Latest Updates
-
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು? -
ಭಾರತ-ಪಾಕಿಸ್ತಾನ ಹೈ-ವೋಲ್ಟೇಜ್ ಕದನ: ನಾಳೆ ದುಬೈನಲ್ಲಿ ಗೆಲ್ಲೋರು ಯಾರು? -
ಜನ್ಮಾಷ್ಟಮಿ ಉಪವಾಸ: ಸುಸ್ತಾಗದೆ, ಆರೋಗ್ಯಕರವಾಗಿ ವ್ರತ ಆಚರಿಸಲು ಇಲ್ಲಿವೆ ಸರಳ ಟಿಪ್ಸ್!
ಅಂಡರ್‌ವೇರ್ ಎಷ್ಟು ಗಂಟೆಗಳಿಗೊಮ್ಮೆ ಬದಲಾಯಿಸಬೇಕು? ಪುರುಷರೇ, ಮಹಿಳೆಯರೇ ಒಳಉಡುಪಿನ ವಿಷಯದಲ್ಲಿ ನಿರ್ಲಕ್ಷ್ಯ ಬೇಡ
ಅಂಡರ್‌ವೇರ್ ಎಷ್ಟು ಸಮಯಕ್ಕೊಮ್ಮೆ ಬದಲಾಯಿಸಬೇಕು ಗೊತ್ತೇ? ಪುರುಷರು ಒಂದು ದಿನಕ್ಕಿಂತ ಹೆಚ್ಚು ಸಮಯ ಒಂದೇ ಅಂಡರ್‌ವೇರ್ ಬಳಸಬಹುದೇ? ಮಹಿಳೆಯರು ಒಂದೇ ಅಂಡರ್‌ವೇರ್ ಹೆಚ್ಚು ಸಮಯ ಬಳಸಿದರೆ ಏನಾಗುತ್ತೆ ಎಂದು ನೋಡೋಣ ಬನ್ನಿ:
ಪುರುಷರ ಆರೋಗ್ಯ
ಪುರುಷರು ಅಂಡರ್‌ವೇರ್ ಒಂದು ದಿನ ಬಿಟ್ಟು ಬದಲಾಯಿಸಿದರೂ ತೊಂದರೆಯಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಭಾರತದ ಚರ್ಮ ರೋಗ ತಜ್ಞೆಯಾದ ಡಾ. ಅಂಜು ಮೇತಿ ಡೈಲಿ ಮೇಲ್‌ನೊಂದಿಗೆ ಈ ಮಾಹಿತಿ ಹೇಳಿರುವುದಾಗಿ ಅದು ವರದಿ ಮಾಡಿದೆ.

ಸಡಿಲವಾದ ಅಂಡರ್‌ವೇರ್ ಧರಿಸಿದರೆ ಅಂದರೆ ಬಾಕ್ಸರ್ ರೀತಿಯ ಅಂಡರ್‌ವೇರ್ ಧರಿಸಿದರೆ ಒಂದು ದಿನಕ್ಕಿಂತ ಅಧಿಕ ಸಮಯ ಬಳಸಬಹುದು. ಗುಣಮಟ್ಟದ ಅಂಡರ್‌ವೇರ್ ಬ್ಯಾಕ್ಟಿರಿಯಾ ಅಥವಾ ಯೀಸ್ಟ್ ಸೋಂಕು ಉತ್ಪತ್ತಿಯನ್ನು ಒಂದೇ ದಿನದಲ್ಲಿ ಮಾಡುವುದಿಲ್ಲ ಎಂಬುವುದು ತಜ್ಞರ ಅಭಿಪ್ರಾಯವಾಗಿದೆ.
ಜೂನ್‌ನಲ್ಲಿ ಈ ಕುರಿತು ಜನರಲ್ಲಿ ಸರ್ವೇ ಮಾಡಲಾಯ್ತು, ಈ ಸರ್ವೇಯಲ್ಲಿ 1500 ಪುರುಷರು ಭಾಗವಹಿಸಿದ್ದರು, ಅವರಲ್ಲಿ ಶೇ. 47ರಷ್ಟು ಪುರುಷರು ಒಂದು ದಿನಕ್ಕಿಂತ ಹೆಚ್ಚು ಸಮಯ ಧರಿಸಿದ ಅಂಡರ್‌ವೇರ್‌ನಲ್ಲಿಯೇ ಇರಲ್ಲ, ಬದಲಾಯಿಸುತ್ತೇವೆ ಎಂದು ಹೇಳಿದ್ದಾರೆ. ಶೇ. 36ರಷ್ಟು ಪುರುಷರು ಒಂದು ದಿನಕ್ಕಿಂತ ಹೆಚ್ಚಿನ ಸಮಯ ಬಳಸುತ್ತೇವೆ ಎಂದು ಹೇಳಿದ್ದಾರೆ.
ಅಂಡರ್‌ವೇರ್ ಚೆನ್ನಾಗಿ ತೊಳೆದು, ಒಣಗಿಸಿ ಬಳಸಬೇಕು, ತೊಳೆಯದೆ ಬಳಸಿದರೆ ಆ ಭಾಗದಲ್ಲಿ ತುರಿಕೆ ಕಂಡು ಬರುವುದು.
ಪುರುಷರು ಯಾವ ಬಗೆಯ ಅಂಡರ್‌ವೇರ್ ಬಳಸುವುದು ಒಳ್ಳೆಯದು?
* ಸಡಿಲವಾದ ಅಂಡರ್‌ವೇರ್: ಬಿಗಿಯಾದ ಅಂಡರ್‌ವೇರ್ ವೀರ್ಯಾಣುಗಳ ಸಂಖ್ಯೆ ಕುಗ್ಗಿಸುತ್ತದೆ, ಆದ್ದರಿಂದ ಬಿಗಿಯಾದ ಅಂಡರ್‌ವೇರ್ ಧರಿಸಬೇಡಿ
* ಬಾಕ್ಸರ್ ಅಥವಾ ಬ್ರೀಫ್ಸ್ ಮಾದರಿಯ ಅಂಡರ್‌ವೇರ್ ಒಳ್ಳೆಯದು
* ಕಾಟನ್ ಬಟ್ಟೆ ಒಳ್ಳೆಯದು
ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಗಳು
ಮಹಿಳೆಯರು ಒಂದು ದಿನಕ್ಕಿಂತ ಹೆಚ್ಚಿನ ಸಮಯ ಒಂದೇ ಅಂಡರ್‌ವೇರ್ ಧರಿಸಿದರೆ ಅವರಿಗೆ ಸೋಂಕು, ತುರಿಕೆ ಈ ಬಗೆಯ ಸಮಸ್ಯೆ ಕಂಡು ಬರುವುದು. ಅಂಡರ್‌ವೇರ್‌ನಲ್ಲಿ ಬೇಡದ ಬ್ಯಾಕ್ಟಿರಿಯಾ, ಯೀಸ್ಟ್ ಹೆಚ್ಚಾಗಿ ದುರ್ವಾಸನೆ ಹಾಗೂ ತುರಿಕೆ ಕಂಡು ಬರುವುದು.
ಜನನೇಂದ್ರೀಯದಲ್ಲಿ ಸೋಂಕು ಉಂಟಾದರೆ ಹಳದಿ ಬಣ್ಣದ ಬಿಳುಪು ಹೋಗುವುದು, ಇದು ತುಂಬಾನೇ ದುರ್ವಾಸನೆ ಬೀರುವುದು. ದಿನದಲ್ಲಿ ಎರಡು ಬಾರಿ ಅಂಡರ್‌ವೇರ್ ಬದಲಾಯಿಸುವುದು ಒಳ್ಳೆಯದು, ಕನಿಷ್ಠವೆಂದರೆ ದಿನದಲ್ಲಿ ಒಂದು ಬಾರಿಯಾದರೂ ಅಂಡರ್‌ವೇರ್ ಬದಲಾಯಿಸಿ.
ಮಹಿಳೆಯರು ಅಂಡರ್‌ವೇರ್ ಬಗ್ಗೆ ಗಮನಹರಿಸಬೇಕಾದ ಅಂಶಗಳು
* ಕಾಟನ್ ಅಂಡರ್‌ವೇರ್ ಬಳಸಿ
* ತುಂಬಾ ಬಿಗಿಯಾದ ಅಂಡರ್‌ವೇರ್ ಧರಿಸಬೇಡಿ.
* ದಿನಾ ಅಂಡರ್‌ವೇರ್ ಬದಲಾಯಿಸಿ
* ಅಂಡರ್‌ವೇರ್ ದಿನಾ ತೊಳೆದು ಚೆನ್ನಾಗಿ ಒಣಗಿಸಿ
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications