ಮಹಿಳೆ ಕಿವಿಯಲ್ಲಿ ಇಯರ್ ಬಡ್ಸ್ ಸ್ಫೋಟ..! ನಾವು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಏನು?

ನಾವೀಗ ಗ್ಯಾಜೆಟ್‌ ಲೋಕದಲ್ಲಿದ್ದೇವೆ. ನಮ್ಮ ದಿನ ಆರಂಭವಾಗುವುದೇ ಮೊಬೈಲ್ ಬಳಕೆಯ ಮೂಲಕ. ಈ ಮೊಬೈಲ್ ಒಂದೇ ತನ್ನ ಸುತ್ತ ಹಲವು ಎಲೆಕ್ಟ್ರಾನಿಕ್ ಉಪಕರಣಗಳನ್ನು ಇಟ್ಟುಕೊಳ್ಳುವಂತಹ ಸ್ಥಿತಿಯನ್ನು ತಂದುಬಿಟ್ಟಿವೆ. ಮೊಬೈಲ್ ಇದ್ದರೆ ಅದಕ್ಕೆ ಚಾರ್ಜರ್, ಇಯರ್ ಫೋನ್, ಇಯರ್ ಬಡ್ಸ್, ವಯರ್ ಲೆಸ್ ಚಾರ್ಜರ್ ಹೀಗೆ ಒಂದಲ್ಲಾ ಒಂದು ಗ್ಯಾಜೆಟ್ ನಮ್ಮ ಜೊತೆಗೆ ಇರುತ್ತದೆ.

ಈಗ ಮೊಬೈಲ್ ಎಷ್ಟು ಮುಖ್ಯವೊ ಅದರಂತೆ ಇಯರ್ ಬಡ್ಸ್‌ಗಳು ಸಹ ದೊಡ್ಡ ಮಾರುಕಟ್ಟೆ ಸೃಷ್ಟಿಸಿವೆ. ದೊಡ್ಡ ದೊಡ್ಡ ಕಂಪನಿಗಳು ಈಗ ಇಯರ್ ಬಡ್ಸ್ ಗಳನ್ನು ಮಾರುಕಟ್ಟೆಗೆ ತಂದಿದೆ 500 ರೂಪಾಯಿಯಿಂದ ಹಿಡಿದು 50 ಸಾವಿರ ರೂಪಾಯಿ ವರೆಗಿನ ಇಯರ್ ಬಡ್ಸ್ ಇಂದು ಸಿಗುತ್ತವೆ. ಆದ್ರೆ ಎಲ್ಲದರ ಕೆಲಸವೂ ಒಂದೆ.

Ear Buds Explode Leads Woman s Deaf What Precautions Should We Take

ಇತ್ತೀಚಿಗೆ ಯುವಜನತೆ ಹೆಚ್ಚಾಗಿ ಇಯರ್ ಬಡ್ಸ್ ಬಳಸುವುದು ನೋಡಬಹುದು. ಹೀಗೆ ಇಯರ್ ಬಡ್ಸ್ ಬಳಕೆ ಆರೋಗ್ಯಕ್ಕೂ ಹಾನಿ ಎಂಬುದು ನಮಗೆಲ್ಲಾ ತಿಳಿದಿದೆ. ಹಾಗೆ ಇಲ್ಲೊಂದು ಘಟನೆಯಲ್ಲಿ ಮಹಿಳೆಯೊಬ್ಬ ಇಯರ್ ಬಡ್ಸ್ ಹಾಕಿಕೊಂಡಾಗ ಅದು ಸ್ಫೋಟಗೊಂಡು ಕಿವುಡುತನ ಉಂಟಾಗಿರುವ ಘಟನೆ ನಡೆದಿದೆ.

ಬ್ಲೂತೂಟ್ ಇಯರ್ ಫೋನ್ ಹಾಕಿಕೊಂಡು ಹಾಡು ಕೇಳುತ್ತಿರುವಾಗ ಒಂದು ಕಿವಿಯ ಇಯರ್ ಬಡ್ಸ್ ಸ್ಪೋಟಗೊಂಡಿದೆ. ಇದು ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಬಡ್ಸ್ ಎಂದು ತಿಳಿದುಬಂದಿದೆ. ಸದ್ಯ ಆಕೆಗೆ ಒಂದು ಕಿವಿ ಸಂಪೂರ್ಣ ಕಿವುಡಾಗಿದೆ. ಇಯರ್ ಫೋನ್‌ನಿಂದ ಇಷ್ಟು ದೊಡ್ಡ ಮಟ್ಟದಲ್ಲಿ ಹಾನಿ ಭಯಕ್ಕೆ ಕಾರಣವಾಗಿದೆ.

ಹಾಗಾದ್ರೆ ಇಯರ್ ಫೋನ್‌ನಿಂದ ಉಂಟಾಗುವ ಅಪಾಯ ಕಡಿಮೆ ಮಾಡುವುದು ಹೇಗೆ?

ಕಡಿಮೆ ಚಾರ್ಜ್ ಇದ್ದಾಗ ಕಿವಿಗೆ ಹಾಕಬೇಡಿ

ಈ ಬ್ಲೂಟೂತ್ ಇಯರ್ ಫೋನ್‌ಗಳು ತರಂಗಗಳ ಮೂಲಕ ಕೆಲಸ ಮಾಡುತ್ತವೆ. ಹೀಗಾಗಿ ಕಡಿಮೆ ಚಾರ್ಜ್ ಹೊಂದಿದ್ದಾಗ ಅವುಗಳನ್ನು ಕಿವಿಗೆ ಹಾಕಿಕೊಳ್ಳುವುದು ಅಪಾಯ ತರಬಹುದು. ಹೀಗಾಗಿ ಚಾರ್ಜ್ ಫುಲ್ ಆಗುವವರೆಗೂ ಕಾದು ಬಳಸುವುದು ಸೂಕ್ತ.

ವಾಲ್ಯೂಮ್ ಕಡಿಮೆ ಇರಲಿ

ಕೆಲವರು ಇಯರ್ ಬಡ್ಸ್‌ನ ಪೂರ್ಣ ವಾಲ್ಯೂಮ್ ನೀಡಿ ಹಾಡು, ವಿಡಿಯೋ ನೋಡುತ್ತಿರುತ್ತಾರೆ, ಆದರೆ ಈ ರೀತಿ ಮಾಡುವುದು ಕಿವುಡುತನಕ್ಕೆ ಕಾರಣವಾಗಬಹುದು. ಅಲ್ಲದೆ ಕಿವಿಯ ಸೂಕ್ಷ್ಮ ಅಂಗಗಳಿಗೆ ಈ ಶಬ್ದ ಹಾನಿ ಮಾಡಲು ಕಾರಣವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಸಮಸ್ಯೆ ಇರುವ ಇಯರ್ ಬಡ್ಸ್ ಬಳಸಬೇಡಿ

ಇನ್ನು ಕೆಲವೊಮ್ಮೆ ಇಯರ್ ಬಡ್ಸ್‌ಗಳಲ್ಲಿ ಸಮಸ್ಯೆ ಕಂಡುಬಂದಿರುತ್ತದೆ. ಆದ್ರೆ ತಾವಾಗಿಯೆ ಅದನ್ನು ಸರಿ ಮಾಡಿಕೊಂಡಿರುತ್ತಾರೆ, ಇಲ್ಲವೆ ಪರ್ಯಾಯವಾಗಿ ಗಮ್‌ಗಳ ಬಳಸಿ ಅಥವಾ ಅವುಗಳ ಬ್ಯಾಟರಿಗೆ ಹಾನಿಯಾಗುವಂತಹ ಕೆಲಸ ಮಾಡಿ ಅದನ್ನು ಬಳಸುತ್ತಿರುತ್ತಾರೆ. ಹೀಗೆ ಮಾಡುವುದು ಅಪಾಯ ತರಲಿದೆ. ಈ ಇಯರ್ ಬಡ್ಸ್‌ಗಳಲ್ಲಿ ಸಣ್ಣದಾದ ಬ್ಯಾಟರಿ ಇರಲಿದೆ. ಇವು ಸ್ಪೋಟವಾಗು ಅಪಾಯ ಹೆಚ್ಚಾಗುತ್ತದೆ.

ನೀರಿಗೆ ತಾಕಿಸಿ ಬಳಸುವುದು

ಕೆಲವರು ಇವುಗಳನ್ನು ಹಾಕಿಕೊಂಡು ಮಳೆಯಲ್ಲಿ ನೆನೆಯುವುದು, ನೀರಿಗೆ ತಾಕಿಸುವುದು ಮಾಡುತ್ತಾರೆ. ಕಂಪನಿಗಳು ಇದು ಸುರಕ್ಷಿತ ಎನ್ನುತ್ತವೆ. ಆದರೆ ಬ್ಯಾಟರಿ ಕಾಂಪೋನೆಂಟ್‌ಗಳ ಮೇಲೆ ನೀರು ಹಾನಿ ಉಂಟು ಮಾಡುತ್ತದೆ. ಈ ವೇಳೆ ಕಿವಿಯಲ್ಲಿ ಹಾಕಿ ಬಳಸುವುದು ಅಪಾಯಕ್ಕೆ ದಾರಿಯಾಗುತ್ತದೆ.

ಉತ್ತಮ ಗುಣಮಟ್ಟದ ಬಡ್ಸ್ ಬಳಸಿ

ಈಗಂತು 200 ರೂಪಾಯಿಯಿಂದ ಬಡ್ಸ್‌ಗಳು ಸಿಗುತ್ತವೆ. ಆದ್ರೆ ಇದು ನಿಮ್ಮ ಕಿವಿಗೆ ಹಾನಿ ಮಾಡುವಂತಹ ಡೆಸಿಬಲ್ ಹೊಂದಿರಬಹುದು. ಇಲ್ಲವೆ ಕಳಪೆ ಪಟ್ಟದ ಬ್ಯಾಟರಿ ಹೊಂದಿರಬಹುದು, ಹೀಗಾಗಿ ಉತ್ತಮ ಗುಣಮಟ್ಟದ ಇಯರ್ ಬಡ್ಸ್ ಬಳಸಿ. ಇಲ್ಲವೆ ಪರಿಚಿತ ಕಂಪನಿಗಳ ಬಡ್ಸ್ ಬಳಸುವುದು ಉತ್ತಮ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

Ear Buds Explode Leads Woman's Deaf..! What Precautions Should We Take?

Earbuds of one ear exploded while listening to music with Bluetooth earphones. It turns out to be Samsung's Galaxy Buds.
Story first published: Saturday, September 28, 2024, 7:01 [IST]
X
Desktop Bottom Promotion