Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ವೈದ್ಯರ ದಿನ 2023: ಪ್ರತಿ ವೈದ್ಯರು ರೋಗಿಗಳಿಂದ ಎದುರಿಸುತ್ತಿರುವ 5 ಪ್ರಮುಖ ಸವಾಲುಗಳಿವು
"ವೈದ್ಯೋ ನಾರಾಯಣೋ ಹರಿ" ಎಂಬ ಮಾತಿದೆ, ನಮ್ಮೆಲ್ಲರ ಜೀವನದಲ್ಲಿ ಈ ಅನುಭವ ಕೂಡ ಉಂಟಾಗಿರುತ್ತದೆ. ನಮಗೆ ಅಥವಾ ನಮ್ಮ ಆಪ್ತರಿಗೆ ಏನಾದರೂ ಆದಾಗ ಅವರನ್ನು ರಕ್ಷಣೆ ಮಾಡಿದ ವೈದ್ಯರು ನಮಗೆ ಸಾಕ್ಷಾತ್ ದೇವರಂತೆಯೇ ಕಾಣುತ್ತಾರೆ. ಆ ದೇವರೇ ಈ ವೈದ್ಯರ ರೂಪದಲ್ಲಿ ಬಂದು ರಕ್ಷಣೆ ಮಾಡಿದ್ದಾರೆ ಎಂದು ಹೇಳುತ್ತೇವೆ. ಇಂದು ವೈದ್ಯರ ದಿನ, ಎಲ್ಲಾ ವೈದ್ಯರಿಗೆ ವೈದ್ಯರ ದಿನದ ಶುಭಾಶಯಗಳು.
ವೈದ್ಯ ವೃತ್ತಿಯಲ್ಲಿ ಅವರಿಗೆ ಎಷ್ಟು ಗೌರವ ಸಿಗುವುದೋ ಅಷ್ಟೇ ಸವಾಲುಗಳೂ ಇರುತ್ತದೆ, ಎಷ್ಟೋ ವೈದ್ಯರುಗಳು ತಮ್ಮ ವೈಯಕ್ತಿಕ ಬದುಕನ್ನು ಸಂಪೂರ್ಣವಾಗಿ ಮರೆತು ಜನರ ಸೇವೆ ಮಾಡುತ್ತಿರುತ್ತಾರೆ. ವೈದ್ಯರೇನು ಸುಮ್ಮನೆ ಟ್ರೀಟ್ಮೆಂಟ್ ಕೊಡುತ್ತಾರೆಯೇ, ಫೀಸ್ ತೆಗೆದುಕೊಳ್ಳುವುದಿಲ್ಲವೇ ಎಂದು ಕೆಲವರು ಪ್ರಶ್ನೆ ಮಾಡಬಹುದು. ಆದರೆ ಫೀಸ್ ಕಡೆ ಗಮನ ನೀಡದೆ ದುಡಿಯುತ್ತಿರುವ ಎಷ್ಟೋ ವೈದ್ಯರು ನಮ್ಮ ನಡುವೆ ಇದ್ದಾರೆ, ಚಿಕಿತ್ಸೆ ಪಡೆಯಲು ಶಕ್ತಿಯಿಲ್ಲದವರಿಗೆ ಫ್ರೀ ಚಿಕಿತ್ಸೆ ನೀಡಿ ಮಾನವೀಯತೆ ತೋರುವ ವೈದ್ಯರುಗಳು ನಮ್ಮ ನಡುವೆ ಇನ್ನೂ ಇದ್ದಾರೆ.
ವೈದ್ಯ ವೃತ್ತಿಯಲ್ಲಿ ರೋಗಿ ಹುಷಾರಾದರೆ ವೈದ್ಯರ ಕೈಗುಣ ಎನ್ನುತ್ತೇವೆ, ಅದೇ ರೋಗಿಗೆ ಸ್ವಲ್ಪ ಹೆಚ್ಚುಕಡಿಮೆಯಾದರೆ ಅದು ವೈದ್ಯ ವೃತ್ತಿಗೆ ಕಪ್ಪು ಚುಕ್ಕಿಯಾಗುವಂತೆ ಪ್ರತಿಭಟಿಸುತ್ತೇವೆ. ಕೆಲವರಿಗೆ ತಮಗಾಗಿ ಸ್ವಲ್ಪ ವಿಶ್ರಾಂತಿ ಪಡೆಯಲು ಸಾಧ್ಯವಾಗದಷ್ಟು ಕೆಲಸದ ಒತ್ತಡವಿರುತ್ತದೆ, ನನ್ನ ವಿಶ್ರಾಂತಿಗಿಂತ ನನ್ನನ್ನು ನಂಬಿಕೊಂಡು ಬಂದಿರುವ ರೋಗಿಯ ಆರೋಗ್ಯ ಮುಖ್ಯ ಎಂದು ದುಡಿಯುತ್ತಾರೆ.
ಇನ್ನು ವೈದ್ಯರನ್ನು ಭೇಟಿ ಮಾಡುವಾಗ ರೋಗಿಗಳು ಮಾಡುವ ಈ ತಪ್ಪುಗಳಂತೂ ವೈದ್ಯರಿಗೆ ದೊಡ್ಡ ಸವಾಲಾಗುವುದು:

1. ವೈದ್ಯರ ಭೇಟಿಯ ಸಮಯ
ವೈದ್ಯರು ರೋಗಿಯನ್ನು ಪರೀಕ್ಷಿಸಿ ಒಂದು ನಿರ್ಧಿಷ್ಟ ದಿನ ಬರಲು ಹೇಳಿರುತ್ತಾರೆ. ಕೆಲವರು ಅದಕ್ಕಿಂತ ಮೊದಲೇ ವೈದ್ಯರನ್ನು ಭೇಟಿ ಮಾಡಲು ಹೋಗುತ್ತಾರೆ, ಇನ್ನು ಕಲವರು ವೈದ್ಯರು ಹೇಳಿದ ಡೇಟ್ ಮುಗಿದು ಹಲವು ದಿನಗಳು ಕಳೆದ ಮೇಲೆ ವೈದ್ಯರನ್ನು ಭೇಟಿ ಮಾಡುತ್ತಾರೆ. ಈ ರೀತಿ ಮಾಡುವುದರಿಂದ ವೈದ್ಯರಿಗೆ ನಿಮ್ಮ ಆರೋಗ್ಯ ಸ್ಥಿತಿಯನ್ನು ಸುಧಾರಣೆಗೆ ತರಲು ತುಂಬಾನೇ ಕಷ್ಟವಾಗುವುದು. ಅವರು ಒಂದು ನಿರ್ಧಿಷ್ಟ ಸಮಯಕ್ಕೆ ಬರಲು ಹೇಳುವುದರ ಹಿಂದೆ ಒಂದು ಉದ್ದೇಶವಿರುತ್ತದೆ, ಅಲ್ಲಿಯವರೆಗೆ ನಿಮಗೆ ನೀಡಿರುವ ಔಷಧಿ ನೋಡಿ ಮುಂದೆ ಡೋಸ್‌ನಲ್ಲಿ ಏನಾದರೂ ಬದಲಾವಣೆ ಮಾಡುವುದಿದ್ದರೆ ಮಾಡುತ್ತಾರೆ, ಆದರೆ ನಾವು ಅವರು ಹೇಳಿದ ದಿನಕ್ಕಿಂತ ಬೇಗನೆ ಅಥವಾ ತುಂಬಾ ಲೇಟಾಗಿ ಹೋಗುವುದರಿಂದ ನಮ್ಮ ಕಾಯಿಲೆಗೆ ಚಿಕಿತ್ಸೆ ನೀಡಲು ಅವರಿಗೆ ಕಷ್ಟವಾಗುವುದು. ಈ ತಪ್ಪು ಮಾಡದಿರಿ.
2. ಒಂದೇ ಬಾರಿಗೆ ಹಲವು ಸಮಸ್ಯೆಗಳನ್ನು ಹೇಳುವುದು
ಕೆಲವರಿಗೆ ಈ ಅಭ್ಯಾಸವಿರುತ್ತದೆ, ವೈದ್ಯರನ್ನು ಭೇಟಿ ಮಾಡುವುದು ಯಾವುದಾದರೂ ಒಂದು ತುಂಬಾ ಕಾಡುತ್ತಿರುವ ಸಮಸ್ಯೆಗೆ ಚಿಕಿತ್ಸೆ ಪಡೆಯಲು, ಆದರೆ ವೈದ್ಯರು ನಮ್ಮ ಆರೋಗ್ಯದ ಬಗ್ಗೆ ವಿಚಾರಿಸುವಾಗ ಇದ್ದ ಬದ್ದ ಎಲ್ಲಾ ಕಾಯಿಲೆಗಳ ಬಗ್ಗೆ ಹೇಳಿ ಅವರನ್ನೇ ಗೊಂದಲಕ್ಕೆ ದುಡುತ್ತೇವೆ. ಮೊದಲಿಗೆ ನಮಗೆ ಕಾಡುತ್ತಿರುವ ಪ್ರಮುಖ ಸಮಸ್ಯೆಯೇನು ಅದರ ಬಗ್ಗೆ ಹೇಳಬೇಕು, ನಂತರ ಅವರು ಕೇಳಿದಾಗ ಇತರ ಲಕ್ಷಣಗಳ ಬಗ್ಗೆ ಹೇಳಿ ಆಗ ಅವರಿಗೆ ನಿಮಗೆ ಇರುವ ಸಮಸ್ಯೆಯೇನು ಎಂದು ತಿಳಿಯಲು ಸಹಾಯವಾಗುವುದು.
3. ರೋಗಿ ತಮ್ಮ ರೋಗದ ಲಕ್ಷಣದ ಬಗ್ಗೆ ಸರಿಯಾಗಿ ಹೇಳದಿರುವುದು
ಇನ್ನು ಕೆಲವರು ತಮ್ಮ ರೋಗ ಲಕ್ಷಣದ ಬಗ್ಗೆ ವೈದ್ಯರಿಗೆ ಸರಿಯಾಗಿ ಮಾಹಿತಿಯೇ ನೀಡುವುದಿಲ್ಲ. ಇದರಿಂದ ಕೂಡ ವೈದ್ಯರಿಗೆ ನಮ್ಮ ಕಾಯಿಲೆ ಯಾವುದೆಂದು ಗುರುತಿಸಲು ಕಷ್ಟವಾಗುವುದು. ಅವರು ಇದರ ವೈದ್ಯಕೀಯ ಪರೀಕ್ಷೆ ಎಲ್ಲಾ ಮಾಡುತ್ತಾರೆ, ಆದರೆ ನಾವು ಹೇಳುವ ಕಾಯಿಲೆಗಳ ಲಕ್ಷಣಗಳು ಕೂಡ ನಮ್ಮ ಕಾಯಿಲೆ ಪತ್ತೆಹಚ್ಚಲು ಸಹಾಯ ಮಾಡುತ್ತದೆ.
4. ವೈದ್ಯಕೀಯ ಕಾರ್ಯವಿಧಾನಗಳ ಬಗ್ಗೆ ರೋಗಿ ಅರ್ಥ ಮಾಡಿಕೊಳ್ಳದಿರುವುದು
ತುಂಬಾ ಜನ ಈ ತಪ್ಪು ಮಾಡುತ್ತಾರೆ, ವೈದ್ಯರು ನೀಡಿರುವ ಔಷಧಿಯನ್ನು ಸರಿಯಾಗಿ ತೆಗೆದುಕೊಳ್ಳುವುದಿಲ್ಲ. ಈ ರೀತಿ ಮಾಡಿದರೆ ವೈದ್ಯರಿಗೆ ನಿಮ್ಮಕಾಯಿಲೆಯನ್ನು ಗುಣಪಡಿಸುವುದು ಕಷ್ಟವಾಗುವುದು. ಅವರು ಹೇಳಿದ ಸಲಹೆ ಸೂಚನೆಯನ್ನು ಪಾಲಿಸಿದರೆ ಮಾತ್ರ ಅವರು ನೀಡಿರುವ ಚಿಕಿತ್ಸೆ ನಿಮ್ಮ ಮೇಲೆ ಪ್ರಭಾವ ಬೀರುವುದು. ಅವರು ಹೇಳಿರುವ ಔಷಧ, ವ್ಯಾಯಾಮ, ಆಹಾರ ಪದ್ಧತಿ ಎಲ್ಲವನ್ನೂ ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ.
5. ಚಿಕಿತ್ಸೆಯನ್ನು ಪೂರ್ಣಗೊಳಿಸದಿರುವುದು
ಇದು ಕೂಡ ವೈದ್ಯರು ಎದುರಿಸುತ್ತಿರುವ ಬಹುದೊಡ್ಡ ಸವಾಲಾಗಿರುತ್ತದೆ. ಕಾಯಿಲೆ ಎಂದು ಬಂದ ರೋಗಿಗೆ ಚಿಕಿತ್ಸೆ ನೀಡಿ, ಇಂತಿಷ್ಟು ಸಮಯ ಚಿಕಿತ್ಸೆ ಪಡೆಯಬೇಕೆಂಬ ಸಲಹೆ ನೀಡಿರುತ್ತಾರೆ. ಆದರೆ ಸ್ವಲ್ಪ ಹುಷಾರಾದ ಬಳಿಕ ರೋಗಿ ಚಿಕಿತ್ಸೆಯನ್ನು ಪಡೆಯುವುದನ್ನು ಅರ್ಧಕ್ಕೆ ನಿಲ್ಲಿಸುತ್ತಾರೆ, ಆದರೆ ಈ ರೀತಿ ಮಾಡುವುದರಿಂದ ಸ್ವಲ್ಪ ಸಮಯದ ಬಳಿಕ ಮತ್ತೆ ಆ ರೋಗ ಮರುಕಳಿಸುವುದು, ಆವಾಗ ಅವರಿಗೆ ವೈದ್ಯರು ನೀಡುವ ಚಿಕಿತ್ಸೆ ಬಹಳಷ್ಟು ಬಾರಿ ಫಲಕಾರಿಯಾಗಲ್ಲ, ಈ ಸವಾಲುಗಳೂ ವೈದ್ಯರ ಮುಂದಿದೆ.
ಆದ್ದರಿಂದ ವೈದ್ಯರನ್ನು ಭೇಟಿ ಮಾಡುವಾಗ ಈ ತಪ್ಪುಗಳನ್ನು ಮಾಡದಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications