Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನಬಾರದು, ಏಕೆ?
ಬಾಳೆಹಣ್ಣು ಒಂದು ಪೌಷ್ಠಿಕವಾದ ಆಹಾರ ಎನ್ನುವುದರಲ್ಲಿ ನೋ ಡೌಟ್. ಆದರೆ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದೇ ಎನ್ನುವುದು ಹಲವರ ಪ್ರಶ್ನೆಯಾಗಿದೆ. ಇಲ್ಲಿ ನಾವು ಅದರ ಬಗ್ಗೆ ಮಾಹಿತಿ ನೀಡಲಿದ್ದೇವೆ, ಅದಕ್ಕಿಂತ ಮೊದಲು ಬಾಳೆಹಣ್ಣಿನ ಕುರಿತು ಇತರ ಮಾಹಿತಿಗಳನ್ನು ತಿಳಿಯೋಣ.
ಬಾಳೆಹಣ್ಣಿನಲ್ಲಿ ಮೆಗ್ನಿಷ್ಯಿಯಂ, ನಾರಿನಂಶ, ಪೊಟಾಷ್ಯಿಯಂ ಇದ್ದು ಇದನ್ನು ತಿನ್ನುವುದರಿಂದ ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚುವುದು. ಬಾಳೆಹಣ್ಣಿನಲ್ಲಿ ಶೇ. 25ರಷ್ಟು ಸಕ್ಕರೆಯಂಶವಿರುತ್ತದೆ ಹಾಗೂ ಇದರಲ್ಲಿ ಕಬ್ಬಿಣದಂಶ, ವಿಟಮಿನ್ ಬಿ6 ಇದ್ದು ದೇಹಕ್ಕೆ ಶಕ್ತಿಯನ್ನು ತುಂಬುವುದು.

ಬಾಳೆಹಣ್ಣು ತಿಂದರೆ ದೇಹ ತಂಪಾಗಿರುತ್ತದೆ, ಜೀರ್ಣಕ್ರಿಯೆ ಚೆನ್ನಾಗಿ ನಡೆಯುತ್ತದೆ ಹಾಗೂ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ರಕ್ತ ಹೀನತೆ ಇರುವವರು ದಿನಾ ಎರಡು ಬಾಳೆಹಣ್ಣು ತಿನ್ನಬೇಕು.
ಮೊದಲಿಗೆ ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಬಹುದೇ ಎಂದು ತಿಳಿಯೋಣ:

ಬಾಳೆಹಣ್ಣು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತದೆ
ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿನ್ನುವುದು ಒಳ್ಳೆಯದಲ್ಲ. ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ನಿಮಗೆ ಸುಸ್ತು ಉಂಟು ಮಾಡಬಹುದು ಹಾಗೂ ಸ್ವಲ್ಪ ತಲೆ ಸುತ್ತು ಬಂದಂತೆ, ನಿದ್ದೆ ಬರ್ತಾ ಇರುವಂತೆ ಅನಿಸಲಾರಂಭಿಸುತ್ತದೆ.
ಬಾಳೆಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ತಿಂದಾಗ ಸುಸ್ತು ಉಂಟಾದಂತೆ ಅನಿಸಲು ಅದರಲ್ಲಿರುವ ಅತ್ಯಧಿಕ ಸಕ್ರೆಯಂಶ ಕಾರಣವಾಗಿದೆ ಎಂದು ಅಧ್ಯಯನಗಳು ಹೇಳಿವೆ. ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಅದರಲ್ಲಿ ಸಕ್ಕರೆಯಂಶ ಅಧಿಕವಿರುವುದರಿಂದ ಸ್ವಲ್ಪ ಗಂಟೆಗಳಲ್ಲಿಯೇ ಶಕ್ತಿ ಕಡಿಮೆಯಾಗಿ ಸುಸ್ತು ಅನಿಸಲಾರಂಭಿಸಿದರು.
ಇನ್ನು ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಹೊಟ್ಟೆ ಸಮಸ್ಯೆ ಉಂಟಾಗಬಹುದು. ಅಲ್ಲದೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ತಿಂದರೆ ಅದರಲ್ಲಿರುವ ಅತ್ಯಧಿಕ ಮೆಗ್ನಿಷ್ಯಿಯಂನಿಂದಾಗಿ ಹೃದಯದ ತೊಂದರೆ ಕಾಣಿಸಿಕೊಳ್ಳಬಹುದು.

ಬಾಳೆಹಣ್ಣನ್ನು ಬ್ರೇಕ್‌ಫಾಸ್ಟ್‌ನಲ್ಲಿ ತಿನ್ನಬಹುದೇ?
ಆದರೆ ಬಾಳೆಹಣ್ಣನ್ನು ಇತರ ಆಹಾರ ಜೊತೆ ಸೇವಿಸುವುದರಲ್ಲಿ ಯಾವುದೇ ತೊಂದರೆಯಿಲ್ಲ. ಓಟ್‌ಮೀಲ್ಸ್, ಡ್ರೈ ಫ್ರೂಟ್ಸ್, ಸೇಬು ಇತರ ಹಣ್ಣುಗಳ ಜೊತೆ ಮಿಶ್ರ ಮಾಡಿ ತಿನ್ನಬಹುದು.
ಬ್ರೇಕ್‌ಫಾಸ್ಟ್‌ನಲ್ಲಿ ಬಾಳೆಹಣ್ಣು ಬಳಸುವುದು ಹೇಗೆ?
ಬೆಳಗ್ಗೆ ತೆಗೆದುಕೊಳ್ಳುವ ಆಹಾರದಲ್ಲಿ ಪೌಷ್ಠಿಕಾಂಶಗಳಿದ್ದರೆ ದಿನಪೂರ್ತಿ ಚಟುವಟಿಕೆಯಿಂದ ಇರಬಹುದು. ಇಲ್ಲಿ ನಾವು ಬಾಳೆಹಣ್ಣು ಬಳಸಿ ಮಾಡಬಹುದಾದ ರುಚಿಕರ ಹಾಗೂ ಆರೋಗ್ಯಕರವಾದ ರೆಸಿಪಿ ನೀಡಿದ್ದೇವೆ ನೋಡಿ:
* ಹಾಲನ್ನು ಬಿಸಿ ಮಾಡಿ, ಅದಕ್ಕೆ ಬಾಳೆಹಣ್ಣು ಹಾಗೂ ಸ್ವಲ್ಪ ಬೆರ್ರಿ ಹಣ್ಣುಗಳನ್ನು ಹಾಕಿ ಮಿಕ್ಸ್ ಮಾಡಿ ತಿನ್ನಬಹುದು.
ಬಾಳೆಹಣ್ಣು, ಓಟ್‌ಮೀಲ್,ಕುಕ್ಕೀಸ್
ನಿಮ್ಮ ದಿನವನ್ನು ಆರೋಗ್ಯಕರವಾಗಿ ಪ್ರಾರಂಭಿಸಲು ಈ ರೆಸಿಪಿ ಕೂಡ ಸಹಕಾರಿ. ಒಂದು ಕಪ್ ಓಟ್ಸ್‌ಗೆ ಮೇಪಲ್ ಸಿರಪ್, ಕುಕ್ಕೀಸ್ , ಡ್ರೈ ಫ್ರೂಟ್ಸ್ ಪೌಡರ್ 1 ಚಮಚ ಮಿಶ್ರ ಮಾಡಿ ಸವಿಯಬಹುದು.
ಚಾಕೋಲೇಟ್, ಬಾಳೆಹಣ್ಣಿನ ಸ್ಮೂತಿ
ಒಂದು ಗ್ಲಾಸ್ ಹಾಲನ್ನು ಬ್ಲೆಂಡರ್‌ನಲ್ಲಿ ಹಾಕಿ, ಅದಕ್ಕೆ ಕೋಕಾ ಪುಡಿ, 1 ಬಾಳೆ ಹಣ್ಣನ್ನು ಕತ್ತರಿಸಿ ಹಾಕಿ ಬ್ಲೆಂಡ್ ಮಾಡಿ. ನಂತರ ರುಚಿ ರುಚಿಯಾದ ಸ್ಮೂತಿ ಟ್ರೈ ಮಾಡಿ.

ಬಾಳೆಹಣ್ಣು ತಿಂದು ತೂಕ ಕಡಿಮೆ ಮಾಡಬಹುದಾ?
ಹೌದು ಬಾಳೆಹಣ್ಣು ತೂಕ ಇಳಿಕೆಗೆ ಸಹಕಾರಿ. ಒಮದು ಲೋಟ ಬಿಸಿ ನೀರಿನೊಂದಿಗೆ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಬಾಳೆಹಣ್ಣು ತಿಂದರೆ ತೂಕ ಇಳಿಕೆ ಉಂಟಾಗುವುದು. ಇನ್ನು ಇತರ ಸಮಯದಲ್ಲೂ ಹಸಿವು ಉಂಟಾದಾಗ ಕುರುಕುಲು ತಿಂಡಿಗಳನ್ನು ಸವಿಯುವ ಬದಲು ಒಂದು ಲೋಟ ಬಿಸಿ ನೀರು ಕುಡಿದು ಬಾಳೆಹಣ್ಣು ತಿಂದರೆ ಹಸಿವು ಕಡಿಮೆಯಾಗುತ್ತದೆ, ಮೈ ತೂಕ ಕೂಡ ಹೆಚ್ಚುವುದಿಲ್ಲ.

ಬಾಳೆಹಣ್ಣನ್ನು ನೀರಿನೊಂದಿಗೆ ಸೇವಿಸಬೇಕು, ಏಕೆ?
ಬಾಳೆಹಣ್ಣು ತಿಂದು ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳಲು ಸಹಕಾರಿ. ಅಲ್ಲದೆ ದೇಹದಲ್ಲಿರುವ ಬೇಡದ ರಾಸಾಯನಿಕಗಳನ್ನು ಮಲದ ಮೂಲಕ ಹೊರಹಾಕಲು ಕೂಡ ಸಹಕಾರಿ. ಆದ್ದರಿಂದ ಬಾಳೆಹಣ್ಣು ತಿಂದರೆ ನೀರು ಕುಡಿಯಬೇಕು.

ಬಾಳೆಹಣ್ಣು ಕುರಿತು ಹೆಚ್ಚಾಗಿ ಕೇಳುವ ಪ್ರಶ್ನೆಗಳಿವು?
ರಾತ್ರಿ ಬಾಳೆಹಣ್ಣು ತಿನ್ನಬಹುದೇ?
ರಾತ್ರಿ ಹೊತ್ತು ಬಾಳೆಹಣ್ಣು ತಿನ್ನದಿರುವುದು ಒಳ್ಳೆಯದು, ಬಾಳೆಹಣ್ಣು ಮಾತ್ರವಲ್ಲ ಯಾವುದೇ ಸಿಹಿಯಾದ ಹಣ್ಣುಗಳನ್ನು ರಾತ್ರಿ ಹೊತ್ತು ತಿನ್ನಬೇಡಿ. ಇದರಲ್ಲಿರುವ ಮೆಗ್ನಿಷ್ಯಿಯಂ ನಿದ್ದೆಗೆ ತೊಂದರೆ ತರಬಹುದು.
ಮುಟ್ಟಿನ ಸಮಯದಲ್ಲಿ ಬಾಳೆಹಣ್ಣು ತಿನ್ನಬಹುದೇ?
ಬಾಳೆಹಣ್ಣಿನಲ್ಲಿರುವ ಪೊಟಾಷ್ಯಿಯಂ ಸ್ನಾಯು ಸೆಳೆತ ಹೆಚ್ಚು ಮಾಡುವುದರಿಂದ ಮುಟ್ಟಿನ ಸಂದರ್ಭದಲ್ಲಿ ಬಾಳೆಹಣ್ಣು ತಿನ್ನಬೇಡಿ ಎಂದು ಸಲಹೆ ನೀಡುತ್ತಾರೆ.
ಬಾಳೆಹಣ್ಣು ತಿನ್ನಲು ಯಾವ ಸಮಯ ಸೂಕ್ತ?
ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಹಾಗೂ ಮಧ್ಯಾಹ್ನದ ಊಟದ ಜೊತೆ ಬಾಳೆಹಣ್ಣು ತಿನ್ನುವುದು ಒಳ್ಳೆಯದು. ಇದು ಅಜೀರ್ಣ ತಡೆಗಟ್ಟುವಲ್ಲಿಯೂ ಸಹಕಾರಿ.
ಯಾವಾಗ ಬಾಳೆಹಣ್ಣು ತಿನ್ನಬಾರದು?
ಬಾಳೆಹಣ್ಣು ತಿಂದರೆ ಹೊಟ್ಟೆ ತುಂಬುವುದರಿಂದ ಇದು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ, ಆದ್ದರಿಂದ ಮಲಗುವ ಮುಂಚೆ ಬಾಳೆಹಣ್ಣು ತಿನ್ನಬಾರದು.



Click it and Unblock the Notifications
