ಈ 7 ರೀತಿಯಲ್ಲಿ ಜೇನು ಬಳಸಿದರೆ ಮೈ ಬೊಜ್ಜು ಕರಗುವುದು

ಮೈ ತೂಕ ಇಳಿಕೆಯಲ್ಲಿ ಜೇನು ತುಂಬಾ ಸಹಕಾರಿ ಎಂಬುವುದು ಎಲ್ಲರಿಗೆ ಗೊತ್ತಿರುವ ವಿಷಯ. ಆದರೆ ಕೆಲವರು ನಾನು ಜೇನು ತುಪ್ಪ ಕುಡಿದೆ ಆದರೂ ಏನೂ ಪ್ರಯೊಜನವಾಗಿಲ್ಲ ಎಂದು ಹೇಳುತ್ತಾರೆ. ಜೇನು ತುಪ್ಪ ಆರೋಗ್ಯಕರವಾದ ಹಾಗೂ ನೈಸರ್ಗಿಕವಾದ ಸಿಹಿಯಾಗಿದ್ದು ಇದು ದೇಹದಲ್ಲಿನ ಕೊಬ್ಬು ಕರಗಿಸುವಲ್ಲಿ ಸಹಕಾರಿ.

ಜೇನನ್ನು ಆಹಾರ ವಸ್ತುವಾಗಿ ಬಳಸಬಹುದು, ಮದ್ದಾಗಿಯೂ ಬಳಸಲಾಗುವುದು. ಇಲ್ಲಿ ನಾವು ಜೇನುತುಪ್ಪ ಬಳಸಿ ತೂಕ ಇಳಿಕೆ ಮಾಡುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ.

ಮೈ ತೂಕ ಹೆಚ್ಚಾಗುವುದು ಇತ್ತೀಚೆಗೆ ಹೆಚ್ಚಿನವರ ಸಮಸ್ಯೆಯಾಗಿದೆ. ಅದಕ್ಕಾಗಿ ಮಾತ್ರೆಗಳ ಮೊರೆ ಹೋದರೆ ಅದರಿಂದ ಅಡ್ಡಪರಿಣಾಮ ತಪ್ಪಿದ್ದಲ್ಲ. ತೂಕ ಇಳಿಕೆಗೆ ವ್ಯಾಯಾಮ, ಆರೋಗ್ಯಕರ ಆಹಾರ ಪಾಲಿಸಿದರೆ ಮಾತ್ರ ಆರೋಗ್ಯಕರವಾಗಿ ತೂಕ ಇಳಿಕೆ ಸಾಧ್ಯ. ಬನ್ನಿ ಜೇನು ಬಳಸಿ ಆರೋಗ್ಯಕರವಾಗಿ ತೂಕ ಇಳಿಕೆ ಮಾಡುವುದು ಹೇಗೆ ಎಂದು ನೋಡೋಣ:

ಜೇನು ಮತ್ತು ತೂಕ ಇಳಿಕೆ

ಜೇನು ಮತ್ತು ತೂಕ ಇಳಿಕೆ

ರಾಷ್ಟ್ರೀಯ ಜೇನು ಕೃಷಿ ಇಲಾಖೆ ಪ್ರಕಾರ ಜೇನು ಕೊಬ್ಬು ರಹಿತ, ಕೊಲೆಸ್ಟ್ರಾಲ್ ರಹಿತ, ಸೋಡಿಯಂ ರಹಿತವಾಗಿದ್ದು ತೂಕ ಇಳಿಕೆಗೆ ಅತ್ಯುತ್ತಮವಾದ ಆಹಾರವಾಗಿದೆ. ಇದರ ಸಿಹಿ ಹಾಗೂ ಜೇನು ತೂಕ ಇಳಿಕೆಗೆ ಹೇಗೆ ಸಹಕಾರಿ ಎಂಬುವುದರ ಬಗ್ಗೆ ಹಲವಾರು ಅಧ್ಯಯನಗಳು ನಡೆದಿವೆ.

ಇದನ್ನು ಕೃತಕ ಸಿಹಿ ಬದಲಿಗೆ ಬಳಸಿದರೆ ಬಾಯಿಗೆ ಸಿಹಿ ಮಾತ್ರವಲ್ಲ ವಿಟಮಿನ್ಸ್ ಹಾಗೂ ಖನಿಜಾಂಶ ದೊರೆಯುವುದರಿಂದ ಇದನ್ನು ಮಿತಿಯಲ್ಲಿ ತಿಂದರೆ ತುಂಬಾ ಆರೋಗ್ಯಕರ.

ಜೇನಿನಲ್ಲಿರುವ ಹಾರ್ಮೋನ್ಸ್ ಚಯಾಪಚಯ ಕ್ರಿಯೆ ಚೆನ್ನಾಗಿ ನಡೆಯುವಂತೆ ಮಾಡಿ, ಹಸಿವು ನಿಯಂತ್ರಿಸಿ ತೂಕ ಇಳಿಕೆ ಮಾಡುತ್ತದೆ. ಇದರಲ್ಲಿರುವ ಖನಿಜಾಂಶಗಳು ಹೃದಯದ ಸ್ವಾಸ್ಥ್ಯ ಕಾಪಾಡಿ, ಮೈ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು.

ತೂಕ ಇಳಿಕೆಗೆ ಜೇನು ಬಳಸುವ ವಿಧಾನ

ತೂಕ ಇಳಿಕೆಗೆ ಜೇನು ಬಳಸುವ ವಿಧಾನ

ಅಡುಗೆಯಲ್ಲಿ ಜೇನು ಬಳಕೆ

ಅಡುಗೆಯಲ್ಲಿಎಣ್ಣೆ ಬದಲಿಗೆ ಜೇನು ಬಳಸಿ ತೂಕ ಇಳಿಕೆ ಮಾಡಬಹುದು. ಎಣ್ಣೆಯಲ್ಲಿ ಫ್ರೈ ಮಾಡುವ ಆಹಾರಕ್ಕಿಂತ ಗ್ರಿಲ್ಡ್ ಮಾಡಿದ ಆಹಾರ ಆರೋಗ್ಯಕರ. ಗ್ರಿಲ್ಡ್ ಮಾಡುವಾಗ ಎಣ್ಣೆ ಬದಲಿಗೆ ಜೇನು ಹಾಕಿ ಗ್ರಿಲ್ಡ್ ಮಾಡಿ ತಿಂದರೆ ಬೇಗ ತೂಕ ಇಳಿಕೆ ಸಾಧ್ಯ.

ಹನಿ ಸ್ಯಾಂಡ್‌ವಿಚ್: ಸಂಜೆ ಸ್ನ್ಯಾಕ್ಸ್‌ಗೆ ಸ್ಯಾಂಡ್‌ವಿಚ್‌ ಇಷ್ಟಪಡುವುದಾದರೆ ಜೇನಿನ ಸ್ಯಾಂಡ್‌ವಿಚ್ ಸವಿಯಿರಿ. ಗೋಧಿ ಅಥವಾ ಧಾನ್ಯದ ಬ್ರೆಡ್‌ಗೆ ಜೇನು ಸವರಿ ತಿನ್ನಿ. ಈ ಸ್ಯಾಂಡ್‌ವಿಚ್‌ ಡಿನ್ನರ್ ಆಗಿ ಬಳಸಿ ತೂಕ ಕಡಿಮೆ ಮಾಡಬಹುದು.

ಹಾಲಿಗೆ ಜೇನು ಹಾಕಿ

ಹಾಲಿಗೆ ಸಕ್ಕರೆ ಹಾಕುವ ಬದಲು ಜಾನು ಹಾಕಿ ಕುಡಿಯಿರಿ. ಇದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುವುದು. ಜಿಮ್‌ಗೆ ಹೋಗುವ ಮುನ್ನ ಹಾಲಿಗೆ ಜೇನು ಹಾಕಿ ಕುಡಿದರೆ ಹೆಚ್ಚು ಹೊತ್ತು ವರ್ಕೌಟ್ ಮಾಡಲು ಶಕ್ತಿ ಸಿಗುತ್ತದೆ ಎಂದು ಜಿಮ್ ಟ್ರೈನರ್ ಸಲಹೆ ನೀಡುತ್ತಾರೆ.

ಜೇನಿನಿಂದ ತೂಕ ಇಳಿಕೆ

ಜೇನಿನಿಂದ ತೂಕ ಇಳಿಕೆ

ಜೇನು ಮತ್ತು ಬಿಸಿ ನೀರು: ತೂಕ ಇಳಿಕೆಗೆ ಇದು ತುಂಬಾ ಸಹಕಾರಿ. ಬೆಳಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಬಿಸಿ ನೀರಿಗೆ ಒಂದು ಚಮಚ ಜೇನು ಹಾಕಿ ಕುಡಿದರೆ ಹೊಟ್ಟೆ ಬೊಜ್ಜು, ಸೊಂಟದ ಸುತ್ತ ಸಂಗ್ರಹವಾದ ಹಠಮಾರಿ ಬೊಜ್ಜು ಎಲ್ಲವೂ ಕರಗುವುದು.

ಟೀಗೆ ಜೇನು ಮತ್ತು ನಿಂಬೆರಸ: ಬ್ಲ್ಯಾಕ್‌ ಟೀ ಮಾಡಿ ಅದಕ್ಕೆ ಜೇನು ಹಾಗೂ ನಿಂಬೆರಸ ಹಾಕಿ ದಿನದಲ್ಲಿ ಒಂದು ಅಥವಾ ಎರಡು ಬಾರಿ ಕುಡಿದರೆ ತೂಕ ಇಳಿಕೆಗೆ ಸಹಕಾರಿ ಹಾಗೂ ದೇಹಕ್ಕೆ ಚೈತನ್ಯ ದೊರೆಯುವುದು.

ಓಟ್ಸ್ ಜೊತೆ ಜೇನು: ತೂಕ ಇಳಿಕೆಗೆ ಓಟ್ಸ್ ತುಂಬಾ ಸಹಕಾರಿ, ಅದರ ಜೊತೆ ಜೇನು ಕೂಡ ಸೇರಿಸಿದರೆ ತುಂಬಾ ಪ್ರಯೋಜನಕಾರಿ, ಬೇಗನೆ ತೂಕ ಇಳಿಕೆ ಮಾಡಬಹುದು. ಓಟ್ಸ್ ಮಾಡಿ ಅದಕ್ಕೆ ಜೇನು ಹಾಕಿ ತಿಂದರೆ ಬಾಯಿಗೂ ರುಚಿಯಾಗಿರುತ್ತದೆ.

ಜೇನು ಮತ್ತು ಚಕ್ಕೆ

ಫ್ರೂಟ್‌ ಸಲಾಡ್‌ ಅಥವಾ ವೆಜಿಟೇಬಲ್ ಸಲಾಡ್‌ಗೆ ಚಕ್ಕೆ ಪುಡಿ, ಜೇನು ಹಾಕಿ ತಿಂದರೆ ಬಾಯಿಗೂ ರುಚಿ, ತೂಕ ಇಳಿಕೆಗೆ ಸಹಕಾರಿ.

ಸಲಹೆ: ಜೇನನ್ನು ಮಿತಿಯಲ್ಲಿ ತಿನ್ನಿ, ಯಾವುದೂ ಅತಿಯಾದರೆ ಒಳ್ಳೆಯದಲ್ಲ. ಮೈ ತೂಕ ಕಡಿಮೆ ಮಾಡಲು ಜೇನನ್ನು ಬೆಳಗ್ಗೆ ಬಳಸಿದರೆ ಮತ್ತೆ ಬಳಸಲು ಹೋಗಬೇಡಿ. ಇಡೀ ದಿನದ ಆಹಾರಕ್ರಮದಲ್ಲಿ ಜೇನು ಹಾಕಲು ಹೋಗಬೇಡಿ.

ಹೆಚ್ಚು ಕೇಳುವ ಪ್ರಶ್ನೆಗಳಿವು

ಹೆಚ್ಚು ಕೇಳುವ ಪ್ರಶ್ನೆಗಳಿವು

ತೂಕ ಇಳಿಕೆಗೆ ಜೇನು ಸಹಕಾರಿಯೇ?

ಮಲಗುವ ಮುನ್ನ ಅಥವಾ ಬೆಳಗ್ಗೆ ಎದ್ದು ಬಿಸಿ ನೀರಿಗೆ ಸ್ವಲ್ಪ ಜೇನು ಹಾಕಿದರೆ ದೇಹದಲ್ಲಿ ಕೊಬ್ಬು ಕರಗುವುದು.

ಜೇನು ಬಳಸಿ ಎಷ್ಟು ತೂಕ ಇಳಿಕೆ ಮಾಡಬಹುದು?

ಇದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ.

ಜೇನು ತೂಕ ಹೆಚ್ಚು ಮಾಡುವುದಾ?

ಜೇನನ್ನು ತುಮಬಾ ತಿಂದರೆ ತೂಕ ಹೆಚ್ಚಾಗುವುದು.

ಜೇನು ಬಳಸಿ ಹೊಟ್ಟೆ ಬೊಜ್ಜು ಕರಗಿಸಬಹುದಾ?

ಮಲಗುವ ಮುನ್ನ ಜೇನು ಹಾಗೂ ಸ್ವಲ್ಪ ಚಕ್ಕೆ ಪುಡಿ ಬಳಸಿದರೆ ಹೊಟ್ಟೆ ಬೊಜ್ಜು ಕರಗುವುದು.

ದಿನದಲ್ಲಿ ಎಷ್ಟು ಪ್ರಮಾಣದಲ್ಲಿ ಜೇನು ತಿನ್ನಬಹುದು?

2 ಚಮಚಕ್ಕಿಂತ ಹೆಚ್ಚು ಜೇನು ತಿನ್ನಬೇಡಿ.

English summary

Different Ways To Eat Honey For Weight Loss

In the current article, we will look at the topic of honey for weight loss, where we explore the different ways through which you can use honey for weight loss.
Story first published: Tuesday, February 18, 2020, 13:03 [IST]
X
Desktop Bottom Promotion