Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇನ್ಮುಂದೆ ಟೀಗೆ ಚಿಟಿಕೆಯಷ್ಟು ಉಪ್ಪು ಸೇರಿಸಿ, ಇಷ್ಟೆಲ್ಲಾ ಪ್ರಯೋಜನಗಳು ಸಿಗುವುದು ಗೊತ್ತೇ?
ನಿಮಗೆ ಬೆಳಗ್ಗೆ ಎದ್ದಾಗ ಟೀ ಕುಡಿಯುವ ಅಭ್ಯಾಸವಿದೆಯೇ? ಇನ್ಮುಂದೆ ಟೀ ಮಾಡುವಾಗ ಒಂದು ಚಿಟಿಕೆಯಷ್ಟು ಉಪ್ಪು ಸೇರಿಸಿ... ಏನು ಉಪ್ಪಾ? ಎಂದು ಅಚ್ಚರಿಗೊಳಗಾಗಬೇಡಿ, ಉಪ್ಪು ಹಾಕಿದ ಟೀ ಕುಡಿದರೆ ದೇಹಕ್ಕೆ ತುಂಬಾನೇ ಆರೋಗ್ಯಕರ ಗುಣಗಳಿವೆ ಗೊತ್ತಾ? ಬನ್ನಿ ಆ ಗುಣಗಳ ಬಗ್ಗೆ ನೋಡೋಣ:

ಕೆಲವರ ದಿನಚರಿ ಪ್ರಾರಂಭವಾಗುವುದೇ ಟೀಯಿಂದ
ಕೆಲವರಿಗೆ ಟೀ ಕುಡಿಯದಿದ್ದರೆ ಕೈ ಕಾಲೇ ಆಡಲ್ಲ, ಮೊದಲು ಟೀ ಕುಡಿಯಬೇಕು, ನಂತರವಷ್ಟೇ ಇತರ ಕೆಲಸಗಳ ಕಡೆ ಗಮನಹರಿಸುವುದು, ಇನ್ನು ಕೆಲವರು ತಮ್ಮ ಕೆಲಸದ ನಡುವೆ ಆಗಾಗ ಟೀ ಕುಡಿಯುವ ಅಭ್ಯಾಸ ಹೊಂದಿರುತ್ತಾರೆ. ಟೀಯನ್ನು ಹಲವು ರೀತಿ ಮಾಡಬಹುದು. ಮಸಾಲೆ ಟೀ, ಗ್ರೀನ್ ಟೀ, ಬ್ಲ್ಯಾಕ್ ಟೀ ಹೀಗೆ ಹಲವು ರುಚಿಯಲ್ಲಿ ಮಾಡಿ ಸವಿಯಬಹುದು.
ಆದರೆ ಇನ್ಮುಂದೆ ಟೀಗೆ ಸ್ವಲ್ಪ ಉಪ್ಪು ಹಾಕಿ ಸೇವಿಸಿ
ಕೇಳಿದಾಗ ಸ್ವಲ್ಪ ವಿಚಿತ್ರ ಅನಿಸಬಹುದು, ಆದರೆ ಟೀಗೆ ಸ್ವಲ್ಪ ಉಪ್ಪು ಹಾಕಿ ಸೇವಿಸಿದರೆ ಒಳ್ಳೆಯದು. ಕಾಶ್ಮೀರದಲ್ಲಿ, ಚೀನಾದಲ್ಲಿ ಈ ರೀತಿಯ ಟೀ ತಯಾರಿಸುತ್ತಾರೆ. ಏಕೆಂದರೆ ಟೀಗೆ ಉಪ್ಪು ಹಾಕಿ ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.
ಟೀಗೆ ಉಪ್ಪು ಸೇರಿಸಿದಾಗ ಏನಾಗುತ್ತದೆ?
ಟೀಗೆ ಉಪ್ಪು ಸೇರಿಸಿದಾಗ ರುಚಿ ಹೇಗಿರುತ್ತದೆ ಎಂದು ನಿಮಗೆ ಅನಿಸುತ್ತಿರಬಹುದು, ಆದರೆ ರುಚಿ ಚೆನ್ನಾಗಿರುತ್ತದೆ, ಸಕ್ಕರೆ ಹಾಕಿದಂತೆ ಬಳಸುವುದಿಲ್ಲ ಅಲ್ವಾ, ಚಿಟಿಕೆಯಷ್ಟು ಉಪ್ಪು ಟೀಗೆ ರುಚಿ ಹೆಚ್ಚಿಸುತ್ತದೆ. ಮೊದಲು ನೀವು ಮಾಮೂಲಿ ಟೀ ಮಾಡುವ ರೀತಿಯಲ್ಲಿ ತಯಾರಿಸಿ. ನಂತರ ಕುಡಿಯುವಾಗ ಚಿಟಿಕೆಯಷ್ಟು ಉಪ್ಪು ಸೇರಿಸಿ.
ಟೀಗೆ ಉಪ್ಪು ಹಾಕುವುದರಿಂದ ದೊರೆಯುವ ಪ್ರಯೋಜನಗಳು
- ಟೀಗೆ ಉಪ್ಪು ಸೇರಿಸುವುದರಿಂದ ಎಲೆಕ್ಟ್ರೋಲೈಟ್ಸ್ ಮತ್ತು ದ್ರವಾಂಶ ಕಾಪಾಡುತ್ತದೆ, ಅಲ್ಲದೆ ದೇಹದಲ್ಲಿ ಆಮ್ಲೀಯತೆ ಸಮತೋಲನದಲ್ಲಿಡಲು ಸಹಕಾರಿಯಾಗಿದೆ.
- ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ
- ಗಂಟಲು ಕೆರೆತ ಬಗೆಯ ಸಮಸ್ಯೆ ಬಾರದಂತೆ ತಡೆಗಟ್ಟುತ್ತದೆ, ನೀವು ಉಪ್ಪು ಹಾಕಿದ ಟೀ ದಿನದಲ್ಲಿ ಎರಡು ಲೋಟ ಕುಡಿಯಿರಿ.
- ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯಲು ಸಹಕಾರಿ
- ಇನ್ನು ಮೈಗ್ರೇನ್ ಸಮಸ್ಯೆ ಇರುವವರು ಈ ರೀತಿ ಉಪ್ಪು ಹಾಕಿದ ಟೀ ಕುಡಿಯುವುದು ತುಂಬಾ ಒಳ್ಳೆಯದಂತೆ.
- ಉಪ್ಪು ಹಾಕಿದ ಟೀ ಕುಡಿಯುವುದರಿಂದ ಮುಖದಲ್ಲಿ ಮೊಡವೆ ಸಮಸ್ಯೆ ಕಡಿಮೆಯಾಗುವುದು.
- ಉಪ್ಪು ಹಾಕಿದ ಟೀ ಕುಡಿಯುವುದರಿಂದ ನರಗಳಿಗೆ ಹಾನಿಯಾಗಿದ್ದರೆ ಅದು ಸರಿಯಾಗುತ್ತದೆ.
- ಮಾನಸಿಕ ಒತ್ತಡ ಕಡಿಮೆ ಮಾಡಲು ಕೂಡ ಈ ಟೀ ಸಹ ಸಹಕಾರಿ, ಮಾನಸಿಕ ಒತ್ತಡ ಕಡಿಮೆಯಾದರೆ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
- ಉಪ್ಪು ಟೀಯಲ್ಲಿ ಹಾಕಿ ಕುಡಿಯುವುದರಿಂದ ತುಂಬಾ ಸಮಯದವರೆಗೆ ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ.
- ಟೀಯಲ್ಲಿರುವ ಪ್ರಯೋಜನಗಳು
ರಕ್ತದೊತ್ತಡ ಸಮತೋಲನದಲ್ಲಿಡಲು ಸಹಕಾರಿ
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ
ಹೊಟ್ಟೆಯ ಆರೋಗ್ಯಕ್ಕೆ ಒಳ್ಳೆಯದು
ಕ್ಯಾನ್ಸರ್ ಕಣಗಳು ಉಂಟಾಗುವುದನ್ನು ತಡೆಗಟ್ಟುತ್ತದೆ
ಮಾನಸಿಕ ಒತ್ತಡ ಕಡಿಮೆಯಾಗುವುದು
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು.
ಟೀ ವಿಧಗಳು
ಹರ್ಬಲ್ ಟೀ: ಗಿಡಮೂಲಿಕೆ ಹಾಕಿ ಮಾಡುವ ಟೀ
ಮಸಾಲೆ ಟೀ: ಚಕ್ಕೆ, ಲವಗ, ಏಲಕ್ಕಿ, ಶುಂಠಿ ಹೀಗೆ ಮಸಾಲೆ ಹಾಕಿ ಮಾಡುವ ಟೀ
ನಾರ್ಮಲ್ ಟೀ: ಹಾಲು ಹಾಕಿ ಮಾಡುವ ಟೀ
ಬ್ಲ್ಯಾಕ್ ಟೀ: ಹಾಲು ಬಳಸದೆ ಮಾಡುವ ಟೀ
ಪುದೀನಾ ಟೀ: ಪುದೀನಾ ಹಾಕಿ ಮಾಡುವ ಟೀ
ಊಲಾಂಗ್ ಟೀ
ನೀವು ಟೀಯನ್ನು ಸೇವಿಸುವುದು ಒಳ್ಳೆಯದು, ಆದರೆ ಅತಿ ಹೆಚ್ಚು ಟೀ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ, ಅಲ್ಲದೆ ಟೀಗೆ ಸಕ್ಕರೆ ಬದಲಿಗೆ ಹಾಗೆ ಸೇವಿಸಿ ಅಥವಾ ಬೆಲ್ಲ ಬಳಸಬಹುದು, ಇದರಿಂದ ಆರೋಗ್ಯಕ್ಕೆ ಒಳ್ಳೆಯದು
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications