Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶ ಪತ್ತೆಯಾಗಿದ್ಯಾ? ಆರೋಗ್ಯ ಸಚಿವರು ಹೇಳಿದ್ದೇನು?
ನಾವು ಸೇವಿಸುತ್ತಿರುವ ಪ್ರತಿಯೊಂದು ಆಹಾರಗಳು ಸಹ ಈಗ ನಮ್ಮ ಆರೋಗ್ಯಕ್ಕೆ ಪೂರಕವಾಗುವ ಮೊದಲು ಅನಾರೋಗ್ಯ ಉಂಟು ಮಾಡುವ ಸಾಧ್ಯತೆಯೇ ಹೆಚ್ಚಾಗುತ್ತಿದೆ. ಈಗ ಹೊಸದಾಗಿ ಕೇಳಿಬರುತ್ತಿರುವ ಆಘಾತಕಾರಿ ವಿಚಾರ ಅಂದರೆ ಅದು ಮೊಟ್ಟೆಯಿಂದ ಕ್ಯಾನ್ಸರ್ ಬರುತ್ತದೆ ಎಂಬುದು. ಹೌದು ರಾಜ್ಯದಲ್ಲಿ ಇಂತಹದೊಂದು ವಿಚಾರ ಈಗ ಜನರ ನಿದ್ದೆ ಕೆಡಿಸಿದೆ.
ಸಾಮಾನ್ಯವಾಗಿ ಶಾಲೆಯಲ್ಲಿ ಮಕ್ಕಳು ಮೊಟ್ಟೆ ಸವಿಯುವುದರಿಂದ ಹಿಡಿದು ಬಹುತೇಕ ನಾನ್ ವಜ್ ಪ್ರಿಯರು ಹಾಗೆ ಕಡಿಮೆ ಸಂಖ್ಯೆಯಲ್ಲಿ ವೆಜ್ ಪ್ರಿಯರು ಸಹ ಮೊಟ್ಟೆಯನ್ನು ಆಹಾರವಾಗಿ ಸೇವಿಸುತ್ತಾರೆ. ಮೊಟ್ಟೆ ಕಡಿಮೆ ಹಣದಲ್ಲಿ ಹೆಚ್ಚು ಪ್ರೋಟೀನ್ ನೀಡುವ ಆಹಾರ ಪದಾರ್ಥಗವಾಗಿದೆ. ಮೊಟ್ಟೆಯನ್ನು ಬಳಸಿ ಹತ್ತಾರು ಖಾದ್ಯ ಮಾಡಿ ಸವಿಯಬಹುದು.

ಆದ್ರೆ ಇತ್ತೀಚಿಗೆ ಮೊಟ್ಟೆಯಿಂದ ಕ್ಯಾನ್ಸರ್ ಬರಲಿದೆ ಎಂಬ ಆತಂಕ ಹರಡಿದೆ. ಹಾಗಾದ್ರೆ ಮೊಟ್ಟೆ ಸೇವಿಸುವುದು ಕ್ಯಾನ್ಸರ್‌ಗೆ ಕಾರಣವಾಗಲಿದ್ಯಾ? ಅದು ಹೇಗೆ ಸಾಧ್ಯ ಅನ್ನೋದನ್ನು ತಿಳಿದುಕೊಳ್ಳೋಣ. ಮೊಟ್ಟೆಗಳನ್ನು ಅತ್ಯಂತ ಪೌಷ್ಟಿಕ ಆಹಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಒಂದು ದೊಡ್ಡ ಮೊಟ್ಟೆ ಸುಮಾರು 6-7 ಗ್ರಾಂ ಪ್ರೋಟೀನ್ ಅನ್ನು ನೀಡುತ್ತದೆ.
ಹಾಗೆ ವಿಟಮಿನ್ ಎ, ಡಿ, ಇ ಮತ್ತು ಬಿ 12, ಜೊತೆಗೆ ಕೋಲೀನ್, ಲುಟೀನ್, ಜಿಯಾಕ್ಸಾಂಥಿನ್ ಮತ್ತು ಕೊಬ್ಬುಗಳನ್ನು ಸಹ ಹೊಂದಿರುತ್ತದೆ. ಆದ್ರೆ ಮೊಟ್ಟೆಯಿಂದ ಕ್ಯಾನ್ಸರ್ ಬರಲಿದೆ ಎಂಬ ವಾದವೊಂದು ಹರಿದಾಡುತ್ತಿದೆ. ಇದೇ ಕಾರಣಕ್ಕೆ ರಾಜ್ಯದ ಹಲವು ಕಡೆಗಳನ್ನು ಮೊಟ್ಟೆಗಳನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗುತ್ತಿದೆ.
ಮೊಟ್ಟೆಗಳನ್ನು ಪಡೆಯಲು ಕೋಳಿಗಳನ್ನು ಬೆಳೆಸಲಾಗುತ್ತದೆ. ಈ ಕೋಳಿಗಳಿಗೆ ಹಲವು ರೀತಿಯ ಔಷಧಿಗಳು, ಇಂಜೆಕ್ಷನ್, ಆಹಾರ ನೀಡುವುದು ನೋಡಬಹುದು. ಈ ಮೊಟ್ಟೆಗಳಲ್ಲಿ ನೈಟ್ರೋಫ್ಯೂರಾನ್ ಮತ್ತು ನೈಟ್ರೋಮಿಡಾಜೋಲ್ ಎಂಬ ಎರಡು ಅಂಶಗಳು ಇರುವುದು ಸಹ ಕಂಡುಬಂದಿತ್ತು.
ನೈಟ್ರೋಫ್ಯೂರಾನ್ ಮತ್ತು ನೈಟ್ರೋಮಿಡಾಜೋಲ್ ಪ್ರತಿಜೀವಕಗಳಾಗಿದ್ದು, ಇವುಗಳನ್ನು ಅನೇಕ ದೇಶಗಳಲ್ಲಿ ಕೋಳಿ ಸಾಕಣೆಯಲ್ಲಿ ಬಳಸಲು ನಿಷೇಧಿಸಲಾಗಿದೆ ಏಕೆಂದರೆ ಅವುಗಳ ಮೆಟಾಬಾಲೈಟ್‌ಗಳು ("AOZ" ನಂತಹವು) ಜೀನೋಟಾಕ್ಸಿಕ್ ಆಗಿರುತ್ತವೆ, ಅಂದರೆ ಅವು ಡಿಎನ್‌ಎಗೆ ಹಾನಿ ಮಾಡಬಹುದು ಮತ್ತು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು.
ಮೊಟ್ಟೆ ಸೇವನೆಯು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆಯೇ ಎಂಬುದರ ಕುರಿತು ಬಹಳ ಹಿಂದಿನಿಂದಲೂ ವೈಜ್ಞಾನಿಕ ಚರ್ಚೆ ನಡೆಯುತ್ತಿದೆ. 2022 ರಲ್ಲಿ ಪ್ರಕಟವಾದ ಮೆಟಾ-ವಿಶ್ಲೇಷಣೆಯು ಹೆಚ್ಚಿನ ಮೊಟ್ಟೆ ಸೇವನೆಯು ಕ್ಯಾನ್ಸರ್ ಅಪಾಯದಲ್ಲಿ ಕೊಡುಗೆ ನೀಡಬಹುದು ಎಂದಿದೆ. ಆದ್ರೆ ಹೃದಯ ರಕ್ತನಾಳ ಕಾಯಿಲೆ ಅಥವಾ ಒಟ್ಟಾರೆ ಮರಣದ ನಡುವಿನ ಬಲವಾದ ಸಂಬಂಧವನ್ನು ತೋರಿಸಲಿಲ್ಲ.
ಅದ್ರೆ ಈಗ ಮೊಟ್ಟೆ ತಿನ್ನುವುದರ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಭರವಸೆ ನೀಡಿದರು. ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿ ಶಾಸಕ ವಿ.ಸುನೀಲ್‌ಕುಮಾರ್ ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಸಚಿವರು, ಕಳೆದ ವರ್ಷ 147 ಮೊಟ್ಟೆ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಇದರಲ್ಲಿ ಯಾವುದೇ ಅಂಶಗಳು ಪತ್ತೆಯಾಗಿಲ್ಲ ಎಂದು ಉತ್ತರ ನೀಡಿದ್ದಾರೆ. ಮೊಟ್ಟೆಯ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಮೊಟ್ಟೆಯನ್ನು ಶಾಲಾ ಮಕ್ಕಳಿಗೆ ಕೊಡಬಹುದು ಪರೀಕ್ಷೆತಯಲ್ಲಿ ಯಾವುದೇ ಹಾನಿಕಾರಕ ಅಂಶವೂ ಪತ್ತೆಯಾಗಿಲ್ಲ ಎಂದಿದ್ದಾರೆ.



Click it and Unblock the Notifications
