Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮೂಗಿನಿಂದ ರಕ್ತ ಬಂದಾಗ ಆಸ್ಪತ್ರೆಗೆ ಹೋದಳು..! 100ಕ್ಕೂ ಹೆಚ್ಚು ಹುಳು ಹೊರತೆಗೆದ ವೈದ್ಯರು..!
ನಾವು ಮನುಷ್ಯನ ದೇಹದೊಳಗೆ ಕೀಟಗಳು, ಹುಳುಗಳು ಸೇರಿಕೊಳ್ಳುವುದನ್ನು ನೋಡಿದ್ದೇವೆ. ಕೆಲವು ಬಾರಿ ಕಿವಿಯೊಳಗೆ ಕೀಟಗಳು ಹೋಗುವುದು, ಜೇಡ ಬಲೆ ಹಣೆಯುವುದು ಹೀಗೆ ಹತ್ತಾರು ಪ್ರಕರಣಗಳ ನೋಡಿದ್ದೇವೆ. ಏಕೆಂದರೆ ಕೆಲವು ಬಾರಿ ನಮ್ಮ ಅರಿವಿಲ್ಲದೆ ಹುಳುಗಳು ನಮ್ಮ ದೇಹ ಸೇರಿಬಿಡುತ್ತವೆ.
ಬರಿ ಸೇರಿಕೊಳ್ಳುವುದು ಅಷ್ಟೇ ಅಲ್ಲ ಅಲ್ಲಿಯೇ ಸಂತಾನೋತ್ಪತ್ತಿ ಕಾರ್ಯಕ್ಕೂ ಮುಂದಾಗುತ್ತವೆ. ಕೆಲವೊಂದು ಬಾರಿ ನಾವು ಯಾರು ಸಹ ಊಹಿಸಿರದ ರೀತಿಯಲ್ಲಿ ಹುಳುಗಳು ನಮ್ಮ ದೇಹದಲ್ಲಿ ಸೇರಿ ಹಾನಿ ಮಾಡುವ ಜೊತೆಗೆ ಪ್ರಾಣಕ್ಕೂ ಸಂಚಕಾರ ತಂದುಬಿಡುತ್ತವೆ.
ಹೀಗೆ ಇಲ್ಲೊಬ್ಬ ಮಹಿಳೆ ಸಹ ಮೂಗು ನೋವಿನಿಂದ ಬಳಲಿ ಕೊನೆಗೆ ಆಸ್ಪತ್ರೆಗೆ ತೆರಳಿದಾಗ ಆಕೆ ಮೂಗಿನೊಳಗೆ ಹುಳುಗಳಿದ್ದ ಭಯಾನಕ ಘಟನೆಯೊಂದು ವರದಿಯಾಗಿದೆ. 59 ವರ್ಷದ ಥಾಯ್ಲೆಂಡ್‌ನ ಮಹಿಳೆಯ ಮೂಗಿನಲ್ಲಿ ಜೀವಂತ ಹುಳುಗಳಿದ್ದ ಘಟನೆ ನಡೆದಿದೆ.

ಆಕೆಯ ಮೂಗು ವಿಪರೀತ ಊದಿಕೊಂಡು, ಸಹಿಸಲಾಗದ ನೋವು ತಂದಿತ್ತು. ಆದರೆ ಆಕೆ ಶೀತದ ಕಾರಣದಿಂದಾಗಿ ಈ ರೀತಿಯಾಗಿದೆ ಎಂದು ಮನೆ ಮದ್ದು ಮಾಡಿದ್ದಾಳೆ. ಆದರೆ ಒಂದು ದಿನ ಮೂಗಿನಿಂದ ರಕ್ತಸ್ರಾವಾದ ಬಳಿಕ ಆಕೆ ತಕ್ಷಣ ಆಸ್ಪತ್ರೆಗೆ ಓಡಿದ್ದಾಳೆ.
ಥಾಯ್ಲೆಂಡ್‌ನ ಚಿಯಾಂಗ್ ಮಾಯ್‌ನಲ್ಲಿರುವ ನಾಕಾರ್ನ್‌ಪಿಂಗ್ ಆಸ್ಪತ್ರೆಗೆ ಆಕೆ ದಾಖಲಾದಳು. ಅಲ್ಲಿ, ಡಾ ಪ್ಯಾಟೀಮನ್ ಥಾನಾಚೈಖಾನ್ ಎಕ್ಸ್-ರೇ ಮಾಡಿ ಪರೀಕ್ಷಿಸಿದಾಗ ಅಕ್ಷರಶಃ ಶಾಕ್ ಆಗಿದ್ದರು. ಆಕೆ ಮೂಗಿನೊಳಗೆ ವಿಚಿತ್ರ ಆಕೃತಿ ಇರುವುದು ಕಂಡು ಬಂತು. ಬಳಿಕ ಎಂಡೋಸ್ಕೋಪ್ ಬಳಸಿ, ವೈದ್ಯಕೀಯ ತಂಡವು ಸಣ್ಣ ಕ್ಯಾಮರಾವನ್ನು ಮೂಗಿನೊಳಗೆ ಇಳಿ ಬಿಟ್ಟಾಗ ಹೊಳ್ಳೆಗಳಲ್ಲಿ ಭಯಾನಕ ದೃಶ್ಯ ಕಂಡುಕೊಂಡರು. ಅಲ್ಲಿ 100 ಕ್ಕೂ ಹೆಚ್ಚು ಹುಳುಗಳು ಜೀವಂತವಾಗಿರುವುದು ಕಂಡುಬಂದಿದೆ.
ಹುಳುಗಳು ಈಗಾಗಲೇ ಬೆಳೆದು ದೊಡ್ಡದಾಗಿದ್ದವು, ತಡವಾಗಿ ಆಸ್ಪತ್ರೆಗೆ ಬಂದಿದ್ದ ಕಾರಣ ತಡಮಾಡದೆ ವೈದ್ಯರ ತಂಡ ಚಿಕಿತ್ಸೆ ಆರಂಭಿಸಿದರು. ಅಲ್ಲದೆ ಮೂಗಿನಿಂದ 100ಕ್ಕೂ ಹೆಚ್ಚು ಹುಳುಗಳನ್ನು ಹೊರತೆಗೆದರು, ಈಗ ಮಹಿಳೆ ಸುಧಾರಿಸಿಕೊಳ್ಳುತ್ತಿದ್ದಾಳೆ ಎಂದು ತಿಳಿದುಬಂದಿದೆ.
ಈ ಪ್ರಕರಣವನ್ನು ನಕಾರ್ನ್‌ಪಿಂಗ್ ಆಸ್ಪತ್ರೆಯು ತನ್ನ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದೆ. " ಒಂದು ವಾರದವರೆಗೆ ಮೂಗು ನೋವು ಮತ್ತು ಮೂಗಿನಿಂದ ರಕ್ತಸ್ರಾವವಾದ ಪ್ರಕರಣದಲ್ಲಿ ಆಕೆಯ ಮೂಗಿನಲ್ಲಿದ್ದ ಪರವಾಲಂಬಿಗಳ ಎಂಡೋಸ್ಕೋಪಿ ಮೂಲಕ ಹೊರತೆಗೆಯಲಾಗಿದೆ ಎಂದು ತಿಳಿಸಿದೆ.
ಈ ಹುಳುಗಳು ನಮ್ಮ ದೇಹ ಸೇರಲು ಹಲವು ಕಾರಣವಿದೆಯಂತೆ. ಜೊತೆಗೆ ಮೂಲಗಳು ಸಹ ಬೇರೆ ಬೇರೆ ಯಾಗಿರಲಿದೆ ಎಂಬುದು ವೈದ್ಯರ ವಾದವಾಗಿದೆ. ಕೆಲವು ಬಾರಿ ಮಾಂಸಾಹಾರದ ಕಾರಣದಿಂದಾಗಿ ಈ ಹುಳುಗಳು ದೇಹ ಸೇರಲಿವೆ. ಅದರಲ್ಲೂ ಮೊಸಳೆ ಮಾಂಸ ಸೇವನೆ ಬಳಿಕ ಈ ಹುಳುಗಳು ದೇಹ ಸೇರುವ ಪ್ರಕರಣಗಳ ಸಂಖ್ಯೆ ಹೆಚ್ಚು ಎನ್ನಲಾಗಿದೆ.
ಈ ಮೊದಲು ಸಹ ಇಂತಹದ್ದೆ ಘಟನೆ ನಡೆದಿತ್ತು ಫ್ಲೋರಿಡಾದ ವ್ಯಕ್ತಿಯೊಬ್ಬನ ಮೂಗಿನಿಂದ ಬರೋಬ್ಬರಿ 150ಕ್ಕೂ ಹೆಚ್ಚು ಜೀವಂತ ಹುಳುಗಳನ್ನು ವೈದ್ಯರು ಹೊರತೆಗೆದಿದ್ದರು. ಅಚ್ಚರಿಯ ವಿಚಾರವೆಂದರೆ ಜಾಕ್ಸನ್‌ಗೆ ಮೂಗಿನೊಳಗೆ ಅಷ್ಟೊಂದು ಹುಳುಗಳಿವೆ ಎಂಬುದೇ ತಿಳಿದಿರಲಿಲ್ಲವಂತೆ. ಆದರೆ ಕೆಲ ತಿಂಗಳಿಂದ ಮೂಗಿನಲ್ಲಿ ನೋವು ಕಾಣಿಸಿಕೊಂಡಿತ್ತು. ಇಷ್ಟಾದರೂ ಆತ ವೈದ್ಯರ ಬಳಿ ಹೋಗಿರಲಿಲ್ಲ. ಆದರೆ ಮೂಗೂ ಊದಿಕೊಂಡು ಬಳಿಕ ರಕ್ತ ಬರಲು ಆರಂಭಿಸಿದಾಗ ಆತ ವೈದ್ಯರ ಬಳಿ ತೆರಳಿದ್ದ.ಈ ವೇಳೆ ಮೂಗಿನಲ್ಲಿ ಹುಳುಗಳಿರುವುದು ಪತ್ತೆಯಾಗಿತ್ತು.
ಇದಲ್ಲದೆ ಎರಡು ವರ್ಷದಿಂದ ಮಹಿಳೆಯೊಬ್ಬರ ಕಣ್ಣಿನಲ್ಲಿ ಹುಳುವೊಂದು ವಾಸವಾಗಿದ್ದ ಘಟನೆ ಸಹ ನಡೆದಿತ್ತು. ಕಾಂಗೋದ ಬಸಂಕುಸುವಿನ 28 ವರ್ಷದ ಮಹಿಳೆ ತನ್ನ ಎಡಗಣ್ಣಿನ ವಿಪರೀತ ನೋವು ಹಾಗೂ ನೀರು ಬರುತ್ತಿದ್ದ ಕಾರಣ ಆಸ್ಪತ್ರೆಗೆ ಪರೀಕ್ಷೆಗೆಂದು ಆಗಮಿಸಿದ್ದಳು. ಆದರೆ ಕಣ್ಣಿನ ಒಳಪದರದಲ್ಲಿ ಒಂದು ಸಣ್ಣ ಗಡ್ಡೆ ಆಕೃತಿ ಬೆಳೆದಿದ್ದು ಬಿಟ್ಟರೆ ಬೇರೆ ಯಾವ ರೋಗಲಕ್ಷಣವೂ ಆಕೆಗೆ ಇರಲಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
