Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಗಸೆ ಬೀಜಗಳ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ
ಫ್ಲಾಕ್ಸ್ ಬೀಜಗಳು ಅಥವಾ ಅಗಸೆ ಬೀಜಗಳು ನಮ್ಮ ಆರೋಗ್ಯಕ್ಕೆ ಅತ್ಯಂತ ಉಪಯೋಗಕಾರಿಯಾದ ಬೀಜಗಳು ಆಗಿರುತ್ತವೆ. ಇದನ್ನು ಪ್ರಾಚೀನ ಕಾಲದಿಂದಲೂ ಸಹ ಬಳಸಿಕೊಂಡು ಬರಲಾಗುತ್ತಿದೆ. ಪ್ರಾಚೀನ ಪ್ರಾಚ್ಯ ವಸ್ತುಗಳ ಉತ್ಪನ್ನಗಳಲ್ಲಿ ಕಂಡು ಬಂದ ಅಂಶಗಳ ಪ್ರಕಾರ ಇದನ್ನು ಮೊದಲು ಈಜಿಪ್ಟ್‌ನಲ್ಲಿ ನೆಫೆರೆಟಿಗಳು ಇದ್ದ ಕಾಲದಲ್ಲಿ ಬಳಸಲು ಆರಂಭಿಸಿದರಂತೆ.
ಇದನ್ನು ಇದರಲ್ಲಿರುವ ಸ್ವಾಭಾವಿಕ ನಾರಿನಂಶಕ್ಕಾಗಿ ಬೆಳೆಯಲು ಆರಂಭಿಸಿದರಂತೆ. ಇದು ಭಾರತದಲ್ಲಿ ವಿಶೇಷವಾಗಿ ಹಳ್ಳಿಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ. ಬನ್ನಿ ಅಗಸೆ ಬೀಜಗಳ ಪ್ರಯೋಜನಗಳೇನು ಎಂಬುದನ್ನು ನೋಡೋಣ..

ನೀರಿನ ಜೊತೆ ಪ್ರತಿ ದಿನ ಸೇವಿಸಿ
ಈ ಬೀಜಗಳಲ್ಲಿ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿದ್ದು, ವೈದ್ಯಕೀಯ ಲಾಭಗಳು ಕೂಡ ಸಾಕಷ್ಟಿವೆ.ಇಂದಿಗೂ ಸಹ ಕೊಲೆಸ್ಟ್ರಾಲ್ ಕಡಿಮೆ ಮಾಡುವ ಅದ್ಭುತ ಬೀಜಗಳು ಎಂದು ಇವು ಹೆಸರಾಗಿವೆ. ಇವು ಮಾನವನ ದೇಹವನ್ನು ಬೆಚ್ಚಗೆ ಮಾಡುತ್ತವೆ. ಇದರ ಮತ್ತೊಂದು ವಿಶೇಷತೆ ಏನೆಂದರೆ ಇದನ್ನು ಪುಡಿ ಮಾಡಿ ಸೇವಿಸಬಹುದು. ಇದನ್ನು ಹಾಗೆಯೇ ಸೇವಿಸಿದರೆ ಜೀರ್ಣ ಮಾಡಿಕೊಳ್ಳಲು ಕಷ್ಟಪಡಬೇಕಾಗುತ್ತದೆ.
ಪುಡಿ ಮಾಡಿದ ಅಗಸೆ ಬೀಜಗಳನ್ನು ನೀರಿನ ಜೊತೆ ಪ್ರತಿದಿನವೂ ಸೇವಿಸಬಹುದು. ಇದು ನಿಮ್ಮ ದೇಹಕ್ಕೆ ಅಗತ್ಯವಾದ ನಾರಿನಂಶವನ್ನು ಒದಗಿಸುತ್ತದೆ. ಇವುಗಳನ್ನು ಸೇವಿಸಿದ ಸಂದರ್ಭದಲ್ಲಿ ತಪ್ಪದೆ ನೀರನ್ನು ಹೆಚ್ಚು ಸೇವಿಸುತ್ತಾ ಇರಿ. ನಿಮಗೆ ಬೇಕಾದಲ್ಲಿ ಇದನ್ನು ಕರಿದುಕೊಂಡು ಸಹ ಸೇವಿಸಬಹುದು. ಅಗಸೆ ಬೀಜದ ಆರೋಗ್ಯಕರ ಲಾಭಗಳು
ಸುಂದರವಾದ ತ್ವಚೆಯನ್ನು ಪಡೆಯಲು
ವಿವಿಧ ರೋಗಗಳ ವಿರುದ್ಧ ಹೋರಾಡಲು
ಫ್ಲಾಕ್ಸ್ ಬೀಜಗಳು ಸ್ವಾಭಾವಿಕವಾಗಿ ದೊರೆಯುವ ಪೆಸ್ಕಾಟರಿಯನ್‌ಗಳನ್ನು ಸೇವಿಸಲು ಇರುವ ಒಳ್ಳೆಯ ಮಾರ್ಗಗಳಾಗಿವೆ. ಇವುಗಳಲ್ಲಿ ಸಾಮಾನ್ಯವಾಗಿ ಆಲ್ಫಾ ಲಿನಿಯೊಕ್ ಆಮ್ಲಗಳು ಇರುತ್ತವೆ. ಈ ಆಮ್ಲವು ಹೃದ್ರೋಗ, ಅರ್ಥರಿಟಿಸ್, ಅಸ್ತಮಾ, ಮಧುಮೇಹ ಮುಂತಾದ ಸಮಸ್ಯೆಗಳ ಮೂಲಕ ಬರುವ ಉರಿಯೂತಗಳನ್ನು ತಡೆಯುತ್ತದೆ. ಜೊತೆಗೆ ಕೋಲನ್ ಕ್ಯಾನ್ಸರ್ ಮುಂತಾದ ಕ್ಯಾನ್ಸರ್‌ಗಳ ಮೇಲೆ ಸಹ ಇದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಈ ಫ್ಲಾಕ್ಸ್ ಬೀಜಗಳ ಜೊತೆಗೆ ಮೀನು ಮತ್ತು ವಾಲ್‌ನಟ್‌ಗಳನ್ನು ಬೆರೆಸಿ ತಿಂದರೆ ಮತ್ತಷ್ಟು ಉತ್ತಮ ಸದುಪಯೋಗವನ್ನು ಪಡೆಯಬಹುದು. ಅಧಿಕ ರಕ್ತದೊತ್ತಡ ತಡೆಯಲು 10 ಗಿಡಮೂಲಿಕೆಗಳು
ನಾರಿನಾಂಶದ ಆಗರ
ಫ್ಲಾಕ್ಸ್ ಬೀಜಗಳಲ್ಲಿರುವ ಅಧಿಕ ಪ್ರಮಾಣದ ನಾರಿನಂಶವು ನಮ್ಮ ದೇಹದಲ್ಲಿರುವ ನಾರಿನಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ. ಇದರಲ್ಲಿರುವ ನಾರಿನಂಶವು ನಿಮ್ಮ ಹೊಟ್ಟೆ ತುಂಬಿದ ಅನುಭವವನ್ನು ನೀಡಿ, ನೀವು ಕಡಿಮೆ ಊಟ ಮಾಡುವಂತೆ ಮಾಡುತ್ತದೆ. ಇದರಿಂದ ನಿಮ್ಮ ರಕ್ತದಲ್ಲಿ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ನಿಮ್ಮ ಕರುಳು ಚೆನ್ನಾಗಿ ಕೆಲಸ ಮಾಡುತ್ತದೆ.
ಸಂತಾನ ಶಕ್ತಿಯನ್ನು ಹೆಚ್ಚಿಸಲು ಸಹಾಯಕ
ಆಂಟಿ ಆಕ್ಸಿಡೆಂಟ್‌ಗಳು ಮತ್ತು ಫೈಟೋ ಕೆಮಿಕಲ್‌ಗಳನ್ನು ನೀವು ಆಂಟಿ ಏಜಿಂಗ್ ಕ್ರೀಮ್ ಜಾಹೀರಾತುಗಳು ಬಂದಾಗ ಕೇಳಿರಬಹುದು. ಇವೆಲ್ಲವೂ ನಿಮ್ಮ ಫ್ಲಾಕ್ಸ್ ಬೀಜಗಳಲ್ಲಿ ಹೆಚ್ಚಿನ ಸುಂಕವಿಲ್ಲದೆ ಬರುತ್ತವೆ!. ಇವುಗಳಲ್ಲಿ ಲಿಗನ್‌ಗಳು ಇರುತ್ತವೆ. ಇವು ಕರುಳುಗಳಲ್ಲಿ ಕೆಲಸ ಮಾಡುತ್ತವೆ ಮತ್ತು ಹೆಂಗಸರ ಹಾರ್ಮೋನುಗಳನ್ನು ಸಮತೋಲನದಲ್ಲಿಡುತ್ತದೆ. ಇವುಗಳು ಸಂತಾನ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ. ಇವು ಸ್ತನ ಕ್ಯಾನ್ಸರ್ ಮತ್ತು ಪೆರಿ ಮೆನೋಫಾಸಲ್ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ಆದ್ದರಿಂದ ವೈದ್ಯರು ನೀಡುವ ದುಬಾರಿ ಔಷಧಿಗಳು ಮತ್ತು ಮಾರುಕಟ್ಟೆಯಲ್ಲಿ ದೊರೆಯುವ ಆರೋಗ್ಯಕರ ಪಾನೀಯಗಳ ಬದಲಿಗೆ ಇದನ್ನು ಸೇವಿಸಲು ಆರಂಭಿಸಿ. ಇದನ್ನು ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಿ, ಮತ್ತು ನಿಮ್ಮ ಮನೆಯ ಸಮೀಪದ ಅಂಗಡಿಗಳಲ್ಲಿ ಮೊದಲು ಹೋಗಿ ಹುಡುಕಿ ತನ್ನಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications


