ಮುಂಜಾವಿನ ನಡಿಗೆಯಿಂದ ನಿಮಗುಂಟಾಗುವ ಪ್ರಯೋಜನಗಳು

ಮುಂಜಾನಿನ ನಡಿಗೆಯು ಮಾನವನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ನಿಮಗೆ ತಿಳಿದಿದೆಯೇ? ನಿಮ್ಮ ವೇಗ ಗತಿಯ ನಡಿಗೆಯು ನಿಮ್ಮ ದೇಹಕ್ಕೆ ಅಗತ್ಯವಾಗಿರುವ ವ್ಯಾಯಾಮವನ್ನು ನೀಡಿದಂತೆ. ಅದರಲ್ಲೂ ಮುಂಜಾವಿನ ನಡಿಗೆಯು ಎಷ್ಟು ಆರೋಗ್ಯಪೂರ್ಣವಾದುದು ಎಂಬುದನ್ನು ಈ ಲೇಖನ ಓದಿದ ನಂತರ ನಿಮಗೇ ತಿಳಿಯುತ್ತದೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಎದೆಯುರಿಗೆ ತಂಪು ನೀರು ನೈಸರ್ಗಿಕ ಪರಿಹಾರ ಹೇಗೆ?

ಇಂದು ಹೆಚ್ಚಿನ ಜನರು ಸಮಯದ ಅಭಾವದಿಂದಾಗಿ ಬೆಳಗ್ಗಿನ ಸಮಯದ ನಡಿಗೆಯನ್ನು ತ್ಯಜಿಸಿ ಸಂಜೆಯ ನಡಿಗೆಯನ್ನು ಆರಿಸಿಕೊಂಡಿದ್ದಾರೆ. ಸಂಜೆಯ ನಡಿಗೆ ಕೂಡ ದೇಹಕ್ಕೆ ವ್ಯಾಯಾಮವನ್ನು ನೀಡುತ್ತದೆ. ಆದರೆ ಪ್ರಾತಃ ಕಾಲದಲ್ಲಿ ನೀವು ಮಾಡುವ ನಡಿಗೆಯ ಉಪಯೋಗ ನಿಮ್ಮ ದೇಹಕ್ಕೆ ಎಷ್ಟು ಮಹತ್ವಪೂರ್ಣವಾದುದು ಎಂಬುದನ್ನು ನೀವು ತಿಳಿದುಕೊಂಡಿರಲೇಬೇಕು.

ಇಂದಿನ ಒತ್ತಡದಿಂದ ಕೂಡಿರುವ ಜೀವನವು ಒಂದಿಲ್ಲೊಂದು ರೋಗಗಳ ಆಹ್ವಾನವನ್ನು ಮಾಡುತ್ತಿದೆ. ದೈಹಿಕ ಮಾನಸಿಕ ಸ್ಥಿಮಿತ ಇಂದು ಕುಸಿಯುತ್ತಿದೆ. ಸಿಟ್ಟು, ದಣಿವು, ಕೊಬ್ಬು, ಕೊಲೆಸ್ಟ್ರಾಲ್, ಬಿಪಿ, ಮಧುಮೇಹ ಹೀಗೆ ಕಾಯಿಲೆಗಳ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ.

ಇದಲ್ಲೆದರಿಂದ ಮುಕ್ತಿ ಹೊಂದಲು ನಾವು ಆರೋಗ್ಯಯುತವಾದ ಜೀವನ ಶೈಲಿಯನ್ನು ನೆಚ್ಚಿಕೊಳ್ಳಲೇಬೇಕು. ನಮ್ಮ ಒತ್ತಡದ ಧಾವಂತದ ಜೀವನದಲ್ಲಿ ಯೋಗ, ವ್ಯಾಯಾಮ ನಡಿಗೆಗೆ ನಾವು ಮಹತ್ವ ಕೊಟ್ಟಷ್ಟು ಪ್ರಯೋಜನ ನಮಗೆ ಹೆಚ್ಚು.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ರಾತ್ರಿಯ ಹೊತ್ತು ಕೆಮ್ಮು ಬರಲು ಕಾರಣಗಳೇನು?

ಬೆಳಗ್ಗಿನ ಕಾಲದ ನಡಿಗೆಯು ಆರೋಗ್ಯಪೂರ್ಣವಾಗಿರುವುದು ಮಾತ್ರವಲ್ಲ ನಮ್ಮ ದೇಹಕ್ಕೆ ಅವಶ್ಯಕವಾಗಿರುವ ಶಕ್ತಿ ಪೂರಣದಂತೆ. ಪ್ರಾತಃ ಕಾಲದಲ್ಲಿ ಪರಿಸರದಲ್ಲಿನ ಶುದ್ಧ ಗಾಳಿ ನಮ್ಮ ದೇಹದಲ್ಲಿನ ಆಯಾಸವನ್ನು ಪರಿಹರಿಸಿ ಉತ್ಸಾಹ, ಆಸಕ್ತಿಯನ್ನು ತುಂಬುತ್ತದೆ. ಇನ್ನೇಕೆ ತಡ ನಾಳೆಯಿಂದಲೇ ನಿಮ್ಮ ಮುಂಜಾವಿನ ನಡಿಗೆ ಪ್ರಾರಂಭಗೊಳ್ಳಲಿ. ಅದಕ್ಕೂ ಮುನ್ನ ಈ ಲೇಖನದಲ್ಲಿನ ಅಂಶಗಳನ್ನು ಮನದಟ್ಟು ಮಾಡಿಕೊಳ್ಳಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ತೂಕ ಇಳಿಸಿಕೊಳ್ಳಲು 5 ವಿಸ್ಮಯಕಾರಿ ಚಹಾ!

ತೂಕ ಇಳಿಕೆ:

ತೂಕ ಇಳಿಕೆ:

ನಿಮ್ಮ ದೇಹದ ಹೆಚ್ಚುವರಿ ಪೌಂಡ್‌ಗಳನ್ನು ನಿವಾರಿಸಬೇಕೆಂಬ ಸಂಕಲ್ಪ ನಿಮ್ಮದಾಗಿದ್ದರೆ ಬೆಳಗ್ಗಿನ ಸಕ್ಕರೆ ನಿದ್ದೆಯನ್ನು ನೀವು ತ್ಯಜಿಸಲೇಬೇಕು. ನಿಮ್ಮ ಕ್ಯಾಲೋರಿಗಳನ್ನು ಕರಗಿಸಿ ಚಯಾಪಚಯ ವ್ಯವಸ್ಥೆಯನ್ನು ಸುಧಾರಿಸಲು ಬೆಳಗ್ಗಿನ ನಡಿಗೆ ಸಹಕಾರಿ. ಇವೆರಡೂ ಪ್ರಕ್ರಿಯೆಗಳು ತೂಕ ಇಳಿಕೆಗೆ ಅತ್ಯವಶ್ಯಕವಾದುದು.

ಮಧುಮೇಹಿಗಳಿಗೆ:

ಮಧುಮೇಹಿಗಳಿಗೆ:

ನೀವು ವ್ಯಾಯಾಮ ಮಾಡಿದಂತೆ ದೇಹದಲ್ಲಿನ ಗ್ಲುಕೋಸ್ ಮಟ್ಟ ಕಡಿಮೆಯಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ರಕ್ತದಲ್ಲಿನ ಸಕ್ಕರೆ ಅಂಶವನ್ನು ಬೆಳಗ್ಗಿನ ನಡಿಗೆಯು ನಿಯಂತ್ರಣದಲ್ಲಿಡುವುದರಿಂದ ಮಧುಮೇಹಿಗಳು ಪ್ರಾತಃ ಕಾಲದ ನಡಿಗೆಯನ್ನು ಆಯ್ಕೆಮಾಡಿಕೊಳ್ಳಲೇಬೇಕು.

ಟೆನ್ಶನ್ ನಿವಾರಿಸಲು:

ಟೆನ್ಶನ್ ನಿವಾರಿಸಲು:

ಒತ್ತಡದ ಮಟ್ಟ ಏರಿದಂತೆ ಕೆಲಸದಲ್ಲಿನ ಟೆನ್ಶನ್ ಕೂಡ ಹೆಚ್ಚಾಗುತ್ತದೆ. ಬೆಳಗ್ಗಿನ ನಡಿಗೆಯು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದರಿಂದ ಟೆನ್ಶನ್ ನಿಮ್ಮ ಹತ್ತಿರ ಕೂಡ ಸುಳಿಯದಂತಹ ಜಾದೂ ನಿಮ್ಮಲ್ಲಿ ಉತ್ಪನ್ನವಾಗುತ್ತದೆ.

ಸ್ನಾಯುಗಳ ಬಲವನ್ನು ಹೆಚ್ಚಿಸುತ್ತದೆ:

ಸ್ನಾಯುಗಳ ಬಲವನ್ನು ಹೆಚ್ಚಿಸುತ್ತದೆ:

ನಡಿಗೆಯು ನಿಮ್ಮ ತೋಳುಗಳಲ್ಲಿನ ಶಕ್ತಿಯನ್ನು ಹೆಚ್ಚಿಸಿ ಸ್ನಾಯುಗಳ ಬಲವನ್ನು ವರ್ಧಿಸುತ್ತದೆ. ನಿಮ್ಮ ಸೊಂಟ, ಪೃಷ್ಠ ಮತ್ತು ತೊಡೆಗಳಲ್ಲಿ ಅಡಕವಾಗಿರುವ ಹೆಚ್ಚುವರಿ ಕೊಬ್ಬು ಕರಗಿ ಸುಂದರ ಕಾಯವನ್ನು ಬೆಳಗ್ಗಿನ ನಡಿಗೆ ದಯಪಾಲಿಸುತ್ತದೆ.

ಮೆದುಳಿನ ಅಗತ್ಯಕ್ಕೆ:

ಮೆದುಳಿನ ಅಗತ್ಯಕ್ಕೆ:

ಹೌದು. ನಿಮ್ಮ ಮೆದುಳು ಚೆನ್ನಾಗಿ ಕಾರ್ಯನಿರ್ವಹಿಸಲು ಆಮ್ಲಜನಕ ಅತೀ ಅಗತ್ಯ. ದೇಹದಲ್ಲಿ ರಕ್ತದ ಪರಿಚಲನೆಯನ್ನು ಸುಧಾರಿಸುವುದು ಒಳಗೊಂಡಂತೆ ಬೆಳಗ್ಗಿನ ನಡಿಗೆಯು ಆರೋಗ್ಯವನ್ನು ಸುಧಾರಿಸುತ್ತದೆ.

ಒತ್ತಡವನ್ನು ಕಡಿಮೆ ಮಾಡುತ್ತದೆ:

ಒತ್ತಡವನ್ನು ಕಡಿಮೆ ಮಾಡುತ್ತದೆ:

ನೀವು ಹೆಚ್ಚುವರಿ ಒತ್ತಡಕ್ಕೆ ಒಳಗಾಗಿದ್ದರೆ, ಬೆಳಗ್ಗಿನ ನಡಿಗೆಯನ್ನು ನಡೆಯುವುದು ನಿಮಗೆ ಪ್ರಯೋಜನಕಾರಿಯಾಗಿದೆ. ಇದು ಮನಸ್ಸು ಮತ್ತು ದೇಹವನ್ನು ನಿಯಂತ್ರಿಸಿ ಒತ್ತಡವನ್ನು ಹಗುರಗೊಳಿಸುತ್ತದೆ.

ಕೊಲೆಸ್ಟ್ರಾಲ್:

ಕೊಲೆಸ್ಟ್ರಾಲ್:

ಕೊಲೆಸ್ಟ್ರಾಲ್‌ನಿಂದ ನೀವು ಬಳಲುತ್ತಿರುವಿರಾ? ಬೆಳಗ್ಗೆ ಬೇಗನೆದ್ದು ಮುಂಜಾವಿನ ನಡಿಗೆಯನ್ನು ನಿಮ್ಮದಾಗಿಸಿಕೊಳ್ಳಿ. ರಕ್ತದಲ್ಲಿ ಉತ್ತಮ ಕೊಲೆಸ್ಟ್ರಾಲ್ ಎಚ್‌ಡಿಎಲ್ ಮಟ್ಟಗಳನ್ನು ಏರಿಸುವಲ್ಲಿ ಮುಂಜಾವಿನ ನಡಿಗೆ ಸಹಾಯಕ.

ಪ್ರತಿರಕ್ಷಣಾ ವ್ಯವಸ್ಥೆ:

ಪ್ರತಿರಕ್ಷಣಾ ವ್ಯವಸ್ಥೆ:

ಯಾವುದೇ ರೀತಿಯ ರೋಗ ಅಥವಾ ಕಾಯಿಲೆಯನ್ನು ನಿವಾರಿಸಲು ನಿಮ್ಮ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆ ಅತೀ ಅಗತ್ಯವಾದುದು. ಬೆಳಗ್ಗಿನ ನಡಿಗೆಯು ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸಿ ಕಾಯಿಲೆಗಳನ್ನು ನೀಗಿಸುವಲ್ಲಿ ಪ್ರಯೋಜನಕಾರಿಯಾಗಿದೆ.

ಗರ್ಭಿಣಿಯರಿಗೆ:

ಗರ್ಭಿಣಿಯರಿಗೆ:

ವೈದ್ಯರು ಗರ್ಭಿಣಿ ಸ್ತ್ರೀಯರಿಗೆ ಹೆಚ್ಚು ನಡೆಯಲು ಏಕೆ ಸೂಚಿಸುತ್ತಾರೆ ಎಂಬುದನ್ನು ತಿಳಿದು ಆಶ್ಚರ್ಯಗೊಂಡಿರುವಿರಾ? ಗರ್ಭಪಾತದಂತಹ ಅಪಾಯಗಳನ್ನು ನಿವಾರಿಸುವಲ್ಲಿ ಬೆಳಗ್ಗಿನ ನಡಿಗೆಯು ಗರ್ಭಿಣಿ ಸ್ತ್ರೀಯರಿಗೆ ವರವಾಗಿರುವುದರಿಂದ ವೈದ್ಯರು ಕೂಡ ನಡಿಗೆಯನ್ನು ಶಿಫಾರಸ್ಸು ಮಾಡುತ್ತಾರೆ.

ಹೃದಯಕ್ಕೆ ಉತ್ತಮ:

ಹೃದಯಕ್ಕೆ ಉತ್ತಮ:

ಬೆಳಗ್ಗಿನ ನಡಿಗೆಯು ನಿಮ್ಮ ಹೃದಯಕ್ಕೂ ತುಂಬಾ ಒಳ್ಳೆಯದು. ದಿನವೂ 3 ರಿಂದ 4 ಕಿಮೀನಷ್ಟು ನಡಿಗೆಯು ಹೃದಯ ಸಂಬಂಧಿ ಕಾಯಿಲೆಗಳನ್ನು ನೀಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ. ಉತ್ತಮ ರಕ್ತವನ್ನು ಪೂರೈಸಲು ಹೃದಯಕ್ಕೆ ದೈನಂದಿನ ಚಟುವಟಿಕೆ ಅತೀ ಅಗತ್ಯ. ಆದ್ದರಿಂದ ನೀವು ಹೆಚ್ಚು ನಡೆದಷ್ಟು ನಿಮ್ಮ ಹೃದಯ ಆರೋಗ್ಯಪೂರ್ಣವಾಗಿರುತ್ತದೆ.

ಒಳ್ಳೆಯ ನಿದ್ರೆಗೆ:

ಒಳ್ಳೆಯ ನಿದ್ರೆಗೆ:

ಪ್ರಾತಃ ಕಾಲದ 15 ರಿಂದ 20 ನಿಮಿಷದ ನಡಿಗೆಯು ರಾತ್ರಿಯಲ್ಲಿ ನಿಮಗೆ ಒಳ್ಳೆಯ ನಿದ್ರೆಯನ್ನು ದಯಪಾಲಿಸುತ್ತದೆ. ನಡಿಗೆಯು ದೇಹವನ್ನು ಮತ್ತು ಮನಸ್ಸನ್ನು ರಿಲ್ಯಾಕ್ಸ್ ಮಾಡಿ ನಿಮಗೆ ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ.

ಕ್ಯಾನ್ಸರ್ ನಿವಾರಣೆಗೆ:

ಕ್ಯಾನ್ಸರ್ ನಿವಾರಣೆಗೆ:

ಮಧ್ಯ ವಯಸ್ಕ ಮಹಿಳೆಯರಿಗೆ ಬೆಳಗ್ಗಿನ ನಡಿಗೆಯು ಹೆಚ್ಚು ಲಾಭದಾಯಕವಾದುದು. ಬೆಳಗ್ಗಿನ ನಡಿಗೆಯು ಸ್ತನ ಕ್ಯಾನ್ಸರ್‌ನಂತಹ ಅಪಾಯವನ್ನು ಬುಡದಿಂದಲೇ ನಿವಾರಿಸುತ್ತದೆ.

X
Desktop Bottom Promotion