Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಅಪರೂಪದ ವೈರಸ್‌ಗೆ ತುತ್ತಾದ ವೃದ್ಧ: ಮುರೈನ್ ಟೈಫನ್ ಹರಡುವುದು ಹೇಗೆ ಗೊತ್ತಾ?
ಇತ್ತೀಚಿಗೆ ವಿಚಿತ್ರ ರೀತಿಯ ಹೊಸ ಹೊಸ ವೈರಸ್‌ಗಳು ಹುಟ್ಟಿಕೊಳ್ಳುವುದನ್ನು ನಾವು ನೋಡಬಹುದು. ಏಕಾಏಕಿ ಜ್ವರ ಕಾಣಿಸಿಕೊಳ್ಳುವುದು ಸೇರಿ ಹಲವು ರೀತಿ ಸಮಸ್ಯೆ ಉಂಟಾಗುವುದು ನಡೆಯುತ್ತಿದೆ. ಅದರಲ್ಲೂ ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯ ಸೇರಿ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗುತ್ತವೆ.
ಈ ವೈರಸ್ ಕಾಯಿಲೆಯಿಂದ ಇತ್ತೀಚಿಗೆ ಬಳಲುತ್ತಿರುವವ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ. ಡೆಂಗ್ಯೂ ಅತೀ ಹೆಚ್ಚಾಗಿ ಕಾಡುವುದಲ್ಲದೆ, ಪ್ರಾಣ ಹಾಣಿಗೂ ಕಾರಣವಾಗುತ್ತಿದೆ. ಇದೆಲ್ಲದರ ಜೊತೆಗೆ ಹೊಸ ಹೊಸ ವೈರಸ್‌ಗಳು ಆತಂಕ ಹೆಚ್ಚುವಂತೆ ಮಾಡುತ್ತವೆ. ವೆಸ್ಟ್ ನೈಲ್, ನಿಪಾ, ಮಂಕಿಪಾಕ್ಸ್‌ನಂತಹ ಹೊಸ ರೀತಿಯ ವೈರಸ್‌ಗಳು ಕೂಡ ಮಾನವರನ್ನು ಕಾಡುತ್ತಿವೆ.

ಈಗ ಹೊಸದಂದು ವೈರಸ್ ಕಾಣಿಸಿಕೊಂಡಿದ್ದು, ಓರ್ವ ಈ ವೈರಸ್‌ಗೆ ತುತ್ತಾಗಿದ್ದಾನೆ ಎಂದು ವರದಿಯಾಗಿದೆ. 75 ವರ್ಷದ ವ್ಯಕ್ತಿಯೊಬ್ಬರಿಗೆ ಮುರಿನ್ ಟೈಫಸ್ ಎಂಬ ಅಪರೂಪದ ಬ್ಯಾಕ್ಟೀರಿಯಾದ ಕಾಯಿಲೆ ಇರುವುದು ಪತ್ತೆಯಾಗಿದೆ. ಇದು ವೈರಸ್ ಕೂಡ ಬಾಹ್ಯ ಕಾರಣದಿಂದಾಗಿ ಹರಡುತ್ತದೆ ಎಂದು ತಿಳಿದುಬಂದಿದೆ. ಅವರು ಇತ್ತಿಚಿಗೆ ವಿಯೆಟ್ಮಾಂ ಮತ್ತು ಕಾಂಬೋಡಿಯಾಗೆ ಪ್ರಯಾಣಿಸಿದ್ದರು ಎನ್ನಲಾಗಿದೆ.
ಮುರೈನ್ ಟೈಫಸ್ ಎಂಬ ವೈರಸ್ ಹೆಚ್ಚಾಗಿ ಸಾಕು ಪ್ರಾಣಿಗಳ ಮೈಯಲ್ಲಿರುವ ಚಿಗಟಗಳಿಂದ ಹರಡುತ್ತವೆ, ಪ್ರಾಣಿ ಮೈಯಲ್ಲಿರುವ ಈ ಚಿಗಟ ಮಾನವರಿಗೆ ಕಚ್ಚಿದರೆ ಅದರಿಂದ ಈ ಕಾಯಿಲೆ ಬರುತ್ತದೆ ಎಂದು ತಿಳಿದುಬಂದಿದೆ. ಈ 75 ವರ್ಷದ ವ್ಯಕ್ತಿಗೆ ಬೆಕ್ಕು ಅಥವಾ ನಾಯಿಯ ಮೂಲಕ ಈ ವೈರಸ್ ತಗುಲಿರಬಹುದು ಎಂದು ಅಂದಾಜಿಸಲಾಗಿದೆ.
ಸೂಕ್ಷ್ಮಜೀವಿಯ ಡಿಎನ್‌ಎಯನ್ನು ಗುರುತಿಸಲು ಬಳಸುವ ನೆಕ್ಸ್ಟ್ ಜನರೇಷನ್ ಸೀಕ್ವೆನ್ಸಿಂಗ್ (ಎನ್‌ಜಿಎಸ್) ತಂತ್ರಜ್ಞಾನವನ್ನು ಬಳಸಿಕೊಂಡು ರೋಗಿಯನ್ನು ರೋಗನಿರ್ಣಯ ಮಾಡಲಾಗಿದೆ. ಹೀಗಾಗಿ ಈ ಅಪರೂಪದ ವೈರಸ್‌ಗೆ ಒಳಗಾದ ಮೊದಲ ವ್ಯಕ್ತಿ ಎಂದು ಸಹ ಅಂದಾಜಿಸಲಾಗಿದೆ.
ಮುರೈನ್ ಟೈಫಸ್ ಎಂದರೇನು?
ಮುರೈನ್ ಟೈಫಸ್ ಅನ್ನು ಫ್ಲೀ-ಬೋರ್ನ್ ಟೈಫಸ್ ಅಥವಾ ಸ್ಥಳೀಯ ಟೈಫಸ್ ಎಂದೂ ಕರೆಯುತ್ತಾರೆ, ಇದು ರಿಕೆಟ್ಸಿಯಾ ಟೈಫಿ ಬ್ಯಾಕ್ಟೀರಿಯಾದಿಂದ ಉಂಟಾಗುವ ಕಾಯಿಲೆಯಾಗಿದೆ. ಇದು ಸಾಕು ಪ್ರಾಣಿಗಳಾದ ಬೆಕ್ಕು, ನಾಯಿ ಹಾಗು ಮನೆಯಲ್ಲಿರುವ ಇಲಿಯಿಂದ ಹರಡಬಹುದು. ಆದ್ರೆ ನಾಯಿಯ ಮೈಯಲ್ಲಿರುವ ಚಿಗಟದಿಂದ ಈ ವೈರಸ್ ಹರಡುವ ಅಪಾಯ ಬಹಳ ಕಡಿಮೆ.
ಹಾಗೆ ಈ ಚಿಗಟಗಳ ಮಲವನ್ನು ಅಥವಾ ಅವುಗಳಿಂದ ಹೊರಬಂದ ವೈರಸ್ ಸಂಪರ್ಕಕ್ಕೆ ವ್ಯಕ್ತಿಗಳು ಬಂದಾಗಲು ಈ ವೈರಸ್ ಹರಡುತ್ತದೆ. ಆದರೆ ಇದು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ವೈರಸ್ ಅಲ್ಲ ಎಂದು ವಿವರಿಸಲಾಗಿದೆ.
ಹಾಗಾದ್ರೆ ಮುರೈನ್ ಟೈಫನ್‌ನ ರೋಗ ಲಕ್ಷಣಗಳೇನು?
- ವಿಪರೀತ ಜ್ವರ ಮತ್ತು ಶೀತ
- ತಲೆನೋವು
- ಹಸಿವಾಗದೆ ಇರುವುದು
- ಮೈ ಕೈ ನೋವು
- ವಾಕರಿಕೆ
- ವಾಂತಿ
- ಹೊಟ್ಟೆ ನೋವು
- ಕೆಮ್ಮು
- ಮೈ ಮೇಲೆ ಹುಣ್ಣುಗಳು ಕಾಣಿಸಿಕೊಳ್ಳುವುದು
ಸದ್ಯ ಭಾರತದಲ್ಲಿರುವ ಸಾಕು ಪ್ರಾಣಿಗಳಲ್ಲಿನ ಚಿಗಟಗಳಲ್ಲಿ ಈ ವೈರಸ್ ಪತ್ತೆಯಾಗಿದೆಯೇ ಎಂಬುದು ದೃಢವಾಗಿಲ್ಲ. ಸೋಂಕಿತ ವ್ಯಕ್ತಿ ವಿದೇಶಿ ಪ್ರಯಾಣ ಮಾಡಿರುವುದರಿಂದ ಆ ದೇಶದಲ್ಲಿರುವ ಪ್ರಾಣಿಗಳ ಚಿಗಟದಿಂದ ಹರಡಿರಬಹುದು. ಈ ವೈರಸ್ ಭಾರತ ಮೂಲದ ಪ್ರಾಣಿಗಳಿಂದ ಹರಡಿರುವ ಸಂಭವ ಕಡಿಮೆ ಎಂದು ತಿಳಿದುಂದಿದೆ.
ಈ ವೈರಸ್ ಹರಡುವುದನ್ನು ತಡೆಯಲು ಸಾಕು ಪ್ರಾಣಿಗಳು ಸಂಪರ್ಕದಿಂದ ದೂರ ಇರುವುದು ಹಾಗೂ ಪ್ರಾಣಿಗಳಿಗೆ ವಿಶೇಷ ಸೋಪು ಹಾಗೂ ಶಾಂಪೂಗಳ ಬಳಸಿ ಸ್ನಾನ ಮಾಡಿರುವುದರಿಂದ ತಡೆಯಬಹುದು. ಈ ವೈರಸ್‌ಗೆ ಪ್ರತ್ಯೇಕ ಚಿಕಿತ್ಸೆ ಕಂಡುಹಿಡಿದಿಲ್ಲ. ಸಾಮಾನ್ಯವಾಗಿ ಉಳಿದ ವೈರಸ್‌ಗಳಿಗೆ ನೀಡುವಂತಹ ಚಿಕಿತ್ಸೆಯೇ ಇದಕ್ಕೂ ಮಾಡಲಾಗುತ್ತಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

