Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮೊಬೈಲ್ ಫೋನ್ ಬಳಕೆ ಬ್ರೈನ್ ಕ್ಯಾನ್ಸರ್‌ಗೆ ಕಾರಣವಾಗುತ್ತಾ? ಹೊಸ ಅಧ್ಯಯನ ಹೇಳೋದೇನು?
ಮೊಬೈಲ್ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ ಎಂಬುದು ನಿಮಗೆಲ್ಲ ತಿಳಿದೇ ಇದೆ. ಮೊಬೈಲ್ ಬಳಕೆ ನಿತ್ಯ ಬದುಕಿನ ಒಂದು ಅಗತ್ಯ ವಸ್ತುವಾಗಿ ಬದಲಾಗಿದೆ. ಹಾಗೆ ಅಪಾಯಗಳನ್ನು ಸಹ ಉಂಟುಮಾಡುತ್ತಲೇ ಇದೆ. ಅದರಲ್ಲೂ ಮಕ್ಕಳ ಮೇಲೆ ಅದರ ಪರಿಣಾಮ ಅಪಾಯಕಾರಿ ಮಟ್ಟದಲ್ಲಿ ಏರಿಕೆಯಾಗಿದೆ ಎಂಬುದು ಹಳೆಯ ವಿಚಾರ.
ಅತಿಯಾದ ಮೊಬೈಲ್ ಬಳಕೆಯು ಬ್ರೈನ್ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂಬ ವಾದವೊಂದು ಬಹಳ ಕಾಲದಿಂದಲೂ ಎಲ್ಲರ ಬಾಯಲ್ಲಿ ಹರಿದಾಡುತ್ತಿತ್ತು. ಅತೀಯಾಗಿ ದಿನದಲ್ಲಿ ಸುಮಾರು 7ರಿಂದ 8 ಗಂಟೆಗಳ ಸಮಯದ ಮೊಬೈಲ್ ಬಳಕೆಯು ಅಪಾಯಕಾರಿ ಕಾಯಿಲೆಗೆ ಕಾರಣವಾಗಲಿದೆ ಎಂದೇ ನಂಬಲಾಗಿತ್ತು.

ಆದ್ರೆ ಹೊಸದೊಂದು ಅಧ್ಯಯನದಲ್ಲಿ ಮೊಬೈಲ್ ಫೋನ್‌ಗಳು ಮತ್ತು ವೈರ್‌ಲೆಸ್ ತಂತ್ರಜ್ಞಾನಗಳಿಂದ ಬರುವ ವಿದ್ಯುತ್ಕಾಂತೀಯ ವಿಕಿರಣವು ಕ್ಯಾನ್ಸರ್‌ಗೆ ಕಾರಣವಾಗಬಹುದು ಎಂಬ ವಾದವನ್ನು ತಳ್ಳಿಹಾಕಿದೆ. ರೇಡಿಯೋ ತರಂಗಗಳು ವೈರ್‌ಲೆಸ್ ತಂತ್ರಜ್ಞಾನಗಳನ್ನು ರವಾನಿಸುವುದು ತುಂಬಾ ದುರ್ಬಲವಾಗಿದೆ. ಹಾಗೆ ಅವು ಡಿಎನ್‌ಎಗೆ ಹಾನಿ ಮಾಡುವಷ್ಟು ಶಕ್ತಿ ಹೊಂದಿಲ್ಲ. ಇದರಿಂದ ಯಾವುದೇ ವಿಧದ ಕ್ಯಾನ್ಸರ್ ಬರುವ ಸಾಧ್ಯತೆಯೂ ಇಲ್ಲ ಎಂದು ಅಧ್ಯಯನ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯು ನಿಯೋಜಿಸಿದ್ದ ಎನ್ವಿರಾನ್‌ಮೆಂಟ್ ಇಂಟರ್‌ನ್ಯಾಷನಲ್‌ನಲ್ಲಿ ಈ ವರದಿಯು ಪ್ರಕಟಗೊಂಡಿದೆ. ಮುಖ್ಯ ಸಮಸ್ಯೆಗಾಗಿ, ಮೊಬೈಲ್ ಫೋನ್‌ಗಳು ಮತ್ತು ಮೆದುಳಿನ ಕ್ಯಾನ್ಸರ್‌ಗಳಿಗೆ, 10+ ವರ್ಷಗಳ ಮಾನ್ಯತೆ ಮತ್ತು ಗರಿಷ್ಠ ವರ್ಗಗಳ ಕರೆ ಸಮಯ ಅಥವಾ ಕರೆಗಳ ಸಂಖ್ಯೆಯೊಂದಿಗೆ ನಾವು ಯಾವುದೇ ಹೆಚ್ಚಿನ ಅಪಾಯವನ್ನು ಕಂಡುಕೊಂಡಿಲ್ಲ ಎಂದು ನ್ಯೂಜಿಲೆಂಡ್‌ನ ಆಕ್ಲೆಂಡ್ ವಿಶ್ವವಿದ್ಯಾಲಯದಲ್ಲಿ ಮಾರ್ಕ್ ಎಲ್ವುಡ್ ಹೇಳಿದ್ದಾರೆ. ಅವರು ಈ ಅಧ್ಯಯನದ ಪ್ರಮುಖ ಲೇಖಕರಾಗಿದ್ದಾರೆ.
ಮೊಬೈಲ್ ಫೋನ್ ಬಳಕೆ ಬ್ರೈನ್ ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ
ಮೊಬೈಲ್ ಫೋನ್‌ಗಳ ಬಳಕೆ ಮತ್ತು ಮೆದುಳಿನ ಕ್ಯಾನ್ಸರ್ ಅಥವಾ ಇತರ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್‌ಗಳ ನಡುವಿನ ಸಂಬಂಧವನ್ನು ತೋರಿಸುವುದಿಲ್ಲ ಎಂದು ನಾವು ತೀರ್ಮಾನಿಸಿದ್ದೇವೆ. ಮೊಬೈಲ್ ಫೋನ್ ಬಳಕೆ ಗಗನಕ್ಕೇರಿದ್ದರೂ, ಬ್ರೈನ್ ಟ್ಯೂಮರ್ ದರಗಳು ಸ್ಥಿರವಾಗಿಯೇ ಉಳಿದಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.
ಮೊಬೈಲ್ ಫೋನ್‌ಗಳು ಮತ್ತು ವೈರ್‌ಲೆಸ್ ತಂತ್ರಜ್ಞಾನದಿಂದ ಹೊರಸೂಸುವ ರೇಡಿಯೊ ತರಂಗಗಳು ದೇಹಕ್ಕೆ ನೇರವಾಗಿ ಹಾನಿ ಮಾಡುವಷ್ಟು ಶಕ್ತಿಯನ್ನು ಹೊಂದಿಲ್ಲ. ಯಾವುದೇ ಅಧ್ಯಯನಗಳು ಮೊಬೈಲ್ ಫೋನ್ ಬಳಕೆ ಮತ್ತು ಕ್ಯಾನ್ಸರ್ ನಡುವಿನ ಸಂಪರ್ಕ ದೃಢವಾಗಿಲ್ಲ. ಹೀಗಾಗಿ ಫೋನ್ ಬಳಕೆ ಬ್ರೈನ್ ಕ್ಯಾನ್ಸರ್‌ಗೆ ಕಾರಣವಾಗುವುದಿಲ್ಲ ಎಂಬುದನ್ನು ನಿಸಂಶಯವಾಗಿ ಹೇಳಬಹುದು ಎಂದು ಲೇಖಕರು ಹೇಳಿದ್ದಾರೆ.
ಮೊಬೈಲ್ ಫೋನ್‌ಗಳು ರೇಡಿಯೊಫ್ರೀಕ್ವೆನ್ಸಿ (RF) ತರಂಗಗಳನ್ನು ಬಳಸಿಕೊಂಡು ಸಂಕೇತಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಇದು ವಿದ್ಯುತ್ಕಾಂತೀಯ ಶಕ್ತಿಯ ಒಂದು ರೂಪಾಂತರವಾಗಿದೆ. ಈ ತರಂಗಗಳು ವಿವಿಧ ರೀತಿಯ ಸಮಸ್ಯೆ ಉಂಟುಮಾಡುವಂತಹ ತರಂಗಗಳನ್ನು ದೇಹದ ಅಂಗಗಳಿಗೆ ಹಾನಿ ಮಾಡುವ ವಿಕಿರಣ ಹೊರ ಸೂಸುತ್ತವೆ ಎಂಬುದು ಈ ಮೊದಲಿನ ವಾದವಾಗಿತ್ತು.
ಎಲ್ಲಾ 4G, 5G, Wi-Fi ಮತ್ತು ಬ್ಲೂಟೂತ್ ದತ್ತಾಂಶವನ್ನು ರವಾನಿಸಲು ರೇಡಿಯೊ ತರಂಗಗಳ ಮೇಲೆ ಅವಲಂಬಿತವಾಗಿದೆ, ಆದರೆ ಯಾವುದೂ ದೇಹದ ಅಂಗಾಂಶಗಳ ಮೇಲೆ ಹಾನಿ ಮಾಡುವಷ್ಟು ಶಕ್ತಿಶಾಲಿ ಅಲ್ಲ ಎಂಬುದನ್ನು ಅಧ್ಯಯನ ತಿಳಿಸಿದೆ. ಹಾಗೆ ಭಾರತದಲ್ಲಿ 1.2 ಶತಕೋಟಿ ಮೊಬೈಲ್ ಬಳಕೆದಾರರಿದ್ದಾರೆ. ಮೊಬೈಲ್ ಬಳಕೆ ಬ್ರೈನ್ ಕ್ಯಾನ್ಸರ್‌ಗೆ ಕಾರಣವಾಗುವುದಾದರೆ ಭಾರತದಲ್ಲಿ ಈ ಬ್ರೈನ್ ಕ್ಯಾನ್ಸರ್ ಪ್ರಮಾಣ ಏರಿಕೆಗತಿಯಲ್ಲಿ ಇರಬೇಕಿತ್ತು. ಆದರೆ ಅಷ್ಟೊಂದು ಪ್ರಮಾಣದಲ್ಲಿ ಏರಿಕೆಯಾಗಿಲ್ಲ ಎಂಬುದು ಸಹ ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.
ಹಾಗೆಂದ ಮಾತ್ರಕ್ಕೆ ಮೊಬೈಲ್ ಫೋನ್ ಬಳಕೆಯಿಂದ ಯಾವುದೇ ರೀತಿಯ ಹಾನಿಯೂ ಇಲ್ಲ ಎನ್ನಲಾಗಲ್ಲ. ಅದರ ಪರಿಣಾಮ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆರೋಗ್ಯದ ಮೇಲೆ ಉಂಟಾಗಿಲ್ಲ ಎಂದಷ್ಟೇ ಹೇಳಲಾಗಿದೆಯೇ ಹೊರತು, ಮೊಬೈಲ್ ಎಂದಿಗೂ ದೇಹಕ್ಕೆ ಹಾನಿಕಾರಕ ವಸ್ತುವೇ ಆಗಿದೆ ಎಂಬುದನ್ನು ಮರೆಯುವ ಹಾಗಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


