Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮಳೆಗಾಲದಲ್ಲಿ ಕೂದಲು ಉದುರಿದರೆ ಈ ಮೂರು ಕೆಲಸ ಮಾಡಿ..!!
ಕೂದಲು ಉದುರೋದು ಅಂದ್ರೆ ಈ ಸಮಯದ ಅತೀ ದೊಡ್ಡ ಸಮಸ್ಯೆ. ಯುವ ಪೀಳಿಗೆಯಿಂದ ಹಿಡಿದು ಚಿಕ್ಕ ಮಕ್ಕಳಲ್ಲೂ ಇತ್ತೀಚಿಗೆ ಕಾಡುತ್ತಿರುವ ಸಮಸ್ಯೆಯಾಗಿ. 20 ವರ್ಷ ದಾಟುತ್ತಿದ್ದಂತೆ ಹಲವರಿಗೆ ಈ ಕೂದಲು ಉದುರುವಿಕೆ ಕಾಣಿಸಿಕೊಳ್ಳುತ್ತಿದೆ. ಆದ್ರೆ ಕೂದಲು ಉದುರುವಿಕೆಗೆ ಔಷಧಿಯಾಗಿ ನೂರಾರು ಕ್ರೀಮ್‌ಗಳು, ಆಯಿಲ್‌ಗಳು ಮಾರುಕಟ್ಟೆಗೆ ಬಂದಿವೆ. ಆದ್ರೆ ಇದೆಲ್ಲವೂ ಪರಿಹಾರವಾಗಿ ಬಳಕೆಯಾಗುತ್ತಲಿಲ್ಲ. ಸಾವಿರಾರು ರೂಪಾಯಿ ಖರ್ಚು ಮಾಡಿದ್ರೂ ಕೂದಲು ಉದುರುವಿಕೆಗೆ ಕಡಿವಾಣ ಹಾಕಲಾಗುತ್ತಿಲ್ಲ.
ಇನ್ನು ಮಳೆಗಾಲದಲ್ಲಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ತಲೆಗೆ ನೀರು ಬಿದ್ದಾಗ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ನಿಮಗೂ ಸಹ ಈ ರೀತಿ ಅನುಭವವಾಗಿರಬಹುದು. ಮಳೆಗಾಲದಲ್ಲಿ ತಲೆಕೂದಲು ಉದುರುವಿಕೆಯ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ರೆ ಮನೆಯಲ್ಲೇ ಸಿಗುವ ಈ ವಸ್ತುಗಳ ಬಳಸಿ ಮನೆಮದ್ದು ಮಾಡಿದರೆ ಈ ರೀತಿ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಬಹುದು.

ಕೂದಲು ಉದುರುವಿಕೆಗೆ ಆರಂಭದಲ್ಲೇ ಕಡಿವಾಣ ಹಾಕಿದರೆ ಮುಂದೆ ಕೂದಲು ಉದುರಿ ತಲೆ ಬೋಳಾಗವುದನ್ನು ತಡೆಯಬಹುದು. ಒಂದು ವೇಳೆ ನಿರ್ಲಕ್ಷ ಮಾಡಿದರೆ ಅಥವಾ ಚಿಕಿತ್ಸೆ ತಡಮಾಡಿದರೆ ಕೂದಲು ಉದುರುವಿಕೆ ಹೆಚ್ಚಾಗುವ ಜೊತೆಗೆ ಸಂಕಷ್ಟ ಎದುರಿಸಬೇಕಾಗುತ್ತದೆ. ಹಾಗಾದ್ರೆ ಮಳೆಗಾದಲ್ಲಿ ಕೂದಲು ಉದುರುವಿಕೆ ಹೆಚ್ಚಾಗಲು ಕಾರಣವೇನು? ಇದಕ್ಕೆ ಪರಿಹಾರವೇನು ಎಂಬುದನ್ನು ನೋಡೋಣ.
ಸಾಮಾನ್ಯವಾಗಿ ಮಳೆಗಾಲದಲ್ಲಿ 250ಕ್ಕೂ ಹೆಚ್ಚು ಕೂದಲು ಉದುರುವಿಕೆ ಅಪಾಯದ ಮುನ್ಸೂಚನೆ, ಉದುರುತ್ತಿರುವ ಕೂದಲು ಎಣಿಸಲು ಸಾಧ್ಯವಿಲ್ಲ, ಆದ್ರೆ ಕೂದಲು ಬಾಚಿದಾಗ 100ಕ್ಕಿಂತ ಕಡಿಮೆ ಕೂದಲು ಉದುರುವುದು ಸಾಮಾನ್ಯ ಪ್ರಕ್ರಿಯೆ. ಇದು ಒಂದು ಇಡೀ ದಿನದ ಲೆಕ್ಕವಾಗಿದೆ. ಇದು ಪುರುಷರದಲ್ಲಿ ಮತ್ತು ಮಹಿಳೆಯರಲ್ಲಿ ಸಂಖ್ಯೆ ಬದಲಾಗುತ್ತದೆ.
ಮಳೆಗಾಲದಲ್ಲಿ ಹ್ಯುಮಿಡಿಟಿ, ಆರ್ದ್ರತೆ, ತೇವಾಂಶ ಹೆಚ್ಚಾಗಿರುವ ಕಾರಣದಿಂದಾಗಿ ಇದು ನಮ್ಮ ಕೂದಲು ಅಂಶವನ್ನು ಹೀರಿಕೊಳ್ಳುವ ಗುಣ ಹೊಂದಿರುತ್ತದೆ. ಈ ಕಾರಣದಿಂದ ಕೂದಲು ದಪ್ಪವಾಗುವುದು, ಅರ್ಧಕ್ಕೆ ತುಂಡಾಗುವುದು ಸೇರಿ ಬೇರು ಸಹಿತ ಉದುರಲು ಆರಂಭವಾಗುತ್ತದೆ. ಮಳೆಗಾಲದಲ್ಲಿ ವಾತ ಹಾಗೂ ಪಿತ್ತ ಅಸಮತೋಲನವಾಗಿರುತ್ತದೆ, ಈ ಕಾರಣದಿಂದಲೂ ಕೂದಲು ಉದುರುವಿಕೆ ಹೆಚ್ಚಾಗುತ್ತದೆ ಎಂದು ಆರ್ಯುವೇದದಲ್ಲಿ ಹೇಳಲಾಗಿದೆ.
ತಲೆ ಅಥವಾ ಕೂದಲು ಒಣಗಿರುವಂತೆ ಮಾಡಬೇಕು
ತಲೆ ಸ್ನಾನ ಮಾಡುವುದು ಅಥವಾ ಮಳೆ ನೀರಿನಲ್ಲಿ ಒದ್ದೆಯಾದ ಬಳಿಕ ತಲೆಯನ್ನ ಚೆನ್ನಾಗಿ ಒಣಗಿಸಿಕೊಳ್ಳಬೇಕು. ಬಿಸಿಲಿಗೆ ಒಡ್ಡಿಕೊಳ್ಳುವುದು, ಹೇರ್ ಡ್ರೈಯರ್ ಬಳಸುವುದು ಮಾಡಿ ಕೂದಲಿನಲ್ಲಿ ನೀರಿನ ಅಂಶ ಇರದಂತೆ ನೋಡಿಕೊಳ್ಳಬೇಕು. ಕೂದಲು ತೇವವಾಗಿದ್ದರೆ ಉದುರುವ ಸಾಧ್ಯತೆ ಹೆಚ್ಚಾಗಿರುತ್ತದೆ. ಒಣಗಿದ ಬಟ್ಟೆಯಲ್ಲಿ ಒರೆಸಿಕೊಳ್ಳುವುದು, ಬಿಸಿಲಿಗೆ ಒಡ್ಡಿಕೊಳ್ಳುವುದು ಉತ್ತಮ ಚಿಕಿತ್ಸೆಯಾಗಿದೆ.
ವೆನಿಗರ್ ಮತ್ತು ನೀರು
ಒಂದು ಕಪ್‌ನಲ್ಲಿ ಒಂದು ಗ್ಲಾಸ್ ವೆನಿಗರ್ ತೆಗೆದುಕೊಂಡು ಅದಕ್ಕೆ 10 ಗ್ಲಾಸ್ ನೀರು ಹಾಕಿ ಚೆನ್ನಾಗಿ ಬೆರೆಸಿಕೊಳ್ಳಿ. ಬಳಿಕ ತಲೆ ಸ್ನಾನ ಮಾಡಿದ ಬಳಿಕ ತಲೆಗೆ ಚೆನ್ನಾಗಿ ಹಾಕಿಕೊಂಡು ನೀರಿನಿಂದ ತಲೆ ತೊಳೆದುಕೊಳ್ಳಬೇಕು. ಹೀಗೆ ಮಾಡುವುದರಿಂದ ಕೂದಲಿನ ಪಿಹೆಚ್ ಲೆವೆಲ್ ನಿಯಂತ್ರಣಕ್ಕೆ ಬರುತ್ತದೆ. ಇದನ್ನು ವಾರದಲ್ಲಿ ಒಂದು ಬಾರಿ ಮಾಡಿದರೆ ಸಾಕು.
ಹೆಡ್ ಮಸಾಜ್
ಮಳೆಗಾಲದಲ್ಲಿ ಕೂದಲು ಉದುರುವಿಕೆಗೆ ಅತ್ಯುತ್ತಮ ಔಷಧಿ ಎಂದರೆ ಅದು ತಲೆಯ ಮಸಾಜ್ ಮಾಡುವುದು. ಮಳೆಗಾಲದಲ್ಲಿ ಕೆಲವರು ನೆಗಡಿ, ಶೀತದ ಭಯದಿಂದ ತಲೆಗೆ ಎಣ್ಣೆ ಹಾಕುವುದಿಲ್ಲ. ಆದರೆ ಹೀಗೆ ಮಾಡಬಾರದು ತಲೆಗೆ ಎಣ್ಣೆ ಹಾಕಿ ಮಸಾಜ್ ಮಾಡುವುದರಿಂದ ಕೂದಲು ಉದುರುವಿಕೆ ತಡೆಯಬಹುದು. ಜೊತೆಗೆ ಎಣ್ಣೆಯ ಅಂಶ ಕೂದಲಿನಲ್ಲಿ ಇರುವುದು ತೇವಾಂಶ ಹೀರಿಕೊಳ್ಳಲು ಕಷ್ಟವಾಗುತ್ತದೆ. ನೀರು ಸಹ ಕೂದಲಲ್ಲಿ ಉಳಿಯುವುದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
