Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಆಹಾರದ ಬಯಕೆಯನ್ನು ಯೋಗದ ಮೂಲಕ ನಿಯಂತ್ರಿಸಿ
ಆಹಾರದ ಕಡುಬಯಕೆಯು ನಮಗೆ ಬೇಕಾದಷ್ಟು ನಮಗಿಷ್ಟವಾಗಿರುವ ತಿಂಡಿತಿನಿಸುಗಳನ್ನು ತಿನ್ನುವ ಸ್ವಾತಂತ್ರ್ಯ ನೀಡುತ್ತದೆ. ಆದರೆ ಇದನ್ನು ನಿಯಂತ್ರಣದಲ್ಲಿಡದೆ ನಿಯಮಿತವಾಗಿ ಮುಂದುವರಿದರೆ ಆಗ ಅದು ಗಂಭೀರ ರೂಪದ ತಿನ್ನುವ ಕಾಯಿಲೆಗೆ ಕಾರಣವಾಗಬಹುದು.
ಸ್ವಯಂ ನಿಯಂತ್ರಣ ಹಾಗೂ ಶಿಸ್ತು ಯಾವಾಗಲೂ ಅಷ್ಟು ಸುಲಭವಲ್ಲ ಎನ್ನುವುದು ದುರಾದೃಷ್ಟ, ಅದರಲ್ಲೂ ಆಹಾರದ ಕಡುಬಯಕೆಯಲ್ಲಿ ಇದು ತುಂಬಾ ಕಠಿಣ. ಆದರೆ ಆಹಾರದ ಕಡುಬಯಕೆ ನಿಯಂತ್ರಿಸಲು ಅತ್ಯಂತ ಪರಿಣಾಮಕಾರಿ ವಿಧಾನವೊಂದಿದ್ದು, ಅದೇ ಯೋಗ.

ನಿಯಮಿತವಾಗಿ ಯೋಗ ಮಾಡುವವರು ಯೋಗದ ಮೂಲಕ ಹಸಿವನ್ನು ಹೇಗೆ ನಿಯಂತ್ರಿಸಬಹುದು ಎಂದು ತಿಳಿದುಕೊಂಡಿದ್ದಾರೆ. ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ದೇಹವನ್ನು ಫಿಟ್ ಆಗಿ, ಮನಸ್ಸನ್ನು ಶಾಂತವಾಗಿಸುವುದರಿಂದ ದೇಹದ ಬಗ್ಗೆ ಅವರಿಗೆ ಸಂತೃಪ್ತ ಭಾವನೆ ನೀಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಾರ್ಮೋನ್ ಸಮತೋಲನಕ್ಕೆ ಯೋಗದ ಭಂಗಿಗಳು
ಇಷ್ಟು ಮಾತ್ರವಲ್ಲದೆ ಅವರಿಗೆ ಸ್ವಯಂ ಶಿಸ್ತನ್ನು ಕೂಡ ಕಲಿಸುತ್ತದೆ. ಇದರಿಂದ ಹಸಿವನ್ನು ನಿಯಂತ್ರಿಸಲು ಯೋಗವನ್ನು ಅತ್ಯಂತ ಪರಿಣಾಮಕಾರಿ ವಿಧಾನವೆಂದು ಪರಿಗಣಿಸಲಾಗಿದೆ. ಹಸಿವಿನ ಕಡುಬಯಕೆ ನಿಯಂತ್ರಿಸಲು ಕೆಲವೊಂದು ಸರಳ ಯೋಗಾಭ್ಯಾಸಗಳು
ಯೋಗಾಭ್ಯಾಸದಲ್ಲಿ ಹಲವಾರು ರೀತಿಯ ಉಸಿರಾಟದ ವ್ಯಾಯಾಮ, ಭಂಗಿ ಮತ್ತು ಧ್ಯಾನ ಒಳಗೊಂಡಿರುತ್ತದೆ.
ಚೀಸ್ ಉಳ್ಳ ಕೇಕ್ ನ್ನು ತಿನ್ನಬೇಕೆಂದು ನಿಮಗೆ ಯಾವುದೇ ದೇವದೂತ ಒತ್ತಾಯಿಸುತ್ತಿದ್ದರೆ ಅಥವಾ ಪಿಶಾಚಿಗಳು ಬೊಬ್ಬೆ ಹಾಕುತ್ತಿದ್ದರೆ ಎಂದು ನಿಮಗನಿಸಿದರೆ ಆಗ ನೀವು ಯಾರೋಬ್ಬರ ಮಾತನ್ನು ಕೇಳುವುದು ಬೇಡ. ಅವರಿಬ್ಬರನ್ನು ದೂರ ಓಡಿಸಿ ಮತ್ತು ನಿಮ್ಮ ಮನಸ್ಸಿಗೆ ಸಮಾಧಾನ ಹೇಳಿ ಯೋಗದ ಕೆಲವೊಂದು ಸರಳ ಭಂಗಿಗಳನ್ನು ಅಭ್ಯಾಸ ಮಾಡಿ.
ನೇರವಾಗಿ ನಿಂತು ಎದುರು ಬಾಗುವುದು
* ಗೋಡೆಗಿಂತ ಒಂದು ಅಡಿ ದೂರದಲ್ಲಿ ಎದ್ದು ನಿಲ್ಲಿ(ನೀವು ಕುಳಿತ್ತಿದ್ದರೆ) ಮತ್ತು ಕಾಲುಗಳನ್ನು ಅಗಲ ಮಾಡಿ. ನಿಮ್ಮ ಕಾಲಿನ ಅಗಲವು ಸೊಂಟದ ಅಗಲಕ್ಕೆ ಸಮವಾಗಿರಲಿ.
* ಗೋಡೆಯ ವಿರುದ್ಧ ಹಿಂದಕ್ಕೆ ಬಾಗಿ ಮತ್ತು ನಿಮ್ಮ ಮಂಡಿಗಳನ್ನು ಬಗ್ಗಿಸಿ, ಎದುರಿನ ದಿಕ್ಕಿನಲ್ಲಿ ದೇಹದ ಮೇಲ್ಬಾಗವನ್ನು ಮಡಸಿ ನಿಮ್ಮ ಸೊಂಟದ ಹತ್ತಿರಕ್ಕೆ ತನ್ನಿ ಮತ್ತು ಎದೆಯು ತೊಡೆಯನ್ನು ಮುಟ್ಟುವಂತಿರಲಿ.
* ಸ್ವಲ್ಪ ಹೊತ್ತು ಶ್ವಾಸ ತೆಗೆದುಕೊಳ್ಳಿ. ನಿಶ್ವಾಸದ ಕಡೆ ಗಮನಹರಿಸುವಾಗ ಆರಕ್ಕಿಂತ ಹೆಚ್ಚು ಲೆಕ್ಕ ಹಾಕಿ ಮತ್ತು ನಿಧಾನವಾಗಿ ಮೇಲೆ ಬಂದು ಗೋಡೆಯ ತನಕ ಬಾಗಿ.
* ಕಣ್ಣುಗಳನ್ನು ಮುಚ್ಚಿ ಕೆಲವು ಸಲ ನಿಶ್ವಾಸ ಮಾಡಿ ಮತ್ತು ಆರಾಮ ಮಾಡಿ. ನಿಮ್ಮ ದೇಹದ ಬಲಕ್ಕೆ ತಕ್ಕಂತೆ 3ರಿಂದ 4 ಸಲ ಅದನ್ನು ಪುನರಾವರ್ತಿಸಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಮಿದುಳನ್ನು ಚುರುಕುಗೊಳಿಸುವ ಹೊಸ ಯೋಗ!
ಮಗುವಿನ ಭಂಗಿ(ಬಾಲಾಸನ)
* ನೆಲದ ಮೇಲೆ ಮಂಡಿಯೂರಿ ಮತ್ತು ಸೊಂಟಕ್ಕೆ ಹಿಂಗಾಲಿನಲ್ಲಿ ವಿಶ್ರಾಂತಿ ಕೊಡಿ. ನಿಮ್ಮ ಮೊಣಕಾಲುಗಳು ಸೊಂಟದ ಅಗಲದ ಅಂತರದಲ್ಲಿರಲಿ.
* ಬಳಿಕ ದೀರ್ಘವಾಗಿ ಶ್ವಾಸ ತೆಗೆದುಕೊಳ್ಳಿ ಮತ್ತು ಬಿಡಿ. ಈಗ ನಿಮ್ಮ ಎದೆಯನ್ನು ಮುಂದಕ್ಕೆ ಬಾಗಿಸಿ, ನಿಮ್ಮ ಹೊಟ್ಟೆ ಮತ್ತು ಎದೆಯನ್ನು ತೊಡೆಗಳ ಮೇಲಿಡಿ. ನಿಮ್ಮ ದೇಹ ಸಹಕರಿಸಿದರೆ ಹಣೆಯನ್ನು ನೆಲದ ಮೇಲಿಡಲು ಪ್ರಯತ್ನಿಸಿ.
* ಈ ಭಂಗಿಗೆ ಬಂದಾಗ ನಿಮ್ಮ ಕೈಯಗಳನ್ನು ನೆಲದ ಮೇಲೆ ವಿಶ್ರಾಂತಿಗಿಡಿ. ನಿಮ್ಮ ಕೈಗಳು ಅಂಗೈ ಅಡಿಗಿರುವಂತೆ ಎದುರಿಗೆ ಚಾಚಿ ಅಥವಾ ಅಂಗೈ ಮೇಲಿರುವಂತೆ ಹಿಂದೆ ಚಾಚಿ.
ಈ ಎರಡು ಭಂಗಿಗಳಲ್ಲಿ ನೀವು ಸಾಧ್ಯವಿದಷ್ಟು ಸಮಯ ಉಳಿದುಕೊಳ್ಳಬಹುದು. ಈ ಯೋಗಾಭ್ಯಾಸವನ್ನು 3ರಿಂದ 4 ಸಲ ಮಾಡಿ.
ಮುಂದಿನ ಸಲ ನಿಮಗೆ ಹಸಿವಿನ ಕಡುಬಯಕೆಯನ್ನು ನಿಯಂತ್ರಿಸಲು ವಿಫಲರಾದರೆ ಈ ಯೋಗಾಭ್ಯಾಸವನ್ನು ಮಾಡಿ ಸ್ವಲ್ಪ ಶಕ್ತಿ ವ್ಯಯಿಸಿ ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಡಬಹುದು. ಈ ಎರಡು ಭಂಗಿಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ ಮತ್ತು ನಿಮಗೆ ಸ್ವನಿಯಂತ್ರಣ ಮತ್ತು ಶಿಸ್ತು ಬರುತ್ತದೆ. ಯೋಗಾಭ್ಯಾಸ ಮಾಡುವುದರಿಂದ ನಿಮ್ಮ ಆಹಾರದ ಕಡುಬಯಕೆ ನಿಯಂತ್ರಣಕ್ಕೆ ಬರುತ್ತದೆ ಮತ್ತು ನೀವು ಕಡಿಮೆ ತಿಂದು ದೇಹವು ಫಿಟ್ ಇರುವಂತೆ ಮಾಡುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications








