Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾಂಸ ಪ್ರಿಯರೇ ಎಚ್ಚರ! ಈ ಆಹಾರಗಳನ್ನು ಮುಟ್ಟಲೇಬೇಡಿ.. ಇವು ಪ್ರಾಣಕ್ಕೇ ಕಂಟಕ
ಮಾಂಸ ತಿನ್ನೋರು ಹುಷಾರ್! ಈ ಆಹಾರಗಳು ನಿಮ್ಮ ಆರೋಗ್ಯವನ್ನು ಹಾಳು ಮಾಡಬಹುದು. ಹೌದು, ಮಾಂಸಾಹಾರವು (meat) ರುಚಿಕರವಾಗಿದ್ದರೂ, ಸರಿಯಾದ ಆಹಾರ ಸಂಯೋಜನೆಗಳನ್ನು ಅನುಸರಿಸದಿದ್ದರೆ, ಜೀರ್ಣಕಾರಿ ಸಮಸ್ಯೆಗಳು ಮತ್ತು ಅಲರ್ಜಿಗಳಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ನಿರ್ದಿಷ್ಟವಾಗಿ ಕೆಲವು ಆಹಾರಗಳನ್ನು ಮಾಂಸದೊಂದಿಗೆ (foods to avoid with meat) ತಿನ್ನುವುದು ಆರೋಗ್ಯಕ್ಕೆ ಹಾನಿಕರ. ಮಾಂಸದ ಜೊತೆಗೆ ತಿನ್ನಬಾರಾದ ಆಹಾರಗಳು ಯಾವವು? ಮತ್ತು ಅವುಗಳನ್ನು ಹೇಗೆ ತಪ್ಪಿಸಬೇಕು?ಎಂಬ ಬಗ್ಗೆ ತಿಳಿಯೋಣ ಬನ್ನಿ.
ಮಾಂಸಾಹಾರವನ್ನು ಅನೇಕರು ರುಚಿಗಾಗಿ ಇಷ್ಟಪಡುತ್ತಾರೆ. ಆದರೆ, ಮಾಂಸವನ್ನು ತಿನ್ನುವಾಗ ಇತರ ಆಹಾರಗಳನ್ನು ಸೇರಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು ಮತ್ತು ಅಲರ್ಜಿಗಳಂತಹ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಈ ಆಹಾರಗಳನ್ನು ಮಾಂಸದೊಂದಿಗೆ ತಿಂದರೆ ದೀರ್ಘಕಾಲಿಕ ಹಾನಿ ಸಂಭವಿಸಬಹುದು. ಆರೋಗ್ಯಕ್ಕೆ ಹಾನಿಕಾರಕ ಕಾಂಬಿನೇಷನ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.

ಮಾಂಸದೊಂದಿಗೆ ತಿನ್ನಬಾರದ ಆಹಾರಗಳಿವು
1. ಹಾಲು ಮತ್ತು ಹಾಲಿನ ಉತ್ಪನ್ನಗಳು
ಮಾಂಸವನ್ನು ತಿಂದ ನಂತರ ಹಾಲು, ಮೊಸರು, ಮಜ್ಜಿಗೆ ಇತ್ಯಾದಿ ಹಾಲಿನ ಆಧಾರಿತ ಆಹಾರಗಳನ್ನು ಸೇವಿಸಬಾರದು. ಇದರಿಂದ ದೇಹದಲ್ಲಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಹಾಲು ತಂಪಾದ ಗುಣವನ್ನು ಹೊಂದಿರುತ್ತದೆ. ಇದು ಮಾಂಸದಲ್ಲಿನ ಪ್ರೋಟೀನ್‌ಗಳೊಂದಿಗೆ ಸೇರಿ ಅಜೀರ್ಣಕ್ಕೆ ಕಾರಣವಾಗುತ್ತದೆ. ಮುಖ್ಯವಾಗಿ ಮೀನಿನೊಂದಿಗೆ ಹಾಲನ್ನು ಬೆರೆಸಿ ತಿನ್ನುವುದರಿಂದ ಆಹಾರ ಅಲರ್ಜಿಗಳು, ಮರಗಟ್ಟುವಿಕೆ ಮತ್ತು ಚರ್ಮ ಸಂಬಂಧಿತ ಸಮಸ್ಯೆಗಳು ಉಂಟಾಗುವ ಅಪಾಯವಿದೆ.
2. ಹಸಿರು ತರಕಾರಿಗಳು
ಹಸಿರು ತರಕಾರಿಗಳು ಪೌಷ್ಟಿಕಾಂಶದಿಂದ ಕೂಡಿದ್ದರೂ, ಅವುಗಳನ್ನು ಮಾಂಸದೊಂದಿಗೆ ಅಥವಾ ಮಾಂಸವನ್ನು ತಿಂದ ನಂತರ ಸೇವಿಸುವುದು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ನಿರ್ದಿಷ್ಟವಾಗಿ ಕೆಲವು ಹಸಿರು ತರಕಾರಿಗಳಲ್ಲಿರುವ ಆಕ್ಸಲಿಕ್ ಆಮ್ಲವು ಮಾಂಸದಲ್ಲಿನ ಕ್ಯಾಲ್ಸಿಯಂನೊಂದಿಗೆ ಬೆರೆತು, ದೇಹಕ್ಕೆ ಪೋಷಕಾಂಶಗಳನ್ನು ತಲುಪದಂತೆ ಮಾಡುತ್ತದೆ. ಇದು ಪೌಷ್ಟಿಕಾಂಶದ ಕೊರತೆಗೆ ಕಾರಣವಾಗುತ್ತದೆ. ವರದಿಯ ಪ್ರಕಾರ, ಈ ಎರಡೂ ವಿಭಿನ್ನ ರೀತಿಯ ಆಹಾರಗಳಾಗಿವೆ. ಆದ್ದರಿಂದ, ಸಮಯದ ಅಂತರದೊಂದಿಗೆ ಹಸಿರು ತರಕಾರಿ ತಿನ್ನಬೇಕು.
3. ಸಿಟ್ರಸ್ ಹಣ್ಣುಗಳು
ನಿಂಬೆ, ಕಿತ್ತಳೆ, ದ್ರಾಕ್ಷಿಯಂತಹ ಹುಳಿ ಹಣ್ಣುಗಳನ್ನು ಮಾಂಸಾಹಾರದೊಂದಿಗೆ ತಿನ್ನಬಾರದು. ಇಂದು ವೇಳೆ ತಿಂದರೆ, ಗ್ಯಾಸ್, ಉರಿ, ಹೊಟ್ಟೆ ಉಬ್ಬುವುದು ಮುಂತಾದ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು. ಅವುಗಳಲ್ಲಿರುವ ಆಮ್ಲಗಳು ಮಾಂಸದಲ್ಲಿರುವ ಪ್ರೋಟೀನ್‌ಗಳನ್ನು ಸರಿಯಾಗಿ ಜೀರ್ಣವಾಗದಂತೆ ತಡೆಯುತ್ತವೆ. ಮಾಂಸವನ್ನು ತಿಂದ ಬಳಿಕ ಈ ರೀತಿಯ ಹಣ್ಣುಗಳನ್ನು ತಿನ್ನುವುದರಿಂದ ಅಜೀರ್ಣ ಸಮಸ್ಯೆಗಳು ಉಂಟಾಗುತ್ತವೆ.
4. ಜೇನುತುಪ್ಪ
ಜೇನುತುಪ್ಪವನ್ನು ಮಾಂಸದೊಂದಿಗೆ ತಿನ್ನಬಾರದು. ಇದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಮಾಂಸವು ಸಹಜವಾಗಿಯೇ ದೇಹವನ್ನು ಬಿಸಿ ಮಾಡುತ್ತದೆ. ಆದ್ದರಿಂದ ಇವೆರಡರ ಸಂಯೋಜನೆಯಿಂದ ಜೀರ್ಣಕಾರಿ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಆಯುರ್ವೇದದ ಪ್ರಕಾರ, ಈ ರೀತಿ ಜೇನುತುಪ್ಪವನ್ನು ಒಟ್ಟಿಗೆ ತಿನ್ನುವುದರಿಂದ ವಿಷಕಾರಿ ಪರಿಣಾಮಗಳಿಗೆ ಕಾರಣವಾಗಬಹುದು.
5. ಚಹಾ, ಕಾಫಿ
ಮಾಂಸವನ್ನು ತಿಂದ ತಕ್ಷಣ ಚಹಾ ಅಥವಾ ಕಾಫಿ ಕುಡಿಯುವುದು ಅನೇಕರಿಗೆ ಅಭ್ಯಾಸ. ಆದರೆ, ಈ ಪಾನೀಯಗಳಲ್ಲಿರುವ ಟ್ಯಾನಿನ್, ಕೆಫೀನ್‌ನಂತಹ ಪದಾರ್ಥಗಳು ಮಾಂಸದಲ್ಲಿರುವ ಕಬ್ಬಿಣವನ್ನು ದೇಹವು ಹೀರಿಕೊಳ್ಳದಂತೆ ತಡೆಯುತ್ತವೆ. ಇದರಿಂದ ಪೌಷ್ಟಿಕಾಂಶದ ಕೊರತೆ ಉಂಟಾಗಬಹುದು. ಆದ್ದರಿಂದ ಮಾಂಸಾಹಾರಕ್ಕೆ ಮೊದಲು ಅಥವಾ ಕನಿಷ್ಠ 2 ಗಂಟೆಗಳ ಬ್ರೇಕ್ ಬಳಿಕ ಈ ಪಾನೀಯಗಳನ್ನು ತೆಗೆದುಕೊಳ್ಳುವುದು ಉತ್ತಮ.
6. ಅತಿಯಾದ ಎಣ್ಣೆ ಮತ್ತು ಉಪ್ಪು
ಮಾಂಸವನ್ನು ಹೆಚ್ಚು ಎಣ್ಣೆ ಮತ್ತು ಉಪ್ಪಿನೊಂದಿಗೆ ಬೇಯಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚು ಒತ್ತಡ ಉಂಟಾಗುತ್ತದೆ. ಇದು ಅಜೀರ್ಣ, ಆಮ್ಲೀಯತೆ, ಮಲಬದ್ಧತೆಯಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಮಸಾಲೆ ಪದಾರ್ಥಗಳನ್ನು ಸಹ ಸೀಮಿತವಾಗಿ ಬಳಸುವುದು ಉತ್ತಮ.
ಕನಿಷ್ಠ 3 ರಿಂದ 4 ಗಂಟೆ ಬ್ರೇಕ್ ಅಗತ್ಯ
ಮಾಂಸಾಹಾರ ತಿಂದ ನಂತರ ಇತರ ಆಹಾರಗಳನ್ನು ತಿನ್ನಲು ಕನಿಷ್ಠ 3 ರಿಂದ 4 ಗಂಟೆಗಳ ಕಾಲಾವಕಾಶ ನೀಡುವುದು ಉತ್ತಮ. ಹಾಗೆಯೇ ಸಾಕಷ್ಟು ನೀರು ಕುಡಿಯುವುದು ಮತ್ತು ಕಡಿಮೆ ಎಣ್ಣೆಯನ್ನು ಬಳಸುವುದು ಆರೋಗ್ಯಕ್ಕೆ ಒಳ್ಳೆಯದು. ಒಟ್ಟಾರೆಯಾಗಿ, ಮಾಂಸಾಹಾರವನ್ನು ತಿನ್ನುವಾಗ ಅಥವಾ ತಿಂದ ನಂತರ ಕೆಲವು ಆಹಾರಗಳನ್ನು ಸೇವಿಸದಿರುವುದು ಆರೋಗ್ಯಕ್ಕೆ ಒಳ್ಳೆಯದು. ನಿಮ್ಮ ದೇಹದ ಸ್ಥಿತಿಗೆ ಅನುಗುಣವಾಗಿ ಆಹಾರ ಪದ್ಧತಿಗಳನ್ನು ಬದಲಾಯಿಸಿಕೊಳ್ಳುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications



