Latest Updates
-
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ!
ಬಾತ್ರೂಮ್ಗೂ ಮೊಬೈಲ್ ಕೊಂಡೊಯ್ಯುತ್ತೀರಾ..? ಇಂದೇ ನಿಲ್ಲಿಸಿಬಿಡಿ..ಯಾಕೆ ಗೊತ್ತಾ?
ಇತ್ತೀಚಿನ ವರ್ಷಗಳಲ್ಲಿ ಜನತೆ ಮೊಬೈಲ್ ಫೋನ್ಗಳಿಗೆ ಎಷ್ಟು ದಾಸರಾಗಿದ್ದಾರೆ ಅನ್ನೋದನ್ನು ನಾವು ನೋಡುತ್ತಿದ್ದೇವೆ. ಮೊಬೈಲ್ ಬಿಟ್ಟಿರದ ಸ್ಥಿತಿಗೆ ಯುವ ಜನತೆಯಂತು ಬಂದುಬಿಟ್ಟಿದೆ. ಅವರು ಊಟ, ತಿಂಡಿ, ಪಾಠದ ಜೊತೆಗೂ ಮೊಬೈಲ್ ಬಳಕೆ ಕಡ್ಡಾಯ ಎನ್ನುವಂತ ಸ್ಥಿತಿ ತಲುಪಿಬಿಟ್ಟಿದ್ದಾರೆ.
ಆದರೆ ಬಹುಪಾಲು ಮಂದಿ ಇಂದು ಬಾತ್ರೂಮ್ಗೆ ತೆರಳುವಾಗಲೂ ಮೊಬೈಲ್ ಫೋನ್ ಕೊಂಡೊಯ್ಯುತ್ತಾರೆ. ಹೌದು ಬಾತ್ರೂಮ್ನಲ್ಲಿ ಗಂಟೆಗಳ ಕಾಲ ಮೊಬೈಲ್ ಫೋನ್ ಬಳಸುವವರು ಇದ್ದಾರೆ. ಕೆಲವರು ಮೊಬೈಲ್ ಫೋನ್ ಇಲ್ಲದೆ ಬಾತ್ರೂಮ್ ಒಳಗೆ ಹೋಗುವುದೇ ಇಲ್ಲ.

ಇನ್ನೂ ಕೆಲವರು ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರೂ ಅದನ್ನೂ ಚಾರ್ಚ್ ಮಾಡಿ ಬಳಿಕವಷ್ಟೇ ಬಾತ್ರೂಮ್ಗೆ ತೆರಳುತ್ತಾರೆ. ಒಂದು ವೇಳೆ ಅವರು ಬಾತ್ರೂಮ್ಗೆ ಸೆಲ್ ಫೋನ್ ಬಿಟ್ಟು ಹೋಗಿದ್ದರೆ ಕೆಲವೇ ಕ್ಷಣದಲ್ಲಿ ಹೊರಬಂದಿರುತ್ತಾರೆ. ಹಾಗಾದರೆ ಬಾತ್ರೂಮ್ಗೆ ಮೊಬೈಲ್ ತೆಗೆದುಕೊಂಡು ಹೋಗುವುದರಿಂದಾಗುವ ಪರಿಣಾಮವೇನು ಗೊತ್ತಾ ನಿಮಗೆ?
ಸೆಲ್ ಫೋನ್ ಅನ್ನು ಶೌಚಾಲಯದೊಳಗೆ ತೆಗೆದುಕೊಂಡು ಹೋಗುವ ಅಭ್ಯಾಸ ನಿಮಗಿದ್ದರೆ ಅದನ್ನು ನಿಲ್ಲಿಸುವುದು ಉತ್ತಮ, ಏಕೆಂದರೆ ಈ ರೀತಿ ಮಾಡುವುದರಿಂದ ಹತ್ತಾರು ಸಮಸ್ಯೆಗೆ ನೀವು ಒಳಗಾಗುವುದು ಖಚಿತ. ಹಾಗಾದರೆ ಈ ರೀತಿ ಮಾಡುವುದರಿಂದ ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ.
ಮೊಬೈಲ್ ಕೊಂಡೊಯ್ದರೆ ಏನಾಗುತ್ತದೆ?
2022ರಲ್ಲಿ, ಕೆಲವು ವಿಜ್ಞಾನಿಗಳು 'ಟಾಯ್ಲೆಟ್ ಪ್ಲಮ್' ಅನ್ನು ಉಲ್ಲೇಖಿಸಿದ್ದಾರೆ. ಅಂದರೆ ಒಬ್ಬರು ಫ್ಲಶ್ ಮಾಡಿದಾಗ, ಟಾಯ್ಲೆಟ್ನಲ್ಲಿರುವ ಅದೃಶ್ಯ ಸೂಕ್ಷ್ಮಾಣುಗಳ ಗ್ರಹಣಾಂಗಗಳು, ಹನಿಗಳು ಮತ್ತು ಕಣಗಳಾಗಿ ಸಿಡಿಯುತ್ತವೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಹೆಚ್ಚು ನಿರ್ದಿಷ್ಟವಾಗಿ ಹೇಳಬೇಕೆಂದರೆ, ಒಬ್ಬರು ಫ್ಲಶ್ ಮಾಡುವಾಗ ಶೌಚಾಲಯದಲ್ಲಿ ಟೂತ್ ಬ್ರಷ್ ಇಟ್ಟಿದ್ದರೆ ಅದಕ್ಕೆ ಮಲದ ಕಣಗಳು ಅಂಟಿಕೊಳ್ಳುತ್ತವೆ ಎಂದು ಹೇಳಲಾಗುತ್ತದೆ.
ಸ್ಯಾನ್ ಫ್ರಾನ್ಸಿಸ್ಕೋದ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ ಸೌರಭ್ ಸೇಥಿ ಅವರು ಟಾಯ್ಲೆಟ್ನಲ್ಲಿ ಸೆಲ್ ಫೋನ್ ಬಳಸುವುದರಿಂದ ನೀವು ಶೌಚಾಲಯದಲ್ಲಿ ಕಳೆಯುವ ಸಮಯವನ್ನು ಹೆಚ್ಚಿಸುತ್ತದೆ ಎಂದು ವಿವರಿಸುತ್ತಾರೆ. ಅಲ್ಲದೆ, ಇದು ನಿಮ್ಮ ಗುದನಾಳ ಮತ್ತು ಗುದದ್ವಾರದ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ. ಇದು ಗುದದ ಬಿರುಕುಗಳು ಮತ್ತು ಗುದನಾಳದ ಹಿಗ್ಗುವಿಕೆಗೆ ಕಾರಣವಾಗಬಹುದು ಎಂದು ಅವರು ಹೇಳುತ್ತಾರೆ.
ಮೊಬೈಲ್ ಮೇಲೆ 28 ದಿನ ವೈರಾಣುಗಳು ಬದುಕುತ್ತವೆ
ಶೌಚಾಲಯವು ರೋಗಾಣುಗಳ ಸಂತಾನೋತ್ಪತ್ತಿ ಕೇಂದ್ರವಾಗಿದೆ ಎಂದು ಹೇಳಲಾಗುತ್ತದೆ. ನಾವು ಟಾಯ್ಲೆಟ್ ಸೀಟ್ ಮೇಲೆ ಕುಳಿತುಕೊಂಡು ನಮ್ಮ ಸೆಲ್ ಫೋನ್ ಮೂಲಕ ಸ್ಕ್ರಾಲ್ ಮಾಡಿದಾಗ, ಸೂಕ್ಷ್ಮಾಣುಗಳು ನಮ್ಮ ಕೈಗಳಿಗೆ ಅಂಟಿಕೊಳ್ಳುತ್ತವೆ. ನಾವು ಬಾಯಿ, ಕಣ್ಣು ಮತ್ತು ಮೂಗಿನ ಮೇಲೆ ಕೈ ಇಟ್ಟುಕೊಂಡರೆ ಅದು ಅನೇಕ ಅಪಾಯಗಳನ್ನು ಸೃಷ್ಟಿಸುತ್ತದೆ.
ಸೂಕ್ಷ್ಮಾಣುಗಳು ಸೆಲ್ ಫೋನ್ ಪರದೆಯ ಮೇಲೆ 28 ದಿನಗಳವರೆಗೆ ಬದುಕಬಲ್ಲವು ಎಂದು ಸಂಶೋಧನೆ ತೋರಿಸುತ್ತದೆ. ಟಾಯ್ಲೆಟ್ ಸೀಟ್ಗಳಿಗಿಂತ ಹತ್ತು ಪಟ್ಟು ಹೆಚ್ಚು ಸೂಕ್ಷ್ಮಾಣುಗಳನ್ನು ಸ್ಮಾರ್ಟ್ಫೋನ್ಗಳು ಒಯ್ಯುತ್ತವೆ ಎಂಬುದು ಸಾಬೀತಾಗಿರುವ ಸತ್ಯ. ಮತ್ತು ಆರೋಗ್ಯದ ದೃಷ್ಟಿಕೋನದಿಂದ, ಸೋಂಕು ನಿಯಂತ್ರಣ ತಜ್ಞ ಡಾ. ಹಗ್ ಹೈಡನ್ ಅವರು ಸೆಲ್ ಫೋನ್ ಪರದೆಗಳನ್ನು 'ಡಿಜಿಟಲ್ ಯುಗದ ಸೊಳ್ಳೆ' ಮತ್ತು ಸಾಂಕ್ರಾಮಿಕ ರೋಗಗಳ ವಾಹನ ಎಂದು ಕರೆದಿದ್ದಾರೆ.
ಏನೆಲ್ಲಾ ಸಮಸ್ಯೆ ಬರಲಿದೆ..?
ಟಾಯ್ಲೆಟ್ ಸೀಟಿನಲ್ಲಿ ಕಂಡುಬರುವ ಸಾಮಾನ್ಯ ಬ್ಯಾಕ್ಟೀರಿಯಾವೆಂದರೆ ಸ್ಟ್ಯಾಫಿಲೋಕೊಕಸ್ ಔರೆಸ್. ಇವುಗಳು ಹೆಚ್ಚಾಗಿ ಮೂತ್ರನಾಳದ ಸೋಂಕನ್ನು ಉಂಟುಮಾಡುತ್ತವೆ. ಈ ಸೂಕ್ಷ್ಮಜೀವಿಗಳು ಹೊಟ್ಟೆ ನೋವು, ಅತಿಸಾರ ಮತ್ತು ಸಾಂಕ್ರಾಮಿಕ ರೋಗಗಳಿಗೆ ಗುರಿಯಾಗಬಹುದು. ಅಲ್ಲದೆ, ಇದು ಚರ್ಮದ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.
ನಾವು ಶೌಚಾಲಯವನ್ನು ಬಳಸಿದ ನಂತರ ಕೈ ತೊಳೆಯುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ, ಆದರೆ ನಾವು ನಮ್ಮ ಸೆಲ್ ಫೋನ್ಗಳನ್ನು ನೀರಿನಿಂದ ಸ್ವಚ್ಛಗೊಳಿಸಲು ಸಾಧ್ಯವಿಲ್ಲ. ಹೀಗಾಗಿ ಶೌಚಾಲಯದಿಂದ ಹೊರಬಂದ ಫೋನಿನಲ್ಲಿ ನಿಮ್ಮನ್ನು ಅನಾರೋಗ್ಯಕ್ಕೆ ದೂಡಬಹುದಾದ ಎಲ್ಲಾ ವೈರಸ್ಗಳು ಇರಲಿವೆ. ಹೀಗಾಗಿ ನಿಮ್ಮ ಸೆಲ್ ಫೋನ್ ಅನ್ನು ಸಹ ಬಟ್ಟೆಯಿಂದ ಆಗಾಗ ಸ್ವಚ್ಛ ಮಾಡುವುದು ಉತ್ತಮ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications

