Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಮೈಗ್ರೇನ್ ಇದ್ದರೆ ಯಾವ ಆಹಾರ ಒಳ್ಳೆಯದು, ಯಾವ ಆಹಾರ ತಿಂದಾಗ ತಲೆನೋವು ಹೆಚ್ಚಾಗುತ್ತೆ?
ಮೈಗ್ರೇನ್ ತುಂಬಾ ಜನರನ್ನು ಕಾಡುತ್ತಿರುವ ಸಮಸ್ಯೆಯಾಗಿದೆ, ಈ ಮೈಗ್ರೇನ್ ಬಂದರೆ ಅವರಿಗೆ ಯಾವುದೇ ಕೆಲಸದ ಕಡೆಗೆ ಗಮಹರಿಸಲು ಸಾಧ್ಯವಾಗಲ್ಲ, ತುಂಬಾ ಸುಸ್ತು, ಆಕಳಿಕೆ, ಬಾಯಾರಿಕೆ, ಸ್ವಭಾವದಲ್ಲಿ ಬದಲಾವಣೆ, ಕುತ್ತಿಗೆ ಭಾಗದಲ್ಲಿ ನೋವು, ಆಗಾಗ ಮೂತ್ರ ವಿಸರ್ಜನೆಗೆ ಹೋಗುವುದು ಅನೇಕ ಬಗೆಯ ಸಮಸ್ಯೆ ಕಂಡು ಬರುವುದು. ಕೆಲವೊಂದು ಆಹಾರಗಳು ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಇನ್ನು ಕೆಲವು ಆಹಾರಗಳು ಮೈಗ್ರೇನ್ ಸಮಸ್ಯೆಯನ್ನು ಹೆಚ್ಚಿಸುತ್ತದೆ.

ಅಗಸೆ ಬೀಜ
ಒಮೆಗಾ 3 ಕೊಬ್ಬಿನಂಶ ಇರುವ ಆಹಾರ ಸೇವೆ ತುಂಬಾನೇ ಒಳ್ಳೆಯದು, ಅಗಸೆ ಬೀಜದಲ್ಲಿ ಒಮೆಗಾ3 ಕೊಬ್ಬಿನಂಶವಿದೆ. ಒಮೆಗಾ 3 ಕೊಬ್ಬಿನಂಶ ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಉರಿಯೂತದ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಧಾನ್ಯಗಳು
ಮೈಗ್ರೇನ್ ಇರುವವರು ದವಸ-ಧಾನ್ಯಗಳನ್ನು ತಮ್ಮ ಆಹಾರದಲ್ಲಿ ಹೆಚ್ಚಾಗಿ ಸೇವಿಸಬೇಕು. ರಾಗಿ, ನವಣೆ, ಬಾರ್ಲಿ ಈ ಬಗೆಯ ಆಹಾರ ಸೇವಿಸಿ. ಈ ಬಗೆಯ ಆಹಾರ ಸೇವನೆ ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಾಫಿ: ಕಾಫಿ ಮೈಗ್ರೇನ್ ತಲೆನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಅತಿ ಹೆಚ್ಚು ಕೆಫೀನ್ ಕೂಡ ಒಳ್ಳೆಯದಲ್ಲ, ಹಾಗಾಗಿ ತುಂಬಾ ಕಾಫಿ ಕುಡಿಯುವ ಅಭ್ಯಾಸವಿದ್ದರೆ ಕಾಫಿ ಸ್ವಲ್ಪ ಕಡಿಮೆ ಮಾಡಿ.
ಅಣಬೆ: ಮೈಗ್ರೇನ್ ಸಮಸ್ಯೆ ಇರುವವರಿಗೆ ಅಣಬೆ ತುಂಬಾ ಒಳ್ಳೆಯ ಆಹಾರವಾಗಿದೆ. ಅಣಬೆ ಮೈಗ್ರೇನ್ ತಲೆನೋವು ತುಂಬಾ ಕಡಿಮೆ ಮಾಡುತ್ತದೆ.
ಅರಿಶಿಣ
ದಿನಾ ಸ್ವಲ್ಪ ಅರಿಶಿಣ ಸೇವಿಸಿ, ಇದು ಉರಿಯೂತದ ಸಮಸ್ಯೆ ಕಡಿಮೆ ಮಾಡುತ್ತದೆ. ಅರಿಶಿಣ ಆಕ್ಸಿಡೇಟಿವ್ ಸ್ಟ್ರೆಸ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಇದು ಮೈಗ್ರೇನ್ ಸಮಸ್ಯೆ ತಡೆಗಟ್ಟಲು ಸಹಾಯ ಮಾಡುತ್ತದೆ.
ಮೊಸರು
ಮೊಸರು ಸೇವನೆ ತಲೆನೋವು, ಮಲಬದ್ಧತೆ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಮೊಸರು ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಶುಂಠಿ
ಶುಂಠಿ ಟೀ ಕೂಡ ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೈಗ್ರೇನ್ ಬಂದಾಗ ಶುಂಠಿ ಟೀ ಮಾಡಿ ಕುಡಿಯವುದರಿಂದ ವಾಂತಿ ಬರುವುದು, ಸುಸ್ತು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿಯಾಗಿದೆ. ಮೈಗ್ರೇನ್ ತಲೆನೋವು ಬರುತ್ತಿದ್ದಂತೆ ಕುಡಿದರೆ ತಲೆನೋವು ಕಡಿಮೆಯಾಗುವುದು.
ಸಿಹಿ ಕುಂಬಳಕಾಯಿ
ಸಿಹಿ ಕುಂಬಳಕಾಯಿ ಬೀಜ ರಕ್ತನಾಳಗಳನ್ನು ರಿಲ್ಯಾಕ್ಸ್ ಮಾಡುತ್ತದೆ. ಸಿಹಿ ಕುಂಬಳಕಾಯಿ ಬೀಜಕ್ಕೆ ಸ್ವಲ್ಪ ಉಪ್ಪು ಹಾಕಿ ರೋಸ್ಟ್ ಮಾಡಿ ತಿನ್ನುವುದು ಒಳ್ಳೆಯದು. ಸಿಹಿ ಕುಂಬಳಕಾಯಿ ಬೀಜ ಮಧುಮೇಹಿಗಳಿಗೂ ತುಂಬಾನೇ ಒಳ್ಳೆಯದು.
ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಪೊಟಾಷ್ಯಿಯಂ ಅಧಿಕವಿದೆ ಹಾಗೂ ವಿಟಮಿನ್ ಬಿ ಇರುವುದರಿಂದ ಮೈಗ್ರೇನ್ ಇರುವವರು ಪ್ರತಿದಿನ ಬಾಳೆಹಣ್ಣು ತಿನ್ನುವುದು ಒಳ್ಳೆಯದು.
ಡ್ರೈ ಫ್ರೂಟ್ಸ್
ಡ್ರೈ ಫ್ರೂಟ್ಸ್‌ನಲ್ಲಿರುವ ಪ್ರೊಟೀನ್, ವಿಟಮಿನ್‌ಗಳು ಮೈಗ್ರೇನ್ ಸಮಸ್ಯೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ದಿನಾ ಪ್ರತಿನಿತ್ಯ ಡ್ರೈ ಫ್ರೂಟ್ಸ್ ನಿಮ್ಮ ಆಹಾರಕ್ರಮದಲ್ಲಿ ಸೇರಿಸಿದರೆ ಒಳ್ಳೆಯದು.ಬಾದಾಮಿ, ಗೋಡಂಬಿ ಈ ಬಗೆಯ ಆಹಾರ ಸೇವನೆ ಒಳ್ಳೆಯದು.
ಯಾವ ಬಗೆಯ ಆಹಾರ ಒಳ್ಳೆಯದಲ್ಲ
ಖಾರ ಪದಾರ್ಥಗಳು: ತುಂಬಾ ಖಾರ ಪದಾರ್ಥ ಸೇವಿಸಬೇಡಿ, ತುಂಬಾ ಮಸಾಲೆ ಪದಾರ್ಥ ಮೈಗ್ರೇನ್ ಸಮಸ್ಯೆ ಹೆಚ್ಚು ಮಾಡುತ್ತದೆ.
ಹುದುಗು ಬರಿಸಿದ ಆಹಾರ: ಮೈಗ್ರೇನ್ ಸಮಸ್ಯೆ ಇರುವವರಿಗೆ ಹುದುಗು ಬರಿಸಲು ತುಂಬಾನೇ ಸಹಕಾರಿ.
ಚಾಕೋಲೆಟ್: ಚಾಕೋಲೆಟ್, ಸಿಹಿ ಪದಾರ್ಥಗಳು ಈ ಬಗೆಯ ಆಹಾರ ಸೇವಿಸಬೇಡಿ.
ಸಂಸ್ಕರಿಸಿದ ಮಾಂಸಾಹಾರ: ಸಂಸ್ಕರಿಸಿದ ಆಹಾರದಲ್ಲಿ ಸೋಡಿಯಂ ನೈಟ್ರೇಟ್ ಅಧಿಕವಿರುತ್ತದೆ, ಈ ಬಗೆಯ ಆಹಾರ ಮೈಗ್ರೇನ್ ಸಮಸ್ಯೆ ಇರುವವರಿಗೆ ಮಾತ್ರವಲ್ಲ ಯಾರಿಗೂ ಒಳ್ಳೆಯದಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications