Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹೊಸ ವರ್ಷಕ್ಕೆ ವೇಯ್ಟ್‌ಲಾಸ್ ರೆಸ್ಯೂಲೇಷನ್ ಇದೆಯೇ? ಈ 5 ಸೂತ್ರ ಪಾಲಿಸಿದರೆ ಮಾತ್ರ ಸಕ್ಸಸ್ ಗ್ಯಾರಂಟಿ
ಪ್ರತಿವರ್ಷ ಹೊಸ ವರ್ಷ ಬರುವಾಗ ಬಹುತೇಕರ ನ್ಯೂ ಇಯರ್ ರೆಸ್ಯೂಲೇಷನ್‌ಗಳಲ್ಲಿ ಒಂದಾಗಿರುತ್ತೆ ಮೈ ತೂಕ ಕಡಿಮೆ ಮಾಡುವುದು. ಜನವರಿ 1ರಿಂದ ವರ್ಕೌಟ್ ಮಾಡ್ತೀನಿ, ಡಯಟ್ ಮಾಡ್ತೀನಿ, ತೂಕ ಇಳಿಕೆ ಮಾಡ್ತೀನಿ ಎಂದೆಲ್ಲಾ ಯೋಚಿಸುತ್ತಾರೆ. ಜನವರಿ 1ರಿಂದ ಜೋಶ್‌ನಿಂದ ವರ್ಕೌಟ್ ಮಾಡಲಾರಂಭಿಸುತ್ತಾರೆ, ದಿನಗಳು ಉರುಳಿದಂತೆ ಆ ಜೋಶ್ ಕಡಿಮೆಯಾಗುವುದು, ತೂಕ ಇಳಿಕೆಯ ರೆಸ್ಯೂಲೇಷನ್ ಮುಂದಿನ ವರ್ಷಕ್ಕೆ ಮುಂದುವರೆಯುವುದು.
ಆದರೆ ಈ ವರ್ಷ ಮೈ ತೂಕ ಕಡಿಮೆಯಾಗಲೇಬೇಕು, ಕಡಿಮೆ ಮಾಡಿಯೇ ಮಾಡುವೆ ಎಂಬ ದೃಢ ನಿರ್ಧಾರ ಮಾಡಿದವರಿಗೆ ಈ ಟಿಪ್ಸ್ ಸಹಕಾರಿಯಾಗಿದೆ:

ಮೊದಲು ನಿಮ್ಮ ಮನಸ್ಸು ಸಿದ್ಧ ಪಡಿಸಿ
ಹೌದು ತೂಕ ಇಳಿಕೆಗೆ ಧೃಢ ನಿರ್ಧಾರ ತುಂಬಾನೇ ಮುಖ್ಯ. ಒಮ್ಮೆ ಸ್ಟಾರ್ಟ್ ಮಾಡಿದರೆ ನಮ್ಮ ಗುರಿ
ಮುಟ್ಟುವವರೆಗೆ ನಿರಂತರವಾಗಿ ಪ್ರಯತ್ನಿಸುತ್ತಲೇ ಇರಬೇಕು. ನನಗೆ ನನ್ನ ಆಹಾರಶೈಲಿ, ಜೀವನಶೈಲಿ ಬದಲಾಯಿಸಲು ಸಾಧ್ಯವೇ ಎಂದು ನಿಮ್ಮನ್ನು ನೀವು ಪ್ರಶ್ನಿಸಿ. ಇನ್ನು ತೂಕ ಇಳಿಕೆಗೆ ನೀವು ಮೊದಲು ಮಾಡಬೇಕಾಗಿರುವುದು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳುವುದು. ಮಾನಸಿಕ ಒತ್ತಡ ಕಡಿಮೆ ಮಾಡುವತ್ತ ಗಮನಹರಿಸಬೇಕು, ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳದೆ ನೀವು ತೂಕ ನಿಯಂತ್ರಣ ಮಾಡಲು ಸಾಧ್ಯವಿಲ್ಲ.
ಬೇರೆಯವರು ನಿಮ್ಮನ್ನು ಬದಲಾಯಿಸುತ್ತಾರೆ ಎಂದು ಕಾಯಬೇಡಿ
ಬೇರೆಯವರು ನಿಮ್ಮ ಡಯಟ್ ಗಮನಿಸಬೇಕು ಅಂದ್ರೆ ಮನೆಯಲ್ಲಿರುವರು ನಿಮಗೆ ತೂಕ ನಿಯಂತ್ರಣಕ್ಕೆ ಸಹಾಯವಾಗುವ ಆಹಾರ ನೀಡಬೇಕು, ಒಬ್ಬರೇ ವರ್ಕೌಟ್ ಮಾಡಲು ಬೋರ್ ಎಂದೆಲ್ಲಾ ಯೋಚಿಸುತ್ತಿದ್ದರೆ ತೂಕ ಇಳಿಕೆ ಮಾಡಲು ಸಾಧ್ಯವಾ ಗಲ್ಲ, ತುಂಬಾ ಜನ ಈ ತಪ್ಪು ಮಾಡ್ತಾರೆ. ಕೆಲ ದಿನ ಫ್ರೆಂಡ್ಸ್ ಜೊತೆ ವರ್ಕೌಟ್ ಮಾಡಲು ಜಿಮ್‌ಗೆ ಹೋಗ್ತಾರೆ, ನಂತರ ಅವರು ಬರುವುದು ನಿಲ್ಲಿಸಿದರೆ ಇವರು ಕೂಡ ತಮ್ಮ ವರ್ಕೌಟ್ ನಿಲ್ಲಿಸಿ ಬಿಡುತ್ತಾರೆ. ಮೈ ತೂಕ ಕಡಿಮೆಯಾಗಬೇಕಾಗಿರುವುದು ನಿಮಗೆ ಹಾಗಾಗಿ ವರ್ಕೌಟ್, ಡಯಟ್ ಕಡೆಗೆ ನೀವು ಹೆಚ್ಚು ಗಮನಹರಿಸಬೇಕು.
ಬೇಗನೆ ತೂಕ ಕಡಿಮೆಯಾಗಬೇಕು ಎಂಬ ಆತುರ ಬೇಡ
ಒಂದು ವಾರದಲ್ಲಿ ತೂಕ ಕಡಿಮೆಯಾಗಬೇಕು, ಒಂದೇ ತಿಂಗಳಿನಲ್ಲಿ ತುಕ ಕಡಿಮೆಯ ಆಗಬೇಕು ಎಂದೆಲ್ಲಾ ಬಯಸುವುದು ತಪ್ಪು, ಅಲ್ಲದೆ ಯಾರಾದರು ಇದರ ಬಗ್ಗೆ ಹೇಳಿದರೆ ನಂಬಲು ಹೋಗಬೇಡಿ, ಮೈ ತೂಕವನ್ನು ಆರೋಗ್ಯಕರವಾಗಿ ಕಡಿಮೆ ಮಾಡಲು ಪ್ರಯತ್ನಿಸಿ. ಮಧಯಮೇಹಿಗಳು ಕೂಡ ಮಧುಮೇಹವನ್ನು ನಿಯಂತ್ರಿಸಲು ಆಹಾರಕ್ರಮ ಹಾಗೂ ವ್ಯಾಯಾಮದ ಮೂಲಕ ಮೈ ತೂಕ ಕಡಿಮೆ ಮಾಡಲು ಪ್ರಯತ್ನಿಸಬೇಕು.
ಆರೋಗ್ಯಕರ ಆಹಾರ ಸೇವಿಸಿ, ಇಷ್ಟದ ಆಹಾರ ಅಪರೂಪಕ್ಕೆ ಸೇವಿಸಿ
ಮೈ ತೂಕ ಕಡಿಮೆಯಗಬೇಕೆಂದರೆ ನೀವು ಆರೋಗ್ಯಕರ ಆಹಾರದ ಕಡೆಗೆ ಗಮನಹರಿಸಬೇಕು ಆದರೆ ನಿಮ್ಮ ಇಷ್ಟದ ಆಹಾರವನ್ನು ಸಂಪೂರ್ಣ ಬಿಡಬೇಕೆಂದಿಲ್ಲ, ಹೋಗೆ ಮಾಡಿದರೆ ಊಟದ ಮೇಲೆ ಬೇರ ಉಂಟಾಗುವುದು. ನಿಮ್ಮ ಒಷ್ಟದ ಆಹಾರವನ್ನು ಅಪರೂಪಕ್ಕೆ ಮಿತಿಯಲ್ಲಿ ಸೇವಿಸುತ್ತಿದ್ದರೆ ತೂಕ ಇಳಿಕೆಯ ಡಯಟ್ ಖುಷಿಯಿಂದ ಮಾಡುತ್ತೀರಿ.
ದೈಹಿಕ ಚಟುವಟಿಕೆ ಮುಖ್ಯ
ವಾರದಲ್ಲಿ 5-6 ದಿನವಾದರೂ ನೀವು ವರ್ಕೌಟ್ ಮಾಡಬೇಕು, ದೈಹಿಕವಾಗಿ ಫಿಟ್ ಆಗಿರಲು ಜಿಮ್, ವಾಕ್, ಜಾಗಿಂಗ್ ಇವೆಲ್ಲಾ ತುಂಬಾನೇ ಸಹಕಾರಿಯಾಗಿದೆ. ತೂಕ ಇಳಿಕೆಗೆ ಜಿಮ್‌ಗೇ ಹೋಗಬೇಕೆಂದಿಲ್ಲ, ನೀವು ನಡೆಯುವ ವ್ಯಾಯಾಮ ಮಾಡಿದರೂ ಸಾಕು, ಇದನ್ನು ಪ್ರಿತಿನಿತ್ಯ ಮಾಡಬೇಕು. ಆದಷ್ಟೂ ತುಂಬಾ ಹೊತ್ತು ಒಂದೇ ಕಡೆ ಕೂರುವುದನ್ನು ತಪ್ಪಿಸಿ, ಆಗಾಗ ಎದ್ದು ಸ್ವಲ್ಪ ಓಡಾಡಿ, ಲಿಫ್ಟ್ ಬದಲಿಗೆ ಸ್ಟೆಪ್ಸ್ ಬಳಸಿ. ಸ್ವಲ್ಪ ದೂರದ ಅಂಗಡಿಗಳಿಗೆ ಹೋಗಲು ನೀವು ಗಾಡಿ ಬಳಸಬೇಡಿ, ನಡೆದುಕೊಂಡು ಹೋಗಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications