ಸಿಕ್ಸ್ ಪ್ಯಾಕ್ ನೀಡಬಲ್ಲವು ಈ ಆಹಾರಗಳು!

By Poornima Heggade

ನೀವು ನಿಮ್ಮ ಸ್ನಾಯುಗಳ ಬಲವನ್ನು ಹೆಚ್ಚಿಸಿ ಸಿಕ್ಸ್ ಪ್ಯಾಕ್ ದೇಹ ಸಿರಿಯನ್ನು ಬಯಸಿದ್ದರೆ ಕೇವಲ ಬಿಯರ್ ಮತ್ತು ಚಿಪ್ಸ್ ಸೇವನೆಯಿಂದ ಇದು ಸಾಧ್ಯ ಎಂದು ಭಾವಿಸಿದ್ದೀರೇ? ಹಾಗಾದರೆ ಈ ಲೇಖನ ನಿಮಗಾಗಿ! ಹೌದು, ಇಲ್ಲಿ ನಾವು ನಿಮ ಸ್ನಾಯುಗಳ ಸದೃಢತೆಯನ್ನು ಕಾಪಾಡಲು ಅಗತ್ಯವಾದ ಆಹಾರಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಬೆಳಗಿನ ಉಪಹಾರವನ್ನು ತಪ್ಪಿಸಬಾರದು ಏಕೆ?

ಪ್ರಸಿದ್ದ ಸಿಕ್ಸ್ ಪ್ಯಾಕ್ ಎನ್ನು ದೇಹ ಸಿರಿ ಒಂದು ರಾತ್ರಿಯಲ್ಲಿ ಪಡೆಯುವಂತದ್ದಲ್ಲ. ಇದಕ್ಕೆ ಸಮರ್ಥನೀಯ ಶ್ರಮದ ಅಗತ್ಯವಿದೆ. ಜಿಮ್‌ನಲ್ಲಿ ಗಂಟೆಗಳನ್ನು ಕಳೆಯುವುದು ಕೆಲವೊಮ್ಮೆ ಅದು ಫಲಪ್ರದವಾಗದೇ ಉಳಿಯಬಹುದು. ಕೆಲವು ಮಾನವ ಅಂಗರಚನಾಶಾಸ್ತ್ರದ ಒಳಗಿನ ಅಂಶಗಳನ್ನು ಅರ್ಥ ಮಾಡಿಕೊಳ್ಳುವುದು ಅತ್ಯಂತ ಅವಶ್ಯಕ .

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: ಜಿಮ್ಮಿನಲ್ಲಿ ಏನು ಮಾಡಬೇಕು ಏನು ಮಾಡಬಾರದು

ಅತ್ಯಂತ ಶೀರ್ಘವಾಗಿ ಸದೃಢ ದೇಹವನ್ನು ಹೊಂದಲು ಅತ್ಯಂತ ಹೆಚ್ಚಿನ ಮೊತ್ತದಲ್ಲಿ ಆಹಾರ ಸೇವಿಸಬೇಕು ಎಂದು ಭಾವಿಸಿದ್ದೀರೇ? ಇದು ಖಂಡಿತ ತಪ್ಪು! ಇದು ಕೇವಲ ಹಸಿವು ಮತ್ತು ಜಂಕ್ ಆಹಾರಗಳ ಕಡುಬಯಕೆಗಳನ್ನು ಪೂರೈಸಬಹುದಷ್ಟೇ.

ನೀವು ನಿಜವಾಗಿಯೂ ಆಹಾರ ಸೇವಿಸಿ ನಿಮ್ಮ ಸ್ನಾಯುಗಳ ಬಲ ಹೆಚ್ಚಿಸಲು ಬಯಸಿದರೆ, ನೀವು ಸರಿಯಾದ ಸಮಯದಲ್ಲಿ ಸರಿಯಾದ ಆಹಾರ ತಿನ್ನಲು ಪ್ರಾರಂಭಿಸಬೇಕು. ಸ್ನಾಯುಗಳ ಬಲವನ್ನು ಹೆಚ್ಚಿಸಿ ಸಿಕ್ಸ್ ಪ್ಯಾಕ್ ಗೆ ಸಹಾಯಕ ವಾಗುವ ಹಲವು ಆಹಾರಗಳಿವೆ ಮತ್ತು ಇವು ಉತ್ತಮ ಪರಿಣಾಮವನ್ನು ನೀಡಬಹುದು. ಸರಿಯಾದ ಚಯಾಪಚಯ ಮತ್ತು ಸರಿಯಾದ ಕಾರ್ಯನಿರ್ವಹಣೆಗೆ ಆರೋಗ್ಯಕರ ಆಹಾರಗಳನ್ನು ಪ್ರಯತ್ನಿಸಿ. ಇಲ್ಲಿ ಸ್ನಾಯು ಬಲವನ್ನು ಹೆಚ್ಚಿಸುವ ಆಹಾರಗಳ ಪಟ್ಟಿಗಳಿವೆ ಓದಿ ಮತ್ತು ತಿನ್ನಲು ಆರಂಭಿಸಿ !

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ: 6 ಪ್ಯಾಕ್ ಆಬ್ಸ್ ಗೆ ಅತ್ಯುತ್ತಮ ವ್ಯಾಯಾಮಗಳು

1.ಸಾಲ್ಮನ್ ಮತ್ತು ಟ್ಯೂನ ಮೀನುಗಳು

1.ಸಾಲ್ಮನ್ ಮತ್ತು ಟ್ಯೂನ ಮೀನುಗಳು

ನೀವು ಮೀನುಗಳನ್ನು ಇಷ್ಟಪಡುವುದಾದರೆ, ಸ್ನಾಯು ಬಲವನ್ನು ಹೆಚ್ಚಿಸಬಲ್ಲ ಆಹಾರಗಳಾದ ಸಾಲ್ಮನ್ ಮತ್ತು ಟ್ಯೂನ ಮೀನುಗಳನ್ನು ಸೇವಿಸಿ. ಟ್ಯೂನ, ನಿಮ್ಮಲ್ಲಿರುವ ಕ್ಯಾಲೊರಿಗಳನ್ನು ಕಡಿಮೆ ಮಾಡಿ ನಿಜವಾದ ಸ್ನಾಯುಬಲವನ್ನು ಹೆಚ್ಚಿಸವ ನಿಮ್ಮ ಬಯಕೆಯನ್ನು ಪೂರೈಸುತ್ತದೆ. ಟ್ಯೂನ ಒಂದು ಗ್ರಾಂ ಕೊಬ್ಬು, ಮತ್ತು ಪ್ರತಿ 3 ಔನ್ಸ್ ಗೆ 99 ಕ್ಯಾಲೋರಿಯನ್ನು ಹೊಂದಿರುತ್ತದೆ. ಸಾಲ್ಮನ್, ಪ್ರತಿ 3 ಔನ್ಸ್ ಗೆ 155 ಕ್ಯಾಲೊರಿಗಳನ್ನು ನೀಡುತ್ತದೆ . ಸಾಲ್ಮನ್ ಒಮೆಗಾ -3 ಕೊಬ್ಬಿನ ಆಮ್ಲಗಳನ್ನು ಹೊಂದಿರುತ್ತದೆ ಮತ್ತು ಇದರ ಸೇವನೆ ಆರೋಗ್ಯಕರ ಹೃದಯ ನಿಮ್ಮದಾಗುತ್ತದೆ. ಆದ್ದರಿಂದ ನೀವು ಸ್ನಾಯು ಪ್ಯಾಕ್ ನಿರ್ಮಿಸಲು ಆಹಾರಗಳನ್ನ್ಸೇವಿಸಲು ಭಾವಿಸಿದರೆ, ಮುಂದಿನ ಬಾರಿ, ರುಚಿಕರವಾದ ಸಾಲ್ಮನ್ ಗಳು ಮತ್ತು ಟ್ಯೂನ ಗಳನ್ನು ಸೇವಿಸುವುದನ್ನು ಮರೆಯಬೇಡಿ .

2.ಮೊಸರು

2.ಮೊಸರು

ಮೊಸರು, ಒಂದು ಸರಳ ಆಹಾರವಾಗಿದ್ದರೂ ನಿಮ್ಮ ಸ್ನಾಯು ಬಲವನ್ನು ಹೆಚ್ಚಿಸುವಲ್ಲಿ ಸೇವಿಸಲೇಬೇಕಾದ ಅತ್ಯುತ್ತಮ ಆಹಾರ. ಮೊಸರು ಸ್ನಾಯು ಬೆಳವಣಿಗೆಗೆ ಪ್ರೋತ್ಸಾಹದಾಯಕವಾಗಿದೆ ಉತ್ತಮ ಗುಣಮಟ್ಟದ ಪ್ರೋಟೀನ್ ಪುಷ್ಟೀಕರಿಸಿದ ಮೊಸರು ಆರೋಗ್ಯಕ್ಕೆ ಒಳ್ಳೆಯದು. ಒಂದು ಲೋಟ ಮೊಸರು ಸುಮಾರು 20 ಗ್ರಾಂ ಪ್ರೋಟೀನ್ ಹೊಂದಿರುತ್ತದೆ. ಇದು ಮೂಳೆಗಳ ಬಲಕ್ಕೂ ಸಹಾಯಕವಾಗಿದೆ.

3.ಮೊಟ್ಟೆಗಳು

3.ಮೊಟ್ಟೆಗಳು

ನೀವು ಸ್ನಾಯುಗಳ ಬಲವನ್ನು ಹೆಚ್ಚಿಸಿ ಸದೃಢ ಮೈಕಟ್ಟನು ಹೊಂದಲು, ನಿಮ್ಮ ಆಹಾರಗಳ ಪಟ್ಟಿಯಲ್ಲಿ ಮೊಟ್ಟೆಗಳನ್ನು ಸೇರಿಸಿ. ಮೊಟ್ಟೆಗಳಲ್ಲಿ ಸ್ನಾಯುಗಳನ್ನು ನಿರ್ಮಿಸಲು ಸಹಾಯವಾಗುವ ಪ್ರೋಟೀನ್ ಅಧಿಕವಾಗಿರುತ್ತದೆ. ನೀವು ಇತರ ಮೂಲಗಳಿಗೆ ಹೋಲಿಸಿದರೆ ಮೊಟ್ಟೆಗಳಿಂದ ಸಾಕಷ್ಟು ಪ್ರೋಟೀನ್ ಪಡೆಯಬಹುದು. ನೀವು ಸ್ನಾಯು ಬಲವನ್ನು ಹೆಚ್ಚಿಸಲು ಖಚಿತವಾಗಿ ಮೊಟ್ಟೆಗಳನ್ನು ಸೇವಿಸಬಹುದು.

4.ಕೋಳಿ (ಚಿಕನ್)

4.ಕೋಳಿ (ಚಿಕನ್)

ನಿಮ್ಮ ದೇಹದ ಸದೃಢತೆಗೆ ಮುಂದಿನ ಆಹಾರದ ಪಟ್ಟಿಯಲ್ಲಿ ಕೋಳಿಯನ್ನು ಸೇರಿಸಿ. ಕ್ರೀಡಾಪಟುಗಳಿಗೆ ಹೆಚ್ಚುವರಿ ಪ್ರೋಟೀನ್ ಮಾಡಬೇಕಾಗುತ್ತದೆ ಮತ್ತು ಅವರು ಚಿಕನ್ ಸೇವಿಸಿ ಅದರಿಂದ ಹೆಚ್ಚುವರಿ ಪ್ರೋಟೀನ್ ಪಡೆಯಬಹುದು. ಚಿಕನ್ ಸ್ಯಾಚುರೇಟೆಡ್ ಕೊಬ್ಬುಗಳನ್ನು ಹೊಂದಿರುತ್ತವೆ ಮತ್ತು ಇದು ಕೆಲವೊಮ್ಮೆ ಒಂದು ದೊಡ್ಡ ಮಟ್ಟಿಗೆ ನಿಮ್ಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ಟರ್ಕಿ ಮತ್ತು ಚಿಕನ್ ಸ್ತನಗಳು ಸ್ನಾಯು ಬಲ ಹೆಚ್ಚಿಸಲು ತಿನ್ನಬಹುದಾದ ಆಹಾರಗಳಾಗಿವೆ.

5.ಆಲಿವ್ ಎಣ್ಣೆ

5.ಆಲಿವ್ ಎಣ್ಣೆ

ಆಲಿವ್ ಎಣ್ಣೆ ದ್ರವರೂಪದ ಶಕ್ತಿಯನ್ನು ನೀಡುವಂತಹದ್ದು. ನೀವು ಸ್ನಾಯು ಬಲ ಹೆಚ್ಚಿಸಲು ಸರಿಯಾದ ಆಹಾರವನ್ನು ಹುಡುಕುತ್ತಿದ್ದರೆ ನಿಮ್ಮ ಆಹಾರದಲ್ಲಿ ಆಲಿವ್ ಎಣ್ಣೆಯನ್ನು ಸೇರಿಸಿ. ಆಲಿವ್ ಎಣ್ಣೆ ಸ್ನಾಯು ಸ್ಥಗಿತ ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ನೀವು ಈ ತೈಲವನ್ನು ನಿಮ್ಮ ದೇಹ ಭಾಗಕ್ಕೆ ಲೇಪಿಸುವ ಅಗತ್ಯವಿಲ್ಲ. ಬದಲಿಗೆ ನಿಮ್ಮ ಆಹಾರದಲ್ಲಿ ಈ ಎಣ್ಣೆಯನ್ನು ಸೇರಿಸಬಹುದು.

6.ಬಾದಾಮಿ

6.ಬಾದಾಮಿ

ಬಾದಾಮಿ ನಿಮ್ಮನ್ನು ಪ್ರಬಲರನ್ನಾಗಿ ಮಾಡಬಹುದು ! ಇದು ಅತ್ಯುತ್ತಮ ವಿಟಮಿನ್ ಇ ಯ ಮೂಲಗಳನ್ನು ಹೊಂದಿದೆ. ಬಾದಾಮಿ ಆಂಟಿ ಆಕ್ಸಿಡೆಂಟ್ ( ಉತ್ಕರ್ಷಣ ನಿರೋಧಕ) ಗುಣಲಕ್ಷಣಗಳನ್ನು ಹೊಂದಿರುತ್ತವೆ ಮತ್ತು ಆಮೂಲಾಗ್ರ ಹಾನಿಯಿಂದ ಯನ್ನು ನಿಮ್ಮ ದೇಹದವನ್ನು ಕಾಪಾಡುತ್ತವೆ. ಆದ್ದರಿಂದ ಅಂತಿಮ ಪರಿಣಾಮ? ನೀವು ಶಾಶ್ವತವಾಗಿ ಯೌವ್ವನದಿಂದ ಇರಲು ಸಾಧ್ಯ! ಇದು ಕುತೂಹಲಕಾರಿ ಅಂಶ ತಾನೇ? ಹಾಗಾದರೆ ಇಂತಹ ಬೆರಗು ಗೊಳಿಸುವ ವ್ಯತ್ಯಾಸವನ್ನು ಈ ಆರೋಗ್ಯಕರ ಆಹಾರಗಳ ಸೇವನೆಯಿಂದ ನೀವೇ ಮನಗಾಣಿರಿ!

Story first published: Thursday, January 30, 2014, 15:15 [IST]
X
Desktop Bottom Promotion