ಮಳೆಗಾಲದಲ್ಲಿ ಶೀತ-ನೆಗಡಿಯಿಂದ ರಕ್ಷಿಸಿಕೊಳ್ಳುವುದು ಹೇಗೆ?

ಮಳೆಗಾಲದೊಂದಿಗೆ ಹಲವಾರು ರೋಗಗಳು ಆಗಮಿಸುತ್ತವೆ. ಇದರಲ್ಲಿ ಅತ್ಯಂತ ಸಾಮಾನ್ಯವಾದುದೆಂದರೆ ಶೀತ ಮತ್ತು ನೆಗಡಿ. ಇದರೊಂದಿಗೆ ಜ್ವರ, ಹುಣ್ಣು, ಚರ್ಮ ಒಣಗುವಿಕೆ, ಅಜೀರ್ಣ, ತಲೆಹೊಟ್ಟು ಮೊದಲಾದವು. ಸೊಳ್ಳೆಗಳ ಸಂಖ್ಯೆಯೂ ಮಳೆಗಾಲದಲ್ಲಿ ವಿಪರೀತವಾಗುವುದರಿಂದ ಮಲೇರಿಯಾ, ಡೆಂಗ್ಯೂ, ಚಿಕುನ್ ಗುನ್ಯಾ ಮೊದಲಾದ ರೋಗಗಳೂ ಕಾಣಿಸಿಕೊಳ್ಳಬಹುದು. ಇದರಲ್ಲಿ ಶೀತ ಮತ್ತು ನೆಗಡಿ ಸಾಂಕ್ರಾಮಿಕವಾದುದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

*ಮಳೆಗಾಲದಲ್ಲಿ ಮಳೆ ಇರಲಿ, ಇಲ್ಲದಿರಲಿ, ಮಳೆಯಿಂದ ರಕ್ಷಿಸಿಕೊಳ್ಳುವ ಕೊಡೆ ಅಥವಾ ರೇನ್ ಕೋಟ್ ಒಂದನ್ನು ಸದಾ ಜೊತೆಗೆ ಒಯ್ಯಿರಿ. ತಲೆಯನ್ನು ಪೂರ್ಣವಾಗಿ ಆವರಿಸುವ ಟೋಪಿ, ಮಫ್ಲರ್, ಮಳೆಗಾಲದ ಪಾದರಕ್ಷೆ ಗಳ ಜೊತೆಗೆ ಹೊರಡುವುದು ಇನ್ನೂ ಕ್ಷೇಮ.

*ಶೀತದಿಂದ ರಕ್ಷಣೆ ಪಡೆಯಲು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದು ಉತ್ತಮ ಮುನ್ನೆಚ್ಚರಿಕೆಯಾಗಿದೆ. ವಿಟಮಿನ್ ಸಿ ಹೇರಳವಾಗಿರುವ ಹಣ್ಣು ಮತ್ತು ಆಹಾರಗಳಿಂದ ದೇಹದ ರೋಗನಿರೋಧಕ ಶಕ್ತಿ ಬಲಗೊಂಡು ಶೀತವನ್ನೆದುರಿಸಲು ದೇಹ ಶಕ್ತವಾಗುತ್ತದೆ.

Tips to Prevent Common Respiratory Diseases in Monsoon

ಜ್ವರ ಬಂದಾಗ ತಿನ್ನಬೇಕಾದ ಆಹಾರಗಳಿವು

*ಮಳೆಯಲ್ಲಿ ತೋಯ್ದು ಮನೆಗೆ ಆಗಮಿಸಿದ ಕೂಡಲೇ ಸ್ನಾನ ಮಾಡಿ. ಮಳೆಯಲ್ಲಿ ಹೊರಗಿದ್ದಾಗ ಮಳೆ ಹನಿಗಳು ನೇರವಾಗಿ ಬೀಳದಿದ್ದರೂ ಗಾಳಿಯಲ್ಲಿರುವ ನೀರಿನ ಪಸೆಯ ಮೂಲಕ ಹಲವು ರೋಗಾಣುಗಳು ದೇಹವನ್ನು ಅಂಟಿಕೊಂಡಿರುತ್ತವೆ. ಅವುಗಳು ದೇಹದೊಳಕ್ಕೆ ಪ್ರವೇಶ ಪಡೆಯುವ ಮುನ್ನ ಸ್ನಾನ ಮಾಡಿ ಶುಚಿಯಾಗುವುದರಿಂದ ಶೀತ ಮೊದಲಾದ ರೋಗಗಳಿಂದ ರಕ್ಷಣೆ ಪಡೆಯಬಹುದು.

*ಮಳೆಯಲ್ಲಿ ತೋಯ್ದು ಮನೆಗೆ ಆಗಮಿಸಿದ ಕೂಡಲೇ ಸ್ನಾನ ಮಾಡುವುದು ಸಾಧ್ಯವಾಗದಿದ್ದರೆ ಒಂದು ಲೋಟ ಬಿಸಿಬಿಸಿಯಾದ ಹಾಲು, ಸೂಪ್ ಅಥವಾ ಚಹಾ ಸೇವಿಸುವುದು ಒಳ್ಳೆಯದು. ಮಳೆಯ ಕಾರಣ ಗಾಳಿಯ ತಾಪಮಾನ ಕಡಿಮೆಯಾಗಿ ದೇಹವೂ ಅದಕ್ಕನುಗುಣವಾಗಿ ತಂಪುಗೊಂಡಿರುತ್ತದೆ. ಈ ಅವಕಾಶಕ್ಕಾಗಿ ಕಾಯುತ್ತಿದ್ದ ರೋಗಾಣುಗಳು ದೇಹಪ್ರವೇಶಿಸಲು ಹವಣಿಸುತ್ತಿರುವಾಗ ಬಿಸಿಬಿಸಿ ಪೇಯ ಕುಡಿದರೆ ದೇಹ ಬೆಚ್ಚಗಾಗಿ ವೈರಾಣುಗಳನ್ನು ಸದೆಬಡಿಯುತ್ತದೆ.

*ಮಳೆಯಲ್ಲಿ ಹೊರಗಿದ್ದಾಗ ಹಲವು ವಸ್ತುಗಳನ್ನು ಮುಟ್ಟಬೇಕಾಗಿ ಬರುತ್ತದೆ. ಅದಕ್ಕೂ ಮೊದಲು ಆ ಸ್ಥಳದಲ್ಲಿ ಬೇರೆ ಯಾರಾದರೂ ಮುಟ್ಟಿದ್ದರೆ ಅಥವಾ ಯಾವುದೋ ಹಕ್ಕಿ ಗಲೀಜು ಮಾಡಿ ಒಣಗಿದ್ದುದು ಮಳೆಯ ಕಾರಣ ಒದ್ದೆಯಾಗಿದ್ದರೆ ಜೀವಗೊಳ್ಳುವ ವೈರಸ್ಸುಗಳು ನಮ್ಮ ಕೈಗೆ ಹತ್ತಬಹುದು. ಮನೆ ತಲುಪಿದ ಕೂಡಲೇ ಏನನ್ನೂ ಮುಟ್ಟುವ ಮೊದಲು ಸೋಪು ಅಥವಾ ಇತರ ಮಾರ್ಜಕದಿಂದ ಕೈ, ಕಾಲು ಮುಖಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳುವುದು ಒಳ್ಳೆಯದು.

*ಎಚ್ಚರವಿದ್ದಷ್ಟೂ ಹೊತ್ತು ಸಾಧ್ಯವಾದಷ್ಟು ಹೆಚ್ಚಿಗೆ ನೀರು ಕುಡಿಯಿರಿ. ಮಳೆಗಾಲದಲ್ಲಿ ನೀರಡಿಕೆಯಾಗುವುದು ಕಡಿಮೆ. ಆದರೆ ದೇಹದೊಳಗೆ ಆಗಮಿಸಿರುವ ವೈರಸ್ಸು, ಕೀಟಾಣುಗಳನ್ನು ಹೊಡೆದೋಡಿಸಲು ನಮ್ಮ ದೇಹನಿರೋಧಕ ಶಕ್ತಿಗೆ ಹೆಚ್ಚಿನ ನೀರಿನ ಅವಶ್ಯಕತೆಯಿದೆ. ಬಾಯಾರಿಕೆ ಆಗಲಿ, ಅಥವಾ ಆಗದೇ ಇರಲಿ ಘಂಟೆಗೊಂದು ಲೋಟ ಉಗುರುಬೆಚ್ಚನೆಯ ಸ್ವಚ್ಛ ನೀರನ್ನು ಕುಡಿಯುವುದರಿಂದ ದೇಹದ ತಾಪಮಾನವನ್ನು ಒಂದೇ ಮಟ್ಟದಲ್ಲಿ ಉಳಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಹೆಚ್ಚಿನ ನೀರಿನ ಸೇವನೆಯಿಂದ ಮೂತ್ರವಿಸರ್ಜನೆಯೂ ಸರಾಗವಾಗಿ ನಡೆದು ದೇಹದ ವಿಷಕಾರಿ ವಸ್ತುಗಳು ಹೊರಹೋಗಲು ನೆರವಾಗುತ್ತದೆ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

Story first published: Tuesday, August 26, 2014, 18:03 [IST]
X
Desktop Bottom Promotion