Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
300ಕ್ಕೂ ಹೆಚ್ಚು ಜನರನ್ನು ಬಾಧಿಸಿದೆ ಡಿಂಗಾ ಡಿಂಗಾ ವೈರಸ್: ತುಂಬಾನೇ ಅಪಾಯಕಾರಿಯಾಗಿದೆ ಈ ಕಾಯಿಲೆ
ಕೊರೊನಾ ವೈರಸ್‌ನಿಂದ ಉಂಟಾದ ಭೀಕರ ನಷ್ಟದ ಬಳಿಕ ಯಾವುದೇ ಹೊಸ ವೈರಸ್ ಬಗ್ಗೆ ಕೇಳಿದರೂ ಜನರಿಗೆ ಭಯ ಉಂಟಾಗುತ್ತೆ, ಏಕೆಂದರೆ ಇದರ ಭೀಕರತೆ ಹೇಗಿರುತ್ತೆ ಎಂದು ಹೇಳಲು ಸಾಧ್ಯವಿಲ್ಲ, ಒಂದು ಚಿಕ್ಕ ನಿರ್ಲಕ್ಷ್ಯ ಪ್ರಾಣಕ್ಕೆ ಅಪಾಯವನ್ನುಂಟು ಮಾಡಬಹುದು. ಇದೀಗ ಉಗಾಂಡಾದಲ್ಲಿ ಡಿಂಗಾ ಡಿಂಗಾ ಎಂಬ ವೈರಸ್ ಕಾಣಿಸಿಕೊಂಡಿದೆ.
ಈ ವೈರಸ್ ಒಂದು ರೀತಿಯ ನಿಗೂಢ ವೈರಸ್ ಆಗಿದ್ದು, ಇದರ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ,ಈ ವೈರಸ್‌ಗೆ ಡಿಂಗಾ ಡಿಂಗಾ ಎಂದು ಹೆಸರಿಟ್ಟಿದೆ, ಈ ವೈರಸ್ ಮಹಿಳೆಯರಲ್ಲಿ ಹಾಗೂ ಹೆಣ್ಮಕ್ಕಳಲ್ಲಿ ಕಂಡು ಬಂದಿದ್ದು ಸುಮಾರು 300ಕ್ಕೂ ಅಧಿಕ ಜನರಲ್ಲಿ ಈ ವೈರಸ್ ಪತ್ತೆಯಾಗಿದೆ.

ಡಿಂಗಾ ಡಿಂಗಾ ವೈರಸ್ ರೋಗ ಲಕ್ಷಣಗಳು ಗಂಭೀರವಾಗಿದೆ
ಈ ವೈರಸ್ ತಗುಲಿದವರಲ್ಲಿ ಅತ್ಯಧಿಕ ಜ್ವರ ಜೊತೆಗೆ ಮೈಯಲ್ಲಿ ನಡುಕ ಕಂಡು ಬರುತ್ತಿದೆ, ಈ ವೈರಸ್ ತಗುಲಿದವರಿಗೆ ಸ್ವತಃ ಎದ್ದು ನಡೆದಾಡಲುಕಷ್ಟವಾಗುತ್ತಿದೆ.
ಇತರ ಲಕ್ಷಣಗಳು
ವಿಪರೀತ ಜ್ವರ
ತಲೆನೋವು
ಕೆಮ್ಮು
ಶೀತ
ಮೈಕೈ ನೋವು
ಉಸಿರಾಟದ ಸಮಸ್ಯೆ ಕಂಡು ಬರುತ್ತಿದೆ.
ಈ ರೋಗಕ್ಕೆ ಇನ್‌ಫ್ಲುಯಂಜಾ, ಕೋವಿಡ್ 19, ಮಲೇರಿಯಾ, ಸಿಡುಬು ಈ ಬಗೆಯ ವೈರಸ್‌ಗಳು ಕಾರಣವೇ ಎಂಬುವುದು ಇನ್ನಷ್ಟೇ ಲ್ಯಾಪ್ ಪರಿಶೀಲನೆಯಿಂದ ತಿಳಿದು ಬರಬೇಕಾಗಿದೆ.
ಎಲ್ಲಿ ಈ ರೋಗ ಹೆಚ್ಚಾಗಿ ಕಂಡು ಬಂದಿದೆ?
ಇದೀಗ ಕಾಂಗೋದಲ್ಲಿ ಈ ರೋಗ ಹೆಚ್ಚಾಗಿ ಹರಡಿದೆ. 394 ಕೇಸ್‌ಗಳು ಪತ್ತೆಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಈ ಕಾಯಿಲೆ ಬುಂಡಿಬುಗ್ಯೋ ಎಂಬ ಸ್ಥಳದಿಂದ ಹೊರಗಡೆ ಎಲ್ಲಿಯೂ ಕಂಡು ಬಂದಿಲ್ಲ ಎಂಬುವುದು ಸಮಧಾನಕರವಾದ ವಿಷಯವಾಗಿದೆ, ಈ ಕಾಯಿಲೆ ಯಾವ ಕಾರಣಕ್ಕೆ ಬರುತ್ತಿದೆ ಎಂಬುವುದು ತಿಳಿದು ಬಂದಿಲ್ಲ ಅಲ್ಲದೆ ಇದಕ್ಕೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಕೂಡ ಇಲ್ಲ. ರೋಗ ಲಕ್ಷಣ ನೋಡಿ ಚಿಕಿತ್ಸೆ ನೀಡಲಾಗುವುದು.
ಇದಕ್ಕೆ ಡಿಂಗಾ ಡಿಂಗಾ ಎಂಬ ಹೆಸರು ಏಕೆ ಬಂದಿದೆ?
ಈ ವೈರಸ್ ಬಂದಾಗ ದೇಹದ ಮೇಲೆ ಕಂಟ್ರೋಲ್ ಇರಲ್ಲ, ದೇಹ ಡ್ಯಾನ್ಸ್ ಮಾಡುವಂತೆ ಅಲುಗಾಡಲಾರಂಭಿಸುತ್ತದೆ. ಹೀಗೆ ದೇಹ ಶೇಕ್ ಆಗುತ್ತಾ ಸುಸ್ತಾಗಿ ಜನ ಸಾವನ್ನಪ್ಪಿರುವ ಘಟನೆ 1518ರಲ್ಲಿ ಫ್ರಾನ್ಸ್‌ನಲ್ಲಿ ನಡೆದಿದೆ.
ಸದ್ಯಕ್ಕೆ ಈ ಕಾಯಿಲೆಯನ್ನು ಆಂಟಿಬಯೋಟಿಕ್ಸ್ ನೀಡಿ ಚಿಕಿತ್ಸೆ ನೀಡಲಾಗುತ್ತಿದೆ, ಈ ರೋಗ ಬೇರೆ ಕಡೆ ಕಂಡು ಬರುತ್ತಿದೆಯೇ? ಈ ಕಾಯಿಲೆಗೆ ಕಾರಣವೇನು? ಯಾವ ಔಷಧಿ ಪರಿಣಾಮರಿ ಎಂಬುವುದರ ಬಗ್ಗೆ ಅಧ್ಯಯನ ವರದಿ ಕೇಳಿ ಬರುತ್ತಿದೆ.
ಕೊರೊನಾ ಕೂಡ 2019 ಡಿಸೆಂಬರ್‌ನಲ್ಲಿ ಕಂಡು ಬಂದಿತ್ತು
ಕೊರೊನಾ ವೈರಸ್ ಡಿಸೆಂಬರ್ ಮಾಸದಲ್ಲಿ ಕಂಡು ಬಂದಾಗ ಈ ವೈರಸ್ ಬಗ್ಗೆ ಯಾರೂ ಹೆಚ್ಚು ಗಮನಹರಿಸಲೇ ಇಲ್ಲ, ಆದರೆ ಕೆಲವೇ ತಿಂಗಳಿನಲ್ಲಿ ಇಡೀ ವಿಶ್ವವನ್ನು ಸ್ತಬ್ಧಗೊಳಿಸಿತು. ಜನರು ಪ್ರಾಣವನ್ನು ಕಳೆದುಕೊಂಡರು, ವ್ಯಾಪಾರ ವಹಿವಾಟು ನಿಂತು ಹೋಯ್ತು, ಆರ್ಥಿಕ ಸಂಕಷ್ಟಗಳು ಎದುರಾಯ್ತು ಇದರಿಂದ ಉಂಟಾದ ನಷ್ಟ ಅಷ್ಟಿಷ್ಟು ಅಲ್ಲ, ಈಗಲೂ ಅದರ ಹೊಡೆತದಿಂದ ವಿಶ್ವ ಚೇತರಿಸಿಕೊಳ್ಳುತ್ತಿದೆ, ಹಾಗಾಗಿ ದೂರದ ಕಾಂಗೋದಲ್ಲಿ ಮಾತ್ರ ಡಿಂಗಾ ಡಿಂಗಾ ವೈರಸ್ ಬಂದಿದೆ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ ಹಾಗಾಗಿ ಆರೋಗ್ಯ ಇಲಾಖೆ ಈ ಕಾಯಿಲೆ ಬಗ್ಗೆ ಕಣ್ಣಿಟ್ಟಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications