Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಾತ್ರೆಯ ಹಂಗಿಲ್ಲದೆ ಸ್ವಾಭಾವಿಕವಾಗಿ ನೋವು ನಿವಾರಿಸಿಕೊಳ್ಳಿ
ನೋವು ನಮ್ಮ ದೇಹದಲ್ಲಿ ಏನೋ ಹೆಚ್ಚು ಕಮ್ಮಿ ಆಗಿದೆ ಎಂದು ತಿಳಿಸುವ ಒಂದು ರಕ್ಷಣಾ ವ್ಯವಸ್ಥೆಯಾಗಿರುತ್ತದೆ. ನೋವಿಗೆ ನಿಖರ ಕಾರಣ ತಿಳಿದುಕೊಳ್ಳಬೇಕು ಎಂದರೆ, ವೈದ್ಯಕೀಯ ತಪಾಸಣೆ ಮಾಡಿಸಬೇಕಾಗುತ್ತದೆ. ದೇಹದ ಒಳಗಿರುವ ಯಾವುದಾದರು ಕಾಯಿಲೆಯು ನೋವಿನ ಲಕ್ಷಣವಾಗಿ ಕಾಣಿಸುತ್ತದೆ. ಇದನ್ನು ನಿವಾರಿಸಿಕೊಳ್ಳಲು ಮೊದಲು ನೀವು ಕಾಯಿಲೆಗೆ ಚಿಕಿತ್ಸೆ ಪಡೆಯಬೇಕು.
ಆದರೂ ಕೆಲವೊಂದು ಆರೋಗ್ಯಕರ ಸಮಸ್ಯೆಗಳಿಂದಾಗಿ ನೋವು ತುಂಬಾ ದಿನಗಳ ಕಾಲ ಇರುತ್ತದೆ. ಮಂಡಿ ನೋವು, ಮೈಗ್ರೇನ್ ತಲೆನೋವು, ಮೂಳೆ ಮುರಿತ, ಹೊಟ್ಟೆ ನೋವು, ಹುಳುಕು, ಬೆನ್ನು ನೋವು ಪದೇ ಪದೇ ಕಾಡುತ್ತದೆ. ಯಮಯಾತನೆ ನೀಡುವ ಮೊಣಕಾಲು ನೋವಿಗೆ ಪರಿಹಾರವೇನು?
ತೀವ್ರತರನಾದ ನೋವು ಎಂತಹವರನ್ನು ಸಹ ಕಂಗೆಡಿಸಿಬಿಡುತ್ತದೆ. ಆಗ ವಿಧಿಯಿಲ್ಲದೆ ಇವರು ನೋವು ನಿವಾರಕಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸ್ತುತಾರೆ. ಆದರೆ ಇವುಗಳನ್ನು ಪ್ರತಿದಿನ ಸೇವಿಸುವುದರಿಂದಾಗಿ ಅದು ಮುಂದೆ ಅಭ್ಯಾಸವಾಗಿ, ಚಟವಾಗಿ ಅಂಟಿಕೊಳ್ಳುವ ಅಪಾಯವಿರುತ್ತದೆ. ಇದು ನಿಮ್ಮ ಮೂತ್ರಪಿಂಡ ಮತ್ತು ಲಿವರ್‍ಗೆ ಹಾನಿ ಮಾಡುತ್ತದೆ. ಇಂತಹ ಮಾತ್ರೆಗಳನ್ನು ಸೇವಿಸುವ ಬದಲಿಗೆ ಸ್ವಾಭಾವಿಕವಾಗಿ ಈ ನೋವನ್ನು ನಿವಾರಣೆ ಮಾಡಿಕೊಳ್ಳಲು ನಾವು ಇಂದು ಕೆಲವೊಂದು ಮಾರ್ಗೋಪಾಯಗಳನ್ನು ತಿಳಿಸುತ್ತೇವೆ. ಬನ್ನಿ ಅವು ಯಾವುವು ಎಂದು ನೋಡೋಣ.

ನಿಮ್ಮ ಒತ್ತಡವನ್ನು ನಿಭಾಯಿಸಿ
ಕೆಲವೊಮ್ಮೆ ದೇಹದಲ್ಲಿ ಭಾದಿಸುವ ನೋವಿಗೆ ಒತ್ತಡವೇ ಮೂಲ ಕಾರಣವಾಗಿರುತ್ತದೆ. ಈ ಒತ್ತಡವನ್ನು ನಿವಾರಿಸಿಕೊಳ್ಳಲು, ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ. ಶಾಪಿಂಗ್ ಹೋಗುವುದು, ಪ್ರಕೃತಿ ವೀಕ್ಷಣೆ, ಹೀಗೆ ಯಾವುದಾದರು ಒಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳಿ. ಇದರಿಂದ ನೋವು ಕಡಿಮೆಯಾಗುತ್ತದೆ.

ವ್ಯಾಯಾಮ
ಜಾಗಿಂಗ್ ಮಾಡಿ ವಾಕ್ ಮಾಡಿ ಅಥವಾ ಜಾಗಿಂಗ್ ಮಾಡಿ, ಇದು ವರ್ಕ್‌ಔಟ್ ಮಾಡುವುದರಲ್ಲಿಯೇ ಅತ್ಯುತ್ತಮವಾದ ವಿಧಾನಗಳಾಗಿರುತ್ತವೆ. ಸೈಕ್ಲಿಂಗ್ ಮತ್ತು ಈಜು ಸಹ ಮಾಡಬಹುದು. ಇವೆಲ್ಲವು ನಿಮ್ಮ ಮೆದುಳಿನಲ್ಲಿರುವ ಒತ್ತಡವನ್ನು ನಿವಾರಿಸಿ ಎಂಡೊರ್ಫಿನ್‌ಗಳು ಎಂಬ ರಾಸಾಯನಿಕಗಳನ್ನು ಬಿಡುಗಡೆ ಮಾಡಿ, ನಿಮ್ಮನ್ನು ಸಂತೋಷಗೊಳಿಸುತ್ತದೆ. ಈ ಚಟುವಟಿಕೆಗಳಿಂದ ರಕ್ತ ಪರಿಚಲನೆ ಹೆಚ್ಚುತ್ತದೆ ಮತ್ತು ನಿಮ್ಮ ನೋವು ಸಹ ಕಡಿಮೆಯಾಗುತ್ತದೆ.

ಸ್ಟ್ರೆಚ್ ಮಾಡಿ
ನೋವಿನಿಂದ ಕೂಡಿರುವ ಸ್ನಾಯುಗಳಿಗೆ ಲಘು ವ್ಯಾಯಾಮ ನೀಡಿ ಅಥವಾ ಸ್ಟ್ರೆಚ್ ಮಾಡಿ. ಅಂದರೆ ಕೈ, ಕಾಲು ಮುಂತಾದ ಭಾಗಗಳು ನೋಯುತ್ತಿದ್ದಲ್ಲಿ, ಅದಕ್ಕೆ ಸರಿಹೊಂದುವ ಸ್ಟ್ರೆಚ್ಚಿಂಗ್ ವ್ಯಾಯಾಮಗಳನ್ನು ಮಾಡಿ.ಇದರಿಂದ ನೋವು ಬೇಗ ನಿವಾರಣೆಯಾಗುತ್ತದೆ. ಇದನ್ನು ನಿಧಾನವಾಗಿ ಸಹ ಮಾಡಬಹುದು, ಇದರಿಂದ ನಿಮ್ಮ ನೋವು ಸ್ವಾಭಾವಿಕವಾಗಿ ಮಾಯವಾಗುತ್ತದೆ.

ಐಸ್ ಕ್ರೀಮ್‌ಗಳನ್ನು ತಿನ್ನಿ
ನೋವನ್ನು ನಿವಾರಿಸಲು ಐಸ್ ಕ್ರೀಮ್‌ಗಳನ್ನು ತಿನ್ನುವುದರ ಮೂಲಕ ಸಹ ನಿವಾರಿಸಿಕೊಳ್ಳಬಹುದು ಎಂದು ಒಂದು ಅಧ್ಯಯನ ಖಚಿತಪಡಿಸಿದೆ. ಐಸ್ ಕ್ರೀಮ್, ಚಾಕೊಲೇಟ್ ಮತ್ತು ಕುಕಿಗಳನ್ನು ತಿನ್ನುವ ಮೂಲಕ ಸಹ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು. ಆದರೆ ಇವುಗಳನ್ನು ಒಂದು ಮಿತಿಯಲ್ಲಿ ಮಾತ್ರ ಸೇವಿಸಿ.

ಬೋನ್ ಬ್ರೋಥ್ ಸೇವಿಸಿ
ಇದೊಂದು ಬಗೆಯ ಸೂಪ್ ಆಗಿದ್ದು ಕುರಿಯ ಅಥವಾ ಮೇಕೆಯ ಮೂಳೆಯನ್ನು ಬೇಯಿಸಿ ಮಾಡಲಾಗುತ್ತದೆ. ಮೂಲೆಗಳಲ್ಲಿ ಸಮೃದ್ಧವಾದ ಪೋಷಕಾಂಶಗಳು ಇರುತ್ತವೆ. ಇವು ನೋವನ್ನು ನಿವಾರಿಸುತ್ತವೆ. ಆದ್ದರಿಂದ ನೋವನ್ನು ನಿವಾರಿಸಿಕೊಳ್ಳಲು, ಈ ಸೂಪ್ ಸೇವಿಸಿ. ಇದು ನೋವು ನಿವಾರಣೆಗೆ ಇರುವ ಒಳ್ಳೆಯ ಉಪಾಯವಾಗಿದೆ.

ಹೀಟ್ ಥೆರಪಿ
ಶಾಖವು ನೋವನ್ನು ನಿವಾರಣೆ ಮಾಡುತ್ತದೆ ಎಂಬುದು ಅಜ್ಜಿಯರ ಕಾಲದಿಂದ ತಿಳಿದಿರುವ ವಿಚಾರವೇ. ಅದನ್ನೇ ವ್ಯವಸ್ಥಿತವಾಗಿ ಮಾಡಿ. ಈ ಶಾಖವು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ರಕ್ತವು ಆಮ್ಲಜನಕ ಮತ್ತು ಪೋಷಕಾಂಶಗಳನ್ನು ನೋವಿರುವ ಭಾಗಕ್ಕೆ ಸಾಗಿಸುತ್ತದೆ. ಹೀಗೆ ಇದು ನೋವನ್ನು ನಿವಾರಣೆ ಮಾಡುತ್ತದೆ. ಬಿಸಿ ನೀರಿನ ಬಾಟಲ್ ಅಥವಾ ಎಲೆಕ್ಟ್ರಿಕ್ ಹೀಟಿಂಗ್ ಪ್ಯಾಡ್ ಮೂಲಕ ನೋವಿರುವ ಭಾಗಕ್ಕೆ ನೀವು ಶಾಖವನ್ನು ನೀಡಬಹುದು.

ಐಸ್
ನೋವು ನಿವಾರಕಗಳಿಲ್ಲದೆ ನೋವನ್ನು ಮಂಜುಗಡ್ಡೆಯಿಂದ ನಿವಾರಿಸಿಕೊಳ್ಳಿ. ಮಂಜುಗಡ್ಡೆಗಳನ್ನು ನೋವಿರುವ ಭಾಗದಲ್ಲಿ ಉಜ್ಜುವ ಮೂಲಕ ನೋವನ್ನು ನಿವಾರಿಸಿಕೊಳ್ಳಬಹುದು. ಇವು ಅನೆಸ್ಥೇಟಿಕ್ ರೀತಿ ಕೆಲಸ ಮಾಡುತ್ತವೆ. ಇವು ನೋವಿರುವ ಭಾಗವನ್ನು ಮರಗಟ್ಟಿಸುವ ಮೂಲಕ ನೋವಿನ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಆಗಾಗಿ ನೋವು ಕಂಡು ಬಂದ ತಕ್ಷಣ ಮಂಜುಗಡ್ಡೆಯನ್ನು ಆ ಭಾಗಕ್ಕೆ ಉಜ್ಜಿ.

ಜೊತೆಯನ್ನು ಹುಡುಕಿಕೊಳ್ಳಿ
ನಿಮ್ಮ ಹಾಗೆ ನೋವಿನಿಂದ ಬಳಲುವ ಜನರ ಒಂದು ಗುಂಪನ್ನು ಮಾಡಿಕೊಳ್ಳಿ. ಇದರಿಂದ ನಿಮಗೆ ಒಂದು ಮಾನಸಿಕ ಧೈರ್ಯ ಮತ್ತು ನೈತಿಕ ಬೆಂಬಲ ದೊರೆಯುತ್ತದೆ. ಅವರ ಜೊತೆ ಮಾತನಾಡುವುದರಿಂದ, ನಿಮಗೆ ನೋವನ್ನು ನಿಭಾಯಿಸುವ ಮಾರ್ಗಗಳು ದೊರೆಯುತ್ತವೆ. ಹಲವಾರು ಪ್ರಯೋಗಗಳನ್ನು ಮಾಡಿಕೊಳ್ಳುವ ಬದಲಿಗೆ, ನಿಖರ ಫಲಿತಾಂಶ ನೀಡುವ ನಿವಾರಣೋಪಾಯವನ್ನು ನಿಮ್ಮ ಸ್ನೇಹಿತರು ತಿಳಿಸಬಹುದು.



Click it and Unblock the Notifications