Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಫಿಲ್ಟರ್ ನೀರು ಕುಡಿಯುತ್ತೀರಾ..? ಎಚ್ಚರ ಈ ಸಮಸ್ಯೆ ಎದುರಾಗಬಹುದು!
ಕುಡಿಯುವ ನೀರಿನ ವಿಷಯಕ್ಕೆ ಬಂದಾಗ ಎಷ್ಟೊಂದು ಎಚ್ಚರ ವಹಿಸಿದ್ರು ಸಾಲದು ಎಂಬಂತಾಗಿದೆ. ಇತ್ತೀಚಿಗೆ ಪ್ಲಾಸ್ಟಿಕ್ ಬಾಟಲಿಯ ನೀರು ಕುಡಿಯುವುದು ಸಹ ಅನಾರೋಗ್ಯಕ್ಕೆ ಕಾರಣವಾಗುತ್ತಿದೆ ಎಂಬುದು ಅಧ್ಯಯನಗಳಿಂದ ತಿಳಿದುಬಂದಿದೆ. ಹೀಗಾಗಿ ಜನ ಯಾವ ನೀರು ಕುಡಿಯಬೇಕು ಎಂಬ ಗೊಂದಲದಲ್ಲೇ ಇದ್ದಾರೆ. ಅದರಲ್ಲೂ ಕೋವಿಡ್ ನಂತರದ ಸಮಯದಲ್ಲಿ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಪ್ರಮಾಣವು ಹೆಚ್ಚಾಗಿದೆ.
ಇದೇ ಕಾರಣಕ್ಕೆ ಜನ ಕುಡಿಯುವ ನೀರಿಗಾಗಿ ಫಿಲ್ಟರ್‌ಗಳ ಮೊರೆ ಹೋಗುತ್ತಿದ್ದಾರೆ. ಬಹುಕಾಲದಿಂದಲೂ ಫಿಲ್ಟರ್ ಬಳಕೆ ಇದ್ದು, ಹಲವರು ಚಿಕ್ಕ ವಯಸ್ಸಿನಿಂದಲೂ ಫಿಲ್ಟರ್ ನೀರನ್ನೇ ಕುಡಿಯುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಆದರೆ ದೀರ್ಘಾವಧಿಯ ಫಿಲ್ಟರ್ ನೀರು ಸೇವನೆ ಸಹ ಅನಾರೋಗ್ಯ ಸಮಸ್ಯೆಗೆ ದಾರಿಯಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ನೀರು ಬಾಯಾರಿಕೆಯನ್ನು ತಣಿಸುವುದು ಮಾತ್ರವಲ್ಲ, ಎಲ್ಲಾ ಅಂಗಗಳ ಸರಿಯಾದ ಕಾರ್ಯನಿರ್ವಹಣೆ ಮತ್ತು ದೇಹಕ್ಕೆ ಪ್ರಾಥಮಿಕ ಹಂತದಲ್ಲಿ ಶಕ್ತಿ ನೀಡಲು ಮುಖ್ಯವಾಗಿದೆ. ಮತ್ತು ಎಲ್ಲಾ ನೀರು ಕುಡಿಯಲು ಯೋಗ್ಯವಾಗಿಲ್ಲದ ಕಾರಣ, ಕುಡಿಯುವ ಮತ್ತು ಶುದ್ಧೀಕರಣದ ವಿವಿಧ ವಿಧಾನಗಳು ಪ್ರಪಂಚದಾದ್ಯಂತ ಬಳಸಲ್ಪಡುತ್ತಿವೆ
ಈ ವಿಧಾನಗಳು ನೀರನ್ನು ಶುದ್ಧಗೊಳಿಸುತ್ತದೆ ಎಂದು ನೀವು ನಂಬಿದ್ದರೂ ಸಹ, ಅದು ಯಾವಾಗಲೂ ಅಲ್ಲ. ತಜ್ಞರ ಪ್ರಕಾರ, ಶುದ್ಧೀಕರಿಸಿದ, ಫಿಲ್ಟರ್ ಮಾಡಿದ ನೀರು ನಿಮಗೆ ಕೆಟ್ಟದ್ದಾಗಿರಲು ಹಲವಾರು ಕಾರಣಗಳಿವೆ.

RO ಶುದ್ಧೀಕರಿಸಿದ ನೀರು ಆರೋಗ್ಯಕ್ಕೆ ಏಕೆ ಕೆಟ್ಟದು?
ಶುದ್ಧೀಕರಿಸಿದ ನೀರಿನ ಮುಖ್ಯ ಸಮಸ್ಯೆಯೆಂದರೆ ಅದು ತುಂಬಾ ಸ್ವಚ್ಛವಾಗಿರುವುದು. ಹೌದು ನೀರು ತುಂಬಾ ಸ್ವಚ್ಛವಾಗಿದ್ದರೆ ಅದು ಒಳ್ಳೆಯ ಮತ್ತು ಕುಡಿಯಲು ಯೋಗ್ಯವಾಗಿದೆ ಎಂದು ತಿಳಿಯುವವರೇ ಹೆಚ್ಚು. ಆದರೆ ನಿಮಗೆ ಗೊತ್ತಿಲ್ಲದ ವಿಚಾರ ಎಂದರೆ ಅತ್ಯಂತ ಪರಿಶುದ್ಧವಾದ ನೀರು ನಿಮಗೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಏಕೆಂದರೆ ಈ ಪರಿಶುದ್ಧ ನೀರಿನಲ್ಲಿ ಅಗತ್ಯವಾಗಿ ಇರಬೇಕಾದ ಖನಿಜಗಳೇ ಇಲ್ಲದಿರುವುದು.
ಶುದ್ಧೀಕರಿಸಿದ ನೀರಿನಲ್ಲಿ ಬಹಳಷ್ಟು ವಿಷಕಾರಿ ಅಂಶಗಳು ಮತ್ತು ಲೋಹಗಳು ಇದ್ದರೂ ಸಹ ಅದು ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್ನಂತಹ ಖನಿಜಗಳಿಂದ ತುಂಬಿರುತ್ತದೆ. ಇದು ದೇಹದಲ್ಲಿ ಅತಿಯಾದ ಸೋಡಿಯಂ ಅನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಮೂಳೆಗಳ ಹಾನಿ ಮತ್ತು ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದರೆ ಫಿಲ್ಟರ್ ಮಾಡಿರುವ ನೀರು ಕೆಲವು ಗಂಭೀರ ಅಡ್ಡಪರಿಣಾಮಗಳು ಒಳಗೊಂಡಿರಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಪರಿಶುದ್ಧ ನೀರಿನ ದೀರ್ಘಕಾಲದ ಸಮಸ್ಯೆಗಳು:
- ಸುಸ್ತು
- ದೌರ್ಬಲ್ಯ
- ತಲೆನೋವು
- ತೀವ್ರವಾದ ಸ್ನಾಯು ಸೆಳೆತ
- ದುರ್ಬಲಗೊಂಡ ಹೃದಯ ಬಡಿತ
- ಕ್ಯಾನ್ಸರ್
- ಅಧಿಕ ರಕ್ತದೊತ್ತಡ
- ಗ್ಯಾಸ್ಟ್ರಿಕ್ ಮತ್ತು ಡ್ಯುವೋಡೆನಲ್ ಅಲ್ಸರ್
- ದೀರ್ಘಕಾಲದ ಜಠರದುರಿತ
- ಗಂಟಲು ಊತ
- ಗರ್ಭಾವಸ್ಥೆಯ ತೊಡಕುಗಳು
ಇನ್ನು ಆಹಾರ ತಯಾರಿಕೆಯಲ್ಲಿ ಫಿಲ್ಟರ್ ನೀರು ಬಳಸಿದರೆ ತರಕಾರಿ, ಮಾಂಸ ಮತ್ತು ಇತರ ವಸ್ತುಗಳಲ್ಲಿರುವ ಖನಿಜಾಂಶಗಳ ನಷ್ಟಕ್ಕೂ ಇದು ಕಾರಣವಾಗಲಿದೆಯಂತೆ. ಆದರೆ ನೀವು ಅಡುಗೆಗಾಗಿ ಖನಿಜಯುಕ್ತ ನೀರನ್ನು ಬಳಸಿದಾಗ, ಈ ಅಂಶಗಳ ನಷ್ಟವು ತುಂಬಾ ಕಡಿಮೆ ಎಂದು ವರದಿಯಾಗಿದೆ.
ಫಿಲ್ಟರ್ ಮಾಡಿದ ನೀರಿಗಿಂತ ಇದನ್ನು ಬಳಸಿ
ನೀರನ್ನು ಕುದಿಸಿ ಕುಡಿಯಿರಿ
ತಜ್ಞರ ಪ್ರಕಾರ, ನೀರನ್ನು ಕುದಿಸಿ, ಆರಿಸಿ ಕುಡಿಯಲು ಬಳಸಬೇಕು. ಇದರ ಜೊತೆ ಅಡುಗೆಗೆ ಸೂಕ್ತ ನೀರನ್ನು ಬಳಸಬಹುದು. ಇದು ಫಿಲ್ಟರ್ ನೀರಿಗಿಂತಲೂ ಉತ್ತಮ.
ಅಯೋಡಿನ್
ಒಂದು ಲೀಟರ್ ಶುದ್ಧ ನೀರಿನಲ್ಲಿ ಸುಮಾರು 4-4 ಹನಿಗಳ ಅಯೋಡಿನ್ ಅನ್ನು ಕುಡಿಯಲು ಯೋಗ್ಯವಾಗುವಂತೆ ಸೇರಿಸಬಹುದು. ನೀರಿನ ಉಷ್ಣತೆಯು 21 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದರೆ ಅಯೋಡಿನ್ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅಯೋಡಿನ್ ನೀರಿನಲ್ಲಿರುವ ಕೆಲವು ರೋಗಕಾರಕ ಅಂಶಗಳನ್ನು ನಾಶಮಾಡುವ ಶಕ್ತಿ ಹೊಂದಿದೆ. ಹೀಗಾಗಿ ನೀವು ಬಳಸುವ ನೀರಿನಲ್ಲಿ ಉಪ್ಪಿನ ಅಂಶ ಇದ್ದರೆ ಒಳಿತು. ಆದರೆ ಅತೀಯಾದ ಉಪ್ಪು ಸಹ ದೇಹಕ್ಕೆ ಒಳ್ಳೆಯದಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


