Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಮೂಗಿನಿಂದ ಕೂದಲು ತೆಗೆಯುತ್ತೀರಾ..? ಮುಂದೆ ಏನಾಗುತ್ತೆ ಗೊತ್ತಾ?
ನಮ್ಮ ದೇಹದಲ್ಲಿರುವ ಪ್ರತಿಯೊಂದು ಅಂಗಗಳು ಅದರದ್ದೇ ಆದ ಪ್ರಮುಖ ಕಾರ್ಯಗಳನ್ನು ಮಾಡುತ್ತವೆ. ಅಲ್ಲದೆ ಇದಕ್ಕೆ ನಿಮ್ಮ ಅನುಮತಿ ಸಹ ಅಗತ್ಯ ಬೀಳುವುದಿಲ್ಲ. ಹೃದಯ ಒಂದು ನಿಮಿಷ ನಿಲ್ಲದೆ ತನ್ನ ಕೆಲಸ ಮಾಡಿದರೆ ಶ್ವಾಸಕೋಶ ಉಸಿರಾಟ ಕ್ರಿಯೆ, ಕಣ್ಣು, ಕಿವಿ ಎಲ್ಲವೂ ತಮ್ಮ ಕೆಲಸ ಮಾಡುತ್ತವೆ. ಅಲ್ಲದೆ ದೇಹದ ಪ್ರತಿಯೊಂದು ಅಂಗವು ಅವುಗಳ ರಚನೆಯಿಂದ ಹಿಡಿದು ಅವುಗಳ ಕೆಲಸ ಕಾರ್ಯಗಳಿಗೆ ತಕ್ಕಂತೆಯೇ ನೈಸರ್ಗಿಕವಾಗಿ ರಚನೆಗೊಂಡ ಆಕಾರಗಳಾಗಿವೆ.
ನಾವು ನಮ್ಮ ಅನುಕೂಲಕ್ಕೆ ತಕ್ಕಂತೆ ಅವುಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಆದರೆ ಇತ್ತೀಚಿಗೆ ನಾವು ಸರ್ಜರಿಗಳ ಮೂಲಕ ಅವುಗಳ ರಚನೆಯನ್ನೇ ಬದಲಾಯಿಸುತ್ತಿರುವುದು ನೋಡುತ್ತಿದ್ದೇವೆ. ಮತ್ತೆ ಕೆಲವೊಮ್ಮೆ ಗೊತ್ತಿಲ್ಲದೆಯೇ ಅವುಗಳಿಗೆ ನಾವೇ ಹಾನಿ ಮಾಡುತ್ತಿದ್ದೇವೆ. ಅದರಲ್ಲೀ ಮುಖ್ಯವಾಗಿ ನಾವು ಮೂಗಿನ ಒಳಗೆ ಬೆಳೆಯುವ ಕೂದಲನ್ನು ಕೀಳುವ ಕ್ರಿಯೆ ಮಾಡುವುದು ಎಷ್ಟು ಅಪಾಯಕಾರಿ ಎಂಬುದು ಗೊತ್ತಾ?

ಇತ್ತೀಚಿನ ದಿನಗಳಲ್ಲಿ ಸುಂದರವಾಗಿ ಕಾಣುವುದು ಹಾಗೆ ದೇಹದ ಅಂಗಾಂಗಗಳ ಸುಂದರವಾಗಿಸುವುದು ನಡೆದೇ ಇದೆ. ಇದರ ಕಾರ್ಯವಾಗಿ ಮೂಗಿನ ಕೂದಲು ತೆಗೆಯುವುದು ಸಹ ಒಂದು. ಇದು ಅನಗತ್ಯ ಕೂದಲು ಎಂದು ಭಾವಿಸಿ ಹಲವರು ಬ್ಯೂಟಿ ಪಾರ್ಲರ್ ಅಥವಾ ಮನೆಯಲ್ಲಿ ಇದನ್ನು ತೆಗೆಯುವ ಕಾರ್ಯ ಮಾಡುತ್ತಾರೆ. ಆದರೆ ಇದರಿಂದ ಎಷ್ಟೊಂದು ಹಾನಿ ಇದೆ ಎಂದು ನೀವು ಯೋಚಿಸಿದ್ದೀರಾ?
ಮೂಗಿನಲ್ಲಿರುವ ಈ ಸೂಕ್ಷ್ಮ ಕೂದಲುಗಳು ಆರೋಗ್ಯದ ದೃಷ್ಟಿಯಿಂದ ಅತ್ಯುತ್ತಮ ರಚನೆಗಳಾಗಿವೆ. ಮೂಗಿನಿಂದ ನೇರವಾಗಿ ನಿಮ್ಮ ಶ್ವಾಸಕೋಶಕ್ಕೆ ಬ್ಯಾಕ್ಟೀರಿಯಾಗಳು ಹೋಗದಂತೆ ತಡೆಯಲು ಇವು ಸಹಕಾರಿಯಾಗಿದೆ. ಸೀನುಗಳು ಬರಲು ಸಹ ಇದೇ ಕೂದಲು ಕಾರಣವಾಗಿವೆ. ಹೀಗಾಗಿ ನೀವು ಈ ಕೂದಲು ಕೀಳುವುದು ಬ್ಯಾಕ್ಟೀರಿಯಾಗಳು ನೇರವಾಗಿ ಶ್ವಾಸಕೋಶ ತಲುಪಲು ಸಹಾಯವಾಗಲಿದೆ.
ಈಗ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಮೂಗಿನ ಕೂದಲು ತೆಗೆಯುವುದರಿಂದ ಆಗುವ ಅಪಾಯವೇನು ಎಂದು ವಿವರಿಸುವ ಒಂದು ವಿಡಿಯೋ ವೈರಲ್ ಆಗಿದ್ದು ನೋಡುಗರಲ್ಲಿ ಅಪಾಯದ ತೀವ್ರತೆ ಎಷ್ಟಿದೆ ಎಂಬುದನ್ನು ವಿವರಿಸುತ್ತಿದೆ. ಕಂಟೆಂಟ್ ಕ್ರಿಯೇಟರ್ ಝಾಕ್ ಡಿ ಫಿಲ್ಮ್ಸ್ ಹಂಚಿಕೊಂಡಿರುವ ಈ ವಿಡಿಯೋ ಮೂಗಿನ ಕೂದಲು ಕೀಳುವ ಅಪಾಯಗಳನ್ನು ಎತ್ತಿ ತೋರಿಸುತ್ತದೆ.
ಅನಿಮೇಷನ್ ವಿಡಿಯೋದಲ್ಲಿ ಮೂಗಿನ ಕೂದಲು ತೆಗೆಯುವುದರಿಂದ ಬ್ಯಾಕ್ಟೀರಿಯಾ ಹೇಗೆ ಶ್ವಾಸಕೋಶಕ್ಕೆ ಸೇರುತ್ತವೆ ಅನ್ನೋದನ್ನ ವಿವರಿಸುತ್ತಿದೆ. ಈ ರೀತಿ ಕೂದಲು ತೆಗೆಯುವುದರಿಂದ ಶ್ವಾಸಕೋಶ ಮಾತ್ರವಲ್ಲ ಬ್ಯಾಕ್ಟೀರಿಯಾಗಳು ನೇರವಾಗಿ ಮೆದುಳಿನ ಮೇಲೂ ಹಾನಿ ಮಾಡುತ್ತವೆ. ಈ ಕೂದಲುಗಳು ಫಿಲ್ಟರ್ ರೀತಿಯಲ್ಲಿ ಕೆಲಸ ಮಾಡುತ್ತವೆ. ಆದರೆ ಈ ಕೂದಲುಗಳ ತೆಗೆಯುವುದು ಹಾನಿಗೆ ಕಾರಣವಾಗುತ್ತದೆ.
ಈ ವಿಡಿಯೋ ನೋಡಿದ ಮಂದಿ ಆಘಾತಕ್ಕೆ ಒಳಗಾಗಿದ್ದಾರೆ. ಅದೆಷ್ಟೋ ಮಂದಿ ಈ ವಿಡಿಯೋ ನೋಡಿ ಮುಂದೆಂದು ಮೂಗಿನ ಕೂದಲು ತೆಗೆಯುವುದಿಲ್ಲ ಎನ್ನುತ್ತಿದ್ದಾರೆ. "ಅದಕ್ಕಾಗಿಯೇ ನಾನು ನನ್ನ ಮೂಗಿನ ಕೂದಲನ್ನು ಎಂದಿಗೂ ತೆಗೆಯುವುದಿಲ್ಲ ಮತ್ತು ನನ್ನ ಮೂಗಿನ ಕೂದಲುಗಳು ಮೂಗಿನಿಂದ ಹೊರಬಂದರೆ ನಾನು ಅದನ್ನು ಕತ್ತರಿಗಳಿಂದ ಕತ್ತರಿಸುತ್ತೇನೆ" ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ನಮ್ಮಲ್ಲಿ ಎರಡು ರೀತಿಯ ಮೂಗಿನ ಕೂದಲುಗಳಿವೆ. ಕೂದಲನ್ನು ಕೀಳುವುದರಿಂದ ಕೋಶಕದ ಸುತ್ತಲಿನ ಸೂಕ್ಷ್ಮಾಣುಗಳು ಸುಲಭವಾಗಿ ಒಳಗೆ ಪ್ರವೇಶಿಸಲು ಕಾರಣವಾಗಬಹುದು ಮತ್ತು ಸೋಂಕು ಉಂಟಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ಇದು ಮೆದುಳಿನ ಸೋಂಕುಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಸಹ ಹೇಳುತ್ತಾರೆ.
ಮೂಗಿನಿಂದ ರಕ್ತವನ್ನು ಹೊರತೆಗೆಯುವ ಅದೇ ರಕ್ತನಾಳಗಳು ಮೆದುಳಿನಿಂದ ರಕ್ತವನ್ನು ಸಾಗಿಸುವ ರಕ್ತನಾಳಗಳನ್ನು ಸಂಧಿಸುತ್ತವೆ. ಸೂಕ್ಷ್ಮಾಣುಗಳು ಮೆದುಳಿಗೆ ಹೋದಾಗ ಉರಿಯೂತ, ತಲೆನೋವು, ಮೆದುಳಿನ ಬಾವು ಸಹ ಕಾಣಿಸಿಕೊಳ್ಳಬಹುದು ಎಂಬುದು ವೈದ್ಯರ ಮುನ್ಸೂಚನೆಯಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
