Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪೋಷಕರೇ, ನಿಮ್ಮ ಮಗಳು ಬೇಗನೆ ಋತುಮತಿಯಾಗಲು ತಡೆಗಟ್ಟಲು ಈ ವಿಷಯಗಳತ್ತ ಗಮನಹರಿಸಿ
ಇತ್ತೀಚಿನ ವರ್ಷಗಳಲ್ಲಿ ಹೆಣ್ಮಕ್ಕಳು ತುಂಬಾ ಚಿಕ್ಕ ಪ್ರಾಯದಲ್ಲಿಯೇ ಋತುಮತಿಯಾಗುತ್ತಿದ್ದಾರೆ, 8-9 ವರ್ಷಕ್ಕೆಲ್ಲಾ ಋತುಮತಿಯಾಗುತ್ತಿದ್ದಾರೆ, ಇಷ್ಟು ಚಿಕ್ಕ ಪ್ರಾಯದಲ್ಲಿ ಋತುಚಕ್ರ ಪ್ರಾರಂಭವಾದರೆ ಮಕ್ಕಳಿಗೆ ಅದರ ಬಗ್ಗೆ ಅರಿವು ಕೂಡ ಇರಲ್ಲ, ಇದೇ ಕಾರಣಕ್ಕೆ ಪೋಷಕರು ತುಂಬಾನೇ ಒತ್ತಡಕ್ಕೆ ಒಳಗಾಗುತ್ತಾರೆ.
ಈಗೀನ ಜೀವನಶೈಲಿ ಹಾಗೂ ಆಹಾರಶೈಲಿಯಿಂದಾಗಿ ಮಕ್ಕಳು ಬೇಗನೆ ಋತುಮತಿಯಾಗುತ್ತಿದ್ದಾರೆ, 8 ವರ್ಷದಲ್ಲಿ ಆದರೆ ಪಾಪ ಆ ಮಗುವಿಗೆ ಪ್ಯಾಡ್ ಬದಲಾಯಿಸುವುದು ಕೂಡ ಕಷ್ಟವಾಗುವುದು, ಮೊದಲೆಲ್ಲಾ ಹೆಣ್ಮಕ್ಕಳು 14-16 ವರ್ಷಕ್ಕೆ ಋತುಮತಿಯಾಗುತ್ತಿದ್ದರು.

ಕೆಲವು ಪೋಷಕರು ಅಯ್ಯೋ ನನ್ನ ಮಗಳಿಗೆ 16 ವರ್ಷವಾದರೂ ಇನ್ನೂ ದೊಡ್ಡವಳಾಗಿಲ್ಲ (ಋತುಮತಿಯಾಗಿಲ್ಲ) ಎಂದು ಚಿಂತೆ ಮಾಡುತ್ತಿದ್ದರು, ಆದರೆ ಈಗ ಪೋಷಕರು ನಮ್ಮ ಮಗಳು 8 ವರ್ಷಕ್ಕೆ ಋತುಮತಿಯಾದಳು ಎಂದು ಕಣ್ಣೀರು ಹಾಕುತ್ತಿದ್ದಾರೆ.
ಮಕ್ಕಳು ಬೇಗನೆ ಋತುಮತಿಯಾಗುವುದು ಒಳ್ಳೆಯದಲ್ಲ, ಬೇಗನೆ ಋತುಮತಿಯಾದರೆ ಪ್ರೀಮೆನೋಪಾಸ್ ಅಪಾಯವಿದೆ, ಹೀಗಾಗಿ 12 ವರ್ಷದ ಬಳಿಕ ಋತುಮತಿಯಾಗುವುದು ಒಳ್ಳೆಯದು.
ನಿಮ್ಮ ಮಗಳು ಚಿಕ್ಕ ಪ್ರಾಯದಲ್ಲಿ ಋತುಮತಿಯಗುವುದನ್ನು ತಡೆಗಟ್ಟಲು ಪೋಷಕರು ಈ 5 ವಿಷಯಗಳತ್ತ ಗಮನಹರಿಸಬೇಕು:
1. ಪ್ರತಿದಿನ 1 ಗಂಟೆ ಸೂರ್ಯನ ಬೆಳಕು ಮಕ್ಕಳ ಮೈಮೇಲೆ ಬೀಳಬೇಕು
ನಿಮ್ಮ ಮಕ್ಕಳ ಮೇಲೆ ಪ್ರತಿದಿನ ಒಂದು ಗಂಟೆಯಾದರೂ ಬೆಳಗಿನ ಬಿಸಿಲು ಮೈ ಮೇಲೆ ಬೀಳಬೇಕು, ಇದರಿಂದ ಮಕ್ಕಳಿಗೆ ಅವಶ್ಯಕತೆಯಿರುವ ವಿಟಮಿನ್ ಡಿ ಸಿಗುವುದು. ನೀವು ಈ ಸಮಯದಲ್ಲಿ ಮಕ್ಕಳ ಜೊತೆ ಮನೆಯ ಹೊರಗಡೆ ಬಂದು ಆಟವಾಡಿ ಅಲ್ಲದೆ ಅವರಿಗೆ ಮೊಬೈಲ್ ಕೊಡುವುದು, ಟಿವಿ ಮುಂದೆ ಕೂರಿಸುವುದು ಮಾಡಿಸದೆ ಹೊರಗಡೆ ಹೋಗಿ ಆಟ ಆಡಲು ಪ್ರೋತ್ಸಾಹಿಸಿ. ರಜೆ ಇರುವಾಗ ಮನೆಯೊಳಗಡೆ ಇರುವುದಕ್ಕಿಂತ ಹೊರಗಡೆ ಹೋಗಿ ಆಡಲು ಪ್ರೋತ್ಸಾಹಿಸಿ.
2. ಮಕ್ಕಳಿಗೆ ಕಾಸ್ಮೆಟಿಕ್ ಹಚ್ಚಬೇಡಿ
ಮಕ್ಕಳಿಗೆ ಕಾಸ್ಮೆಟಿಕ್ ಹಚ್ಚುವುದು ಒಳ್ಳೆಯದಲ್ಲ, ಅದು ಅವರ ತ್ವಚೆಗೆ ಒಳ್ಳೆಯದಲ್ಲ, ಅಲ್ಲದೆ ಕಾಸ್ಮೆಟಿಕ್‌ಗೂ ಹಾಗೂ ಬೇಗನೆ ಋತುಮತಿಯಾಗುವುದಕ್ಕೂ ಸಂಬಂಧವಿದೆ ಎಂದು ಅಧ್ಯಯನಗಳು ಹೇಳಿವೆ, ಆದ್ದರಿಂದ ಮಕ್ಕಳಿಗೆ ಕಾಸ್ಮೆಟಿಕ್ ಬಳಸಬೇಡಿ. ಅಲ್ಲದೆ ಮಕ್ಕಳಿಗೆ ಕಾಸ್ಮೆಟಿಕ್ ನೀಡುವುದು ಅವರ ತ್ವಚೆ ಆರೋಗ್ಯಕ್ಕೂ ಒಳ್ಳೆಯದಲ್ಲ.
3. ನಾನ್‌ವೆಜ್ ಕಡಿಮೆ ಬಳಸಿ
ಮಕ್ಕಳಿಗೆ ಪ್ರತಿದಿನ ನಾನ್‌ವೆಜ್ ಕೊಡಬೇಡಿ, ನಾನ್‌ವೆಜ್ ಸೇವನೆ ವಾರದಲ್ಲಿ ಎರಡು ಬಾರಿ ಇದ್ದರೆ ಒಳ್ಳೆಯದು, ಪ್ರತಿದಿನ ನಾನ್‌ವೆಜ್ ಸೇವನೆ ಮಾಡುವುದರಿಂದ ಬೇಗನೆ ಋತುಮತಿಯಾಗುವ ಸಾಧ್ಯತೆ ಇದೆ, ಆದ್ದರಿಂದ ತರಕಾರಿ ಹಣ್ಣುಗಳನ್ನು ಹೆಚ್ಚಾಗಿ ನೀಡಿ, ನಾನ್‌ವೆಜ್ ಕಡಿಮೆ ಸೇವಿಸಿ. ಮೀನು ಒಳ್ಳೆಯದು, ಫಾರಂ ಕೋಳಿ ಬದಲಿಗೆ ನಾಟಿ ಕೋಳಿ ನೀಡಿ, ಮೊಟ್ಟೆಯನ್ನು ಕೂಡ ಮಿತಿಯಲ್ಲಿ ನೀಡಿ, ಜಂಕ್ ಫುಡ್ ಹೆಚ್ಚು ನೀಡಬೇಡಿ, ಹೀಗೆ ಅವರ ಆಹಾರ ಕ್ರಮದ ಕಡೆಗೆ ಗಮನಹರಿಸಿ.
4. ದೈಹಿಕ ಚಟುವಟಿಕೆ ತುಂಬಾನೇ ಮುಖ್ಯ
ಮಕ್ಕಳಿಗೆ ದೈಹಿಕ ಚಟುವಟಿಕೆ ತುಂಬಾನೇ ಮುಖ್ಯ. ಆದ್ದರಿಂದ ಮಕ್ಕಳನ್ನು ಡ್ಯಾನ್ಸ್, ಕ್ರೀಡೆ, ಯೋಗ, ಕರಾಟೆ ಅಂತ ಸೇರಿಸಿ, ಇದರಿಂದ ಅವರು ದೈಹಿಕವಾಗಿ ಫಿಟ್ ಆಗಿರುತ್ತಾರೆ, ಪ್ರತಿನಿತ್ಯ 2 ಗಂಟೆ ದೈಹಿಕ ವ್ಯಾಯಾಮ ಅವಶ್ಯಕ. ನೀವೂ ಅವರ ಜೊತೆ ಆಟ ಆಡುವುದರಿಂದ ಅವರಿಗೂ ಖುಷಿ, ಅಪ್ಪ-ಾಮ್ಮ ಮಕ್ಕಳು ಫಿಟ್ನೆಸ್ ಕಡೆ ಗಮನಹರಿಸಬಹುದು.
5. ತುಂಬಾನೇ ಹಾಲು ಕೊಡಬೇಡಿ
ಕೆಲವರು ಮಕ್ಕಳಿಗೆ ತುಂಬಾನೇ ಹಾಲು ಕೊಡುತ್ತಾರೆ, ಹಾಗೆ ಮಾಡಬೇಡಿ, ಮಕ್ಕಳಿಗೆ ದಿನದಲ್ಲಿ ಒಂದು ಅಥವಾ ಎರಡು ಲೋಟ ಹಾಲು ಕೊಡಿ, ತುಂಬಾ ಹಾಲು ಕೊಡುವುದರಿಂದ ಹಾರ್ಮೋನ್‌ಗಳ ಬದಲಾವಣೆಯಾಗಿ ಮಕ್ಕಳು ಬೇಗನೆ ಋತುಮತಿಯಾಗುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
