Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಅತಿಯಾದ ಹಾಲು ಸೇವನೆ ಎಷ್ಟು ಅಪಾಯಕಾರಿ ಗೊತ್ತಾ? ಎಷ್ಟೆಲ್ಲಾ ಅನಾರೋಗ್ಯಕ್ಕೆ ಇದು ಕಾರಣ?
ಹಾಲು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಾಣಸಿಗುವ ಒಂದು ಪದಾರ್ಥ. ಹಾಲು ಅತ್ಯುತ್ತಮ ಕ್ಯಾಲ್ಸಿಯಂ ಮೂಲವಾಗಿದೆ. ಹಾಲು ಕುಡಿಯವುದು ಆರೋಗ್ಯಕ್ಕೆ ಬಹಳ ಉತ್ತಮ. ಹಾಗೆ ಹಾಲಿನ ಸೇವನೆ ಕಡಿಮೆಯಾದರೆ ಅಪೌಷ್ಟಿಕತೆ ಸೇರಿದಂತೆ ಹಲವು ಅನಾರೋಗ್ಯಕ್ಕೆ ಇದು ಕಾರಣವಾಗಬಹದಾಗಿದೆ.
ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಈ ಹಾಲು ಸಹ ನಿಮ್ಮ ಆರೋಗ್ಯಕ್ಕೆ ಕಹಿಯಾಗಬಹುದು. ಹಾಲು ಮಕ್ಕಳ ಬೆಳವಣಿಗೆಗೆ ಎಷ್ಟು ಮುಖ್ಯವಾಗಿದೆಯೋ ಅದರಿಂದ ಕೆಲವು ಸೈಡ್ ಎಫೆಕ್ಟ್ ಸಹ ಇದೆ ಎಂದು ತಜ್ಞರು ತಿಳಿಸುತ್ತಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್‌ನ (ICMR) ಪೌಷ್ಠಿಕಾಂಶದ ಅಗತ್ಯತೆಗಳು ಮತ್ತು ಭಾರತೀಯರಿಗೆ RDA ವರದಿಯ ಪ್ರಕಾರ, ವಯಸ್ಕರಿಗೆ ಕ್ಯಾಲ್ಸಿಯಂನ ಮೇಲಿನ ಮೌಲ್ಯವು 600 mg/d ಆಗಿದೆ.

ಆದರೆ ಹಾಲಿನಲ್ಲಿರುವ ಅನಾರೋಗ್ಯಕರ ಪ್ರಮಾಣದ ಕೊಬ್ಬಿನಂಶವು ಹೃದ್ರೋಗ, ಕೊಲೆಸ್ಟ್ರಾಲ್ ಸೇರಿದಂತೆ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಉಂಟು ಮಾಡಬಹುದು.
ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಾರ, ಒಂದು ಲೋಟ ಹಾಲು 5 ಗ್ರಾಂ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ಒಬ್ಬರ ದೈನಂದಿನ ಅವಶ್ಯಕತೆಯ ಶೇ. 20 ರಷ್ಟಾಗಿದೆ. ಇದು ಹೃದಯರಕ್ತನಾಳದ ಕಾಯಿಲೆಗಳು ಮತ್ತು ಪಾರ್ಶ್ವವಾಯು ಬೆಳವಣಿಗೆಗೆ ಕಾರಣವಾಗುವ ಅಂಶಗಳಿಗೆ ಸಹಾಯವಾಗಲಿದೆ. ಏಕೆಂದರೆ ಇದು ಎಲ್‌ಡಿಎಲ್ ಮತ್ತು ಎಚ್‌ಡಿಎಲ್ ಕೊಲೆಸ್ಟ್ರಾಲ್ ಅನುಪಾತವನ್ನು ಹೆಚ್ಚಿಸಬಹುದು.
ಹೆಚ್ಚು ಹಾಲು ಸೇವಿಸುವುದರಿಂದ ಕಬ್ಬಿಣಾಂಶ ಕೊರತೆಯ ಜೊತೆಗೆ ರಕ್ತಹೀನತೆ ಮತ್ತು ಕರುಳಿನಿಂದ ಪ್ರೋಟೀನ್ ನಷ್ಟದಂತಹ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಹೆಚ್ಚು ಹಾಲು ಸೇವನೆಯಿಂದಾಗುವ ಅನಾರೋಗ್ಯ ಕಾರಕಗಳೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಲ್ಯಾಕ್ಟೋಸ್ ಮಾಲಾಬ್ಸರ್ಪ್ಶನ್: ಲ್ಯಾಕ್ಟೋಸ್ ನೈಸರ್ಗಿಕವಾಗಿ ಹಾಲು ಮತ್ತು ಹಾಲಿನ ಉತ್ಪನ್ನಗಳಾದ ಚೀಸ್ ಅಥವಾ ಐಸ್ ಕ್ರೀಂನಲ್ಲಿ ಕಂಡುಬರುವ ಸಕ್ಕರೆಯಾಗಿದೆ. ಲ್ಯಾಕ್ಟೋಸ್ ಅಸಹಿಷ್ಣುತೆಯಲ್ಲಿ, ಲ್ಯಾಕ್ಟೋಸ್ ಮಾಲಾಬ್ಸರ್ಪ್ಷನ್‌ನಿಂದ ಜೀರ್ಣಕಾರಿ ಲಕ್ಷಣಗಳು ಉಂಟಾಗುತ್ತವೆ. ಅತಿಯಾದ ಹಾಲು ಸೇವನೆಯಿಂದಾಗಿ ಲ್ಯಾಕ್ಟೋಸ್ ಮಾಲಾಬ್ಸರ್ಪ್ಶನ್ ಉಂಟಾಗುತ್ತದೆ. ಅಂದರೆ ನಿಮ್ಮ ಸಣ್ಣ ಕರುಳು ನೀವು ಸೇವಿಸಿದ ಅಥವಾ ಕುಡಿಯುವ ಎಲ್ಲಾ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗದೇ ಇರುವ ಸ್ಥಿತಿಯಾಗಿದೆ. ಇದರಿಂದ ನಿಮಗೆ ಹೊಟ್ಟೆ ಉಬ್ಬಿಕೊಳ್ಳುವುದು, ಗ್ಯಾಸ್, ಅತಿಸಾರ ಮತ್ತು ಹೊಟ್ಟೆ ಸೆಳೆತದಂತಹ ಸಮಸ್ಯೆಗೆ ಕಾರಣವಾಗುತ್ತದೆ.
ತೂಕ ಹೆಚ್ಚಳವಾಗುವುದು: ಒಂದು ಕಪ್ ಅಂದರೆ ಸುಮಾರು 250 ಮಿ.ಲೀ ಹಾಕು ಅಂದಾಜು 180 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಹಾಲಿನ ಅತಿಯಾದ ಬಳಕೆ, ವಿಶೇಷವಾಗಿ ಪೂರ್ಣ-ಕೊಬ್ಬಿನ ಹಾಲು, ಹೆಚ್ಚಿನ ಕ್ಯಾಲೋರಿ ಸೇವನೆಗೆ ಕಾರಣವಾಗಬಹುದು.
ಪೋಷಕಾಂಶಗಳ ಅಸಮತೋಲನ: ಅತಿಯಾದ ಸೇವನೆಯು ಇತರ ಅಗತ್ಯ ಪೋಷಕಾಂಶಗಳಲ್ಲಿ ಅಸಮತೋಲನ ಅಥವಾ ಕೊರತೆಗಳಿಗೆ ಕಾರಣವಾಗಬಹುದು. ಅತೀಯಾಗಿ ಹಾಲು ಸೇವಿಸಿದಾಗ ದೇಹಕ್ಕೆ ಸಿಗಬೇಕಾದರೆ ಇತರೆ ಪೋಷಕಾಂಶಗಳು ಸಿಗದಿರಬಹುದು. ಅಥವಾ ಹಾಲಿನ ಅಂಶ ಹೆಚ್ಚಾಗಿರುವುದರಿಂದ ಆ ಪೋಷಕಾಂಶಗಳು ಕ್ಯಾಲ್ಸಿಯಂನೊಂದಿಗೆ ಬೆರೆತು ನಾಶವಾಗಬಹುದು.
ಕಬ್ಬಿಣಾಂಶ ಕೊರತೆ ಹಾಗೂ ಚರ್ಮಚ ಅಲರ್ಜಿ: ಅತಿಯಾದ ಹಾಲಿನ ಸೇವನೆಯು ಕಬ್ಬಿಣಾಂಶ ಹೀರಿಕೊಳ್ಳುವ ಪ್ರಕ್ರಿಯೆಗೆ ಅಡ್ಡಿಯಾಗಬಹುದು. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಕಬ್ಬಿಣದ ಕೊರತೆಯ ರಕ್ತಹೀನತೆಗೆ ಕಾರಣವಾಗಬಹುದು. ಇದರ ಜೊತೆಗೆ ಹೆಚ್ಚು ಹಾಲು ಸೇವನೆ ಚರ್ಮದಲ್ಲಿ ಇನ್ಸುಲಿನ್ ಬೆಳವಣಿಗೆಗೆ ಕಾರಣವಾಗಬಹುದು. ಇದು ಮೊಡವೆಗಳ ಬೆಳವಣಿಗೆ ಅಥವಾ ಹೆಚ್ಚಾಗಲು ಸಹ ಕಾರಣವಾಗಬಹುದು.
ಕಿಡ್ನಿ ಕಲ್ಲುಗಳು: ಹಾಲು ಅತೀ ಹೆಚ್ಚು ಕ್ಯಾಲ್ಸಿಯಂ ಹೊಂದಿರುವುದರಿಂದ ಮೂತ್ರಪಿಂಡದಲ್ಲಿ ಕಲ್ಲುಗಳ ಅಭಿವೃದ್ಧಿಗೆ ಕಾರಣವಾಗಬಹುದು. ಅದರಲ್ಲೂ ಮೊದಲು ಮೂತ್ರಪಿಂಡ ಕಲ್ಲು ಹೊಂದಿರುವ ಅಥವಾ ಚಿಕಿತ್ಸಗೆ ಒಳಗಾಗಿರುವವರಲ್ಲಿ ಈ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











