Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆ 120 ರೂಪಾಯಿಯಲ್ಲಿ ಆರೋಗ್ಯಕರ ಲಂಚ್ಬಾಕ್ಸ್ ಸಿದ್ಧಪಡಿಸುವುದು ಹೇಗೆ? -
ವಿಶ್ವ ಸಿಂಹ ದಿನ: ಸಿಂಹದಂತೆ ಗರ್ಜಿಸುವ ಶಕ್ತಿ ಪಡೆಯಲು 10 ನಿಮಿಷದ ಈ ವರ್ಕೌಟ್ ಟ್ರೈ ಮಾಡಿ! -
ಸೂರ್ಯಗ್ರಹಣದ ಗೊಂದಲ: ಹಿರಿಯರ ನಂಬಿಕೆಗಳ ನಡುವೆ ಯುವ ದಂಪತಿಗಳು ಶಾಂತಿ ಕಾಪಾಡುವುದು ಹೇಗೆ? -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ನಿಮ್ಮ ಬಾಲ್ಕನಿಯಲ್ಲಿಯೇ ಸೃಷ್ಟಿಸಿ ಹಸಿರು ಸ್ವರ್ಗ! -
ಕೇರಳದ ಉಚಿತ ಓಣಂ ಕಿಟ್: ದಿನಸಿ ಪದಾರ್ಥಗಳು ಹಾಳಾಗದಂತೆ ಇಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಆಗಸ್ಟ್ ಕ್ರಾಂತಿ ದಿನ: ಸೋಶಿಯಲ್ ಮೀಡಿಯಾದಲ್ಲಿ ದೇಶಭಕ್ತಿ ಮೆರೆಯಲು ಇಲ್ಲಿದೆ ಬೆಸ್ಟ್ ಐಡಿಯಾಸ್! -
ಮಳೆಗಾಲದ ಓಟದ ನಂತರ ಕಾಲು ನೋವೇ? ಕೀಲುಗಳ ರಕ್ಷಣೆಗೆ ಈ 12 ನಿಮಿಷದ ಸರಳ ವ್ಯಾಯಾಮಗಳು -
ಶ್ರಾವಣ ಶಿವರಾತ್ರಿ 2026: ಮಳೆಗಾಲದಲ್ಲಿ ಜಾಗರಣೆ ಮಾಡುವಾಗ ಈ ಮುನ್ನೆಚ್ಚರಿಕೆ ಮರೆಯದಿರಿ, ಪೂಜೆ ಸುಗಮವಾಗಲಿ! -
ಬೆಂಗಳೂರಿನ ಹೈ-ಎಂಡ್ ಹೋಟೆಲ್ಗಳಲ್ಲಿ ಕೊಳೆತ ಆಹಾರ: ನೀವು ತಿನ್ನುವ ಊಟ ನಿಜಕ್ಕೂ ಸುರಕ್ಷಿತವೇ? -
2026ರ ಫ್ರೀಡಂ ಸೇಲ್: ಆನ್ಲೈನ್ ಶಾಪಿಂಗ್ನಲ್ಲಿ ಹಣ ಉಳಿಸಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ!
ಹಾಲಿನ ಪ್ರಕಾರಗಳು ಮತ್ತು ಆರೋಗ್ಯಕರ ಪ್ರಯೋಜನಗಳು
ನಿಮ್ಮ ದಿನನಿತ್ಯದ ಆಹಾರದಲ್ಲಿ ನೀವು ಸೇರಿಸಿಕೊಳ್ಳಲೇಬೇಕಾದ ಪ್ರೋಟೀನ್‌ಯುಕ್ತ ಆಹಾರವಾಗಿದೆ ಹಾಲು. ಒಂದು ಕಪ್ ಹಾಲಿನ ಚಮತ್ಕಾರೀ ಪ್ರಯೋಜನವನ್ನು ಮಾತಿನಲ್ಲಿ ಬಣ್ಣಿಸಲಾಗದು. ನಿಮ್ಮ ಮೂಳೆಗಳ ಬೆಳವಣಿಗೆಗೆ ಬೇಕಾದ ವಿಟಮಿನ್‌ಗಳನ್ನು ಹಾಲು ಒದಗಿಸುವುದರೊಂದಿಗೆ ನಿಮ್ಮನ್ನು ಸುದೃಢಗೊಳಿಸುತ್ತದೆ.
ಒಂದು ಮಗು ನಿರ್ದಿಷ್ಟ ಹಂತಕ್ಕೆ ಬಂದಾಗ, ಅವರು ವಿವಿಧ ಪ್ರಕಾರದ ಹಾಲನ್ನು ಸೇವಿಸುತ್ತಿದ್ದಾರೆ ಎಂಬುದನ್ನು ಪಾಲಕರು ಖಾತ್ರಿಪಡಿಸಿಕೊಳ್ಳಬೇಕು. ಮಾರುಕಟ್ಟೆಯಲ್ಲಿ ಸಿಗುವ ಹಾಲು ದನದ್ದು ಮಾತ್ರವಲ್ಲ, ವಿವಿಧ ವಿಧದ ಹಾಲು ಲಭ್ಯವಿವೆ. ವಿವಿಧ ಪ್ರಕಾರಗಳ ಹಾಲನ್ನು ಕೆಳಗೆಪಟ್ಟಿ ಮಾಡಲಾಗಿದೆ.
ಮನೆಯಲ್ಲೂ ನೀವು ಇದನ್ನು ತಯಾರಿಸಿಕೊಳ್ಳಬಹುದು. ಓಟ್ಸ್, ಅಕ್ಕಿ ಮತ್ತು ಗೇರುಬೀಜದ ಹಾಲನ್ನು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು, ಅದಕ್ಕೆ ಸೇರಿಸುವ ವಸ್ತುಗಳು ನಿಮಗೆ ತಿಳಿದಿರಬೇಕು.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಸೌಂದರ್ಯ ಮತ್ತು ಆರೋಗ್ಯಕ್ಕೆ ಅರಿಶಿನದ ಹಾಲು
ಇಂದು ಮಕ್ಕಳು ಹಾಲನ್ನು ನಿರಾಕರಿಸುವುದು ಹಲವಾರು ತಾಯಂದಿರ ಚಿಂತೆಗೆ ಕಾರಣವಾಗಿದೆ. ದನದ ಹಾಲು ಮಾತ್ರವಲ್ಲದೆ ಇತರ ಹಾಲನ್ನೂ ನೀವು ಈ ಸಂದರ್ಭದಲ್ಲಿ ಬಳಸಬಹುದು. ಅದಕ್ಕಾಗಿ ಬೋಲ್ಡ್‌ಸ್ಕೈ ಇಂದು ವಿವಿಧ ಪ್ರಕಾರದ ಹಾಲು ಮತ್ತು ಅದರ ವೈಶಿಷ್ಟ್ಯಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ದೇಹದ ಬೊಜ್ಜು ಕರಗಿಸಲು ಕೆಲವೊಂದು ಸಲಹೆಗಳು

ದನದ ಹಾಲು
ಒಂದು ಉತ್ತಮವಾದ ಪ್ರೋಟೀನ್ ವಿಟಮಿನ್ ಯುಕ್ತ ಹಾಲು ದನದ್ದಾಗಿದೆ. ಇದು ಮೂಳೆಗಳ ಸುದೃಢತೆಗೆ ಸಹಕಾರಿಯಾಗಿದ್ದು ಬೆಳೆಯುವ ಮಕ್ಕಳಿಗೆ ಅತೀ ಅವಶ್ಯಕ.

ಸೋಯಾ ಹಾಲು
ದನದ ಹಾಲಿನ ನಂತರದ ಸ್ಥಾನ ಸೋಯಾ ಹಾಲಿಗಿದೆ. ಇದರಲ್ಲಿ ಕೊಬ್ಬಿನಂಶ ಇಲ್ಲ. ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುವ ಹಾಲು ಸೋಯಾ ಹಾಲಾಗಿದ್ದು ಕ್ಯಾನ್ಸರ್ ರೋಗಿಗಳಿಗೆ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ದಿನನಿತ್ಯದ ಆಹಾರದಲ್ಲಿ ಇದರ ಸೇವನೆ ಅಗತ್ಯ.

ಬಾದಾಮಿ ಹಾಲು
ಮೆಗ್ನೇಶಿಯಂ ಅಧಿಕವಾಗಿರುವ ಹಾಲು ಬಾದಾಮಿ ಹಾಲಾಗಿದ್ದು ಮೂಳೆಗಳ ದೃಢತೆಗೆ ಆವಶ್ಯಕವಾಗಿದೆ. ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಬಾದಾಮಿ ಹಾಲು ಬಹುದೊಡ್ಡ ಪಾತ್ರ ವಹಿಸಿದೆ.

ಅಕ್ಕಿ ಹಾಲು
ಅಕ್ಕಿಯಿಂದ ತೆಗೆದ ಹಾಲಿನಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳನ್ನು ಕುರಿತು ನಿಮಗೆ ತಿಳಿದಿದೆಯೇ? ಇದು ನಿಮ್ಮ ತೂಕ ಇಳಿಸುವಲ್ಲಿ ಸಹಕಾರಿಯಾಗಿದೆ.

ತೆಂಗಿನ ಹಾಲು
ಕ್ರೀಮಿ, ಪರಿಶುದ್ಧವಾಗಿರುವ ತೆಂಗಿನ ಹಾಲನ್ನು ದನದ ಹಾಲಿಗೆ ಒಗ್ಗಿಕೊಳ್ಳದವರು ಸೇವಿಸಬಹುದು. ಕೊಬ್ಬಿನಂಶವಿಲ್ಲದ ಈ ಹಾಲು ದೇಹಕ್ಕೆ ತುಂಬಾ ಉತ್ತಮವಾದುದು.

ಗೇರುಬೀಜದ ಹಾಲು
38 ಶೇಕಡದಷ್ಟು ಕೋಪರ್ ಅಂಶವನ್ನು ಗೇರುಬೀಜದ ಕಾಲು ಲೋಟ ಹಾಲು ನಮಗೆ ಒದಗಿಸುತ್ತದೆ. ಇದು ಮೂಳೆಗಳನ್ನು ಉತ್ತಮಗೊಳಿಸುವುದರೊಂದಿಗೆ ಸಂಯೋಜಕ ಅಂಗಾಂಶವನ್ನು ಸುಧಾರಿಸುತ್ತದೆ.

ಹೆಂಪ್ ಹಾಲು
ಗೇರುಬೀಜದ ಹಾಲು ನಿಮಗೆ ಒಗ್ಗದಿದ್ದರೆ, ನಿಮಗೆ ಹೆಂಪ್ ಹಾಲು ಅತ್ಯುತ್ತಮವಾಗಿರುತ್ತದೆ. ಹೆಂಪ್ ಸಸ್ಯಮೂಲಿಕೆಯ ಹಾಲು ನಿಮ್ಮ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಓಟ್ ಹಾಲು
ಕೊಲೆಸ್ಟ್ರಾಲ್ ಮತ್ತು ಲ್ಯಾಕ್ಟೋಸ್ ಮುಕ್ತವಾಗಿರುವ ಓಟ್ಸ್‌ನಿಂದ ತಯಾರಿಸಲಾದ ಹಾಲು ಆರೋಗ್ಯಕರ ಮುನ್ನಡೆಗೆ ಸಹಕಾರಿಯಾಗಿದೆ.

ಎಮ್ಮೆ ಹಾಲು
ದಪ್ಪ ಮತ್ತು ಕ್ರೀಮಿ ಹಾಲಾಗಿದ್ದು, ಕೊಲೆಸ್ಟ್ರಾಲ್ ಅಂಶವನ್ನು ಕಡಿಮೆ ಪ್ರಮಾಣದಲ್ಲಿ ಹೊಂದಿದೆ. ಪ್ರೋಟೀನ್, ಕ್ಯಾಲ್ಶಿಯಂ, ಐರನ್, ಫೋಸ್‌ಫೋರಸ್ ಅಂಶ ಎಮ್ಮೆ ಹಾಲಿನಲ್ಲಿದೆ.

ಆಡಿನ ಹಾಲು
ದನದ ಹಾಲಿಗೆಪರ್ಯಾಯವಾಗಿ ಆಡಿನ ಹಾಲನ್ನು ಸೇವಿಸಬಹುದು. ದನದ ಹಾಲಿಗಿಂತ ಅಧಿಕವಾಗಿ ವಿಟಮಿನ್ ಅಂಶ ಆಡಿನ ಹಾಡಿನಲ್ಲಿದೆ.



Click it and Unblock the Notifications