Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಹಣ್ಣು v/s ಹಣ್ಣಿನ ಜ್ಯೂಸ್ ಇದರಲ್ಲಿ ಯಾವುದು ಆರೋಗ್ಯಕರ?
ನೀವು ದಿನದ ಆರಂಭ ಹೇಗೆ ಮಾಡುತ್ತೀರಿ? ಒಂದು ಗ್ಲಾಸ್ ಜ್ಯೂಸ್ ಕುಡಿದು ಅಥವಾ ಬೇರೆ ಏನಾದರೂ ತಿನ್ನುವ ಮೂಲಕವೇ? ನೀವು ಜ್ಯೂಸ್ ಕುಡಿಯುತ್ತಿದ್ದರೆ ಅದು ನಿಮ್ಮ ಆರೋಗ್ಯ ಹಾಗೂ ತೂಕ ಕಳೆದುಕೊಳ್ಳುವ ಯೋಜನೆಗೆ ತುಂಬಾ ಹಾನಿಕಾರಕ. ತಂಪು ಪಾನೀಯಗಳನ್ನು ಕುಡಿದಷ್ಟೇ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ಹಾನಿಕಾರವೆಂದು ಹೆಚ್ಚಿನವರಿಗೆ ತಿಳಿದಿಲ್ಲ.
ಹಣ್ಣು ಮತ್ತು ಹಣ್ಣಿನ ಜ್ಯೂಸ್ ಗಳನ್ನು ಸಮಾನವೆಂದು ಪರಿಗಣಿಸಲಾಗಿದೆ. ಯಾಕೆಂದರೆ ಎರಡರಲ್ಲೂ ಒಂದೇ ರೀತಿಯ ಅಂಶಗಳಿರುತ್ತದೆ. ಆದರೆ ಪ್ರಮುಖ ವ್ಯತ್ಯಾಸವೆಂದರೆ ಹಣ್ಣುಗಳಲ್ಲಿ ಇರುವಂತಹ ನಾರಿನಾಂಶದ ಪ್ರಮಾಣ ಹಣ್ಣಿನ ಜ್ಯೂಸ್ ನಲ್ಲಿ ಇಲ್ಲದಿರುವುದು.

ಹಣ್ಣುಗಳ ಜ್ಯೂಸ್ ಬೇಗನೆ ಹೀರಿಕೊಳ್ಳುತ್ತದೆ
ಕ್ಯಾಂಬ್ರಿಡ್ಜ್ ನಲ್ಲಿರುವ ಮೆಡಿಕಲ್ ರಿಸರ್ಚ್ ಕೌನ್ಸಿಲ್ ಹ್ಯೂಮನ್ ನ್ಯೂಟ್ರಿಷನ್ ರಿಸರ್ಜ್ ಯುನಿಟ್ ನಡೆಸಿರುವ ಆಹಾರ ಕ್ರಮ ಮತ್ತು ಬೊಜ್ಜಿನ ಅಧ್ಯಯನ ವರದಿಯಿಂದ ತಿಳಿದುಬಂದ ವಿಚಾರವೆಂದರೆ ಹಣ್ಣಿನ ಜ್ಯೂಸ್ ನಲ್ಲಿ ಸಹಪರೋಪಕ್ಷವಾಗಿ ಪೌಷ್ಠಿಕತೆಗೆ ಹತ್ತಿರವಾಗಿರುವ ಯಾವ ಅಸ್ತಿತ್ವವನ್ನೂ ಉಳಿಸಿಕೊಂಡಿಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಗಾಲಕ್ಕೆ ದೇಹವನ್ನು ಬೆಚ್ಚಗಿಡುವ ಉತ್ತಮ ಆಹಾರ ಪದಾರ್ಥಗಳು
ಹಣ್ಣಿನ ಜ್ಯೂಸ್ ನಿಮ್ಮ ತೂಕ ಇಳಿಸುವ ಗುರಿಗೆ ಅಡ್ಡಿಯಾಗಬಹುದು
ನಿಮಗೆ ಒಂದು ಕಿತ್ತಳೆ ಅಥವಾ ನಾಲ್ಕು ಕಿತ್ತಳೆಗಳಿಂದ ಮಾಡಿರುವಂತಹ ಒಂದು ಗ್ಲಾಸ್ ಸ್ಮೂಥಿ ನೀಡಲಾಗಿದೆ ಎಂದು ಕಲ್ಪನೆ ಮಾಡಿಕೊಳ್ಳಿ. ನಿಮಗೆ ಹಣ್ಣು ತಿಂದ ಅಥವಾ ಸ್ಮೂಥಿ ಕುಡಿದ ಬಳಿಕ ಯಾವುದರಿಂದ ಕಡಿಮೆ ಹಸಿವಾಗುತ್ತದೆ? ತಜ್ಞರ ಪ್ರಕಾರ ಜ್ಯೂಸ್ ಕುಡಿಯುವುದಕ್ಕಿಂತ ಹಣ್ಣು ತಿನ್ನುವುದರಿಂದ ನಿಮ್ಮ ಹೊಟ್ಟೆ ತುಂಬಿದಂತಾಗುತ್ತದೆ. ನಾಲ್ಕು ಕಿತ್ತಳೆಗಳನ್ನು ಒಳಗೊಂಡಿರುವ ಸ್ಮೂಥಿ ಹೆಚ್ಚಿನ ಸಕ್ಕರೆ ಅಂಶವನ್ನು ನಿಮ್ಮ ದೇಹಕ್ಕೆ ನೀಡುತ್ತದೆ.
ಹಣ್ಣಿನ ಜ್ಯೂಸ್ ನಲ್ಲಿ ಹೆಚ್ಚಿನ ಸಕ್ಕರೆ ಅಂಶವಿದೆ
ನೀವು ಸ್ವಲ್ಪ ಹಣ್ಣಿನ ಜ್ಯೂಸ್ ಕುಡಿದರೂ ಅದರಲ್ಲಿ ಕೆಲವು ಚಮಚ ಸಕ್ಕರೆಯಾಂಶವಿರುತ್ತದೆ. ಇದರಿಂದ ನೀವು ಜೀವಮಾನವಿಡಿ ಅನುಭವಿಸುವಂತಹ ಕೆಲವು ಸಮಸ್ಯೆ ಉಂಟುಮಾಡಬಹುದು. ಸಕ್ಕರೆಯಾಂಶ ಹೆಚ್ಚು ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಒಮ್ಮೆಲೇ ಶಕ್ತಿ ಸ್ಫೋಟಗೊಂಡು ತಕ್ಷಣ ಕುಸಿಯುವ, ಹಸಿವು ಹೆಚ್ಚಿಸುವ, ಮುಂಗೋಪ ಮತ್ತು ಆಲಸ್ಯ ಉಂಟುಮಾಡಬಹುದು.
ಹಣ್ಣಿನ ಜ್ಯೂಸ್ ಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕೇ?
ನೀವು ಕುಡಿಯುವಂತಹ ಹಣ್ಣಿನ ಜ್ಯೂಸ್ ನಿಮ್ಮ ದೇಹದ ಮೇಲೆ ಪರಿಣಾಮ ಬೀರುವುದು ಅದನ್ನು ಹೇಗೆ ಸೇವಿಸುತ್ತೀರಿ ಎನ್ನುವುದರಿಂದಲ್ಲ. ಹಣ್ಣಿನ ಜ್ಯೂಸ್ ನ್ನು ಹಣ್ಣಿನಲ್ಲಿರುವ ನಾರಿನಾಂಶ ಮತ್ತು ಪ್ರಮುಖ ಪೋಷಕಾಂಶ ತೆಗೆದುಹಾಕಿದ ಬಳಿಕ ನೀಡಲಾಗುತ್ತದೆ. ಇದರಲ್ಲಿರುವ ಸಕ್ಕರೆಯಲ್ಲಿ ಜೀರ್ಣಾಂಗ ಮತ್ತು ಚಯಾಪಚಯಾ ಕ್ರಿಯೆಗೆ ನೆರವಾಗುವ ಪೌಷ್ಠಿಕಾಂಶಗಳಿರುವುದಿಲ್ಲ.
ಕ್ಯಾನ್ ಅಥವಾ ಪ್ಯಾಕ್ ಮಾಡಲಾದ ಹಣ್ಣಿನ ಜ್ಯೂಸ್ ನೀವು ಕುಡಿಯುತ್ತಿದ್ದರೆ ಆಗ ನಿಮಗೊಂದು ಆಘಾತಕಾರಿ ಸುದ್ದಿಯಿದೆ. ಕ್ಯಾನ್ ಅಥವಾ ಪ್ಯಾಕ್ ಮಾಡಲಾದ ಹಣ್ಣಿನ ಜ್ಯೂಸ್ ಗಳಲ್ಲಿ ತುಂಬಾ ಕಡಿಮೆ ಪ್ರಮಾಣದ ನಿಜವಾದ ಹಣ್ಣಿನ ಅಂಶವಿರುತ್ತದೆ. ಇದರಿಂದಾಗಿ ಹೆಚ್ಚಿನ ಹಣ್ಣಿನ ಜ್ಯೂಸ್‌ಗಳು ಹಣ್ಣಿನಂತೆ ರುಚಿ ಕೂಡ ಹೊಂದಿರುವುದಿಲ್ಲ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮೊಣಕಾಲು ನೋವನ್ನು ನಿವಾರಿಸಲು 5 ಸಲಹೆಗಳು
ನೀವು ಜ್ಯೂಸ್ ಕುಡಿಯುವಾಗ ಸಿಗಬಹುದೆಂದು ಯೋಚಿಸುವ ಕೆಲವೊಂದು ಪೌಷ್ಠಿಕಾಂಶಗಳು
ಸಿಗದೆ ಒಂದು ಗ್ಲಾಸ್ ಜ್ಯೂಸ್ ಕುಡಿಯುವಾಗ ಹೆಚ್ಚಿನ ಪ್ರಮಾಣದ ಕ್ಯಾಲರಿ ನಿಮ್ಮ ದೇಹ ಸೇರಬಹುದು. ಪ್ಯಾಕ್ ಮಾಡಿದ ಕೆಲವೊಂದು ಹಣ್ಣಿನ ಜ್ಯೂಸ್ ಗಳಲ್ಲಿ ಕಡಿಮೆ ಫ್ಯಾಟ್ ಇದೆಯೆಂದು ಬರೆದಿರುತ್ತಾರೆ. ಆದರೆ ಇದು ನಿಜವಲ್ಲ ಎಂದು ನಾವು ಅರ್ಥ ಮಾಡಿಕೊಳ್ಳಬೇಕು. ನೀವು ಹಣ್ಣಿನ ಜ್ಯೂಸ್ ನ ಜಾರ್ ಅಥವಾ ಪ್ಯಾಕ್ ನ್ನು ತೆಗೆದುಕೊಂಡರೆ ಆಗ ಅದನ್ನು ತಯಾರಿಸಲು ಬಳಸುವಂತಹ ಕೆಲವೊಂದು ವಸ್ತುಗಳನ್ನು ಗಮನಿಸಿ. ಆದರೆ ಇದರಲ್ಲಿ ಒಂದು ಸಣ್ಣ ತುಂಡು ಹಣ್ಣನ್ನು ಕೂಡ ಹಾಕಿರುವುದಿಲ್ಲ ಎನ್ನುವುದು ತಿಳಿಯುತ್ತದೆ.
ನಿಮ್ಮ ಉಪಹಾರಕ್ಕೆ ಏನನ್ನು ಸೇವಿಸಲು ಬಯಸುತ್ತೀರಿ. ಹಣ್ಣು ಅಥವಾ ಹಣ್ಣಿನ ಜ್ಯೂಸ್? ಹಣ್ಣು ತಿನ್ನಿ ಮತ್ತು ಹೆಚ್ಚಿನ ಪೋಷಕಾಂಶಗಳನ್ನು ಪಡೆಯಿರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
