Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಜೀವಂತ ಮೀನು ನುಂಗಿದ 11 ತಿಂಗಳ ಮಗು..! ಯಶಸ್ವಿ ಚಿಕಿತ್ಸೆ ಬಳಿಕ ಜೀವ ಉಳಿಸಿದ ವೈದ್ಯರು..!
ಚಿಕ್ಕಮಕ್ಕಳನ್ನು ಎಷ್ಟು ಜೋಪಾನವಾಗಿ ನೋಡಿಕೊಂಡರು ಒಂದಲ್ಲಾ ಒಂದು ಸಮಸ್ಯೆ ಮಾಡಿಕೊಳ್ಳುತ್ತಾರೆ. ಅದರಲ್ಲೂ ಅವರ ಕೈಗೆ ಸಿಗುವಂತಹ ಯಾವುದೇ ವಸ್ತು ಇಟ್ಟರೂ ಅದನ್ನು ಎಳೆದಾಡಿ ಬೀಳಿಸುವುದು, ಒಡೆಯುವುದು ಮಾಡುತ್ತಾರೆ. ಹಾಗಾಗಿ ಮಕ್ಕಳ ಕೈಗೆ ಇಂತಹ ವಸ್ತು ಸಿಗದಂತೆ, ಅವರ ಮೇಲೆ ಗಮನ ವಹಿಸುತ್ತಿರುತ್ತೇವೆ.
ಇಷ್ಟಾದರೂ ಕೆಲವೊಮ್ಮೆ ಮಕ್ಕಳು ಕೈಗೆ ಸಿಕ್ಕ ವಸ್ತುವನ್ನು ಬಾಯಿಗೆ ಹಾಕಿಕೊಂಡು ಯಡವಟ್ಟು ಮಾಡಿಕೊಳ್ಳುವ ಉದಾಹರಣೆಗಳಿವೆ. ಹಾಗೆ ಇಲ್ಲೊಂದು ಮಗು ಸಹ ಕೈಗೆ ಸಿಕ್ಕ ಜೀವಂತ ಮೀನನ್ನು ನುಂಗಿ ಯಡವಟ್ಟು ಮಾಡಿಕೊಂಡಿತ್ತು.

ಶಿವಮೊಗ್ಗದಲ್ಲಿ ಈ ಘಟನೆ ನಡೆದಿದ್ದು, 11 ತಿಂಗಳ ಮಗುವೊಂದು ಜೀವಂತ ಮೀನನ್ನು ನುಂಗಿ ಉಸಿರಾಟದ ಸಮಸ್ಯೆಗೆ ಸಿಲುಕಿ ಸಾವು ಬದುಕಿನ ಹೋರಾಟ ನಡೆಸಿತ್ತು. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಪರೀಕ್ಷಿಸಿದ ವೈದ್ಯರು ಮಗುವಿಗೆ ಸಣ್ಣ ಶಸ್ತ್ರಚಿಕಿತ್ಸೆ ನೆರವೇರಿಸಿ ಬದುಕುಳಿಸಿದ್ದಾರೆ.
ಏನಿದು ಘಟನೆ..? ನಡೆದಿದ್ದು ಹೇಗೆ?
ಮಕ್ಕಳು ಕೈಗೆ ಏನೆ ಸಿಕ್ಕರು ಬಾಯಿಗೆ ಹಾಕಿಕೊಳ್ಳುತ್ತಾರೆ. ಇಲ್ಲಿ 11 ತಿಂಗಳ ಪ್ರತೀಕ್ ಎಂಬ ಮಗು ಮನೆಯಲ್ಲಿ ಕೈಗೆ ಸಿಕ್ಕ ಮೀನನ್ನು ಬಾಯಿಗೆ ಹಾಕಿಕೊಂಡು ನುಂಗಿದೆ. ಮೀನು ಗಾತ್ರದಲ್ಲಿ ದೊಡ್ಡದಿದ್ದ ಕಾರಣ ಗಂಟಲಲ್ಲೇ ಸಿಲುಕಿದೆ. ಪೋಷಕರು ಮೀನು ಹೊರತೆಗೆಯಲು ಎಷ್ಟೇ ಕಷ್ಟಪಟ್ಟರು ಸಾಧ್ಯವಾಗಲಿಲ್ಲ. ಬಳಿಕ ಬಾಯಿಯಿಂದ ರಕ್ತ ಬರಲು ಆರಂಭಿಸಿತ್ತು. ತಕ್ಷಣ ಎಚ್ಚೆತ್ತ ಪೋಷಕರು ಶಿವಮೊಗ್ಗದ ಮಕ್ಕಳ ಆಸ್ಪತ್ರೆಯಾದ ಸರ್ಜಿಗೆ ಕರೆತಂದಿದ್ದಾರೆ.
ಶಸ್ತ್ರ ಚಿಕಿತ್ಸೆ ನೆರವೇರಿಸಿದ ವೈದ್ಯರು
ಆಸ್ಪತ್ರೆಗೆ ಕರೆತರುವಾಗಲೇ ಮಗು ನಿತ್ರಾಣಗೊಂಡಿದೆ. ಉಸಿರಾಡಲಾಗದೆ ಕಷ್ಟಪಡುತ್ತಿತ್ತು. ಹೀಗಾಗಿ ನುರಿತ ವೈದ್ಯರಾದ ಡಾ. ಪ್ರದೀಪ್, ಡಾ. ವಿನೋದ್, ಹಾಗೂ ಡಾ.ವಿಜಯ್ ಅವರಿದ್ದ ತಂಡ ಮಗುವಿನ ಚಿಕಿತ್ಸೆಗೆ ಮುಂದಾಗಿದ್ದರು. ಮೊದಲು ಕೃತಕ ಆಕ್ಸಿಜನ್ ನೀಡಿ ಉಸಿರಾಟ ಸರಾಗಗೊಳಿಸಲಾಗಿತ್ತು. ಬಳಿಕ ಪರೋಕ್ಷ ಲಾರಿಂಗೋಸ್ಕೋಪಿ ಮೂಲಕ ಮೀನು ಇರುವುದನ್ನು ಖಚಿತಪಡಿಸಿಕೊಂಡು ಸಣ್ಣದಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿ ಕೆಲವೇ ನಿಮಿಷದಲ್ಲಿ ಮಗುವನ್ನು ಉಳಿಸಿದ್ದಾರೆ.
ಗಂಟಲಲ್ಲಿ ಸೇರಿಕೊಂಡಿದ್ದ ಮೀನು ಬರೋಬ್ಬರಿ 11.3 ಸೆಂ.ಮೀ ಉದ್ದ ಹಾಗೂ 3 ಸೆಂ.ಮೀ ಅಗಲವಾಗಿತ್ತು ಎಂದು ತಿಳಿದುಬಂದಿದೆ. ಗಂಟಲಿನಿಂದ ಹೊರತೆಗೆದಾಗಲು ಆ ಮೀನು ಜೀವಂತವಾಗಿತ್ತು ಎಂದು ತಿಳಿದುಬಂದಿದೆ. ಸದ್ಯ ಮಗುವಿನ ಬಾಯಿಯಲ್ಲಿ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಕ್ಕಳ ಶಸ್ತ್ರಚಿಕಿತ್ಸಕ ಡಾ.ಪ್ರದೀಪ್ ಈ ಕುರಿತು ಮಾತನಾಡಿ, 'ನಿನ್ನೆ ಮಗುವಿನ ಸ್ಥಿತಿ ತುಂಬಾ ಗಂಭೀರವಾಗಿತ್ತು. ಉಸಿರಾಟದ ಸಮಸ್ಯೆಯೂ ಇತ್ತು. ಮಗುವಿನ ಆರೋಗ್ಯವನ್ನು ಹತೋಟಿಗೆ ತಂದು ಲಾರಿಂಗೋ ಸ್ಕೋಪ್ ಅನ್ನು ಹಾಕಿ ನೋಡಿದಾಗ ಮೀನಿನ ಬಾಲ ಮಾತ್ರ ಕಾಣುತ್ತಿತ್ತು. ಅದನ್ನು ಹಿಡಿದು ಎಳೆಯಲು ಪ್ರಯತ್ನ ಮಾಡಿದಾಗ ಮೀನಿನಲ್ಲಿ ಮುಳ್ಳುಗಳಿದ್ದವು. ಇದರಿಂದ ಗಂಟಲಿನ ಓರೂಫ್ ಫಾರಿಕ್ಸ್‌ನಲ್ಲಿ ಸಿಲುಕಿಕೊಂಡಿತ್ತು. ಈಗ ಮಗು ಗುಣಮುಖವಾಗಿದೆ. ಬಾಯಿಯಲ್ಲಿ ಮೀನು ಇನ್ನೂ ಜೀವಂತವಾಗಿಯೇ ಇತ್ತು' ಎಂದಿದ್ದಾರೆ.
ಮಕ್ಕಳ ಸುತ್ತಲಿನ ಸಣ್ಣಪುಟ್ಟ ವಸ್ತುಗಳ ಬಗ್ಗೆ ಪೋಷಕರು ಎಚ್ಚರಿಕೆ ವಹಿಸುವಂತೆ ವೈದ್ಯರು ತಿಳಿಸಿದ್ದಾರೆ. "ಮಕ್ಕಳು ಕಡಲೆಕಾಯಿ, ಗೋಲಿ ಅಥವಾ ಸಣ್ಣ ಆಟಿಕೆಗಳಂತಹ ವಸ್ತುಗಳನ್ನು ನುಂಗುವುದು ಸಾಮಾನ್ಯವಾಗಿದೆ, ಇದು ಅವರ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ. ಆದರೆ, ಇಂತಹ ಪ್ರಕರಣದಲ್ಲಿ ನಾವು ಮೊದಲ ಬಾರಿಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಮಗು ಆರೋಗ್ಯವಾಗಿರುವುದಕ್ಕೆ ನಮಗೆ ಸಂತೋಷವಾಗಿದೆ" ಎಂದು ಡಾ. ವಿನೋದ್ ಹೇಳಿದ್ದಾರೆ.
ಮನೆಯಲ್ಲಿ ಮಕ್ಕಳಿದ್ದರೆ ಇರಲಿ ಎಚ್ಚರ..!
ಮನೆಯಲ್ಲಿ ಮಕ್ಕಳಿದ್ದರೆ ಅವರ ಮೇಲೆ ಒಂದಿಷ್ಟು ವಿಶೇಷ ಕಾಳಜಿಯ ಅಗತ್ಯವೂ ಇರಬೇಕಾಗುತ್ತದೆ. ಮಕ್ಕಳು ಕೈಗೆ ಸಿಕ್ಕ ವಸ್ತುವನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಹೀಗಾಗಿ ಅವರ ಕೈಗೆ ಸಣ್ಣಪುಟ್ಟ ವಸ್ತುಗಳು ಸುಲಭವಾಗಿ ಸಿಗದಂತೆ ಇಡಬೇಕು. ಅದರಲ್ಲೂ ನಾಣ್ಯ, ಪೆನ್ನು, ಪೆನ್ಸಿಲ್, ಸೇಫ್ಟಿಪಿನ್, ಮೊಳೆಗಳು, ತಂತಿಯ ಚೂರುಗಳು, ಪ್ಲಾಸ್ಟಿಕ್ ಬಾಟಲಿಗಳ ಮುಚ್ಚಳಗಳು, ಗುಂಡಿ, ಸೂಜಿ ಹೀಗೆ ಹತ್ತಾರು ವಸ್ತುಗಳ ಮಕ್ಕಳಿಗೆ ಅಪಾಯ ತಂದೊಡ್ಡಬಹುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
