಿ ಸಮಸ್ಯೆ ಉಂಟುಮಾಡುತ್ತದೆ.
ಗ್ಯಾಸ್ಟ್ರಿಕ್ ಸಮಸ್ಯೆಗಳ ಸಾಧ್ಯತೆ
ಟೀಯಲ್ಲಿರುವ ಕೆಫೀನ್ ಮತ್ತು ಟ್ಯಾನಿನ್ ಕೂಡ ಜೀರ್ಣಕ್ರಿಯೆಯನ್ನು ಹಾಳುಮಾಡುತ್ತವೆ. ಟ್ಯಾನಿನ್ ಜೀರ್ಣಕ್ರಿಯೆಯನ್ನು ನಿಧಾನಗೊಳಿಸುವ ಹಸಿವನ್ನು ಕಡಿಮೆ ಮಾಡುವ ಸಂಯುಕ್ತವಾಗಿದೆ. ಆದ್ದರಿಂದ, ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವುದರಿಂದ ಹೊಟ್ಟೆಯ ಪದರಕ್ಕೆ ಹಾನಿಯಾಗುತ್ತದೆ. ಇದು ಬಳಿಕ ಗ್ಯಾಸ್ಟ್ರಿಕ್ ಸಮಸ್ಯೆಗಳ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಈ ಲಕ್ಷಣಗಳು ಕಂಡುಬಂದರೆ, ಟೀ ನಿಮಗೆ ಹಾನಿ ಮಾಡುತ್ತಿದೆ ಎಂದು ಅರ್ಥ. ಈ ಬಗ್ಗೆ ಜಾಗರೂಕರಾಗಿರುವುದು ಮುಖ್ಯ. ಅವುಗಳು ಈ ಕೆಳಗಿನಂತಿವೆ.
• ಬೆಳಗ್ಗೆ ಟೀ ಕುಡಿದ ನಂತರ ಹೊಟ್ಟೆ ಭಾರವಾದಂತೆ ಅನಿಸುವುದು.
• ಗಂಟಲಿನಲ್ಲಿ ಆಮ್ಲೀಯತೆ ಅಥವಾ ಉರಿಯುತ್ತಿರುವ ಅನುಭವ.
• ಹಸಿವು ಇಲ್ಲದಿರುವುದು ಅಥವಾ ಆಹಾರದ ಬಗ್ಗೆ ಅಸಡ್ಡೆ.
• ಮಧ್ಯಾಹ್ನದವರೆಗೆ ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಉಬ್ಬುವುದು.
ಈ ಮೇಲಿನ ಲಕ್ಷಣಗಳು ಪದೇ ಪದೇ ಕಂಡುಬಂದರೆ, ನೀವು ಬೆಳಗ್ಗೆ ಟೀ ಕುಡಿಯುವ ಅಭ್ಯಾಸವು ನಿಮ್ಮ ಹೊಟ್ಟೆಗೆ ಒಳ್ಳೆಯದಲ್ಲ ಎಂದು ಅರ್ಥ.
ಆಮ್ಲೀಯತೆಯನ್ನು ತಡೆಯುವುದು ಹೇಗೆ?
• ಟೀ ಕುಡಿಯುವ ಮೊದಲು ಸ್ವಲ್ಪ (ಲಘುವಾಗಿ) ಏನನ್ನಾದರೂ ತಿನ್ನಿ. ಉದಾಹರಣೆಗೆ ನೆನೆಸಿದ ಬಾದಾಮಿ, • ಬಾಳೆಹಣ್ಣು ಅಥವಾ ಒಣಗಿದ ಟೋಸ್ಟ್‌ನಂತಹವುಗಳನ್ನು ಸೇವಿಸಿ
• ಕೆಫೀನ್ ಕಡಿಮೆ ಇರುವ ಗಿಡಮೂಲಿಕೆ ಟೀ ಅಥವಾ ಗ್ರೀನ್ ಟೀ ರೀತಿಯ ಆಯ್ಕೆಗಳನ್ನು ಆರಿಸಿ.
• ಬೆಳಗ್ಗೆ ಎದ್ದ ತಕ್ಷಣ ಉಗುರು ಬೆಚ್ಚಗಿನ ನೀರು ಕುಡಿಯಿರಿ. ಅಥವಾ ನಿಂಬೆಹಣ್ಣಿನ ನೀರು ಕುಡಿಯುವುದರಿಂದ ಹೊಟ್ಟೆ ಶಾಂತವಾಗಿರುತ್ತದೆ.
• ನೀವು ಟೀ ಕುಡಿಯಲೇಬೇಕೆಂದರೆ, ಉಪಹಾರದೊಂದಿಗೆ ಅಥವಾ ನಂತರ ಕುಡಿಯುವುದು ಉತ್ತಮ.
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯುವ ಅಭ್ಯಾಸವು ಆರೋಗ್ಯಕ್ಕೆ ಅಪಾಯ ಎಂದು ಪೌಷ್ಟಿಕಾಂಶ ತಜ್ಞರು ಹೇಳಿದ್ದಾರೆ. ಟೀ ಅಭ್ಯಾಸವು ಹೆಚ್ಚು ಕಾಲ ಮುಂದುವರೆದರೆ, ಅದು ದೀರ್ಘಕಾಲದ ಆಮ್ಲೀಯತೆ, ಗ್ಯಾಸ್ಟ್ರಿಟಿಸ್‌ನಂತಹ ಗಂಭೀರ ಹೊಟ್ಟೆಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಟೀ ಬದಲು ಈ ಪರ್ಯಾಯ ಆಯ್ಕೆ ಮಾಡಿ
ಎಳನೀರು ಅಥವಾ ಹಣ್ಣಿನ ರಸ: ಎಳನೀರು ಅಥವಾ ಹಣ್ಣಿನ ರಸ ಸೇವನೆಯಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತವೆ.
ಮೊಸರು ಅಥವಾ ಮಜ್ಜಿಗೆ: ಮೊಸರು ಅಥವಾ ಮಜ್ಜಿಗೆ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಬಲಗೊಳ್ಳುತ್ತದೆ.
ಗ್ರೀನ್ ಟೀ ಅಥವಾ ಶುಂಠಿ ಟೀ: ಗ್ರೀನ್ ಟೀ ಅಥವಾ ಶುಂಠಿ ಟೀ ಕುಡಿಯುವುದರಿಂದ ದೇಹಕ್ಕೆ ಆಂಟಿ ಆಕ್ಸಿಡೆಂಟ್‌ಗಳು ಮತ್ತು ಪೋಷಕಾಂಶಗಳು ದೊರೆಯುತ್ತವೆ.
ಒಟ್ಟಾರೆಯಾಗಿ, ಬೆಳಗ್ಗೆ ಟೀ ನಿಮ್ಮ ಮಾನಸಿಕ ಸ್ಥಿತಿಯನ್ನು ರಿಫ್ರೆಶ್ ಮಾಡಬಹುದು. ಆದರೆ, ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅದು ನಿಧಾನವಾಗಿ ನಿಮ್ಮ ಜೀರ್ಣಾಂಗ ವ್ಯವಸ್ಥೆಗೆ ಹಾನಿ ಮಾಡುತ್ತದೆ. ಆದ್ದರಿಂದ, ನೀವು ಟೀಯನ್ನು ಇಷ್ಟಪಡುತ್ತಿದ್ದರೆ, ನಿಮ್ಮ ಆರೋಗ್ಯಕ್ಕೆ ಹಾನಿಯಾಗದಂತೆ ಆನಂದಿಸಲು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಕುಡಿಯುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

