Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಗಂಟಲು ಸೋಂಕಿಗಾಗಿ ಮನೆಮದ್ದುಗಳು
ಬದಲಾಗುವ ಹವಾಮಾನ ಹಲವಾರು ರೀತಿಯ ರೋಗಗಳನ್ನು ಆಮಂತ್ರಿಸುತ್ತವೆ. ಹೆಚ್ಚಾಗಿ ನಾವು ಬಾಧೆ ಪಡುವುದು ಶೀತ ಹಾಗೂ ಗಂಟಲು ನೋವಿಗೆ. ಶೀತದೊಂದಿಗೆ ಗಂಟಲು ನೋವು ಆರಂಭವಾದರೆ ಆ ದಿನವಿಡೀ ದೊಡ್ಡ ರೋಗ ಬಂದಂತೆ ನಮಗನಿಸುತ್ತದೆ. ಏಕೆಂದರೆ ಗಂಟಲು ನೋವು ತರುವ ಸುಸ್ತು ನಿತ್ರಾಣ ಸಿಡುಕುವಿಕೆ ನಮ್ಮನ್ನು ಬಳಲಿಸುತ್ತದೆ.
ವೈದ್ಯರ ಮಾತ್ರೆಗಳೂ ಒಮ್ಮೊಮ್ಮೆ ಇದರ ಮೇಲೆ ಪರಿಣಾಮ ಬೀರುವುದಿಲ್ಲ. ಆಗ ನಮಗೆ ಸಿದ್ಧೌಷಧವಾಗಿ ಮೂಡಿ ಬರುವುದು ಮನೆಮದ್ದು. ಆದ್ದರಿಂದ ಇಂದು ನಿಮಗಾಗಿ ಗಂಟಲು ನೋವು ನಿವಾರಕವಾಗಿ ಹಲವಾರು ಮನೆಮದ್ದುಗಳನ್ನು ನೀಡಿದ್ದೇವೆ ಅದನ್ನು ಪ್ರಯತ್ನಿಸಿ ಫಲ ಪಡೆಯಿರಿ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಣ್ಣುಗಳಲ್ಲಿರುವ ವಿಟಮಿನ್ ಆರೋಗ್ಯಕ್ಕೆ ಎಷ್ಟು ಲಾಭದಾಯಕ?

ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು
ಉಪ್ಪು ನೀರಿನಲ್ಲಿರುವ ಸೋಂಕು ನಿರೋಧಕವು ಗಂಟಲು ಸೋಂಕಿನಿಂದ ಉಪಶಮನ ನೀಡುತ್ತದೆ. ಅರ್ಧ ಲೋಟ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಉಪ್ಪು ಹಾಕಿ. ಈಗ ಈ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ. ಹೀಗೆ ಹಲವಾರು ಸಲ ಮಾಡಿ. ನೀವು ನೀರನ್ನು ಸೇವಿಸುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಬಾಯಿ ಮುಕ್ಕಳಿಸುವುದು ಪೂರ್ಣಗೊಂಡ ನಂತರ ನೀರನ್ನು ಉಗಿಯಿರಿ. ಒಂದು ದಿನದಲ್ಲಿ ನಾಲ್ಕು ಬಾರಿ ನೀವು ಹೀಗೆ ಮಾಡುವುದರಿಂದ ಗಂಟಲು ಸೋಂಕಿನಿಂದ ನಿಮಗೆ ಉಪಶಮನವಾಗುತ್ತದೆ.

ಜೇನು
ನಿಮ್ಮ ಗಂಟಲು ಸಮಸ್ಯೆಗೆ ಸುಲಭವಾದ ಪರಿಹಾರವೆಂದರೆ ಜೇನಾಗಿದೆ. ಜೇನಿನಲ್ಲಿರುವ ಸೋಂಕು ನಿರೋಧಕವು ನೋವಿರುವ ಗಂಟಲಿನ ಉಪಶಮನವನ್ನು ತ್ವರಿತವಾಗಿ ಮಾಡುತ್ತದೆ. ಇದು ತುಂಬಾ ಸರಳ ಕೂಡ. ಒಂದು ಲೋಟ ನೀರಿಗೆ ಒಂದು ಅಥವಾ ಎರಡು ಟೇಬಲ್ ಸ್ಪೂನ್‌ಗಳಷ್ಟು ಜೇನನ್ನು ಸೇರಿಸಿ. ಅವುಗಳನ್ನು ಮಿಶ್ರ ಮಾಡಿ ದಿನದಲ್ಲಿ ಹಲವಾರು ಬಾರಿ ಕುಡಿಯಿರಿ. ನೋವಿರುವ ಗಂಟಲಿನ ಅಟ್ಟಹಾಸದಿಂದ ನೀವು ನಿತ್ರಾಣರಾಗಿದ್ದರೆ ಮಲಗುವ ಮುನ್ನ ಜೇನನ್ನು ಸೇವಿಸಿ.

ಲಿಂಬೆ
ಗಂಟಲು ಸೋಂಕಿಗೆ ಉತ್ತಮ ಸಿದ್ಧೌಷಧ ಲಿಂಬೆಯಾಗಿದೆ. ಲಿಂಬೆಯ ತುಂಡು, ಉಪ್ಪು ಮತ್ತು ಕಾಳುಮೆಣಸನ್ನು ತೆಗೆದುಕೊಳ್ಳಿ. ಲಿಂಬೆಯ ತುಂಡಿಗೆ ಉಪ್ಪು ಮತ್ತು ಕಾಳುಮೆಣಸಿನ ಹುಡಿಯನ್ನು ಚಿಮುಕಿಸಿ ನಂತರ ಲಿಂಬೆಯನ್ನು ನಿಧಾನವಾಗಿ ನೆಕ್ಕಿ. ಲಿಂಬೆಯ ರಸವನ್ನು ಬಿಸಿ ನೀರಿನೊಂದಿಗೆ ಮಿಶ್ರ ಮಾಡಿಕೊಂಡು ನೀವು ಬಾಯಿ ಮುಕ್ಕಳಿಸಬಹುದು. ಬೇಕಿದ್ದಲ್ಲಿ ಸ್ವಲ್ಪ ಜೇನನ್ನು ತೆಗೆದುಕೊಳ್ಳಿ. ಲಿಂಬೆ, ನೀರು ಹಾಗೂ ಜೇನಿನ ಮಿಶ್ರಣ ನಿಮ್ಮ ಗಂಟಲು ನೋವನ್ನು ಹೇಳಹೆಸರಿಲ್ಲದಂತೆ ಮಾಡುತ್ತದೆ.

ಬೆಳ್ಳುಳ್ಳಿಯ ಚಮತ್ಕಾರ
ಬೆಳ್ಳುಳ್ಳಿಯನ್ನು ಬರೀ ಅಡುಗೆಗೆ ಮಾತ್ರವಲ್ಲ! ನೋವಿರುವ ಗಂಟಲಿನ ಉಪಶಮನವನ್ನು ಕೂಡ ಇದು ಮಾಡುತ್ತದೆ. ಬೆಳ್ಳುಳ್ಳಿಯ ಬ್ಯಾಕ್ಟಿರಿಯಾ ನಿರೋಧಕ ಮತ್ತು ನಂಜುನಿರೋಧಕ ಅಂಶಗಳು ನೋವಿರುವ ಗಂಟಲಿನಿಂದ ತ್ವರಿತ ಉಪಶಮನವನ್ನು ನೀಡುತ್ತದೆ. ತಾಜಾ ಬೆಳ್ಳುಳ್ಳಿಯನ್ನು ತುಂಡುಗಳನ್ನಾಗಿ ಮಾಡಿಕೊಳ್ಳಿ. ನಿಮ್ಮ ಹಲ್ಲನ್ನು ಬಳಸಿಕೊಂಡು ಇದನ್ನು ನೀವು ಬೇರ್ಪಡಿಸಬಹುದು. ಗಂಟಲು ನೋವಿಗೆ ಕಾರಣವಾಗಿರುವ ರಾಸಾಯನಿಕ ಅಲಿಸಿನ್ ಅನ್ನುಇದು ಕೊಲ್ಲುತ್ತದೆ. ಬೆಳ್ಳುಳ್ಳಿ ಎಣ್ಣೆಯನ್ನು ಕೂಡ ನೀವು ಬಳಸಬಹುದು. 1/4 ಕಪ್ ನೀರಿಗೆ ಬೆಳ್ಳುಳ್ಳಿ ಎಣ್ಣೆಯನ್ನು ಹಾಕಿ. ನಿಯಮಿತವಾಗಿ ಗಂಟಲಿನ ಮೇಲೆ ಇದನ್ನು ಬಳಸಿಕೊಳ್ಳಿ. ಹಸಿ ಮತ್ತು ಬೇಯಿಸಿದ ಬೆಳ್ಳುಳ್ಳಿಯನ್ನು ತಿನ್ನಿ. ಬೆಳ್ಳುಳ್ಳಿಯ ರುಚಿ ನಿಮಗೆ ಇಷ್ಟವಾಗದಿದ್ದರೆ ಬೆಳ್ಳುಳ್ಳಿ ಮಾತ್ರೆಗಳನ್ನು ಕೂಡ ತೆಗೆದುಕೊಳ್ಳಬಹುದು.

ದಾಲ್ಚಿನ್ನಿ
ದಾಲ್ಚಿನ್ನಿಯನ್ನು ನಿಮ್ಮ ಗಂಟಲು ನೋವಿನ ಪರಿಹಾರಕ್ಕೆ ಬಳಸಬಹುದು. ದಾಲ್ಚಿನ್ನಿ ಹುಡಿಯನ್ನು ತೆಗೆದುಕೊಳ್ಳಿ, ಕಾಳುಮೆಣಸಿನ ಹುಡಿ ಮತ್ತು ಸ್ವಲ್ಪ ನೀರನ್ನು ತೆಗೆದುಕೊಳ್ಳಿ. ಈ ಮೂರನ್ನು ಮಿಶ್ರ ಮಾಡಿಕೊಂಡು ಕುದಿಸಿ. ಅದಕ್ಕೆ ಸ್ವಲ್ಪ ಜೇನು ಬೆರೆಸಿ. ಕುದಿಸಿದ ಮಿಶ್ರಣವನ್ನು ಮೇಲಿಂದ ಹೊರತೆಗೆಯಿರಿ ಮತ್ತು ಈ ನೀರನ್ನು ನಿಧಾನವಾಗಿ ಸೇವಿಸಿ. ಕನಿಷ್ಟ ಪಕ್ಷ ಒಂದು ವಾರಕ್ಕಾಗಿ ಈ ಮದ್ದನ್ನು ತೆಗೆದುಕೊಳ್ಳಿ.

ಏಪಲ್ ಸೀಡರ್ ವಿನೇಗರ್
ಎರಡು ಚಮಚಗಳಷ್ಟು ಏಪಲ್ ಸೀಡರ್ ವಿನೇಗರ್ ಅನ್ನು ತೆಗೆದುಕೊಂಡು ಅದನ್ನು ನೀರಿನೊಂದಿಗೆ ಬೆರೆಸಿ. ನಂತರ ಮಿಶ್ರ ಮಾಡಿಕೊಂಡು ಅದನ್ನು ಕುಡಿಯಿರಿ.

ಆಹಾರ ಪದಾರ್ಥಗಳನ್ನು ನಿಯಂತ್ರಿಸಿ
ನೀವು ಖಾರ ಪದಾರ್ಥಗಳನ್ನು ಹೆಚ್ಚು ತೆಗೆದುಕೊಳ್ಳುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಗಂಟಲು ನೋವನ್ನು ನಿಯಂತ್ರಿಸಲು ಶೀತಲ ನೀರು ಕುಡಿಯುವುದು ಮತ್ತು ಐಸ್ - ಕ್ರೀಂ ಸೇವಿಸುವುದನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ.



Click it and Unblock the Notifications
