Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬಿಳುಪು ಹೋಗುವ ಸಮಸ್ಯೆ ತಡೆಗಟ್ಟಲು ಈ ಮನೆಮದ್ದು ಪರಿಣಾಮಕಾರಿ
ಹೆಣ್ಮಕ್ಕಳಿಗೆ ಬಿಳುಪು ಹೋಗುವುದು ಸಹಜ, ಆದರೆ ಆ ಬಿಳುಪು ತುಂಬಾ ಹೋದರೆ ಅಥವಾ ಅದರ ಬಣ್ಣದಲ್ಲಿ ವ್ಯತ್ಯಾಸ ಉಂಟಾದರೆ, ಬಿಳುಪು ತುಂಬಾನೇ ದುರ್ವಾಸನೆ ಬೀರಿದರೆ ಆ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು, ಇದು ಅನಾರೋಗ್ಯದ ಲಕ್ಷಣವಾಗಿದೆ. ಯೀಸ್ಟ್ ಸೋಂಕು ಉಂಟಾದಾಗ ಬಿಳುಪು ಹೋಗುವುದರಲ್ಲಿ ವ್ಯತ್ಯಾಸ ಉಂಟಾಗುವುದು.
ಬಿಳುಪು ಹೋಗುವುದರಲ್ಲಿ ವ್ಯತ್ಯಾಸ ಉಂಟಾದಾಗ ನೀವು ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ ಅವರು ನೀಡಿದ ಔಷಧಗಳನ್ನು ಸೇವಿಸುವುದರ ಜೊತೆಗೆ ಈ ಮನೆಮದ್ದು ಸೇವಿಸಿದರೆ ಬೇಗನೆ ಗುಣಮುಖರಾಗಬಹುದು. ಅಲ್ಲದೆ ಆಗಾಗ ಮೂತ್ರ ಸೋಂಕು ಉಂಟಾಗುತ್ತಿದ್ದರೆ ಈ ಮನೆಮದ್ದು ತುಂಬಾನೇ ಪರಿಣಾಮಕಾರಿ:

ಬಿಳಿ ದಾಸವಾಳದ ಹೂವು
ನೀವು ಅರ್ಧ ಲೀಟರ್ ನೀರಿಗೆ 3-4 ಬಿಳಿ ದಾಸವಾಳ ಹೂವು ಹಾಕಿ ಕುದಿಸಿ ಕುಡಿಯುವುದರಿಂದ ಬಿಳುಪು ತುಂಬಾ ಹೋಗುತ್ತಿದ್ದರೆ ಅದು ಕಡಿಮೆಯಾಗುವುದು, ಅಲ್ಲದೆ ಆ ಭಾಗದಲ್ಲಿ ತುರಿಕೆ , ಕೆಟ್ಟ ವಾಸನೆ ಬೀರುವುದು ಈ ಬಗೆಯ ಸಮಸ್ಯೆ ಕಡಿಮೆಯಾಗುವುದು.
ಮೆಂತೆ ಬೀಜ
ಸ್ವಲ್ಪ ಮೆಂತೆಯನ್ನು ರಾತ್ರಿ ನೆನೆ ಹಾಕಿ ಬೆಳಗ್ಗೆ ಕುಡಿದರೆ ಒಳ್ಳೆಯದು, ಇನ್ನು ಸ್ವಲ್ಪ ಮೆಂತೆ ಬೀಜ ನೀರಿಗೆ ಹಾಕಿ ಕುದಿಸಿ ಒಂದು ಅಥವಾ ಎರಡು ಲೋಟ ಕುಡಿದರೆ ಒಳ್ಳೆಯದು.
ಬೆಂಡೆಕಾಯಿ
ಬೆಂಡೆಕಾಯಿ ಕೂಡ ಬಿಳುಪಿನ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ನೀವು ಬೆಂಡೆಕಾಯಿಯನ್ನು ಕತ್ತರಿಸಿ ಮೊಸರಿನಲ್ಲಿ ಹಾಕಿಟ್ಟು ನಂತರ ಅದನ್ನು ಸೇವಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು.
ಕೊತ್ತಂಬರಿ ಬೀಜ
ನೀವು ಕೊತ್ತಂಬರಿ ಬೀಜವನ್ನು ನೆನೆ ಹಾಕಿ ಆ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಒಳ್ಳೆಯದು.
ಗಂಜಿ ನೀರು
ಬಿಳುಪು ಹೆಚ್ಚಾಗಿ ಹೋಗುತ್ತಿದ್ದರೆ ಗಂಜಿ ನೀರು ಕುಡಿದರೆ ಒಳ್ಳೆಯದು ಎಂದು ಹೇಳಲಾಗುವುದು. ಆಗಾಗ ಬಿಳುಪು ಹೋಗುತ್ತಿದ್ದರೆ ಗಂಜಿ ನೀರು ಕುಡಿಯುವುದು ತುಂಬಾ ಒಳ್ಳೆಯದು.
ಬಿಳುಪು ಹೋಗುವ ಸಮಸ್ಯೆಗೆ ಸೀಬೆಕಾಯಿ ಎಲೆ
ಸ್ವಲ್ಪ ಸೀಬೆಕಾಯಿ ಮರದ ಕುಡಿ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಆ ನೀರನ್ನು ಕುಡಿದರೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ನೆಲ್ಲಿಕಾಯಿ ಜ್ಯೂಸ್
ನೆಲ್ಲಕಾಯಿ ಬೀಜ ತೆಗೆದು, ಸ್ವಲ್ಪ ಬೆಲ್ಲ ಹಾಕಿ ನೀರು ಹಾಕಿ ಮಿಕ್ಸ್ ಮಾಡಿ ಆ ಜ್ಯೂಸ್ ಕುಡಿದರೆ ಮಹಿಳೆಯರಿಗೆ ಬಿಳುಪು ಹೋಗುವ ಸಮಸ್ಯೆಗೆ ಒಳ್ಳೆಯದು ಎಂದು ಹೇಳಲಾಗುವುದು.
ಮಹಿಳೆಯರಿಗೆ ಬಿಳುಪು ಹೋಗುತ್ತದೆ, ಆದರೆ ಯಾವ ರೀತಿಯ ಬಿಳುಪು ಹೋಗುವುದು ಸಹಜ, ಯಾವುದು ಅಲ್ಲ ಎಂದು ನೋಡೋಣ ಬನ್ನಿ:
ಸೋಂಕು ಉಂಟಾಗಿದ್ದರೆ:ಬಿಳುಪು ಗಟ್ಟಿಯಾಗಿ ಹೋಗುವುದು, ಆ ಭಾಗದಲ್ಲಿ ತುರಿಕೆ. ದುರ್ವಾಸನೆ ಇವೆಲ್ಲಾ ಸೋಂಕು ತಗುಲಿದಾಗ ಕಂಡು ಬರುವ ಲಕ್ಷಣವಾಗಿದೆ.
ಬಣ್ಣದಲ್ಲಿ ವ್ಯತ್ಯಾಸ: ತುಂಬಾ ಹಳದಿ ಅಥವಾ ಕಂದು ಬಣ್ಣದ ಜೊತೆಗೆ ದುರ್ವಾಸನೆಯಿಂದ ಕೂಡಿದ್ದರೆ ಮೂತ್ರ ಸೋಂಕು ಉಂಟಾಗಿದೆ ಎಂದರ್ಥ.
ಈ ಬಗೆಯ ಲಕ್ಷಣಗಳು ಕಂಡು ಬಂದಾಗ ವೈದ್ಯರನ್ನು ಕಾಣಿ
ತುಂಬಾ ಬಿಳುಪು ಹೋಗುವುದು
ದುರ್ವಾಸನೆ
ಗಟ್ಟಿಯಾಗಿ ಹೋಗುವುದು
ತುಂಬಾ ತುರಿಕೆ
ಆ ಭಾಗದಲ್ಲಿ ನೋವು ಕಂಡು ಬರುವುದು.
ಲೈಂಗಿಕ ಸೋಂಕು ತಗುಲಿದರೆ ಬಿಳುಪು ಹಸಿರು ಅಥವಾ ಹಳದಿ ಬಣ್ಣದಲ್ಲಿ ಹೋಗುತ್ತದೆ.
ಮುಟ್ಟು ಸಮೀಪಿಸುವಾಗ ಕಂದು ಮಿಶ್ರಿತ ಬಿಳುಪು ಹೋಗುವುದು, ಇದು ಭಯಪಡಬೇಕಾದ ಅಗ್ಯತವಿಲ್ಲ.
ಮೊಟ್ಟೆಯ ಬಿಳಿಯಂತೆ ಹೋದರೆ: ಯಾವುದೇ ಭಯ ಪಡಬೇಕಾಗಿಲ್ಲ.
ಬಿಳುಪು ಹೋಗುವುದು ಕೂಡ ತುಂಬಾ ಮುಖ್ಯ
ದಿನಾ ಸ್ವಲ್ಪ ಬಿಳುಪು ಹೋಗುತ್ತದೆ, ಅಲ್ಲದೆ ಇದು ತುಂಬಾನೇ ಮೂಕ್ಯವಾಗಿದೆ, ಇದು ಜನನೇಂದ್ರೀಯ ಭಾಗದ ಆರೋಗ್ಯ ಕಾಪಾಡುತ್ತದೆ.
ಯಾರಲ್ಲಿ ಬಿಳುಪಿನ ಸಮಸ್ಯೆ ಕಂಡು ಬರುವುದು
ತುಂಬಾ ಜನರ ಜೊತೆಗಿನ ಲೈಂಗಿಕ ಸಂಪರ್ಕದಿಂದ ಸೋಂಕು ತಗುಲಿದ್ದರೆ
ಮಧುಮೇಹಿಗಳಲ್ಲಿ
ಗರ್ಭನಿರೋಧಕ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ
ಕೆಲವೊಂದು ಸೋಪು, ಸ್ಪ್ರೇ
ಏಡ್ಸ್ ರೋಗಿಗಳಲ್ಲಿ ಬಿಳುಪಿನ ಸಮಸ್ಯೆ ಕಂಡು ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
