Latest Updates
-
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ
ಮಹಿಳೆಯರೇ ಆ ಭಾಗದಲ್ಲಿ ಈ ಬದಲಾವಣೆಯಾದರೆ ನಿರ್ಲಕ್ಷ್ಯ ಬೇಡ್ವೆ ಬೇಡ, ಗರ್ಭಕಂಠ ಕ್ಯಾನ್ಸರ್ ಲಕ್ಷಣವಾಗಿರಬಹುದು
ಕೆಲವೊಂದು ಆರೋಗ್ಯ ಸಮಸ್ಯೆ ಕಂಡು ಬಂದಾಗ ಅದು ಚಿಕ್ಕ ಸಮಸ್ಯೆಯೆಂದು ನಿರ್ಲಕ್ಷ್ಯ ಮಾಡುತ್ತೇವೆ, ಆದರೆ ಅದು ಚಿಕ್ಕ ಸಮಸ್ಯೆ ಆಗಿರಲ್ಲ, ಯಾವುದೋ ದೊಡ್ಡ ಕಾಯಿಲೆಯ ಲಕ್ಷಣವಾಗಿರಬಹುದು, ಆದರೆ ಪ್ರಾರಂಭದಲ್ಲಿ ಆ ರೋಗ ಲಕ್ಷಣ ನಿರ್ಲಕ್ಷ್ಯ ಮಾಡುವುದರಿಂದ ಆ ಸಮಸ್ಯೆ ಗಂಭೀರವಾಗುವುದು. ಇಲ್ಲಿ ಹೇಳುತ್ತಿರುವ ಗರ್ಭಕಂಠದ ಕ್ಯಾನ್ಸರ್ ಲಕ್ಷಣಗಳನ್ನ, ಮಹಿಳೆಯರನ್ನು ಕಾಡುತ್ತಿರುವ ಕ್ಯಾನ್ಸರ್‌ಗಳಲ್ಲಿ ಸ್ತನ ಕ್ಯಾನ್ಸರ್ ಬಿಟ್ಟರೆ ನಂತರದ ಸ್ಥಾನ ಗರ್ಭಕಂಠ ಕ್ಯಾನ್ಸರ್‌ದ್ದು.
ಈ ಕ್ಯಾನ್ಸರ್ ಪ್ರಾರಂಭದಲ್ಲಿಯೇ ಗುರುತಿಸಿದರೆ ಸಂಪೂರ್ಣ ಗುಣಮುಖರಾಗುವ ಸಾಧ್ಯತೆ ಹೆಚ್ಚಿದೆ, ಹಾಗಾಗಿ ಮಹಿಳೆಯರೇ ದೇಹದಲ್ಲಲಿ ಈ ಲಕ್ಷಣಗಳು ಕಂಡು ಬಂದರೆ ಅದನ್ನು ಸಾಮಾನ್ಯ ಲಕ್ಷಣಗಳೆಂದು ನಿರ್ಲಕ್ಷ್ಯ ಮಾಡಲೇಬೇಡಿ:

ಅಸಹಜ ರಕ್ತಸ್ರಾವ
ಮುಟ್ಟಿನ ಚಕ್ರದ ನಡುವೆ ರಕ್ತಸ್ರಾವ ಉಂಟಾಗುವುದು, ಮೆನೋಪಾಸ್ ನಂತರ ರಕ್ತಸ್ರಾವ, ಲೈಂಗಿಕ ಕ್ರಿಯೆ ವೇಳೆಯಲ್ಲಿ ರಕ್ತಸ್ರಾವ ಇವುಗಳನ್ನು ಸಾಮಾನ್ಯ ಲಕ್ಷಣವೆಂದು ನಿರ್ಲಕ್ಷ್ಯ ಮಾಡಲೇಬಾರದು, ಈ ರೀತಿ ರಕ್ತಸ್ರಾವ ಕಂಡು ಬಂದಾಗ ಇದರ ಬಗ್ಗೆ ಹೇಳಲು ಮುಜುಗರ ಪಟ್ಟು ತುಂಬಾ ಮಹಿಳೆಯರು ಪ್ರಾರಂಭದಲ್ಲಿ ಹೇಳುವುದೇ ಇಲ್ಲ, ಆದರೆ ಈ ರೀತಿ ಅಸಹಜ ರಕ್ತಸ್ರಾವ ಕಂಡು ಬಂದಾಗ ನಿರ್ಲಕ್ಷ್ಯ ಮಾಡಲೇಬಾರದು, ಅಧ್ಯಯನ ಪ್ರಕಾರ ಈ ರೀತಿಯ ರಕ್ತಸ್ರಾವ ನಿರ್ಲಕ್ಷ್ಯ ಮಾಡಿದರೆ ಸಾವು ಸಂಭವಿಸಬಹುದು, ಹಾಗಾಗಿ ಈ ಬಗ್ಗೆ ತುಂಬಾನೇ ಮುನ್ನೆಚ್ಚರಿಕೆವಹಿಸಬೇಕು.
ತುಂಬಾನೇ ರಕ್ತಸ್ರಾವ ಅಥವಾ ರಕ್ತಸ್ರಾವವಾದರೆ ನಿಲ್ಲದೆ ಇರುವುದು
ಹಲವರಿಗೆ ಈ ಸಮಸ್ಯೆ ಕಂಡು ಬರುವುದು, ಹಾರ್ಮೋನ್‌ಗಳಲ್ಲಿ ವ್ಯತ್ಯಾಸ ಉಂಟಾದಾಗ ಕೂಡ ರೀತಿಯಾಗುವುದು, ಆದರೆ ಹಾಗಂತ ನಿರ್ಲಕ್ಷ್ಯ ಬೇಡ, ಬೇರೆಯವರಿಗೆ ಬೇರೆ ಕಾರಣಕ್ಕೆ ಆ ರೀತಿ ರಕ್ತಸ್ರಾವ ಕಂಡು ಬಂದಿರಬಹುದು, ಆದರೆ ಅತಿಯಾದ ರಕ್ತಸ್ರಾವ ಅಥವಾ ಮುಟ್ಟಾದರೆ ರಕ್ತಸ್ರಾವ ನಿಲ್ಲದೇ ಇರುವುದು ಕಂಡು ಬಂದರೆ ನಿರ್ಲಕ್ಷ್ಯ ಮಾಡದೆ ಪರೀಕ್ಷೆ ಮಾಡಿಸುವುದು ಒಳ್ಳೆಯದು.
ನೀರು-ನೀರಾಗಿ ಬಿಳುಪು ಹೋಗುವುದು ಅಥವಾ ಬಿಳುಪು ಹೋಗುವಾಗ ಅದರಲ್ಲಿ ರಕ್ತದ ಕಲೆ ಕಂಡು ಬರುವುದು
ಗರ್ಭಕಂಠದ ಪ್ರಾರಂಭದ ಹಂತದಲ್ಲಿ ಈಲಕ್ಷಣಗಳು ಕಂಡು ಬರುವುದು, ಬಳುಪು ಹೋಗುವುದು ಸಹಜ, ಆದರೆ ಬಿಳುಪು ನೀರು ನೀರಾಗಿ ಹೋದರೆ ಅಥವಾ ಬಿಳುಪಿನಲ್ಲಿ ರಕ್ತದ ಕಲೆಗಳು ಕಂಡು ಬಂದರೆ ಅದು ಸಾಮಾನ್ಯ ಲಕ್ಷಣವಲ್ಲ, ಗರ್ಭಕಂಠ ಕ್ಯಾನ್ಸರ್‌ನ ಪ್ರಾರಂಭದ ಲಕ್ಷಣವಾಗಿದೆ.
ದುರ್ವಾಸನೆ
ಇನ್‌ಫೆಕ್ಷನ್ ಆದಾಗ ಕೂಡ ಈ ರೀತಿಯಾಗುವುದು, ಆದರೆ ಗರ್ಭಕಂಠದ ಕ್ಯಾನ್ಸರ್‌ನ ಪ್ರಾರಂಭದ ಲಕ್ಷಣವೂ ಆಗಿರಬಹುದು ಹಾಗಾಗಿ ಬಗೆಯ ಲಕ್ಷಣ ನಿರ್ಲಕ್ಷ್ಯ ಮಾಡದೆ ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಬೇಕು, ಅವರು ಯಾವ ಕಾರಣಕ್ಕೆ ಈ ರೀತಿಯಾಗುತ್ತದೆ ಎಂದು ಕಾರಣ ತಿಳಿಸುತ್ತಾರೆ. ಆತಂಕ ಬೇಡ, ಭಯ ಬೇಡ, ನೀವೇ ಇದೇ ಕಾಯಿಲೆ ಆಗಿರಬಹುದು ಎಂಬ ನಿರ್ಧಾರಕ್ಕೂ ಬರಬೇಡಿ, ಸ್ತ್ರೀ ರೋಗ ತಜ್ಞರನ್ನು ಭೇಟಿಯಾಗಿ.
ಲೈಂಗಿಕ ಕ್ರಿಯೆ ನಡೆಸುವಾಗ ರಕ್ತಸ್ರಾವ
ಜನನೇಂದ್ರೀಯ ಡ್ರೈಯಾಗುವುದು ಅನೇಕ ಕಾರಣಗಳಿಂದ ಉಂಟಾಗುತ್ತದೆ, ಲೈಂಗಿಕ ಕ್ರಿಯೆ ವೇಳೆ ನೋವು ಹಾಗೂ ರಕ್ತಸ್ರಾವ ಕಂಡು ರುವುದು, ಆ ಭಾಗದಲ್ಲಿ ಉರಿಯೂತ, ರಕ್ತಸ್ರಾವ ಈ ಬಗೆಯ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಲೇಬೇಡಿ.
ತುಂಬಾನೇ ಸೊಂಟನೋವು, ಕಾಲುಗಳಲ್ಲಿ ಊತ
ಗರ್ಭಕಂಠದ ಕ್ಯಾನ್ಸರ್ ಹರಡಲಾರಂಭಿಸಿದಾಗ ಈ ರೀತಿ ವಿಪರೀತ ಸೊಂಟನೋವು, ಕಾಲುಗಳಲ್ಲಿ ಊತ ಈ ಬಗೆಯ ಲಕ್ಷಣಗಳು ಖಂಡು ಬರುವುದು, ಪೆಲ್ವಿಕ್ ಭಾಗದಲ್ಲಿ ಗಡ್ಡೆ ಉಂಟಾದಾಗ ಕಾಲುಗಳಲ್ಲಿ ಊತ ಕಂಡು ಬರುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications