Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ರಕ್ತದಾನ ಮಾಡಿದರೆ ದೇಹಕ್ಕೆ ಒಳ್ಳೆಯದು..! ಈ ಮಾತು ಎಷ್ಟು ಸತ್ಯ..!?
ಜಗತ್ತಿನಲ್ಲಿ ಒಂದು ಜೀವ ಉಳಿಸುವ ಕಾರ್ಯ ಮಾಡುವುದು ಅಂದ್ರೆ ಅದೊಂದು ಪುಣ್ಯದ ಕೆಲಸವೇ ಸರಿ. ಆದ್ರೆ ನಾವು ನೀವು ಒಬ್ಬರ ಜೀವ ಉಳಿಸೋದು ಅಂದ್ರೆ ರಕ್ತದಾನ ಮಾಡುವುದು. ದಾನಗಳಲ್ಲಿ ರಕ್ತದಾನವೇ ಶ್ರೇಷ್ಠವಾದ ದಾನ ಎನ್ನಲಾಗುತ್ತದೆ. ಏಕೆಂದರೆ ನಿಮ್ಮ ರಕ್ತದ ಹನಿಯಿಂದ ಒಂದಿಷ್ಟು ಜೀವಗಳು ಬದುಕುತ್ತವೆ. ಹೀಗಾಗಿ ಎಲ್ಲರು ರಕ್ತದಾನ ಮಾಡಿ ಎಂದು ಸರ್ಕಾರವೂ ಸೇರಿ ಒಂದಿಷ್ಟು ಮಂದಿ ಜಾಗೃತಿ ಮೂಡಿಸುತ್ತಾರೆ.
ಕಳೆದ ಜೂನ್ 14ರಂದು ರಕ್ತದಾನಿಗಳ ದಿನವನ್ನಾಗಿಯೂ ಆಚರಿಸಲಾಗಿದೆ. ಏಕೆಂದರೆ ರಕ್ತದಾನದ ಮಹತ್ವ ಸಾರುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 14ರಂದು ರಕ್ತದಾನಿಗಳ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿ ನಿತ್ಯ ಸಾವಿರಾರು ಮಂದಿ ರಕ್ತಕ್ಕಾಗಿ ಪರದಾಡುತ್ತಾರೆ. ಹಲವಾರು ಕಾಣಗಳಿಂದ ಅವರಿಗೆ ರಕ್ತದ ಅವಶ್ಯಕತೆ ಇರುತ್ತದೆ. ಈಗ ಬಹುಪಾಲು ಕಡೆ ರಕ್ತ ಉಚಿತವಾಗಿಯೇ ಸಿಗುತ್ತದೆ. ಆದರೆ ಕೆಲವೊಂದು ಸಮಯದಲ್ಲಿ ಹಣ ಅಥವಾ ಪರ್ಯಾಯ ವ್ಯವಸ್ಥೆ ಮಾಡಿ ರಕ್ತ ಪಡೆಯಬಹುದು.

ಮತ್ತೊಂದೆಡೆ ರಕ್ತ ನೀಡುವುದು ಒಳಿತು ಎಂದು ಹೇಳಲಾಗುತ್ತದೆ. ಆದ್ರೆ ಈ ಮಾತಿನಲ್ಲಿ ಎಷ್ಟು ಸತ್ಯವಿದೆ. ರಕ್ತ ನೀಡುವುದು ನಿಜವಾಗಲೂ ಒಳ್ಳೆಯದಾ? ರಕ್ತ ನೀಡುವುದರಿಂದ ನಮ್ಮ ದೇಹಕ್ಕೆ ಆಗುವ ಪ್ರಯೋಜನವೇನು? ರಕ್ತ ನೀಡಿದ ಬಳಿಕ ನಮ್ಮ ದೇಹದಲ್ಲಿ ಏನಾಗುತ್ತದೆ ಎಂಬುದನ್ನು ನಾವಿಂದು ತಿಳಿಯೋಣ.
ಆರೋಗ್ಯಯುತ ವ್ಯಕ್ತಿಯೊಬ್ಬ 18 ರಿಂದ 60 ವರ್ಷದವರೆಗೆ ಯಾವುದೇ ವ್ಯಕ್ತಿ 50 ಕ್ಕಿಂತ ಹೆಚ್ಚು ತೂಕ ಇರುವವರು 450 ಎಂ ಎಲ್ ನಷ್ಟು ರಕ್ತವನ್ನು ಕೊಡಬಹುದು. ಪುರುಷರು 3 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಸ್ತ್ರೀಯರು 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು.
ರಕ್ತದಾನವು ಕೆಂಪು ರಕ್ತ ಕಣಗಳು, ಪ್ಲೇಟ್‌ಲೆಟ್‌ಗಳು ಮತ್ತು ರಕ್ತಪೂರಣಕ್ಕಾಗಿ ಪ್ಲಾಸ್ಮಾವನ್ನು ಒದಗಿಸುವ ಮೂಲಕ ಮೂರು ಜೀವಗಳನ್ನು ಸಂಭಾವ್ಯವಾಗಿ ಉಳಿಸುತ್ತದೆ. ರಕ್ತದಾನದಿಂದಾಗಿ ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ದಾನಿಗಳು ಉಚಿತ ಮಿನಿ-ದೈಹಿಕ ತಪಾಸಣೆಯನ್ನು ಸಹ ಪಡೆಯುತ್ತಾರೆ.
ನಿಯಮಿತವಾಗಿ ರಕ್ತದಾನ ಮಾಡುವುದರಿಂದ ದೇಹದಲ್ಲಿ ಕಬ್ಬಿಣದ ಅಂಶ ಸಮತೋಲನದಲ್ಲಿಡುತ್ತದೆ ಮತ್ತು ಹೃದಯಾಘಾತ ತಪ್ಪಿಸುತ್ತದೆ. ಹೆಚ್ಚಿನ ಕ್ಯಲೋರಿಯನ್ನು ಕಡಿಮೆ ಮಾಡುತ್ತದೆ ಮತ್ತು ಒಟ್ಟಾರೆ ದೇಹದ ತೂಕವನ್ನು ಸಮತೋಲನದಲ್ಲಿ ಇಡಲು ಸಹಕರಿಸುತ್ತದೆ. ದೇಹದಲ್ಲಿ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡವನ್ನು ಹತೋಟಿಯಲ್ಲಿಡುತ್ತದೆ. ರಕ್ತದಾನ ಮಾಡುವುದರಿಂದ ದೇಹದಲ್ಲಿ ಬರುವ ವಿವಿಧ ರೀತಿಯ ಕ್ಯಾನ್ಸರ್ ನಿಂದ ದೂರ ಉಳಿಯಬಹುದು.
ಆದ್ರೆ ರಕ್ತದಾನ ಮಾಡುವುದರಿಂದ ಹಲವು ರೀತಿಯ ಅಡ್ಡಪರಿಣಾಮವೂ ಇದೆ. ಕೆಲವರಿಗೆ ರಕ್ತದಾನದ ಬಳಿಕ ಸುಸ್ತು, ಸ್ವಲ್ಪ ತಲೆಭಾರವಾಗುವುದು, ಸುಸ್ತು ಕಂಡು ಬರುವುದು. ಆದರೆ ಒಂದೆರಡು ದಿನಗಳಲ್ಲಿ ಸರಿಯಾಗುವುದು. ಕೆಲವರಿಗೆ ಸೂಜಿ ಸುಚ್ಚಿದ ಭಾಗದಲ್ಲಿ ಊತ, ರಕ್ತ ಸೋರುವುದು ಕಂಡು ಬರುವುದು.
ರಕ್ತದಾನ ಮಾಡುವವರು ತಿಳಿದಿರಬೇಕಾದ ಸಂಗತಿಗಳು
17 ವಯಸ್ಸು ಮೇಲ್ಪಟ್ಟವರಾಗಿರಬೇಕು
ಕನಿಷ್ಠ 55 ಕೆಜಿ ಮೈ ತೂಕವಿರಬೇಕು, ಆರೋಗ್ಯವಂತರಾಗಿರಬೇಕು.
ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಅಥವಾ ಏನಾದರೂ ಕಾಯಿಲೆಗೆ ಔಷಧಿ ತೆಗೆದುಕೊಳ್ಳುತ್ತಿದ್ದರೆ ಅದರ ಬಗ್ಗೆ ಮೊದಲೇ ಹೇಳಬೇಕು.
ಒಮ್ಮೆ ರಕ್ತದಾನ ಮಾಡಿದ ಮೇಲೆ ಮತ್ತೊಮ್ಮೆ ನೀಡಲು 8 ವಾರಗಳು ಕಾಯಬೇಕು. ಡಬಲ್ ರೆಡ್ ಸೆಲ್ ಡೊನೇಷನ್ ಮಾಡಿದ್ದರೆ 16 ವಾರ ಕಾಯಬೇಕು.
ಪ್ಲೇಟ್‌ಲೆಟ್ ದಾನವನ್ನು 7 ದಿನಗಳಿಗೊಮ್ಮೆ ಮಾಡಬಹುದು, ವರ್ಷದಲ್ಲಿ 24 ಬಾರಿ ಮಾಡಬಹುದು. ಕ್ಯಾನ್ಸರ್ ಸೇರಿ ಹಲವು ಚಿಕಿತ್ಸೆಗೆ ರಕ್ತ ಅಗತ್ಯವಾಗಿರುತ್ತದೆ. ನೀವು ನೀಡುವ 450 ಎಂ ಎಲ್ ರಕ್ತ ಒಂದು ಜೀವ ಉಳಿಸಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











