For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ದಾಸವಾಳ ಜ್ಯೂಸ್‌ ಕುಡಿದರೆ ಈ ಎಲ್ಲಾ ಪ್ರಯೋಜನಗಳಿವೆ

|

ಬೇಸಿಗೆ ಬಂತೆಂದರೆ ಆ ಕಾಲಕ್ಕೆ ಸೂಕ್ತವಾದ ಆಹಾರಶೈಲಿ ಅಳವಡಿಸಿಕೊಳ್ಳುವುದರಿಂದ ದೇಹದ ಉಷ್ಣತೆ ಕಾಪಾಡಿ ಆರೋಗ್ಯವನ್ನು ವೃದ್ಧಿಸಬಹುದು. ಬೇಸಿಗೆಯಲ್ಲಿ ನೀರು ಬಾಯಾರಿಕೆ ಹೆಚ್ಚಾಗಿರುವುದರಿಂದ ಜ್ಯೂಸ್‌ ಕುಡಿಯಲು ಬಯಸುತ್ತೇವೆ.

How To Make Hibiscus Flower Juice And Its Benefits In Summer | Boldsky Kannada
How To make Hibiscus Flower And Its Benefits In Summer

ಬಾಯಾರಿಕೆ ಕಡಿಮೆ ಮಾಡಲು ಕಾರ್ಬೋಹೈಡ್ರೇಟ್‌ ಜ್ಯೂಸ್‌ ಕುಡಿಯುವುದಕ್ಕಿಂತ ನೈಸರ್ಗಿಕವಾಗಿ ಸಿಗುವ ವಸ್ತುಗಳಿಂದ ಜ್ಯೂಸ್‌ ಮಾಡಿ ಕುಡಿದರೆ ಬಾಯಿಗೂ ರುಚಿ, ಆರೋಗ್ಯವೂ ಹೆಚ್ಚು. ಬೇಸಿಗೆಯಲ್ಲಿ ಕುಡಿಯಲು ಸೂಕ್ತವಾದ ಪಾನೀಯಗಳಲ್ಲೊಂದು ದಾಸವಾಳದ ಪಾನೀಯ. ಈ ಪಾನೀಯ ಮಾಡಿಟ್ಟರೆ 2 ತಿಂಗಳು ಬಳಸಬಹುದು. ಇನ್ನು ಸಾಮಾನ್ಯವಾಗಿ ದಾಸವಾಳ ಹೂ ಎಲ್ಲರ ಮನೆ ಮುಂದೆ ಇರುತ್ತದೆ.

ಬನ್ನಿ ಇದನ್ನು ಬಳಸಿ ಆರೋಗ್ಯಕರ ಜ್ಯೂಸ್‌ ತಯಾರಿಸುವುದು ಹೇಗೆ ಹಾಗೂ ಇದರಿಂದ ದೊರೆಯುವ ಆರೋಗ್ಯಕರ ಪ್ರಯೋಜನಗಳೇನು ಎಂದು ನೋಡೋಣ:

ಬೇಕಾಗಿರುವ ಸಾಮಗ್ರಿ

ಬೇಕಾಗಿರುವ ಸಾಮಗ್ರಿ

  • ದಾಸಾವಾಳದ ಹೂ 20-25
  • ಸಕ್ಕರೆ 250ಗ್ರಾಂ
  • ನೀರು 1/4 ಲೀಟರ್
  • ನಿಂಬೆ ಹಣ್ಣು 5-6
  • ಮಾಡುವ ವಿಧಾನ

    ಮಾಡುವ ವಿಧಾನ

    ನೀರನ್ನು ಬಾಣಲಿಗೆ ಹಾಕಿ ಕುದಿಸಿ, ನೀರು ಕುದಿಯಲಾರಂಭಿಸಿದಾಗ ಸಕ್ಕರೆ ಹಾಕಿ.

    • ಇದರಲ್ಲಿ ಸಕ್ಕರೆ ಕರಗಿದರೆ ಸಾಕು, ನಂತರ ಗ್ಯಾಸ್‌ ಆಫ್‌ ಮಾಡಿ, ಈಗ ದಾಸವಾಳದ ಹೂಗಳನ್ನು ಹಾಕಿ. ದಾಸಾವಾಳದ ಹೂ ಹಾಕಿದ ಮೇಲೆ ಕುದಿಸಬೇಡಿ. ತಣ್ಣಗಾದ ಮೇಲೆ ಅದನ್ನು ಸೋಸಿ. ಹೂ ಹೆಚ್ಚು ಹಾಕಿದರೆ ಮತ್ತಷ್ಟು ಬಣ್ಣ ಚೆನ್ನಾಗಿರುತ್ತದೆ.
    • ಈಗ ಹಿಂಡಿದ ನಿಂಬೆ ರಸ ಹಾಕಿ ಮಿಶ್ರ ಮಾಡಿ. ಇದು ಎರಡು ತಿಂಗಳವರೆಗೆ ಚೆನ್ನಾಗಿರುತ್ತದೆ. ಇನ್ನು ಸುವಾಸನೆಗೆ ಬೇಕಾದರೆ ರೋಸ್‌ ಎಸೆನ್ಸ್ ಹಾಕಿಡ ಬಹುದು.
    • ಇದನ್ನು ಡಬ್ಬದಲ್ಲಿ ಸಂಗ್ರಹಿಸಿಟ್ಟು ಎರಡು ತಿಂಗಳವರೆಗೆ ಬಳಸಬಹುದು.
    • ಇದನ್ನು ಬೇಕಾದಾಗ ಅರ್ಧ ಲೋಟ ಜ್ಯೂಸ್‌ಗೆ ಅರ್ಧ ಲೋಟ ನೀರು ಬಳಸಿ ಮಿಕ್ಸ್ ಮಾಡಿ ಕುಡಿಯಬಹುದು.
    • ಇದನ್ನು ಕುಡಿಯುವುದರಿಂದ ಹಲವಾರು ಪ್ರಯೋಜನಗಳನ್ನು ಪಡೆಯಬಹುದು:

      1. ದೇಹದ ಉಷ್ಣತೆ ಕಡಿಮೆ ಮಾಡುತ್ತದೆ.

      1. ದೇಹದ ಉಷ್ಣತೆ ಕಡಿಮೆ ಮಾಡುತ್ತದೆ.

      ಬೇಸಿಗೆಗಾಲಕ್ಕೆ ತುಂಬಾ ಸೂಕ್ತವಾದ ಪಾನೀಯ ಇದಾಗಿದೆ. ಬೇಸಿಗೆಯಲ್ಲಿ ದೇಹದ ಉಷ್ಣತೆ ಕಾಪಾಡುವಲ್ಲಿ ಈ ಪಾನೀಯ ತುಂಬಾ ಸಹಕಾರಿ. ಇನ್ನು ಈ ಪಾನೀಯ ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಕಾಪಾಡುತ್ತದೆ. ಇನ್ನು ಬಿಳಿ ಬಣ್ಣದ ದಾಸವಾಳ ಹೂ ಕಣ್ಣುಗಳಿಗೆ ತಂಪು ನೀಡುತ್ತದೆ.

      2. ಮಹಿಳೆಯರಿಗೆ ಬಿಳುಪು ಹೋಗುವುದು ತಡೆಗಟ್ಟುವಲ್ಲಿ ಸಹಕಾರಿ

      2. ಮಹಿಳೆಯರಿಗೆ ಬಿಳುಪು ಹೋಗುವುದು ತಡೆಗಟ್ಟುವಲ್ಲಿ ಸಹಕಾರಿ

      ಕೆಲ ಮಹಿಳೆಯರಿಗೆ ಬಿಳುಪು ಹೋಗುವ ಸಮಸ್ಯೆ ಇರುತ್ತದೆ. ಅಂಥವರು ಈ ಪಾಣಿಯ ಕುಡಿದರೆ ಬಿಳುಪು ಹೋಗುವುದು ಕಡಿಮೆಯಾಗುವುದು. ಕೆಂಪು ದಾಸವಾಳದ ಜಿತೆ ಬಿಳಿ ದಾಸವಾಳದ ಹೂ ಹಾಕಿ ಈ ಪೇಯ ತಯಾರಿಸಿ ಕುಡಿದರೆ ಬಿಳುಪು ಹೋಗುವುದನ್ನು ತಡೆಗಟ್ಟಬಹುದು.

      3. ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

      3. ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು

      ಹೃದಯ ಸಂಬಂಧಿ ಸಮಸ್ಯೆ ಇರುವವರಿಗೆ ಈ ಪಾನೀಯ ತುಂಬಾ ಒಳ್ಳೆಯದು. ಇದನ್ನು ಕುಡಿಯುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿಡಬಹುದು, ಹಾಗೂ ಇದು ಬೊಜ್ಜು ನಿವಾರಕ ಗುಣ ಹೊಂದಿರುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಇದರಿಂದ ಹೃದಯದ ಸ್ವಾಸ್ಥ್ಯ ಹೆಚ್ಚುವುದು.

      4. ಬಿಪಿ ಕಡಿಮೆ ಮಾಡುತ್ತದೆ

      4. ಬಿಪಿ ಕಡಿಮೆ ಮಾಡುತ್ತದೆ

      ಈ ಜ್ಯೂಸ್ ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಸಂಧಿವಾತ ನೋವು ಕೂಡ ಕಡಿಮೆಯಾಗುವುದು.ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಅಂಶವಿರುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು.

      • ಇದಕ್ಕೆ ಸಕ್ಕರೆ ಹಾಕದಿದ್ದರೆ ಅತ್ಯಂತ ಆರೋಗ್ಯಕರವಾದ ಪೇಯ ಇದಾಗಿದೆ. ಇದರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಶೂನ್ಯವಾಗಿರುತ್ತದೆ.
      • ಇದು ಬೊಜ್ಜನ್ನು ಕರಗಿಸುವ ಗುಣ ಹೊಂದಿದೆ.
      • 5. ಮೂತ್ರ ನಾಳದ ಸೋಂಕು ನಿವಾರಣೆ

        5. ಮೂತ್ರ ನಾಳದ ಸೋಂಕು ನಿವಾರಣೆ

        ಮೂತ್ರ ನಾಳದ ಸೋಂಕು ನಿವಾರಣೆಗೆ ಈ ಪೇಯ ಅತ್ಯಂತ ಸಹಕಾರಿಯಾಗಿದೆ. ಕೆಲವೊಮ್ಮೆ ದೇಹದ ಉಷ್ಣತೆ ಹೆಚ್ಚಾದ ಕೆಲವರಿಗೆ ಮೂತ್ರ ಮಾಡುವಾಗ ಉರಿ ಕಂಡು ಬರುತ್ತದೆ. ಅದನ್ನು ಕಡಿಮೆ ಮಾಡುವಲ್ಲಿ ಎಳನೀರಿನಷ್ಟೇ ಈ ಪೇಯ ಪರಿಣಾಮಕಾರಿಯಾಗಿದೆ. ಇನ್ನು ಮಹಿಳೆಯರಿಗೆ ಕಾಡುವ ಮುಟ್ಟಿನ ನೋವು ಕಡಿಮೆ ಮಾಡುವಲ್ಲಿ ಕೂಡ ಈ ಜ್ಯೂಸ್ ಸಹಕಾರಿಯಾಗಿದೆ.

        6. ಕೆಮ್ಮು-ಶೀತಕ್ಕೆ ಮನೆಮದ್ದು

        6. ಕೆಮ್ಮು-ಶೀತಕ್ಕೆ ಮನೆಮದ್ದು

        ಬೇಸಿಗೆಯಲ್ಲಿ ಅಲರ್ಜಿ ಸಮಸ್ಯೆ ಇರುವವರಿಗೆ ಕೆಮ್ಮು-ಶೀತ ಕಾಣಿಸಿಕೊಳ್ಳುತ್ತದೆ. ಅದನ್ನು ಕಡಿಮೆ ಮಾಡುವ ಸಾಮರ್ಥ್ಯ ಈ ಪಾನೀಯದಲ್ಲಿ. ಈ ಪಾನೀಯದಲ್ಲಿ ದಾಸವಾಳ ಹೂ ಹಾಗೂ ನಿಂಬೆಸ ಹಾಕಲಾಗಿದೆ. ಎರಡರಲ್ಲೂ ವಿಟಮಿನ್‌ ಸಿ ಇರುವುದರಿಂದ ಕೆಮ್ಮು-ಶೀತ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿದೆ.

        7.ಕೂದಲಿನ ಆರೋಗ್ಯಕ್ಕೂ ಒಳ್ಳೆಯದು

        7.ಕೂದಲಿನ ಆರೋಗ್ಯಕ್ಕೂ ಒಳ್ಳೆಯದು

        ದಾಸವಾಳದ ಹೂ ಹಾಗೂ ಎಲೆ ಕೂದಲನ್ನು ಬಾಹ್ಯವಾಗಿ ಆರೈಕೆ ಮಾಡುವಲ್ಲಿ ತುಂಬಾ ಪ್ರಯೋಜನಕಾರಿ. ಇನ್ನು ಈ ರೀತಿ ಜ್ಯೂಸ್ ಮಾಡಿ ಕುಡಿಯುವುದರಿಂದ ಆಂತರಿಕವಾಗಿ ಕೂಡ ಪೋಷಣೆ ಮಾಡುತ್ತದೆ. ಕೂದಲಿಗೆ ಅಗ್ಯತವಾದ ವಿಟಮಿನ್‌ ಒದಗಿಸುತ್ತದೆ. ಕೂದಲು ಮಂದವಾಗಿ ಬೆಳೆಯುವುದು.

        ಸೂಚನೆ: ಇತರ ಔಷಧಿಯನ್ನು ತೆಗೆದುಕೊಳ್ಳುತ್ತಿರುವವರು ಇದನ್ನು ತೆಗೆದುಕೊಳ್ಳಬಾರದು.

        • ಇನ್ನು ಗರ್ಭಣಿಯರು ಈ ಜ್ಯೂಸ್ ಕುಡಿಯಬೇಡಿ.
English summary

How To make Hibiscus Flower And Its Benefits In Summer

Do you ever tried hibiscus recipe, Here are recipe and how it is so useful in summer, Read on.
Story first published: Thursday, April 9, 2020, 12:14 [IST]
X
Desktop Bottom Promotion