Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಮಂಡಿ ನೋವಿಗೆ ತ್ವರಿತವಾಗಿ ಸಾಂತ್ವನ ನೀಡುವ ಮನೆಮದ್ದು
ಮೊಣಕಾಲು ನೋವು (ಮಂಡಿ ನೋವು) ಬಂದರೆ ಮುಗಿಯಿತು, ಅದು ನಮ್ಮ ದೇಹವನ್ನು ದುರ್ಬಲಗೊಳಿಸಿಬಿಡುತ್ತದೆ. ಇದು ವಯಸ್ಸು ಮತ್ತು ಇನ್ನಿತರ ಕಾರಣಗಳ ಸಲುವಾಗಿ ಮಂಡಿಗಳಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಮನೆಯಲ್ಲಿಯೇ ಪರಿಣಾಮಕಾರಿಯಾದ ಕೆಲವೊಂದು ಮನೆಮದ್ದುಗಳು ದೊರೆಯುತ್ತವೆ. ಅವು ಈ ನೋವುಗಳಿಗೆ ಖಂಡಿತ ಉಪಶಮನವನ್ನು ನೀಡುತ್ತವೆ. ಮೊಣಕಾಲು ನೋವು ಎರಡು ಕಾರಣಗಳಿಂದ ಸಂಭವಿಸುತ್ತದೆ. ಒಂದು ಅಪಘಾತದಿಂದ ಅಂದರೆ ಮೂಳೆ ಮುರಿತ, ಮೂಳೆಕಟ್ಟು (ಲಿಗಮೆಂಟ್) ಮುರಿತ, ಮಂಡಿಗಳ ಸ್ಥಾನ ಪಲ್ಲಟ, ಉಳುಕು ಮತ್ತು ಆಯಾಸಗಳಿಂದ ಸಂಭವಿಸುತ್ತದೆ.
ಜೊತೆಗೆ ಅರ್ಥರಿಟಿಸ್‍ನಂತಹ ವೈದ್ಯಕೀಯ ಪರಿಸ್ಥಿತಿಯಲ್ಲೂ ಸಹ ಮೊಣಕಾಲು ನೋವು ಸಂಭವಿಸುತ್ತದೆ. ಅಂತಹ ಪರಿಸ್ಥಿತಿಗಳಲ್ಲಿ, ನಡೆಯುವಾಗ ಮತ್ತು ನಿಲ್ಲುವಾಗ ಅಧಿಕ ಪ್ರಮಾಣದ ನೋವು, ಬಿಗಿತ ಮತ್ತು ಮಂಡಿಗಳಲ್ಲಿ ಊತ ಕಂಡು ಬರುತ್ತದೆ. ಹಾಗಾದರೆ ಮೊಣಕಾಲು ನೋವು ಮತ್ತು ಊತ ಬಂದಾಗ ಏನು ಮಾಡುವುದು? ಮೊಣಕಾಲು ನೋವು ಬಂದರೆ ಅದು ನಮ್ಮನ್ನು ಒಂದೇ ಕಡೆಯಲ್ಲಿ ಕೂರುವಂತೆ ಮಾಡುವುದು ಖಂಡಿತ. ಆದ್ದರಿಂದ ಮನೆಯಲ್ಲಿಯೇ ದೊರೆಯುವ ಕೆಲವೊಂದು ಮನೆಮದ್ದುಗಳಿಂದ ಇದನ್ನು ನಿವಾರಿಸಿಕೊಳ್ಳುವ ಕೆಲಸವನ್ನು ಮಾಡಬೇಕು.
ಈ ಮನೆಮದ್ದುಗಳನ್ನು ಪ್ರತಿನಿತ್ಯ ಬಳಸುತ್ತಿದ್ದರೆ, ಪವಾಡ ಸದೃಶ್ಯ ಬೆಳವಣಿಗೆಯನ್ನು ನಾವು ಕಾಣಬಹುದು. ಕಂಗಾಲಾಗದಿರಿ ಕೀಲು ನೋವಿಗೆ: ಇಲ್ಲಿದೆ ಶೀಘ್ರ ಪರಿಹಾರ ಮೊಣಕಾಲು ನೋವನ್ನು ಹೇಗೆ ಸ್ವಾಭಾವಿಕವಾಗಿ ಗುಣಪಡಿಸಿಕೊಳ್ಳುವುದು? ಎಂಬ ನಿಮ್ಮ ಪ್ರಶ್ನೆಗೆ ಬೋಲ್ಡ್‌ಸ್ಕೈ ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದುಗಳನ್ನು ನಿಮ್ಮೊಂದಿಗೆ ಇಂದು ಹಂಚಿಕೊಳ್ಳುತ್ತಿದೆ. ಬಹುಶಃ ನೀವು ಎಲ್ಲಾ ಬಗೆಯ ನಿವಾರಣೋಪಾಯಗಳನ್ನು ಪ್ರಯತ್ನಿಸಿ ನೋಡಿರಬಹುದು ಆದ್ರೆ ಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಫಲಿತಾಂಶ ನಿಮಗೆ ಗೊತ್ತಾಗುತ್ತದೆ...

ಆರೋಗ್ಯಕರವಾದ ಆಹಾರವನ್ನು ಸೇವಿಸಿ
ನಮಗೆಲ್ಲ ತಿಳಿದಿರುವಂತೆ ನಾವು ಸೇವಿಸುವ ಆಹಾರವು ಸಹ ಮಂಡಿ ನೋವಿನ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಒಳಗೊಂಡಿರುವ ಶುಚಿಯಾದ ಆಹಾರವನ್ನು ಸೇವಿಸಿ. ವಿಟಮಿನ್ ಬಿ ಮತ್ತು ಡಿ ಹಾಗು ಒಮೆಗಾ 3 ಕೊಬ್ಬಿನ ಆಮ್ಲಗಳು ಇರುವ ಆಹಾರವನ್ನು ಸೇವಿಸಿ. ಈ ಆಹಾರಗಳು ನೋವನ್ನು ಮತ್ತು ಊತವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ.

ಸೋಡಿಯಂನಿಂದ ದೂರವಿರಿ
ಒಬ್ಬ ಡಯಟೀಷಿಯನ್ ಜೊತೆಗೆ ಚರ್ಚಿಸಿ, ಒಂದು ಡಯಟ್ ಪಟವನ್ನು ರಚಿಸಿಕೊಳ್ಳಿ. ಸೋಡಿಯಂ ಇರುವ ಆಹಾರ ಪದಾರ್ಥವನ್ನು ಸೇವಿಸುವುದನ್ನು ನಿಲ್ಲಿಸಿ. ಇದು ನಿಮ್ಮ ದೇಹಕ್ಕೆ ಹಾನಿಕಾರಕ.

ಅಗತ್ಯವಾದಷ್ಟು ವಿಶ್ರಾಂತಿಯನ್ನು ಪಡೆಯಿರಿ
ಮಂಡಿಗಳನ್ನು ಕಾಪಾಡಿಕೊಳ್ಳುವ ಒಂದು ಒಳ್ಳೆಯ ಉಪಾಯವೇನೆಂದರೆ, ಅದಕ್ಕೆ ಅಗತ್ಯವಾದಷ್ಟು ವಿಶ್ರಾಂತಿಯನ್ನು ನೀಡುವುದು. ವಿಶ್ರಾಂತಿಯನ್ನು ತೆಗೆದುಕೊಂಡರೆ, ಅದರಿಂದ ಮಂಡಿಯು ಸ್ವಲ್ಪ
ಆರಾಮವಾಗುತ್ತದೆ. ಅದರ ಮೇಲೆ ಭಾರ ಬೀಳುವುದು ತಪ್ಪಿದರೆ, ಅದರ ನೋವು ಸಹ ಕಡಿಮೆಯಾಗುತ್ತದೆ. ಆದ್ದರಿಂದ ಅಗತ್ಯವಾದಷ್ಟು ವಿಶ್ರಾಂತಿಯನ್ನು ಪಡೆಯಿರಿ.

ಮಂಜುಗಡ್ಡೆಯನ್ನು ಇರಿಸಿ
ಮಂಜುಗಡ್ಡೆಯು ಊದಿಕೊಂಡ ಮಂಡಿಗಳಿಗೆ ಒಳ್ಳೆಯ ಮನೆ ಮದ್ದಾಗಿರುತ್ತದೆ. ಮಂಡಿಗಳು ಊದಿಕೊಂಡಾಗ ಅದರ ಮೇಲೆ ಮಂಜುಗಡ್ಡೆಯನ್ನು ಇರಿಸಿ. ಇದಕ್ಕಾಗಿ ಮಂಜುಗಡ್ಡೆಗಳನ್ನು ದಪ್ಪನಾದ ಬಟ್ಟೆಯಲ್ಲಿ ಸುತ್ತಿ,ಅದು ಕರವಸ್ತ್ರವಾದರು ಸರಿ, ಅದರಲ್ಲಿ ಸುತ್ತಿ ನೋವಿರುವ ಭಾಗದಲ್ಲಿ ಎಲ್ಲಿ ಬೇಕೋ, ಅಲ್ಲಿ ಈ ಪ್ಯಾಕ್ ಇಟ್ಟುಕೊಳ್ಳಿ. 20-30 ನಿಮಿಷದ ಅವಧಿಯಲ್ಲಿ 3-4 ಬಾರಿ ಇದನ್ನು ಇಡಿ. ಆಗ ನೋವು ಕಡಿಮೆಯಾಗುತ್ತದೆ.

ವ್ಯಾಯಾಮ ಮಾಡಿ
ಮಂಡಿಗಳ ನೋವನ್ನು ಕಡಿಮೆ ಮಾಡಿಕೊಳ್ಳಲು ದಿನವೂ ವ್ಯಾಯಾಮ ಮಾಡಿ. ನಿಯಮಿತವಾಗಿ ಓಡಾಡುವುದರಿಂದಾಗಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಅದಕ್ಕೆಂದು ಜಿಮ್‍ಗೆ ಹೋಗುವ ಅಗತ್ಯವಿಲ್ಲ. ಬದಲಿಗೆ ಬೆಳಗ್ಗೆ ಎದ್ದು ಓಡಾಡಿ ಸಾಕು.



Click it and Unblock the Notifications
