Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಿಪರೀತಕರಣಿ ಯೋಗಾಸನ:ತುಂಬಾ ಸರಳ ಈ ಆಸನ, ಆದರೆ ಇದರ ಪ್ರಯೋಜನವಿದೆಯಲ್ಲಾ ಅತ್ಯಾದ್ಭುತ
ವೇರಿಕೋಸ್ ವೇಯಿನ್, ಸಂಧಿವಾತ, ಜೀರ್ಣಕ್ರಿಯೆ ಸಮಸ್ಯೆ, ತಲೆನೋವು, ಅಧಿಕ ಹಾಗೂ ಕಡಿಮೆ ರಕ್ತದೊತ್ತಡ, ನಿದ್ರಾಹೀನತೆ, ಸ್ವಲ್ಪ ಖಿನ್ನತೆ, ಉಸಿರಾಟದ ತೊಂದರೆ, ಮುಟ್ಟಿನ ಸಮಯದಲ್ಲಿ ವಿಪರೀತ ಹೊಟ್ಟೆನೋವು, ಅನಿಯಮಿತ ಮುಟ್ಟು, ಮುಟ್ಟು ಇವುಗಳಲ್ಲಿ ಯಾವುದಾದರೂ ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ?
ಹಾಗಾದರೆ ವಿಪರೀತಕರಣಿ ಯೋಗಾಸನ ತುಂಬಾ ಒಳ್ಳೆಯದು. ಅಯ್ಯೋ ನನಗೆ ಯೋಗನೇ ಬರಲ್ಲಾ, ಮತ್ತೆ ಈ ಆಸನ ಮಾಡುವುದು ಹೇಗೆ ಎಂದು ಭಾವಿಸಬೇಡಿ. ನಿಮಗೆ ಯೋಗಾಸನದ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ತೊಂದರೆಯಿಲ್ಲ ಈ ಆಸನ ಆರಾಮವಾಗಿ ಮಾಡಬಹುದು.
ಈ ಆಸನ ತುಂಬಾ ಸರಳವಾದ ಆಸನ, ಆದರೆ ಇದು ನಿಮಗೆ ನೀಡುವ ಪ್ರಯೋಜನವಿದೆಯಲ್ಲಾ ಅದ್ಭುತ. ತುಂಬಾ ಸಮಯದಿಂದ ಕಾಡುತ್ತಿರುವ ಸಮಸ್ಯೆಗೆ ಈ ಒಂದು ಆಸನದಿಂದ ಗುಡ್‌ಬೈ ಹೇಳಬಹುದು. ವಿಪರೀತಕರಣಿ ಯೋಗಾಸನವನ್ನು ಸಾಮಾನ್ಯವಾಗಿ ಹೇಳುವುದಾದರೆ ಕಾಲನ್ನು ಗೋಡೆ ಮೇಲೆ ಇಟ್ಟು ಮಾಡುವ ಯೋಗಾಸನ ಇದಾಗಿದೆ.
ಈ ಆಸನದ ಬಗ್ಗೆ ಹೇಳುವುದಾದರೆ ಇದು ತುಂಬಾನೇ ಸುಲಭವಾದ ಆಸನವಾಗಿದೆ, ಇದನ್ನು ಯಾವ ಸಮಯದಲ್ಲಿ ಬೇಕಾದರೂ ಅಭ್ಯಾಸ ಮಾಡಬಹುದು, ಅದು ಇದರ ಮತ್ತೊಂದು ಪ್ಲಸ್ ಪಾಯಿಂಟ್. ಬನ್ನಿ ಈ ಯೋಗಾಸನ ಮಾಡುವುದು ಹೇಗೆ? ಇದರ ಪ್ರಯೋಜನಗಳೇನು ಎಂದು ನೋಡೋಣ:

ವಿಪರೀತ ಕರಣಿ ಮಾಡುವುದು ಹೇಗೆ?
ಇದನ್ನು ನೀವು ನೆಲದಲ್ಲಿ ಮಲಗಿಯೂ ಮಾಡಬಹುದು, ಬೆಡ್‌ನಲ್ಲಿಯೂ ಮಾಡಬಹುದು. ಈ ಆಸನ ಮಾಡುವಾಗ ಬೇಕಿದ್ದರೆ ತಲೆಯ ಬಳಿ ದಿಂಬು ಇಡಬಹುದು. ನೀವು ಮಲಗಿ ಎರಡು ಕಾಲುಗಳನ್ನು ಗೋಡೆಯ ಮೇಲಿಡಿ.
* ಈ ಭಂಗಿಯಲ್ಲಿ ಕೈಗಳನ್ನು ನಿಮ್ಮ ಸಮೀಪ ಇಡಿ.
* ಉಸಿರಾಟ ಸಾಧಾರಣವಾಗಿರಲಿ
* ಈ ಭಂಗಿಯಲ್ಲಿ ದೀರ್ಘ ಉಸಿರನ್ನು ತೆಗೆದು ಬಿಡುವುದಾದರೆ ಇನ್ನೂ ಒಳ್ಳೆಯದು.
*ನಂತರ ಏಳುವ ಮುಂಚೆ ಕಾಲುಗಳನ್ನು ಕೆಳಗೆ ಇಳಿಸಿ ಒಂದು ಬದಿಗೆ ತಿರುಗಿ ಕಾಲುಗಳನ್ನು ಹಿಡಿದು ಮಲಗಿ. ಈ ಭಂಗಿಯಲ್ಲಿ 5 ನಿಮಿಷ ಇರಿ. ನಂತರ ನಿಧಾನವಾಗಿ ಏಳಿ.
ಯೂ ಟ್ಯೂಬ್ ವೀಡಿಯೋಗಳನ್ನು ನೋಡಿದರೆ ನಿಮಗೆ ಸಿಗುತ್ತೆ, ಈ ಆಸನ ತುಂಬಾ ಸರಳವಾಗಿದೆ.

ಈ ಆಸನಗಳನ್ನೂ ಯಾರು ಮಾಡಬಾರದು?
* ಇದನ್ನು ಮುಟ್ಟಿನ ಸಮಯದಲ್ಲಿ ಮಾಡಬಾರದು (ಮುಟ್ಟಿನ ಸಮಯದಲ್ಲಿ ಕಾಡುವ ನೋವು ಈ ಆಸನವನ್ನು ಅಭ್ಯಾಸ ಮಾಡುವುದರಿಂದ ದೂರಾಗುವುದು)
* ಗ್ಲುಕೊಮಾ ಸಮಸ್ಯೆ ಇದ್ದರೆ ಈ ಆಸನ ಮಾಡಬಾರದು.
* ನಿಮಗೆ ಕುತ್ತಿಗೆ ನೋವಿದ್ದರೆ ಈ ಆಸನ ಮಾಡಬೇಡಿ.

ವಿಪರೀತಕರಣಿ ಎಷ್ಟು ಹೊತ್ತು ಮಾಡಬಹುದು?
* ನೀವು ವಿಪರೀತಕರಣಿ 15 ನಿಮಿಷ ಮಾಡಿ.
* ದಿನದಲ್ಲಿ ಎರಡು ಬಾರಿ ಬೇಕಾದರೂ ಮಾಡಬಹುದು.
* ಯಾವ ಸಮಯದಲ್ಲಿ ಬೇಕಾದರೂ ಮಾಡಬಹುದು.
* ಬೆಳಗ್ಗೆ ಮತ್ತು ಸಂಜೆ ಈ ಯೋಗಾಸನ ಖಾಲಿ ಹೊಟ್ಟೆಯಲ್ಲಿ ಮಾಡಿ.

ವಿಪರೀತಕರಣಿ ಪ್ರಯೋಜನಗಳು
* ಸಿಯಾಟಿಕ್ ನರ್ವ್‌ಗೆ ತುಂಬಾ ಒಳ್ಳೆಯದು
* ನರಗಳಿಗೆ ತುಂಬಾ ರಿಲ್ಯಾಕ್ಸ್ ಮಾಡುತ್ತೆ
* ಬೆನ್ನು ಮತ್ತು ಭುಜಗಳಿಗೆ ತುಂಬಾ ಒಳ್ಳೆಯದು
* ಮೆನೋಪಾಸ್ ಸಮಯದಲ್ಲಿ ತುಂಬಾ ಪ್ರಯೋಜನಕಾರಿ.
* ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು
* ವೇರಿಕೋಸ್ ವೇಯಿನ್‌ಗೆ ತುಂಬಾ ಒಳ್ಳೆಯದು



Click it and Unblock the Notifications