Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ದುಬೈ ಚಾಕೊಲೇಟ್ ಎಂಬ ಮಾರಿ: ಲಿವರ್ ಡ್ಯಾಮೇಜ್‌ನಿಂದ ಕ್ಯಾನ್ಸರ್ ಅಪಾಯಕ್ಕೆ ದಾರಿ!!
ಚಾಕೊಲೇಟ್ ಅಂದ್ರೆ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ವಸ್ತು. ಅದ್ರಲ್ಲೂ ಡಾರ್ಕ್ ಚಾಕೊಲೇಟ್‌ಗಳು, ಸಿಹಿ ತುಂಬಿರುವ ಚಾಕೊಲೇಟ್‌ಗಳೆಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತೆ. ಈಗ ಮಕ್ಕಳು ಚಾಕೊಲೇಟ್ ಸವಿಯದೆ ಇರದ ದಿನವನ್ನು ಊಹಿಸೋದು ಸಹ ಕಷ್ಟ. ಅದ್ರಲ್ಲೂ ದುಬಾರಿ ಚಾಕೊಲೇಟ್‌ಗಳು ಈಗ ಟ್ರೆಂಡ್ ಸೃಷ್ಟಿಸಿರುವ ವಸ್ತುಗಳಾಗಿವೆ. ಅದ್ರಲ್ಲೂ ವಿದೇಶಿ ಚಾಕೊಲೇಟ್‌ಗಳು ಅಂದ್ರೆ ಭಾರತದಲ್ಲಿ ಭಾರೀ ಬೇಡಿಕೆಯ ವಸ್ತು.
ಹೆಚ್ಚಾಗಿ ಚಾಕೊಲೇಟ್ ಅಂದ್ರೆ ಎಲ್ಲರು ದುಬೈ ಚಾಕೊಲೇಟ್‌ಗಳ ಸವಿಯಲು ಮುಂದಾಗುತ್ತಾರೆ. ಅಲ್ಲಿನ ವಿವಿಧ ಬಗೆಯ ಹಾಗೆ ಮೃದುವಾದ, ಸಿಹಿಯೊಂದಿಗೆ ಬಗೆ ಬಗೆಯ ಚಾಕೊಲೇಟ್‌ಗಳು ಎಲ್ಲರಿಗೂ ಪ್ರಿಯ. ಹಾಗೆ ವಿದೇಶಿ ಚಾಕೊಲೇಟ್‌ಗಳೆಂದರೆ ಎಲ್ಲರಿಗೂ ಇಷ್ಟವಾಗುತ್ತೆ. ಆದ್ರೆ ಈ ದುಬೈ ಚಾಕೊಲೇಟ್ ಕುರಿತಾದ ದೊಡ್ಡ ಆಘಾತಕಾರಿ ವಿಚಾರವೊಂದು ಈಗ ಎಲ್ಲರಿಗೂ ಶಾಕ್ ನೀಡಿದೆ.

ಪಿಸ್ತಾ, ಎಳ್ಳು, ಸಾಸ್‌ಗಳು, ನಟ್ಸ್, ಕ್ರೀಮ್‌ಗಳಿಂದ ತುಂಬಿದ ಚಾಕೊಲೇಟ್‌ಗಳು ಇಡೀ ವಿಶ್ವದಾದ್ಯಂತ ಸಿಗುತ್ತದೆ. ಇವು ವಿಶೇಷ ರುಚಿ ಹಾಗೆ ಸುವಾಸನೆ ಸೇರಿ ಅದರ ಪ್ಯಾಕೇಜಿಂಗ್‌ನಿಂದಲೂ ಗಮನ ಸೆಳೆಯುತ್ತವೆ. ಇದು ಸಾಂಪ್ರದಾಯಿಕ ಚಾಕೊಲೇಟ್ ಮತ್ತು ಟರ್ಕಿಶ್ ಬಕ್ಲಾವಾ ಮತ್ತು ಕುನಾಫಾದಂತಹ ಸಾಂಪ್ರದಾಯಿಕ ಪ್ರಾದೇಶಿಕ ಸಿಹಿತಿಂಡಿಗಳ ನಡುವಿನ ಮಿಶ್ರಣವಾಗಿದೆ.
ಆದ್ರೆ ಎಲ್ಲಾ ಚಾಕೊಲೇಟ್‌ಗಳು ಆರೋಗ್ಯಕರವಲ್ಲ. ಸಾಮಾನ್ಯವಾಗಿ ದುಬೈ ಚಾಕೊಲೇಟ್‌ಗಳು ಅತ್ಯಂತ ಹೆಚ್ಚು ನೈಸರ್ಗಿಕ ಅಂಶಗಳ ಬಳಸಿ ಹಾಗೆ ಬಹಳ ಪರಿಣಾಮಕಾರಿ ರೀತಿಯಲ್ಲಿ ತಯಾರಾಗುತ್ತವೆ. ಹೀಗಾಗಿ ವಿದೇಶಿ ಚಾಕೊಲೇಟ್‌ಗಳಲ್ಲಿ ದುಬೈನಿಂದ ಬರುವ ಚಾಕೊಲೇಟ್‌ಗಳು ಅತ್ಯಂತ ದುಬಾರಿ ಎನಿಸಿವೆ. ಹೀಗಾಗಿ ಈ ದುಬೈ ಚಾಕೊಲೇಟ್‌ನ ನಕಲಿಗಳು ಮಾರುಕಟ್ಟೆಗೆ ಸುಲಭವಾಗಿ ಲಗ್ಗೆ ಇಟ್ಟಿವೆ. ಅದರಲ್ಲೂ ಈ ನಕಲಿ ಚಾಕೊಲೇಟ್‌ಗಳು ದೇಹಕ್ಕೆ ಹಲವು ರೀತಿ ಅಡ್ಡಪರಿಣಾಮಕ್ಕೆ ಕಾರಣವಾಗುತ್ತಿವೆ.
ಮಾರುಕಟ್ಟೆಯಲ್ಲಿ ಈ ವಿದೇಶಿ ಚಾಕೊಲೇಟ್‌ನ ಬೇಡಿಕೆ ಹೆಚ್ಚುತ್ತಿರುವ ಕಾರಣ ನಕಲಿ ಚಾಕೊಲೇಟ್‌ಗಳು ಕೂಡ ಹೆಚ್ಚಾಗಿ ವಿತರಣೆಯಾಗುತ್ತವೆ. ಇವು ಹೆಚ್ಚು ಅಫ್ಲಾಟಾಕ್ಸಿನ್‌ಗಳಿಗೆ ಕಾರಣವಾಗುತ್ತಿವೆ. ಅಂದರೆ ಇವು ದೇಹದ ಮೇಲೆ ವ್ಯತಿರಿಕ್ತ ಪರಿಣಾಮಕ್ಕೆ ಕಾರಣವಾಗುತ್ತಿದೆ. ಅಫ್ಲಾಟಾಕ್ಸಿನ್‌ಗಳು ಅಂದರೆ ಕೆಲವು ಶಿಲೀಂಧ್ರಗಳಿಂದ, ಮುಖ್ಯವಾಗಿ ಆಸ್ಪರ್‌ಜಿಲಸ್ ಫ್ಲೇವಸ್ ಮತ್ತು ಆಸ್ಪರ್‌ಜಿಲಸ್ ಪ್ಯಾರಾಸಿಟಿಕಸ್‌ನಿಂದ ಉತ್ಪತ್ತಿಯಾಗುವ ವಿಷಕಾರಿ ರಾಸಾಯನಿಕಗಳ ಗುಂಪಾಗಿದೆ.
ಇವು ಹೆಚ್ಚಾಗಿ ಪಿಸ್ತಾ, ದ್ರಾಕ್ಷಿ, ಗೋಡಂಬಿ, ನಟ್ಸ್‌ನಂತಹ ಕಡಲೆ ಜಾತಿಗೆ ಸೇರಿದ ಪದಾರ್ಥದಲ್ಲಿ ಕಂಡುಬರುತ್ತದೆ. ಇವು ಯಕೃತ್ತು ಹಾನಿ, ಯಕೃತ್ತಿನ ಕ್ಯಾನ್ಸರ್ ಸೇರಿ ಹಲವು ರೀತಿಯ ಅನಾರೋಗ್ಯಕ್ಕೆ ಇದು ಕಾರಣವಾಗಲಿದೆ.
ಈ ದುಬೈ ಚಾಕೊಲೇಟ್‌ನಲ್ಲಿ ಪಿಸ್ತಾದಂತಹ ವಸ್ತುಗಳು ಸೇರಿರುವುದು ಕಾಮನ್, ನೀವು ಯಾವುದೇ ಚಾಕೊಲೇಟ್ ತೆಗೆದುಕೊಂಡರು ಅದು ಕಡಲೆಗಳ ಜಾತಿಗೆ ಸೇರಿದ ಒಂದಾದರು ವಸ್ತುವನ್ನು ಹೊಂದಿರುತ್ತದೆ. ನಕಲಿ ಚಾಕೊಲೇಟ್‌ಗಳು ಗುಣಮಟ್ಟ ಕಾಪಾಡಿಕೊಳ್ಳುವುದು ದೂರದ ಮಾತಾಗಿದೆ. ಹೀಗಾಗಿ ಈ ಚಾಕೊಲೇಟ್ ತಯಾರಿಕೆಯ ವೇಳೆ ಬ್ಯಾಕ್ಟೀರಿಯಾಗಳು ಅಭಿವೃದ್ಧಿ ಆಗಿರುವ ವಸ್ತುಗಳನ್ನು ಅವರು ಬಳಸುತ್ತಾರೆ, ಇದು ನಿಮ್ಮ ದೇಹ ಸೇರುವುದು ಸುಲಭವಾಗುತ್ತದೆ.
ಜರ್ಮನಿಯಲ್ಲಿ ನಡೆಸಿದ ಅಧ್ಯಯನದ ಪ್ರಕಾರ ಮಧ್ಯಪ್ರಾಚ್ಯದಿಂದ ಆಮದು ಮಾಡಿಕೊಳ್ಳಲಾದ ದುಬೈ ಚಾಕೊಲೇಟ್ ಬಾರ್‌ಗಳು ಸೇವನೆಗೆ ಅನರ್ಹವಾಗಿದೆ. ಇದರಲ್ಲಿ ಹೆಚ್ಚು ವಿಷಕಾರಿ ಅಂಶಗಳು, ಪಾಮ್ ಆಯಿಲ್, ಆಹಾರಕ್ಕೆ ಸೇರಿಸುವ ಕೃತಕ ಬಣ್ಣ ಸೇರಿರುವುದು ವರದಿಯಾಗಿತ್ತು. ಇದು ಕ್ಯಾನ್ಸರ್ ಕಾರಕವಾಗಿದೆ ಎಂದು ತಿಳಿದುಬಂದಿದೆ. ಸ್ಟಟ್‌ಗಾರ್ಟ್‌ನಲ್ಲಿರುವ ರಾಸಾಯನಿಕ ಮತ್ತು ಪಶುವೈದ್ಯಕೀಯ ತನಿಖಾ ಕಚೇರಿ ನಡೆಸಿದ ಸಂಶೋಧನೆಯು ಪಾಮ್ ಆಯಿಲ್ ಇರುವುದು ಕಂಡುಹಿಡಿದಿದೆ - ಸ್ಯಾಚುರೇಟೆಡ್ ಕೊಬ್ಬು ಹೊಂದಿರುವ ಅಗ್ಗದ ಎಣ್ಣೆ ಇದಾಗಿದೆ. ಆದ್ರೆ ಹೃದಯ ಸಂಬಂಧಿ ಸಮಸ್ಯೆ, ಕ್ಯಾನ್ಸರ್ ಸಂಬಂಧಿ ಸಮಸ್ಯೆಗೆ ಇದು ಕಾರಣವಾಗುತ್ತಿರುವುದು ಹಿಂದೆಯೇ ಸಾಬೀತಾಗಿದೆ. ಈ ನಕಲಿ ಚಾಕೊಲೇಟ್‌ಗಳು ತಕ್ಷಣಕ್ಕೆ ನಿಮ್ಮ ದೇಹದ ಮೇಲೆ ಯಾವುದೇ ಪರಿಣಾಮ ಬೀರದೆ ಇರಬಹುದು ಆದ್ರೆ ಭವಿಷ್ಯದಲ್ಲಿ ನಿಧಾನವಾಗಿ ಸಮಸ್ಯೆಗಳ ತರಲು ಕಾರಣವಾಗುತ್ತಿದೆ ಎಂದು ತಿಳಿದುಬಂದಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
