Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮದುವೆಯಾದವರಲ್ಲಿ ರಕ್ತದೊತ್ತಡ ಹೆಚ್ಚಾಗುವುದೇಕೆ ಗೊತ್ತಾ? ನೀವು ಊಹಿಸಿರುವ ಕಾರಣವಂತೂ ಅಲ್ವೇ ಅಲ್ಲ?
ಮದುವೆಯ ಮೊದಲು ಹಾಗೂ ಮದುವೆಯ ನಂತರ ಜೀವನ ಹೇಗಿರಲಿದೆ ಎಂದು ಹಲವಾರು ಮೀಮ್ಸ್ ಬರುತ್ತದೆ, ತಮಾಷೆಯಾಗಿ ಹಲವಾರು ವಿಚಾರಗಳನ್ನು ಹೇಳುತ್ತಾರೆ, ಅದರಲ್ಲೂ ಮದುವೆಯಾದ ಸ್ವತಂತ್ರ್ಯ ಹೋಯ್ತು, ಬ್ಲಡ್ ಪ್ರೆಷರ್ ಅಂದರೆ ರಕ್ತದೊತ್ತಡ ಹೆಚ್ಚಾಯ್ತು, ಮದುವೆಯಾಗಿದ್ದೆ ಟೆನ್ಷನ್ ಶುರು ಎಂಬೆಲ್ಲಾ ತಮಾಷೆಯ ಮಾತುಗಳನ್ನು ಕೇಳಿರುತ್ತೀರಿ.
ಮದುವೆಯಾದ ಬಳಿಕ ರಕ್ತದೊತ್ತಡ ಹೆಚ್ಚಾಗುವುದು ನಿಜ ಎಂಬುವುದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ, ಆದರೆ ಕಾರಣ ಮಾತ್ರ ನೀವು ಊಹಿಸಿದ್ದು ಅಲ್ವೇ ಅಲ್ಲ, ಮತ್ತೇನು? ನೋಡೋಣ ಬನ್ನಿ:

ದಂಪತಿಗಳಲ್ಲಿ ಇಬ್ಬರಲ್ಲೂ ರಕ್ತದೊತ್ತಡ ಸಮಸ್ಯೆ ಕಂಡು ಬರುತ್ತಿದೆ
ನೀವು ಗಮನಿಸಿರಬಹುದು ಮನೆಯಲ್ಲಿ ಈ ರಕ್ತದೊತ್ತಡ ಎಂಬುವುದು ಅಪ್ಪ-ಅಮ್ಮ ಇಬ್ಬರಲ್ಲೂ ಕಂಡು ಬರುತ್ತದೆ. ಬಹುತೇಕ ಕುಟುಂಬಗಳಲ್ಲಿ ಹೀಗೆಯೇ ಇದೆ. ಇಬ್ಬರಲ್ಲೂ ರಕ್ತದೊತ್ತಡ ಸಮಸ್ಯೆ ಕಂಡು ಬರುವುದು ಅಥವಾ ಒಬ್ಬರಿಗೆ ಬಂದ ಸ್ವಲ್ಪ ದಿನಗಳಲ್ಲಿ ಮತ್ತೊಬ್ಬರಿಗೆ ಬರುತ್ತದೆ.
ದಂಪತಿಗಳಲ್ಲಿ ರಕ್ತದೊತ್ತಡ ಹೆಚ್ಚಾಗಲು ಕಾರಣವೇನು?
ದಂಪತಿಗಳು ತುಂಬಾ ಸಮಯದಿಂದ ಜೊತೆಗೆ ಬದುಕಿದಾಗ ಅವರಿಬ್ಬರ ಜೀವನಶೈಲಿ ಕೂಡ ಬಹುತೇಕ ಕೂಡ ಒಂದೇ ಇರುತ್ತದೆ. ಅಲ್ಲದೆ ಅವರು ಜೀವನದಲ್ಲಿ ಎದುರಿಸುವ ಸಮಸ್ಯೆಗಳು, ಸವಾಲುಗಳು ಎಲ್ಲವನ್ನು ಇಬ್ಬರೂ ಎದುರಿಸಿರುತ್ತಾರೆ. ಆಹಾರಶೈಲಿ ಕೂಡ ಒಂದೇ ರೀತಿ ಇರುತ್ತದೆ. ಹೀಗಾಗಿ ಅವರ ಜೀವನಶೈಲಿಯಿಂದಾಗಿ ಗಂಡ- ಹೆಂಡತಿ ಇಬ್ಬರಲ್ಲೂ ರಕ್ತದೊತ್ತಡ ಸಮಸ್ಯೆ ಸಾಮಾನ್ಯವಾಗಿದೆ.
ಚೀನಾ, ಭಾರತದಲ್ಲಿ ದಂಪತಿಗಳ ಆರೋಗ್ಯ ಪರಸ್ಪರ ಪ್ರಭಾವ ಬೀರುವುದು
ಚೀನಾ, ಭಾರತದಲ್ಲಿ ಕೂಡು ಕುಟುಂಬದಲ್ಲಿ ಜೀವಿಸುತ್ತೇವೆ. ಆದ್ದರಿಂದ ದಂಪತಿ ಒಬ್ಬರನ್ನೊಬ್ಬರ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಇಬ್ಬರು ಜೊತೆಯಾಗಿ ಜೀವನವನ್ನು ನಡೆಸುವಾಗ ಅವರ ಜೀವನಶೈಲಿ ಬಹುತೇಕ ಒಂದೇ ರೀತಿ ಇರುತ್ತದೆ. ಹೀಗಾಗಿ ರಕ್ತದೊತ್ತಡ ಸಮಸ್ಯೆ ಮಧ್ಯವಯಸ್ಸು ದಾಟಿದ ಮೇಲೆ ಇಬ್ಬರಲ್ಲೂ ಕಂಡು ಬರುತ್ತದೆ.
ರಕ್ತದೊತ್ತಡ ನಿಯಂತ್ರಿಸುವುದು ಹೇಗೆ?
ರಕ್ತದೊತ್ತಡ ತುಂಬಾ ಅಪಾಯಕಾರಿ, ಅಧಿಕ ರಕ್ತದೊತ್ತಡ ಹೃದಯ ಸಂಬಂಧಿ ಸಮಸ್ಯೆ ತರುತ್ತದೆ, ಪಾರ್ಶ್ವವಾಯು ಮಾಡುತ್ತದೆ, ಆದ್ದರಿಂದ ರಕ್ತದೊತ್ತಡ ನಿಯಂತ್ರಿಸುವುದು ತುಂಬಾ ಮುಖ್ಯ.
ರಕ್ತದೊತ್ತಡ ನಿಯಂತ್ರಿಸಲು ಏನು ಮಾಡಬೇಕು?
ರಕ್ತದೊತ್ತಡ ನಿಯಂತ್ರಿಸಲು ಪ್ರಮುಖವಾಗಿ ಏನು ಮಾಡಬೇಕೆಂದರೆ ಆರೋಗ್ಯಕರ ಜೀವನಶೈಲಿ ಕಡೆ ಹೆಚ್ಚಾಗಿ ಗಮನಕೊಡಬೇಕು.
* ಅತ್ಯಧಿಕ ಮೈ ತೂಕವಿದ್ದರೆ ಕಡಿಮೆ ಮಾಡಿಕೊಳ್ಳಬೇಕು
ನಿಮಗೆ ಅತ್ಯಧಿಕ ಮೈ ತೂಕ ಹೊಂದಿದ್ದರೆ ನೀವು ಮೈ ತೂಕವನ್ನು ಕಡಿಮೆ ಮಾಡಬೇಕು. ಮೈ ತೂಕ ಕಡಿಮೆ ಮಾಡುವುದು ಆರೋಗ್ಯಕರ ಮೈಕಟ್ಟು ಹೊಂದಲು ಪ್ರಮುಖ ಹೆಜ್ಜೆಯಾಗಿದೆ.
* ಪ್ರತಿದಿನ ವ್ಯಾಯಾಮ ಮಾಡಿ
ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡಬೇಕು. ಪ್ರತಿದಿನ ವ್ಯಾಯಾಮ ಮಾಡುವುದು ಬರೀ ರಕ್ತದೊತ್ತಡ ನಿಯಂತ್ರಿಸಲು ಮಾತ್ರವಲ್ಲ ಒಟ್ಟು ಮೊತ್ತ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ನಿಮಗೆ ಇಷ್ಟವಾದ ವ್ಯಾಯಾಮ ಮಾಡಿ.
* ಆರೋಗ್ಯಕರ ಡಯಟ್ ಪಾಲಿಸಿ
ರಕ್ತದೊತ್ತಡ ಕಡಿಮೆ ಮಾಡಲು ಉಪ್ಪಿನಂಶ ತುಂಬಾ ಅಧಿಕವಿರುವ ಆಹಾರಗಳನ್ನು ಸೇವಿಸಬೇಡಿ. ಸೋಡಿಯಂ ಆಹಾರಕ್ಕಿಂತ ಪೊಟಾಷ್ಯಿಯಂ ಇರುವ ಆಹಾರ ಸೇವಿಸಿ.
* ಅಲ್ಲದೆ ಟೇಬಲ್ ಸಾಲ್ಟ್ ಬಳಸಲೇಬೇಡಿ.
* ಅಡುಗೆ ಮಾಡುವಾಗ ಸ್ವಲ್ಪ ಉಪ್ಪು ಬಳಸಿ.
* ಚೆನ್ನಾಗಿ ನಿದ್ದೆ ಮಾಡಿ
ಅತಿ ಕಡಿಮೆ ನಿದ್ದೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ, ಆದ್ದರಿಂದ ದಿನದಲ್ಲಿ 8 ಗಂಟೆ ನಿದ್ದೆ ಮಾಡಿ.
ಧ್ಯಾನ ಮಾಡಿ
ತುಂಬಾ ಮುಖ್ಯವಾಗಿ ನೀವು ಧ್ಯಾನ ಮಾಡಬೇಕು. ಧ್ಯಾನ ಎಂದರೆ ನಿಮ್ಮ ಇಷ್ಟದ ದೇವರನ್ನು ಪ್ರಾರ್ಥನೆ ಮಾಡುವುದು ಆಗಿರಬಹುದು. ಧ್ಯಾನ ಮಾಡುವುದರಿಂದ ಮಾನಸಿಕ ಒತ್ತಡಗಳು ದೂರಾಗುವುದು. ಇದರಿಂದ ರಕ್ತದೊತ್ತಡ ಸಮಸ್ಯೆ ಬಾರದಂತೆ ತಡೆಗಟ್ಟಬಹುದು.
ತುಂಬಾ ಗೊಂದಲಕ್ಕೆ ಒಳಗಾಗಬೇಡಿ
ನಿಮ್ಮ ಕೆಲಸ ಕಾರ್ಯಗಳನ್ನು ಮುಂಚಿತವಾಗಿ ಪ್ಲ್ಯಾನ್ ಮಾಡಿದರೆ ಅದು ಸಾಕಷ್ಟು ಮಾನಸಿಕ ಒತ್ತಡ ಕಡಿಮೆ ಮಾಡುವುದು.
ಮಾನಸಿಕ ಒತ್ತಡ ಅಧಿಕ ಮಾಡುವ ವಿಷಯಗಳಿಂದ ದೂರವಿರಿ: ಕೆಲವೊಂದು ವಿಚಾರಗಳು ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ ಎಂದು ಚೆನ್ನಾಗಿ ಗೊತ್ತಿರುತ್ತದೆ, ಅಂಥ ವಿಷಯಗಳಿಂದ ದೂರವಿರಿ.
ವಿಶ್ರಾಂತಿ ಕಡೆಗೂ ಗಮನ ನೀಡಿ. ಈ ಬಗೆಯ ಜೀವನ ಶೈಲಿ ನಿಮ್ಮ ಆರೋಗ್ಯ ಹೆಚ್ಚಿಸುತ್ತದೆ....
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications