Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಸೋಡಾ ಕುಡಿಯುವ ಅಭ್ಯಾಸವಿದೆಯೇ? ಆಯುಸ್ಸು ಕಡಿಮೆಯಾಗುತ್ತೆ ಹುಷಾರ್!
ನೀವು ವಾರದಲ್ಲಿ ಎಷ್ಟು ಬಾರಿ ಸೋಡಾ ಕುಡಿಯುತ್ತೀರಿ?? ಡಯಟ್ ಸೋಡಾ ಕುಡಿಯುವ ಅಭ್ಯಾಸವಿದೆಯೇ? ಹಾಗಾದರೆ ಆರೋಗ್ಯ ಹುಷಾರ್!
ಕೆಲವರಿಗೆ ದಿನಾ ಸೋಡಾ ಕುಡಿಯುವ ಅಭ್ಯಾಸವಿರುತ್ತದೆ, ಇನ್ನು ಪಿಜ್ಜಾ-ಬರ್ಗರ್‌ನಂಥ ಆಹಾರ ಸೇವಿಸುವಾಗ ಸೋಡಾ ಕುಡಿದರೆ ಮಾತ್ರ ಡಯಟ್ ಕಂಪ್ಲೀಟ್ ಆದಂತೆ ಅನಿಸುವುದು ಅಲ್ವಾ? ಆದರೆ ಸೋಡಾ ಸೇವನೆಯಿಂದಾಗಿ ಆಯುಸ್ಸು ಕಡಿಮೆಯಾಗುವುದು ಎಂದು ಅಧ್ಯಯನ ತಿಳಿಸಿದೆ, ಈ ಅಧ್ಯಯನ ಕುರಿತ ಹೆಚ್ಚಿನ ಮಾಹಿತಿ ತಿಳಿಯೋಣ:

ಅಧ್ಯಯನ ವರದಿ
ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿ ಸೋಡಾ ಕುಡಿಯುವುದರಿಂದ ಬೇಗನೆ ಸಾವು ಸಂಭವಿಸುವುದು ಎಂಬುವುದಾಗಿ ಹೇಳಿದೆ. ಈ ಅಧ್ಯಯನದಲ್ಲಿ ಯುರೋಪಿಯನ್ ದೇಶಗಳ 5 ಲಕ್ಷ ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಸಾಮಾನ್ಯ ಸೋಡಾ ಹಾಗೂ ಡಯಟ್ ಸೋಡಾ ಎರಡರಲ್ಲಿ ಯಾವುದು ಹೆಚ್ಚು ಅಪಾಯಕಾರಿ?
ಡಯಟ್ ಸೋಡಾ ಹಾಗೂ ಸಾಮಾನ್ಯ ಸೋಡಾ ಎರಡು ಕೂಡ ಆರೋಗ್ಯಕ್ಕೆ ಒಳ್ಳೆಯದಲ್ಲ. ಸಾಫ್ಟ್ ಡ್ರಿಂಕ್ಸ್ ಕೋಲಾ , ಸೋಡಾ, ಫ್ರೂಟ್ ಪಂಚ್, ಸಕ್ಕರೆ ಹಾಕಿದ ನಿಂಬೂ ಶರಬತ್, ಕೃತಕ ಸಿಹಿಯ ತಂಪು ಪಾನೀಯಗಳು ಇವುಗಳನ್ನು ಸೇವಿಸುವುದರಿಂದ ಆಯುಸ್ಸು ಕಡಿಮೆಯಾಗುವುದು.

ಸಿಹಿ ಪಾನೀಯಗಳನ್ನು ಕುಡಿಯುವುದಕ್ಕೂ ಒಬೆಸಿಟಿಗೂ ಲಿಂಕ್ ಇದೆ
ಕೃತಕ ಸಿಹಿ ಪಾನೀಯಗಳ ಸೇವನೆಗೂ ಹಾಗೂ ಅನಾರೋಗ್ಯಕ್ಕೂ ಒಂದಕ್ಕೊಂದು ಸಂಬಂಧವಿದೆ. ಕೃತಕ ಸಿಹಿ ಪಾನೀಯಗಳ ಸೇವನೆ ಮಾಡಿದರೆ ಬಾಯಿ ರುಚಿ ಅನಿಸುವುದು, ಹೊಟ್ಟೆ ತುಂಬುವುದು ಆದರೆ ದೇಹಕ್ಕೆ ಅಗ್ಯತವಾದ ಯಾವುದೇ ಪೋಷಕಾಂಶ ದೊರೆಯುವುದಿಲ್ಲ. ಅಲ್ಲದೆ ಈ ಪಾನೀಯಗಳ ಸೇವನೆಯಿಂದ ಒಬೆಸಿಟಿ ಸಮಸ್ಯೆ ಹೆಚ್ಚುವುದು.
ತಂಪು ಪಾನೀಯಗಳ ಸೇವನೆಯಿಂದ ಅಜೀರ್ಣ ಸಮಸ್ಯೆ ಉಂಟಾಗುವುದು.

ಇದರ ಜೊತೆಗೆ ಜೀವನಶೈಲಿ ಕೂಡ ಮುಖ್ಯವಾಗುತ್ತೆ
ತಂಪು ಪಾನೀಯ ಸೇವನೆ ಜೊತೆಗೆ ನಮ್ಮ ಜೀವನಶೈಲಿ ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ.
ಅವರ ಯಾವ ಕೆಲಸ ಮಾಡುತ್ತಾರೆ, ಆರೋಗ್ಯ ಸ್ಥಿತಿ, ತಂಬಾಕು ಬಳಕೆ, ಮದ್ಯಪಾನ, ಎಷ್ಟು ದೈಹಿಕ ವ್ಯಾಯಾಮ ಮಾಡುತ್ತಾರೆ ಈ ಎಲ್ಲಾ ಅಂಶಗಳು ಕೂಡ ಆರೋಗ್ಯದ ಮೇಲೆ ಪರಿಣಾಮ ಬೀರುವುದು. ಸೋಡಾ ಸೇವನೆ ಜೊತೆಗೆ ಯಾವುದೇ ದೈಹಿಕ ವ್ಯಾಯಾಮ ಇಲ್ಲದಿರುವುದು, ಅನಾರೋಗ್ಯಕರ ಆಹಾರಶೈಲಿ ಇವೆಲ್ಲಾ ಸೇರಿದಾಗ ಆರೋಗ್ಯ ಬೇಗನೆ ಹಾಳಾಗುವುದು.

ಅಧ್ಯಯನದಿಂದ ತಿಳಿದು ಬಂದಿರುವ ಅಂಶವೇನು?
* ಯಾರು ಪ್ರತಿದಿನ ಒಂದು ಅಥವಾ ಎರಡು ಗ್ಲಾಸ್ ಸೋಡಾ ಕುಡಿಯುತ್ತಾರೋ ಅವರಿಗೆ ಬೇಗನೆ ಸಾವು ಬರುವ ಸಾಧ್ಯತೆ ಶೇ. 17ರಷ್ಟಿದೆ.
* ಪ್ರತಿದಿನ ತಂಪು ಪಾನೀಯ ಕುಡಿಯುವುದರಿಂದ ಬೇಗನೆ ಸಾಯುವ ಸಾಧ್ಯತೆ ಶೇ. 26ರಷ್ಟಿದೆ.
* ಕೃತಕ ಸಿಹಿ ಪಾನೀಯ ಅಥವಾ ತಂಪು ಪಾನೀಯ ಕುಡಿಯುವುದಕ್ಕೂ ಅನಾರೋಗ್ಯ ಸಮಸ್ಯೆ ಬರುವುದಕ್ಕೂ ಒಂದಕ್ಕೊಂದು ಸಂಬಂಧವಿದೆ.
* ತಂಪು ಪಾನೀಯ ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಹೆಚ್ಚುವುದು.
* ಅಪೆಂಡೆಕ್ಸ್, ಲಿವರ್ ಸಮಸ್ಯೆ, ಕರುಳಿನ ಸಮಸ್ಯೆ, ಮೇಧೋಜೀರಕ ಗ್ರಂಥಿಯಲ್ಲಿ ತೊಂದರೆ ಮುಂತಾದ ಸಮಸ್ಯೆಗಳು ಕಂಡು ಬರುವುದು.
ಈ ಅಧ್ಯಯನವು ಸೋಡಾ ಸೇವನೆಯಿಂದ ಅನಾರೋಗ್ಯ ಹೆಚ್ಚವುದು, ಇದರಿಂದಾಗಿ ಆಯುಸ್ಸು ಕಡಿಮೆಯಾಗುವುದಾಗಿ ಹೇಳಿದೆ.



Click it and Unblock the Notifications