Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ರಕ್ತದ ಶುದ್ಧತೆಗೆ ದಿನಾ ಕ್ಯಾರೆಟ್‌ನ್ನು ಸೇವಿಸಿ!
ತರಕಾರಿಗಳಲ್ಲೇ ಸ್ವಾದಿಷ್ಟ ಮತ್ತು ಅಧಿಕ ಸತ್ವಗಳನ್ನು ತನ್ನೊಳಗೆ ಇರಿಸಿಕೊಂಡಿರುವ ತರಕಾರಿಯೆಂದರೆ ಕ್ಯಾರೆಟ್ ಆಗಿದೆ. ಇದನ್ನು ಹಸಿಯಾಗಿ ಅಥವಾ ಬೇಯಿಸಿ ಕೂಡ ತಿನ್ನಬಹುದು. ಕ್ಯಾರೆಟ್‌ನ ಸಲಾಡ್, ಪಲ್ಯ, ಕೋಸಂಬರಿ ಹೀಗೆ ವಿಧ ವಿಧದಲ್ಲಿ ಇದರ ವ್ಯಂಜನಗಳನ್ನು ತಯಾರಿಸಿ ಸೇವಿಸಬಹುದು. ಇದರಲ್ಲಿ ಅಧಿಕವಾಗಿರುವ ಬೇಟಾ ಕ್ಯಾರೊಟಿನ್ ಶಕ್ತಿಯುತ ಸಾರವಾಗಿದ್ದು ತ್ವಚೆಯನ್ನು ಸುಂದರಗೊಳಿಸಲು ಸಹಕಾರಿಯಾಗಿದೆ.
ವಿಧ ವಿಧದ ಪ್ರೋಟೀನ್ ವಿಟಮಿನ್‌ಗಳನ್ನು ಹೇರಳವಾಗಿ ಬೆರೆತಿರುವ ಕ್ಯಾರೆಟ್ ರೋಗನಿರೋಧಕ ಶಕ್ತಿಯನ್ನು ಕೂಡ ಹೊಂದಿದೆ. ಇಂದು ನಾವು ಬಹುರೂಪಿ ಕ್ಯಾರೆಟ್‌ನ ಕೆಲವಾರು ಉತ್ತಮ ಗುಣಗಳನ್ನು ನಿಮ್ಮ ಮುಂದಿಡುತ್ತಿದ್ದೇವೆ. ನೀವು ಇದರ ಪ್ರಯೋಜನವನ್ನು ಪಡೆದುಕೊಳ್ಳಿ.

1. ಕ್ಯಾರೆಟ್‌ನಲ್ಲಿ ಬೇಟಾ ಕ್ಯಾರೊಟಿನ್ ಅಧಿಕವಾಗಿದ್ದು ಶಕ್ತಿಯುತ ರೋಗನಿರೋಧಕ ಅಂಶವನ್ನು ಹೊಂದಿದೆ. ಇದು ತ್ವಚೆಗೆ ಸಹಕಾರಿಯಾಗಿದ್ದು ಹಲವಾರು ರೋಗಗಳನ್ನು ದೂರವಿಡುತ್ತದೆ.
2. ರಕ್ತದ ಶುದ್ಧತೆಗೆ ಹರಿಯುವಿಕೆಗೆ ನೆರವಾಗುವ ಅಲ್ಕಾಲೈನ್ ಅಂಶಗಳನ್ನು ಕ್ಯಾರೆಟ್ ಯಥೇಚ್ಛವಾಗಿ ಒಳಗೊಂಡಿದೆ.
3. ದೇಹದಲ್ಲಿನ ಆಸಿಡ್ ಆಲ್ಕಾಲೈನ್ ಪ್ರಮಾಣವನ್ನು ಅವು ನಿಯಂತ್ರಣದಲ್ಲಿಡುತ್ತವೆ. ಹೈಪರ್‌ಟೆನ್ಶನ್‌ನೊಂದಿಗೆ ಸಂಯೋಜಿತವಾಗಿರುವ ಸೋಡಿಯಂ ನ ಹೆಚ್ಚಿನ ಪ್ರಮಾಣವನ್ನು ನಿಯಂತ್ರಣದಲ್ಲಿಡಲು ಕ್ಯಾರೆಟ್‌ನಲ್ಲಿರುವ ಪೊಟ್ಯಾಶಿಯಂ ಸಹಾಯಕವಾಗಿವೆ ಹಾಗೂ ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡುತ್ತದೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಹಣ್ಣು v/s ಹಣ್ಣಿನ ಜ್ಯೂಸ್ ಇದರಲ್ಲಿ ಯಾವುದು ಆರೋಗ್ಯಕರ?
4. ಬಾಯಿಯಲ್ಲಿರುವ ಉಪದ್ರವಕಾರಿ ಕೀಟಾಣುಗಳನ್ನು ನಾಶ ಮಾಡುತ್ತದೆ ಮತ್ತು ದಂತಕ್ಷಯವನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವನ್ನು ಕ್ಯಾರೆಟ್ ವಹಿಸುತ್ತದೆ.
5. ಜೊಲ್ಲನ್ನು ಅಧಿಕಗೊಳಿಸುವ ಮೂಲಕ ಮತ್ತು ಖನಿಜಗಳು, ವಿಟಮಿನ್‌ಗಳು ಹಾಗೂ ಅದಕ್ಕೆ ಬೇಕಾಗುವ ಕಿಣ್ವಗಳನ್ನು ಪೂರೈಸುವ ಮೂಲಕ ಕ್ಯಾರೆಟ್‌ಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ.
6. ನಿತ್ಯವೂ ಕ್ಯಾರೆಟ್‌ಗಳನ್ನು ಸೇವಿಸುವುದು ಗ್ಯಾಸ್ಟ್ರಿಕ್ ಅಲ್ಸರ್ ಮತ್ತು ಜೀರ್ಣಕ್ರಿಯೆ ತೊಂದರೆಗಳನ್ನು ನಿವಾರಿಸಿ ದೇಹದ ಆರೋಗ್ಯವನ್ನು ಉತ್ತಮಪಡಿಸುತ್ತದೆ.
7. ಮಕ್ಕಳಲ್ಲಿರುವ ಹುಳುಗಳ ಚಿಕಿತ್ಸೆಗಾಗಿ ಮನೆಮದ್ದಿನಂತೆ ಹಸಿ ಕ್ಯಾರೇಟ್ ಅನ್ನು ಬಳಸಲಾಗುತ್ತದೆ.
8. ಹಸಿ ಅಥವಾ ಕತ್ತರಿಸಿದ ಕ್ಯಾರೇಟ್‌ಗಳನ್ನು ಗಾಯಗಳು, ಕಡಿತಗಳು ಮತ್ತು ಉರಿಯೂತಕ್ಕಾಗಿ ಬಳಸಲಾಗುತ್ತದೆ.
9. ರಕ್ತದ ಸಕ್ಕರೆಯ ನಿಯಂತ್ರಣಕ್ಕೆ ಅವಶ್ಯವಾಗಿರುವ ಕೆರೋಟ್‌ನಾಯ್ಡ್ಸ್‌ಗಳು ಕ್ಯಾರೆಟ್‌ನಲ್ಲಿ ಯಥೇಚ್ಛವಾಗಿವೆ.
ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಚಳಿಗಾಲಕ್ಕೆ ದೇಹವನ್ನು ಬೆಚ್ಚಗಿಡುವ ಉತ್ತಮ ಆಹಾರ ಪದಾರ್ಥಗಳು
10 ಕರುಳಿನ ಆರೋಗ್ಯವನ್ನು ಉತ್ತೇಜಿಸುವಲ್ಲಿ ಸಹಕಾರಿಯಾಗಿರುವ ಮತ್ತು ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಫೈಟೊ - ನ್ಯೂಟ್ರಿಯೆಂಟ್ ಎಂದು ಕರೆಯಲಾದ
ಫಾಲ್‌ಕ್ಯಾರಿನೋಲ್ ಅನ್ನು ಕ್ಯಾರೆಟ್ ಒಳಗೊಂಡಿದೆ.
11. ಕ್ಯಾರೆಟ್ ಅನ್ನು ನಿಯಮಿತವಾಗಿ ತಿನ್ನುವುದು ತಾಯಂದಿರಲ್ಲಿ ಎದೆ ಹಾಲಿನ ಗುಣಮಟ್ಟವನ್ನು ಸುಧಾರಿಸುತ್ತದೆ.
12. ಋತುಚಕ್ರದ ಹರಿವನ್ನು ಹೆಚ್ಚಿಸುವಲ್ಲಿ ಸಹ ಇದು ಸಹಾಯ ಮಾಡುತ್ತದೆ.
13 . ಕ್ಯಾರೆಟ್‌ನಲ್ಲಿ ಕರಗುವ ನಾರಿನಂಶ ಹೆಚ್ಚಿಗೆ ಇದ್ದು ಎಲ್‌ಡಿಎಲ್ ಅನ್ನು ಬಂಧಿಸುವ ಮೂಲಕ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಅದರಲ್ಲೂ ಕೆಟ್ಟ ಕೊಲೆಸ್ಟ್ರಾಲ್‌ನ
ಪ್ರಮಾಣವನ್ನು ತಗ್ಗಿಸುತ್ತದೆ ಮತ್ತು ಹೃದಯಾಘಾತ ಹಾಗೂ ಹೃದಯ ಕಾಯಿಲೆಗಳನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುವಂತಹ ಎಚ್‌ಡಿಎಲ್ ಅನ್ನು ಏರಿಸುವಲ್ಲಿ ಸಹಾಯ ಮಾಡುತ್ತದೆ.
ಕ್ಯಾರೆಟ್ ಅನ್ನು ನಿತ್ಯವೂ ಸೇವಿಸುವುದರಿಂದ ತ್ವಚೆ, ಕೂದಲು, ಉಗುರುಗಳ ಹೊಳಪು ಸುಧಾರಣೆಯಾಗುತ್ತದೆ ಮತ್ತು ಕಣ್ಣಿನ ಆರೋಗ್ಯವನ್ನೂ ಸಹ ಇದು ಹೆಚ್ಚಿಸುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications