Latest Updates
-
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್!
ದೇಹದ ಕೀಲುಗಳ ಸ್ವಾಸ್ಥ್ಯಕ್ಕಾಗಿ ಒಂದಿಷ್ಟು ಟಿಪ್ಸ್
ಇತ್ತೀಚಿನ ದಿನಗಳಲ್ಲಿ ನಾವು ಬಹುತೇಕ ಮಂದಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವವರಾಗಿರುತ್ತೇವೆ. ಇಲ್ಲವೇ ವ್ಯಾಯಮ ರಹಿತ ಜೀವನ ನಡೆಸುವವರು ಸಹ ಆಗಿರಬಹುದು. ಯಾರೇ ಆಗಲಿ ಒಟ್ಟಿನಲ್ಲಿ ನಮ್ಮ ಜೀವನದಲ್ಲಿ ಇತ್ತೀಚೆಗೆ ಕೀಲುಗಳಿಗೆ ಸಂಬಂಧಿಸಿದ ನೋವುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಾ ಇರುತ್ತವೆ.
ಒಂದು ಅಂಶ ನಾವು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಬೇಕು, ನಮ್ಮ ದೇಹವು ಸುಮಾರು 206 ಮೂಳೆಗಳಿಂದ ಕೂಡಿರುವ ಅತ್ಯಂತ ಸಂಕೀರ್ಣವಾದ ರಚನೆಯಾಗಿದೆ. ಈ ಸಂಖ್ಯೆ ಮಕ್ಕಳಲ್ಲಿ ಇನ್ನೂ ಹೆಚ್ಚು. ಚಿಕ್ಕ ಮಕ್ಕಳಲ್ಲಿ ಹೆಚ್ಚಾಗಿರುವ ಮೂಳೆಗಳು ಬೆಳೆಯುತ್ತಾ, ಬೆಳೆಯುತ್ತಾ ಎರಡು ಮೂರು ಮೂಳೆಗಳು ಸೇರಿ, ಒಂದು ಮೂಳೆಯಾಗಿ ಪರಿವರ್ತನೆಗೊಳ್ಳುತ್ತವೆ. ಈ ಕೂಡಿಕೊಳ್ಳುವ ಮೂಳೆಗಳನ್ನೆ ಕೀಲುಗಳು ಎಂದು ಕರೆಯುತ್ತೇವೆ. ಮಂಡಿ ನೋವಿಗೆ ತ್ವರಿತವಾಗಿ ಸಾಂತ್ವನ ನೀಡುವ ಮನೆಮದ್ದು
ಈ ಭಾಗವು ನಮ್ಮ ದೇಹವು ಸರಿಸಲು, ತಿರುಗಿಸಲು, ಬಾಗಲು ಅಥವಾ ಉರುಳಿಸಲು ನೆರವಾಗುತ್ತದೆ. ನಮ್ಮ ಇಡೀ ಜೀವನದಲ್ಲಿ ನಾವು ಸರಿಯಾಗಿ ದೈಹಿಕ ಚಟುವಟಿಕೆಗಳನ್ನು ಮಾಡಬೇಕಾದಲ್ಲಿ, ನಮಗೆ ನಮ್ಮ ಕೀಲುಗಳು ಸಹಾಯ ಅತ್ಯಗತ್ಯವಾಗಿ ಬೇಕಾಗುತ್ತದೆ. ಅದಕ್ಕಾಗಿ ಅವುಗಳನ್ನು ಅತ್ಯಂತ ಜಾಗರೂಕತೆಯಿಂದ ನಾವು ನೋಡಿಕೊಳ್ಳಬೇಕು. ನೀವು ನಡೆದಾಗ, ಓಡಾಡಿದಾಗ, ಅಥವಾ ದೇಹವನ್ನು ಯಾವುದೇ ಕಾರ್ಯಕ್ಕೆ ಬಳಸುವಾಗ ಈ ಕೀಲುಗಳು ನಿಜಕ್ಕೂ ಅದರಲ್ಲಿ ಪಾಲ್ಗೊಂಡು ನಿಮ್ಮ ದೈಹಿಕ ಚಟುವಟಿಕೆಗೆ ಸಹಾಯ ಮಾಡುತ್ತವೆ. ಅಲ್ಲದೆ ಕಾಲಾನುಕ್ರಮೇಣ ಈ ಪ್ರಕ್ರಿಯೆಯಲ್ಲಿ ಅವುಗಳು, ತೀವ್ರವಾಗಿ ನೋವು, ಸವೆಯುವಿಕೆ, ಮುರಿಯುವಿಕೆ ಮುಂತಾದ ಭಾದೆಗಳಿಗೆ ಗುರಿಯಾಗುತ್ತವೆ. ಕೀಲು ನೋವಿನ ಪರಿಹಾರಕ್ಕೆ ಪೂರಕ ಔಷಧಿ ಯಾವುದು?
ಇದರಿಂದಾಗಿ ನಿಮಗೆ ಮುಂದೆ ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆಗಳು ನಿಮಗೆ ವಯಸ್ಸಾದಂತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮೂಳೆ ಮತ್ತು ಕೀಲಿಗೆ ಸಂಬಂಧಿಸಿದ ಹಲವಾರು ಕಾಯಿಲೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಆರ್ಥೊಪೆಡಿಕ್ ಸಮಸ್ಯೆಗಳು ಎಂದು ವೈದ್ಯಕೀಯ ಪರಿಭಾಷೆಯಲ್ಲಿ ಕರೆಯಿಸಿಕೊಳ್ಳುವ ಈ ಸಮಸ್ಯೆಗಳಿಂದ ಜನರು ಹೆಚ್ಚಾಗಿ ನರಳುತ್ತಿದ್ದಾರೆ.
ಒಂದು ಅಧ್ಯಯನದ ಪ್ರಕಾರ ಅಮೆರಿಕಾದಲ್ಲಿರುವ 40% ಗೂ ಅಧಿಕ ಮಂದಿಯಲ್ಲಿ ಅರ್ಥರಿಟಿಸ್‌ನ ಸಮಸ್ಯೆ ಕಂಡು ಬಂದಿದೆಯಂತೆ. ಇವರಲ್ಲಿ ಬಹುತೇಕ ಮಂದಿ ವಯಸ್ಸಾದಂತೆ, ಪರಿಸ್ಥಿತಿ ಕೈಮೀರಿ ಹೋಗುವಷ್ಟು ಅವರ ಸಮಸ್ಯೆ ಅವರನ್ನು ಕಾಡುತ್ತಿದೆಯಂತೆ. ಈ ಕೀಲು ನೋವಿನಿಂದ ನೀವು ಸಮಸ್ಯೆಯನ್ನು ಎದುರಿಸುವ ಮುನ್ನ, ಅವುಗಳನ್ನು ಹೇಗೆ ಆರೋಗ್ಯಕರವಾಗಿ ಇರಿಸಿಕೊಳ್ಳಬಹುದು ಎಂಬುದನ್ನು ನೀವು ತಿಳಿದುಕೊಳ್ಳುವುದು ಉತ್ತಮ. ಬನ್ನಿ ಅದಕ್ಕಾಗಿ ಕೆಲವೊಂದು ಸಲಹೆಗಳು ನಿಮಗಾಗಿ ಇಂದು ನಾವು ನೀಡುತ್ತಿದ್ದೇವೆ ಮುಂದೆ ಓದಿ..

ದೀರ್ಘಾವಧಿ ಒಂದೇ ಕಡೆ ಕುಳಿತುಕೊಳ್ಳಬೇಡಿ
ಸಾಧ್ಯವಾದಷ್ಟು ನಿಮ್ಮ ಕುಳಿತುಕೊಳ್ಳುವ ಹಾಗೂ ನಿಂತುಕೊಳ್ಳುವ ಭಂಗಿ ಆರಾಮದಾಯಕವಾಗಿರಲಿ. ಏಳುವಾಗ ಹಾಗೂ ಕುಳಿತುಕೊಳ್ಳುವಾಗ ಕೀಲುಗಳ ಮೇಲೆ ಒಮ್ಮೆಲೇ ಭಾರ ಹಾಕಿ ನಿಲ್ಲಬೇಡಿ ಅಥವಾ ಕುಳಿತುಕೊಳ್ಳಬೇಡಿ. ವಿಶೇಷವಾಗಿ ಹೆಚ್ಚು ಹೊತ್ತು ಕುಳಿತುಕೊಳ್ಳುವ ಅಗತ್ಯವಿದ್ದಲ್ಲಿ ರಕ್ತಸಂಚಾರ ಸುಗಮವಾಗುವಂತೆ, ಸ್ನಾಯುಗಳು ಸಂಕುಚಿಸದಂತೆ ಆರಾಮದಾಯಕ ಭಂಗಿಯಲ್ಲಿ ಪವಡಿಸಿ. ಇದರಿಂದಾಗಿ ದೇಹದ ಎಲ್ಲ ಸ್ನಾಯುಗಳು ಉತ್ತಮ ರಕ್ತಸಂಚಾರವನ್ನು ಪಡೆದು ಆರೋಗ್ಯ ಸುಧಾರಿಸುತ್ತದೆ. ಒಂದೇ ಭಂಗಿಯಲ್ಲಿ ತುಂಬಾ ಹೊತ್ತು ಕುಳಿತುಕೊಳ್ಳಬಾರದು. ನಡುನಡುವೆ ಭಂಗಿಯನ್ನು ಕೊಂಚ ಬದಲಿಸುತ್ತಿರಬೇಕು. ಒಂದೇ ಕಡೆ ದೀರ್ಘಾವಧಿ ಕುಳಿತುಕೊಳ್ಳುವುದರಿಂದಾಗಿ, ನಿಮ್ಮ ಕೀಲುಗಳಿಗೆ ಹಾನಿಯುಂಟಾಗಬಹುದು. ಆದ್ದರಿಂದ ಪ್ರತಿ ಒಂದು ಗಂಟೆಗೆ ಒಮ್ಮೆ ಎದ್ದು ಸ್ವಲ್ಪ ಓಡಾಡಿ. ದೇಹಕ್ಕೆ ವ್ಯಾಯಾಮ ದೊರೆಯುತ್ತದೆ, ಕೀಲುಗಳಿಗೆ ಆರಾಮ ದೊರೆಯುತ್ತದೆ.

ನಿಮ್ಮ ದೇಹಕ್ಕೆ ಆಯಾಸ ನೀಡಬೇಡಿ
ಆಯಾಸ ಮತ್ತು ಒತ್ತಡ ಎರಡೂ ನಿಮ್ಮ ದೇಹಕ್ಕೆ ಹಾನಿಕಾರಕ. ನಿಮ್ಮ ದೇಹವನ್ನು ಆಯಾಸಕ್ಕೆ ಎಡೆ ಮಾಡಿಕೊಡುವುದರ ಮೂಲಕ, ನೀವು ನಿಮ್ಮ ಕೀಲುಗಳಿಗೆ ಅಧಿಕ ಒತ್ತಡವನ್ನು ಹಾಕುತ್ತೀರಿ. ಇದು ಮುಂದೆ ಕೀಲುಗಳ ನೋವಿಗೆ ಕಾರಣವಾಗುತ್ತದೆ. ಆದ್ದರಿಂದ ದೇಹಕ್ಕೆ ವಿಶ್ರಾಂತಿಯನ್ನು ಅಗತ್ಯವಾಗಿ ನೀಡಿ.

ವಿಶ್ರಾಂತಿ ಪಡೆಯಿರಿ
ವಿಶ್ರಾಂತಿ ಪಡೆಯುವಾಗ ದೈಹಿಕವಾಗಿ ಮತ್ತು ಮಾನಸಿಕವಾಗಿ ನೀವು ಆರಾಮವನ್ನು ಪಡೆಯಿರಿ. ಇದರಿಂದ ನಿಮ್ಮ ಕೀಲುಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಆ ಮೂಲಕ ನಿಮಗೆ ಆರೋಗ್ಯವು ಲಭಿಸುತ್ತದೆ. ಮುಂದೆ ಎದುರಾಗುವ ಸಮಸ್ಯೆಗಳಿಂದ ನಿಮಗೆ ವಿಮುಕ್ತಿ ಸಿಕ್ಕುತ್ತದೆ.

ಸ್ನಾಯುಗಳನ್ನು ಬಲಪಡಿಸಿಕೊಳ್ಳಿ
ಜಿಮ್‌ಗೆ ಹೋಗಿ ಬಲವಾದ ಸ್ನಾಯುಗಳನ್ನು ಅಭಿವೃದ್ಧಿಪಡಿಸಿ ಎಂದು ನಾವು ಹೇಳುವುದಿಲ್ಲ. ಅಧಿಕ ಸ್ನಾಯುಗಳು ದೇಹಕ್ಕೆ ಹಾನಿಕಾರಕ. ಆದರೆ ಗಟ್ಟಿ ಮುಟ್ಟಾದ ಸ್ನಾಯುಗಳು ನಿಮ್ಮ ದೇಹವನ್ನು ಮುಂದಾಗಬಹುದಾದ ಅಪಾಯದಿಂದ ಪಾರು ಮಾಡಲು ಸಹಾಯ ಮಾಡುತ್ತವೆ. ಸ್ನಾಯುಗಳು ಕೀಲುಗಳನ್ನು ರಕ್ಷಿಸುತ್ತವೆ. ಬಲವಾದ ಸ್ನಾಯುಗಳ ಒಳಗೆ ಇರುವ ಕೀಲುಗಳು ಆರೋಗ್ಯವಾಗಿರುತ್ತವೆ.

ಯೋಜನೆ ತಯಾರಿಸಿಕೊಳ್ಳಿ
ಆರೋಗ್ಯಕರವಾದ ಜೀವನಕ್ಕಾಗಿ ನಿಮ್ಮದೇ ಆದ ಯೋಜನೆಯನ್ನು ಸಿದ್ಧಪಡಿಸಿಕೊಳ್ಳಿ. ತಜ್ಞರ ಹತ್ತಿರ ಸಲಹೆಗಳನ್ನು ಪಡೆಯಿರಿ. ಆರೋಗ್ಯಕರವಾದ ಆಹಾರ ಪದ್ಧತಿಯನ್ನು ಅನುಸರಿಸಿ. ಇದರಿಂದ ಮುಂದೆ ನೀವು ಆರೋಗ್ಯಕರವಾಗಿರಲು ಸಹಾಯವಾಗುತ್ತದೆ. ಈ ಯೋಜನೆ ನೀವು ವಯಸ್ಸಾದಾಗ ನಿಮ್ಮನ್ನು ರಕ್ಷಿಸುವ ರಕ್ಷಣಾ ಕವಚದಂತೆ ಈಗಿನಿಂದಲೇ ಕೆಲಸ ಮಾಡುತ್ತದೆ ಎಂಬುದನ್ನು ಮರೆಯಬೇಡಿ.

ಆರೋಗ್ಯಕರವಾದ ಭಂಗಿಯನ್ನು ಇರಿಸಿಕೊಳ್ಳಿ
ನೀವು ಕೂರುವ, ನಿಲ್ಲುವ, ಮತ್ತು ಓಡುವಾಗ ನಿಮ್ಮ ದೇಹವು ಯಾವ ಭಂಗಿಯಲ್ಲಿ ಇರುತ್ತದೆ ಎಂಬುದನ್ನು ಗಮನಿಸಿ. ನಿಮ್ಮ ಕೀಲುಗಳ ಆರೋಗ್ಯವು ಚೆನ್ನಾಗಿ ಇರಬೇಕೆಂದರೆ, ನಿಮ್ಮ ಭಂಗಿಯು ಉತ್ತಮವಾಗಿರಬೇಕು.



Click it and Unblock the Notifications